Home
ಸುದ್ದಿಜಾಲ

ಮಂಗಳೂರು ಮಹಿಳೆಯ ಖಾತೆಯಿಂದ ಕ್ಷಣ ಮಾತ್ರದಲ್ಲಿ ಎಗರಿ ಹೋಯ್ತು 10 ಲಕ್ಷ, ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಎಚ್ಚರ!

ಸಾಮಾಜಿಕ ಜಾಲತಾಣಗಳು ಇಂದು ಎಷ್ಟು ನಮ್ಮನ್ನು ಎಷ್ಟು ರಂಜಿಸಲಿವೆಯೋ ಅಷ್ಟೇ ಕಷ್ಟಕ್ಕೂ ದೂಡಲಿವೆ. ಇವುಗಳ ಮೂಲಕ ಸ್ಕ್ಯಾಮರ್‌ಗಳು ಜನರನ್ನು ವಂಚನೆ ಮಾಡುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೋರ್ವರು ಅದರಲ್ಲೂ ಮಂಗಳೂರು ಮೂಲದವರು ಒಂದೇ ಬಾರಿಗೆ ಹತ್ತು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.

ಹೌದು, ಆನ್‌ಲೈನ್‌ ವಂಚನೆ ಬಗ್ಗೆ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮಾಧ್ಯಮಗಳು ಆಗಾಗ್ಗೆ ಜಾಗೃತಿ ನೀಡುತ್ತಿವೆಯಾದರೂ ಜನ ಎಚ್ಚರಿಕೆ ವಹಿಸಿರುವಂತೆ ಕಾಣುತ್ತಿಲ್ಲ. ಯಾಕೆಂದರೆ ಈ ನಡುವೆ ಆನ್‌ಲೈನ್‌ ಸ್ಕ್ಯಾಮ್‌ ಪ್ರಕರಣ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಇದರ ಭಾಗವಾಗಿಯೇ ಈಗ ಸಾಫ್ಟ್‌ವೇರ್ ಉದ್ಯೋಗಿ ಇಷ್ಟು ಹಣ ಕಳೆದುಕೊಂಡಿರುವುದು. ಹಾಗಿದ್ರೆ ಏನಿದು ಮಹಾಮೋಸ ಬನ್ನಿ ನೋಡೋಣ.

ಮಂಗಳೂರು ಮಹಿಳೆಯ ಖಾತೆಯಿಂದ ಕ್ಷಣ ಮಾತ್ರದಲ್ಲಿ ಎಗರಿ ಹೋಯ್ತು 10 ಲಕ್ಷ...

ಜಾಹೀರಾತು ಕ್ಲಿಕ್‌ ಮಾಡಿದ್ದೇ ತಡ... : ಇಂದು ಸಾಮಾನ್ಯವಾಗಿ ಬಹುಪಾಲು ಮಂದಿ ಇನ್‌ಸ್ಟಾಗ್ರಾಮ್‌ ಬಳಕೆ ಮಾಡುತ್ತಾರೆ. ಇದರಲ್ಲಿ ಜಾಹೀರಾತುಗಳು ಸಹ ಹೆಚ್ಚಾಗಿ ಕಾಣಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯ ವಿಷಯವಾಗಿದೆ. ಈ ನಡುವೆ ಜಾಹೀರಾತನ್ನು ಕ್ಲಿಕ್ ಮಾಡಿದ ನಂತರ ಸಾಫ್ಟ್‌ವೇರ್ ವೃತ್ತಿಪರರು 10.5 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ಆರೆಕಾಲಿಕ ಅಂದರೆ ಪಾರ್ಟ್‌ ಟೈಮ್‌ ಕೆಲಸದ ಬಗ್ಗೆ ಮಾಹಿತಿ ಇತ್ತು.

ಮೋಸ ಮಾಡಿದ್ದು ಹೇಗೆ?: ದಿ ಹಿಂದೂ ಪತ್ರಿಕೆಯ ಈ ಸಂಬಂಧ ವರದಿ ಮಾಡಿದೆ. ಇನ್ನು ಈ ಘಟನೆ ಸಂಬಂಧ ಸಂತ್ರಸ್ತೆ ಕಂಕನಾಡಿ ಪೊಲೀಸರಿಗೆ ದೂರು ನೀಡಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಆದಾಯದ ಭರವಸೆ ನೀಡುವ ಜಾಹೀರಾತನ್ನು ನೋಡಿದೆ. ಅದನ್ನು ಕ್ಲಿಕ್‌ ಮಾಡಿದಾಗ ನೀವು ಹೆಚ್ಚಿನ ಹಣ ಗಳಿಸಬಹುದು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿತ್ತು. ಅದರಂತೆ ನಾನು ಅಲ್ಲೇ ಇದ್ದ ವಾಟ್ಸಾಪ್‌ಗೆ ಮೆಸೆಜ್ ಹಾಕಿದ್ದೆ ಎಂದು ಮೋಸ ಹೋದವರು ಮಾಹಿತಿ ನೀಡಿದ್ದಾರೆ.

ಆ ಇನ್‌ಸ್ಟಾಗ್ರಾಮ್‌ನಲ್ಲಿ 9899183689 ನಂಬರ್‌ ಅನ್ನು ಉಲ್ಲೇಖ ಮಾಡಲಾಗಿತ್ತು. ಇದಾದ ನಂತರದಲ್ಲಿ ಯಾರೋ ಕರೆ ಮಾಡಿ ಟೆಲಿಗ್ರಾಮ್‌ನಲ್ಲಿ @khannika9912 ಗೆ ಸಂಪರ್ಕಿಸಲು ಹೇಳಿದರು. ಬಳಿಕ ಈ ವ್ಯಕ್ತಿ ಅಧಿಕ ಲಾಭದ ಭರವಸೆ ನೀಡಿ ಗೂಗಲ್‌ ಪೇ ಮೂಲಕ ಯುಪಿಐ ಐಡಿಗೆ 7,000 ರೂ. ಹಾಕಿಸಿಕೊಂಡರು. ಇದಾದ ನಂತರ ಶೀಘ್ರದಲ್ಲೇ ಖಾತೆಗೆ 9,100 ರೂ. ಬಂತು ಎಂದು ಘಟನೆ ಬಗ್ಗೆ ಮಹಿಳೆ ವಿವರಿಸಿದ್ದಾರೆ.

ತಕ್ಷಣವೇ ಹಣ ವಾಪಸ್‌ ಬಂದಿದ್ದರಿಂದ ಅದನ್ನು ನಂಬಿದ ಮಹಿಳೆ ಮತ್ತೆ ಅದೇ ಯುಪಿಐ ಐಡಿಗೆ 20,000 ರೂ. ಗಳನ್ನು ಹಾಕಿದ್ದಾರೆ. ಈ ಹಣಕ್ಕೆ ಹೆಚ್ಚಿನ ಹಣ ನೀಡುವ ಬದಲಾಗಿ ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗಿದೆ, ಆದ್ದರಿಂದ ಯಾವುದೇ ಹಣವನ್ನು ಸ್ವೀಕಾರ ಮಾಡಲು ಸಾಧ್ಯ ಇಲ್ಲ ಎಂದು ಸ್ಕ್ಯಾಮರ್‌ ತಿಳಿಸಿದ್ದಾರೆ. ಇದಾದ ಬಳಿಕ ಮಹಿಳೆ ಮತ್ತೆ ಹೆಚ್ಚುವರಿಯಾಗಿ 10,50,525 ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಇಷ್ಟೆಲ್ಲಾ ಮಾಡುವವರೆಗೂ ಈಕೆಗೆ ತಾನು ಮೋಸ ಹೋಗಿದ್ದೇನೆ ಎಂಬುದೇ ಅರಿವಿಲ್ಲ. ಇದಾದ ಬಳಿಕ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಇಂತಹ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ? :
ಈ ರೀತಿಯ ವಂಚನೆ ನಿರಂತರವಾಗಿ ವರದಿ ಆಗುತ್ತಿದ್ದರೂ ಸಹ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಈಗಲಾದರೂ ಇಂತಹ ಮೋಸದ ಜಾಲದಿಂದ ಪಾರಾಗಲು ಕೆಲವು ಸಲಹೆಗಳನ್ನು ಪಾಲಿಸಿ. ಅದರಲ್ಲಿ ಮೊದಲನೆಯದಾಗಿ, ಲಿಂಕ್ಡ್‌ಇನ್‌, ನೌಕರಿ. ಕಾಮ್‌, ಇನ್‌ಡೀಡ್ ಇತ್ಯಾದಿಗಳಿಗೆ ಮೀಸಲಾಗಿರುವ ಅಧಿಕೃತ ಪೋರ್ಟಲ್‌ಗಳ ಮೂಲಕ ಅರೆಕಾಲಿಕ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಉತ್ತಮ.

ಆದಾಗ್ಯೂ, ನೀವು ಇತರ ವಿಧಾನಗಳ ಮೂಲಕ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬೇಕಾದರೆ, ಕಂಪೆನಿಯ ಅಥವಾ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ. ಈ ವೇಳೆ ಪ್ರಮುಖವಾಗಿ ಅವರ ಹೆಸರು, ಅವರ ಕಂಪನಿಯ ಹೆಸರು ಇತ್ಯಾದಿಗಳಂತಹ ವಿವರಗಳನ್ನು ಪಡೆದುಕೊಳ್ಳಿ. ಕೆಲವೊಮ್ಮೆ ಸರಳವಾದ ಗೂಗಲ್‌ ಹುಡುಕಾಟ ಸಹ ನಿಮ್ಮನ್ನು ಈ ರೀತಿಯ ವಂಚನೆಯಿಂದ ಪಾರು ಮಾಡಬಹುದು.

ಮಂಗಳೂರು ಮಹಿಳೆಯ ಖಾತೆಯಿಂದ ಕ್ಷಣ ಮಾತ್ರದಲ್ಲಿ ಎಗರಿ ಹೋಯ್ತು 10 ಲಕ್ಷ...

ಇಷ್ಟು ಮಾತ್ರವಲ್ಲದೆ ಹೆಸರು, ಫೋನ್ ಸಂಖ್ಯೆ ಇತ್ಯಾದಿಗಳಂತಹ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡುವ ಮೊದಲು ಬಹಳ ಜಾಗರೂಕರಾಗಿರಿ ಹಾಗೂ ನಂಬಲರ್ಹ ವೆಬ್‌ಸೈಟ್‌ಗಳಲ್ಲಿ ನೀವು ಈ ಮಾಹಿತಿಗಳನ್ನು ಭರ್ತಿ ಮಾಡುತ್ತಿದ್ದೇವೆ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಿ. ಇದರೊಂದಿಗೆ ಅಪರಿಚಿತರ ಬ್ಯಾಂಕ್ ಖಾತೆಗೆ ಹಣವನ್ನು ಎಂದಿಗೂ ವರ್ಗಾಯಿಸಬೇಡಿ ಮತ್ತು ನಿಮ್ಮ ಬ್ಯಾಂಕಿಂಗ್ ರುಜುವಾತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

Best Mobiles in India

English summary
Mangalore based software woman has lost more than 10 lakhs by clicking on ads that appear on Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+