Home
ಸುದ್ದಿಜಾಲ

ಬೆಂಗಳೂರಿಗರು ಮಲಗೋ ಮುನ್ನ ಮೊಬೈಲ್‌ನಲ್ಲಿ ಇದನ್ನು ನೋಡುತ್ತಾರಂತೆ: ವರದಿ!

ಸ್ಮಾರ್ಟ್‌ಫೋನ್‌ಗಳು ಇಂದು ಬಳಕೆದಾರರ ಅವಿಭಾಜ್ಯ ಅಂಗದಂತೆ ಆಗಿಹೋಗಿವೆ. ಇದಕ್ಕೆ ಕಾರಣ ಸ್ಮಾರ್ಟ್‌ಫೋನ್‌ ಇಂದು ಎಲ್ಲವನ್ನೂ ಒದಗಿಸುತ್ತಿರುವುದು. ಅಂದರೆ ನಿಮ್ಮ ದಿನ ಆರಂಭವಾಗುವುದರಿಂದ ಹಿಡಿದು ಮಲಗುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಫೋನ್‌ ಹಲವು ಸೌಲಭ್ಯಗಳನ್ನು ನೀಡುತ್ತದೆ. ಅದರಂತೆ ಬೆಂಗಳೂರಿಗರು ಶಾಕ್‌ ಆಗುವ ವರದಿಯೊಂದು ಪ್ರಕಟವಾಗಿದೆ.

ಹೌದು, ಕರ್ನಾಟಕದ ರಾಜಧಾನಿ ಬೆಂಗಳೂರು ಇಂದು ತಂತ್ರಜ್ಞಾನ ಅಭಿವೃದ್ಧಿಗೆ ಅಗತ್ಯವಾಗಿರುವ ಸ್ಥಳ. ಪ್ರಮುಖ ಟೆಕ್ನಾಲಜಿ ಸಂಸ್ಥೆಗಳು ಇಲ್ಲಿ ನೆಲೆಯೂರಿದ್ದು,ಜನರಿಗೆ ಹಲವಾರು ರೀತಿಯಲ್ಲಿ ಸೇವೆ ನೀಡುತ್ತಿವೆ. ಇದರ ಭಾಗವಾಗಿ ಬೆಂಗಳೂರಲ್ಲಿ ಒಂದು ಸಮೀಕ್ಷೆ ನಡೆಸಲಾಗಿದ್ದು, ಎಷ್ಟು ಮಂದಿ ಸರಿಯಾಗಿ ನಿದ್ದೆ ಮಾಡುತ್ತಾರೆ, ಎಷ್ಟು ಮಂದಿ ಮಲಗುವ ಮುನ್ನ ಮೊಬೈಲ್‌ನಲ್ಲಿ ಏನೆಲ್ಲಾ ಜಾಲಾಡುತ್ತಾರೆ ಎಂದು ಮಾಹಿತಿ ಕಲೆ ಹಾಕಲಾಗಿದೆ. ಹಾಗಿದ್ರೆ, ಮತ್ಯಾಕೆ ತಡ. ಬನ್ನಿ ಬೆಂಗಳೂರಿಗರ ಮೊಬೈಲ್‌ ಗೀಳಿನ ಬಗ್ಗೆ ತಿಳಿದುಕೊಳ್ಳೋಣ.

ಬೆಂಗಳೂರಿಗರು ಮಲಗೋ ಮುನ್ನ ಮೊಬೈಲ್‌ನಲ್ಲಿ ಇದನ್ನು ನೋಡುತ್ತಾರಂತೆ: ವರದಿ!

ಹೆಚ್ಚಿನ ಬೆಂಗಳೂರಿಗರು ಮೊಬೈಲ್ ಗೀಳಿಗೆ ಒಳಗಾಗಿದ್ದು, ಅವರನ್ನು ಯಾವುದೇ ಕಾರಣಕ್ಕೂ ಇದರಿಂದ ಹೊರಗೆ ಕರೆತರಲು ಸಾಧ್ಯವಾಗದ ಮಟ್ಟಕ್ಕೆ ಮೊಬೈಲ್‌ಗೆ ಮಾರುಹೋಗಿದ್ದಾರೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ. ಸಮೀಕ್ಷೆಯ ಪ್ರಕಾರ 91% ಜನರು ಮಲಗುವ ಮೊದಲು ಹಾಸಿಗೆಯಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಾರಂತೆ. ಇದರಲ್ಲಿ 38% ಜನರು ಸಾಮಾಜಿಕ ಮಾಧ್ಯಮವನ್ನು ಬ್ರೌಸ್ ಮಾಡಿದರೆ, 29% ಜನರು ಕೆಲಸದಿಂದ ವಜಾಗೊಂಡು ಅಥವಾ ವಜಾಗೊಳ್ಳುವ ಭಯದಿಂದ ಮೊಬೈಲ್‌ ಹಿಡಿದುಕೊಂಡು ನಿದ್ರೆ ಇಲ್ಲದ ರಾತ್ರಿ ಕಳೆಯುತ್ತಿದ್ದಾರಂತೆ.

ಸಮೀಕ್ಷೆ ಮಾಡಿದವರು ಯಾರು?: ಹಾಸಿಗೆ ತಯಾರಿಕಾ ವಿಭಾಗದಲ್ಲಿ ಪ್ರಮುಖ ಸ್ಥಾನದಲ್ಲಿ ಇರುವ ವೇಕ್‌ಫಿಟ್‌ ಫೆಬ್ರವರಿ 2022 ರಿಂದ ಮಾರ್ಚ್ 2023 ರವರೆಗೆ ಬೆಂಗಳೂರು ಮತ್ತು ದೇಶದ ಉಳಿದ ಭಾಗಗಳಲ್ಲಿ ನಡೆಸಿದ 'ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್' ಎಂಬ ಶೀರ್ಷಿಕೆಯ ಅಡಿಯಲ್ಲಿ ಸಮೀಕ್ಷೆ ನಡೆಸಿದೆ. ಇದು 10,000 ಪ್ರತಿಸ್ಪಂದಕರನ್ನು ಒಳಗೊಂಡಿದ್ದು, ಬೆಂಗಳೂರಿನಲ್ಲಿ 4,000 ಪ್ರತಿಸ್ಪಂದಕರಿಂದ ಮಾಹಿತಿ ಕಲೆ ಹಾಕಲಾಗಿದೆ.

26% ನಿದ್ರಾಹೀನತೆ :ಈ 13 ತಿಂಗಳ ಸಮೀಕ್ಷೆಯಲ್ಲಿ ಕಂಡು ಬಂದ ಮೊದಲ ವಿಷಯ ಏನೆಂದರೆ ನಿದ್ರಾಹೀನತೆ. ಈ ಸಂಬಂಧ 61% ಜನರು ಪ್ರತಿಕ್ರಿಯಿಸಿದ್ದು, ಇವರೆಲ್ಲಾ ರಾತ್ರಿ 11 ಗಂಟೆಯ ನಂತರ ಮಲಗುತ್ತಾರೆ.ಆದರೆ,ಸೂಕ್ತವಾದ ಮಲಗುವ ಸಮಯ ರಾತ್ರಿ 10ಗಂಟೆ. ತಡವಾಗಿ ಮಲಗಿದವರಲ್ಲಿ 29%ರಷ್ಟು ಜನರು ಬೆಳಿಗ್ಗೆ 7 ರಿಂದ 8 ರವರೆಗೆ ನಿದ್ದೆ ಮಾಡುತ್ತಾರೆ. ಹಾಗೆಯೇ 60%ಕೆಲಸದ ಸ್ಥಳದಲ್ಲಿ ನಿದ್ರಿಸುತ್ತಾರಂತೆ ಮತ್ತು 34%ಜನರು ಬೆಳಗಿನ ಉಲ್ಲಾಸವನ್ನೇ ಪಡೆಯುವುದಿಲ್ಲ ಎಂದು ತಿಳಿದುಬಂದಿದೆ.

ಬೆಂಗಳೂರಿಗರು ಮಲಗೋ ಮುನ್ನ ಮೊಬೈಲ್‌ನಲ್ಲಿ ಇದನ್ನು ನೋಡುತ್ತಾರಂತೆ: ವರದಿ!

ಇನ್ನುಳಿದಂತೆ 32% ಜನರು ಹಾಸಿಗೆಯನ್ನು ಹೊರತುಪಡಿಸಿ ಇತರ ಸ್ಥಳಗಳಲ್ಲಿ ಮಲಗುತ್ತಿದ್ದರೆ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ 40% ಜನರು ಮಲಗುವ ಕೋಣೆಯ ವಾತಾವರಣವು ಅವರ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಹಾಗೆಯೇ 20% ಜನರು ಉತ್ತಮ ಹಾಸಿಗೆ ತಮ್ಮ ನಿದ್ರೆಯನ್ನು ಸುಧಾರಿಸುತ್ತದೆ ಎಂದು ಸಹ ಹೇಳಿಕೆ ನೀಡಿದ್ದಾರೆ. ಅದಾಗ್ಯೂ ನಗರದಲ್ಲಿ 26% ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಉತ್ತಮ ನಿದ್ರೆಗೆ ಮೊಬೈಲ್‌ನಿಂದ ದೂರ ಇರಿ: ನಿದ್ದೆಯು ಮನುಷ್ಯನಿಗೆ ಅಗತ್ಯವಾಗಿ ಬೇಕಾದ ವಿಷಯವಾಗಿದೆ. ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದರೆ ಹಲವಾರು ಖಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಹೀಗಾಗಿ ರಾತ್ರಿ ಮನೆಯ ಲೈಟ್‌ ಆಫ್‌ ಮಾಡಿ ಹೆಚ್ಚು ಹೊತ್ತು ಮೊಬೈಲ್‌ ವೀಕ್ಷಣೆ ಮಾಡುವುದರಿಂದ ನಿದ್ರೆಗೆ ಖಂಡಿತಾ ಭಂಗ ಉಂಟಾಗುತ್ತದೆ. ಜೊತೆಗೆ ಕಣ್ಣಿನ ಸಮಸ್ಯೆ ಸಹ ಬರುತ್ತದೆ. ಹೀಗಾಗಿ ನಿದ್ದೆ ಮಾಡುವ ಒಂದು ಅಥವಾ ಅರ್ಧ ಗಂಟೆಗೂ ಮೊದಲು ಮೊಬೈಲ್‌ ಬಳಕೆ ನಿಲ್ಲಿಸಿ.

ಬೆಂಗಳೂರಿಗರು ಮಲಗೋ ಮುನ್ನ ಮೊಬೈಲ್‌ನಲ್ಲಿ ಇದನ್ನು ನೋಡುತ್ತಾರಂತೆ: ವರದಿ!

ಅದಾಗ್ಯೂ ಮೊಬೈಲ್‌ ಇಲ್ಲದೆ ನಿದ್ದೆ ಬಾರದು ಎಂದಾದರೆ ನಿಮ್ಮಿಷ್ಟದ ಸಂಗೀತವನ್ನು ಆಲಿಸುವ ಮೂಲಕ ನಿದ್ರೆಗೆ ಜಾರಬಹುದು. ಹಾಗಂದ ಮಾತ್ರಕ್ಕೆ ನೀವು ಮತ್ತೆ ಮೊಬೈಲ್‌ ಹಿಡಿದುಕೊಂಡು ಮ್ಯೂಸಿಕ್‌ ಆಫ್ ಮಾಡುವ ಪ್ರಮೇಯ ಇರುವುದಿಲ್ಲ. ಯಾಕೆಂದರೆ ಇದಕ್ಕೆಂದೇ ಹಲವಾರು ಆಪ್‌ಗಳು ಆಪ್‌ ಸ್ಟೋರ್‌ನಲ್ಲಿ ಲಭ್ಯವಿದ್ದು, ಇವುಗಳನ್ನು ನೀವು ಬಳಕೆ ಮಾಡಬಹುದು.

Best Mobiles in India

English summary
A survey has been conducted in Bangalore and according to that survey citizens of Bangalore watch their mobiles before going to bed. It is known that they are more engrossed in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+