Home
ಸುದ್ದಿಜಾಲ

ಅಜ್ಜಿಗೆ ಆಪ್‌ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!

ಸ್ಮಾರ್ಟ್‌ಟಿವಿಗಳು ಇಂದು ಎಲ್ಲರ ಮನೆಯನ್ನು ಆಕ್ರಮಿಸಿಕೊಂಡಿವೆ. ಸ್ಮಾರ್ಟ್‌ಟಿವಿಯನ್ನು ಕೇವಲ ಮಾಹಿತಿ ಹಾಗೂ ಮನರಂಜನೆಗಷ್ಟೇ ಸೀಮಿತಗೊಳಿಸದೆ ಶೈಕ್ಷಣಿಕವಾಗಿ ಅದರಲ್ಲೂ ಅಗತ್ಯ ಮಾಹಿತಿ ಪಡೆಯಲು, ಓಟಿಟಿ ಸೇವೆ ಮೂಲಕ ಮಾಹಿತಿ ಮನರಂಜನೆ ಪಡೆಯಲು, ಸಂಗೀತ ಆಲಿಸಲು ಬಳಕೆ ಮಾಡುತ್ತೇವೆ. ಅಂತೆಯೇ ಈ ಸ್ಮಾರ್ಟ್‌ಟಿವಿಯಲ್ಲಿರುವ ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಪತ್ತೆ ಮಾಡುವುದು ಹೇಗೆ ಎಂಬುದನ್ನು ಅಜ್ಜಿಗೆ ಹೇಳಿಕೊಡುತ್ತಿರುವ ವಿಡಿಯೋವೊಂದು ನೆಟ್ಟಿಗರಿಗೆ ಇಷ್ಟವಾಗಿದೆ.

ಅಜ್ಜಿಗೆ ಆಪ್‌ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!

ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಬಾರೀ ವೈರಲ್‌ ಆಗುತ್ತಿದ್ದು, ಸ್ಮಾರ್ಟ್‌ಟಿವಿ ಮೂಲಕ ಹೀಗೂ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಬಹುದೇ ಎಂಬ ಆಲೋಚನೆ ನೆಟ್ಟಿಗರಲ್ಲಿ ಸಂತಸ ಉಂಟುಮಾಡಿದೆ. ಯಾಕೆಂದರೆ ಸ್ಮಾರ್ಟ್‌ಟಿವಿ ಆಪ್‌ಗಳನ್ನು ಹೇಗೆ ಬಳಸುವುದು ಎಂದು ವೃದ್ಧೆಗೆ ಯುವಕ ಪಾಠ ಹೇಳಿಕೊಡುತ್ತಿದ್ದಾನೆ. ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.

ವೃದ್ಧೆಗೆ ಓಟಿಟಿ ಬಗ್ಗೆ ಮಾಹಿತಿ ನೀಡಿದ ಯುವಕ

ಸಾಮಾನ್ಯವಾಗಿ ಸ್ಮಾರ್ಟ್‌ಟಿವಿಗಳನ್ನು ಎಲ್ಲಾ ರೀತಿಯಲ್ಲೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉದಾಹರಣೆಗೆ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು, ಅಗತ್ಯ ಇರುವ ಮಾಹಿತಿಯನ್ನು ತಕ್ಷಣವೇ ಜಾಲಾಡಲು,
ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ವೀಕ್ಷಣೆ ಮಾಡಲು ಸೇರಿದಂತೆ ವಿವಿಧ ರೀತಿಯಲ್ಲಿ ಈ ಬಳಕೆ ಮಾಡಲಾಗುತ್ತದೆ. ಅದರಂತೆ ಇಲ್ಲೋರ್ವ ಯುವಕ ವೃದ್ಧೆಯೋರ್ವರಿಗೆ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಮಾಹಿತಿ ನೀಡಿದ್ದಾನೆ.

ಯುವಕ ವಯಸ್ಸಾದ ಮಹಿಳೆಗೆ ಸ್ಮಾರ್ಟ್ ಟಿವಿಯಲ್ಲಿ ಓಟಿಟಿ ಆಪ್‌ಗಳನ್ನು ಹೇಗೆ ಬಳಸುವುದು ಎಂದು ಹೇಳಿಕೊಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಟಿಕ್‌ಟಾಕ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಂತೆಯೇ ಯುವಕ ಯಾವೆಲ್ಲಾ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಎಂಬುದನ್ನು ವಿವರಿಸಿದ್ದಾನೆ. ಯುವಕ ಏನೇನು ಹೇಳುತ್ತಿದ್ದಾನೆ ಎನ್ನುವುದನ್ನು ವಿದ್ಯಾರ್ಥಿಯ ಹಾಗೆ ಕೇಳಿತು ಕೇಳುತ್ತಿರುವ ಅಜ್ಜಿ ಮುಗ್ಧತೆ ಮಾತ್ರ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದೆ.

ಅಜ್ಜಿಗೆ ಆಪ್‌ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!

ಇನ್ನು ಸ್ಮಾರ್ಟ್‌ಟಿವಿಯಲ್ಲಿ ಓಟಿಟಿ ಆಪ್‌ಗಳನ್ನು ಓಪನ್ ಮಾಡಿರುವ ಯುವಕ, ಈ ಆಪ್‌ಗಳನ್ನು ಹೇಗೆ ಪತ್ತೆ ಮಾಡುವುದು?, ಹಾಗೆಯೇ ಈ ಟಿವಿಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಚೌಕದ ರೀತಿಯಲ್ಲಿರುವ ಇವು ಪ್ರತ್ಯೇಕ ಆಪ್‌ಗಳು ಎಂದು ಅಜ್ಜಿಗೆ ವಿವರಿಸಿದ್ದಾನೆ. ಹಾಗೆಯೇ ಅಮೆಜಾನ್, ಪ್ರೈಮ್, ನೆಟ್‌ಫ್ಲಿಕ್ಸ್ ಬಗ್ಗೆ ವಿವರಿಸಿ ಇವು ಒಂದಕ್ಕೊಂದು ಯಾವುದೇ ಸಂಬಂಧ ಹೊಂದಿಲ್ಲ ಎಂದು ತಿಳಿಸಿದ್ದಾನೆ.

ಇದಾದ ನಂತರ ಈ ಸ್ಮಾರ್ಟ್‌ಟಿವಿಯಲ್ಲಿ ಪ್ರೈಮ್ ವಿಡಿಯೋ ಹಾಗೂ ನೆಟ್‌ಫ್ಲಿಕ್ಸ್ ಕೂಡ ಇದೆ ಎಂದು ಹೇಳುವ ಯುವಕ ಆ ಆಪ್‌ಗಳು ಎಲ್ಲಿವೆ ಎಂದು ಪತ್ತೆ ಮಾಡಲು ಅಜ್ಜಿಗೆ ಸೂಚಿಸುತ್ತಾನೆ. ಅದರಂತೆ ಅಜ್ಜಿ ಓಟಿಟಿ ಆಪ್‌ಗಳನ್ನು ಪತ್ತೆ ಮಾಡಲು ಸ್ಕ್ರಾಲ್ ಮಾಡುತ್ತಾರೆ. ಹಾಗೆಯೇ ಅದನ್ನು ಯಾವ ರೀತಿ ಓಪನ್‌ ಮಾಡಬಹುದು ಎಂಬುದನ್ನೂ ಸಹ ಕಲಿತುಕೊಳ್ಳುತ್ತಾರೆ. ಇನ್ನು ಈ ಪೋಸ್ಟ್‌ 4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, 288,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಇನ್ನು ಟ್ವಿಟ್ಟರ್‌ನಲ್ಲೂ ಸಹ ಈ ವಿಡಿಯೋ ಲಭ್ಯವಿದ್ದು, ಇದನ್ನು ಕ್ರಿಸ್ ಇವಾನ್ಸ್ ಎಂಬುವರು ಶೇರ್‌ ಮಾಡಿಕೊಂಡಿದ್ದಾರೆ. ಹಾಗೆಯೇ ಈ ಟ್ಯುಟೋರಿಯಲ್‌ಗಾಗಿ ನನ್ನ ಪೋಷಕರನ್ನು ಹೇಗೆ ಸೈನ್ ಅಪ್ ಮಾಡಿಸುವುದು ಎಂಬ ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿರುವ ಬಳಕೆದಾರರು ತಮ್ಮ ತಾಯಿ ಹಾಗೂ ಅಜ್ಜಿಯನ್ನು ನೆನಪಿಸಿಕೊಂಡಿದ್ದಾರೆ. ಹಾಗೆಯೇ ನನ್ನ ತಾಯಿಯನ್ನು ನೋಡಿದಾಗಲೆಲ್ಲಾ ಫೋನ್‌ನಲ್ಲಿ ನಾನು ಸಹಾಯ ಮಾಡುತ್ತಿದ್ದೇನೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಹಾಗೆಯೇ ಈ ರೀತಿಯಲ್ಲಿ ನನ್ನ ತಂದೆಗೆ ಹೇಳಿಕೊಡಬೇಕು. ಅದರಲ್ಲೂ ಯೂಟ್ಯೂಬ್‌ ಟಿವಿ ಅಂದರೆ ಏನು ಎಂದು ಅವರಿಗೆ ವಿವರಿಸಲು ಪ್ರಯತ್ನಿಸಿದಾಗ, ಅದನ್ನು ಅವರು ಗ್ರಹಿಸಲು ಸಾಧ್ಯವಾಗಲಿಲ್ಲ. ಅವರು ಕೇಬಲ್‌ ಸಂಪರ್ಕದ ಮೂಲಕ ಟಿವಿ ವೀಕ್ಷಣೆ ಮಾಡುತ್ತಿದ್ದು, ಈ ಆಪ್‌ಗಳಿಂದ ಗೊಂದಲಕ್ಕೆ ಒಳಗಾದರು ಎಂದು ಬರೆದಿದ್ದಾರೆ.

ಹಾಗೆಯೇ ಇನ್ನೂ ಹಲವರು ಕಾಮೆಂಟ್‌ ಮಾಡಿದ್ದು, ಇಷ್ಟೊಂದು ತಾಳ್ಮೆ ನಮ್ಮಲ್ಲಿ ಖಂಡಿತಾ ಇಲ್ಲ ಎಂದಿದ್ದಾರೆ. ಇದರೊಂದಿಗೆ ನಾನು 2015 ರಲ್ಲಿ ಮೊದಲ ಬಾರಿಗೆ ಈ ರೀತಿಯ ಟ್ಯುಟೋರಿಯಲ್ ಮಾಡಿದ್ದೆ. ಅದರಂತೆ ಪ್ರತಿ ವಾರ ಈ ಟ್ಯುಟೋರಿಯಲ್ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇನ್ನು ನಮ್ಮ ಅಜ್ಜಿಯರು ಇಂದು ನಮ್ಮಲ್ಲಿರುವ ತಂತ್ರಜ್ಞಾನವನ್ನು ಅವರ ಕಾಲದಲ್ಲಿ ಹೊಂದಿರಲಿಲ್ಲ. ನಾವು ಸುಲಭವಾಗಿ ಹೊಸ ತಂತ್ರಜ್ಞಾನದೊಂದಿಗೆ ಮುಂದುವರಿಯುತ್ತೇವೆ. ಅದಾಗ್ಯೂ ಇದು ವಿಭಿನ್ನ ಸ್ಟೋರಿ ಎಂದು ಮಗದೊಬ್ಬರು ಕಾಮೆಂಟ್‌ ಮಾಡಿದ್ದಾರೆ.

Best Mobiles in India

English summary
The young man taught the grandmother about Smart TV OTT apps. This video has gone viral on Twitter and tiktok. details are in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+