Smartphone: ಸ್ವಲ್ಪ ಇರಿ.. ಕೆಲವೇ ದಿನಗಳಲ್ಲಿ ಲಾಂಚ್ ಆಗಲಿವೆ ಭರ್ಜರಿ ಸ್ಮಾರ್ಟ್‌ಫೋನ್‌ಗಳು!
ನೀವೇನಾದರೂ ಈಗ ಹೊಸ ಸ್ಮಾರ್ಟ್‌ಫೋನ್ (Smartphone) ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಸ್ವಲ್ಪ ದಿನಗಳ ವರೆಗೆ ಕಾಯಿರಿ. ಯಾಕೆಂದರೆ ಇನ್ನೇನು ಕೆಲವೇ ದಿನಗಳಲ್ಲಿ ಅಥವಾ ಮಾರ್ಚ್ ಒಳಗೆ ಮಾರುಕಟ್ಟೆಯಲ್ಲಿ ಈಗಾಗಲೇ ಅಲ್ಲೋಲ ಕಲ್ಲೋಲ ಉಂಟು ಮಾಡಿರುವ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿವೆ.
ಹೌದು, ಈಗಾಗಲೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿಶೇಷ ಫೀಚರ್ಸ್ ಆಯ್ಕೆಯೊಂದಿಗೆ ಭಿನ್ನ ವಿಭಿನ್ನ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿವೆ. ಅದಾಗ್ಯೂ ಈಗ ಸುಧಾರಿತ ಫೀಚರ್ಸ್ ಆಯ್ಕೆಯೊಂದಿಗೆ ಗ್ರಾಹಕರ ಆದ್ಯತೆಗಳನ್ನು ಪೂರೈಸಲು ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡಲಿವೆ. ಹಾಗಿದ್ರೆ, ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಮುಂದಿನ ದಿನಗಳಲ್ಲಿ ಲಾಂಚ್ ಆಗಲಿವೆ?, ನಿರೀಕ್ಷಿತ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನಥಿಂಗ್ ಫೋನ್ 2a: ಈ ಸ್ಮಾರ್ಟ್‌ಫೋನ್ (Nothing Phone 2a) ಅನಾವರಣದ ದಿನಾಂಕವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಅಂದರೆ ಮಾರ್ಚ್ 5 ರಂದು ಭಾರತದಲ್ಲಿ ಈ ಫೋನ್ ಲಾಂಚ್ ಆಗಲಿದೆ. ಹಾಗೆಯೇ ಲೀಕ್ ಮಾಹಿತಿ ಆಧಾರದ ಮೇಲೆ ಇದು 6.7 ಇಂಚಿನ OLED ಡಿಸ್ಪ್ಲೇ ಹೊಂದಿದ್ದು, ಡ್ಯುಯಲ್ ಕ್ಯಾಮೆರಾ ಮಾಡ್ಯೂಲ್, 8GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಅಲ್ಲದೆ ಈ ಫೋನ್ ಆಂಡ್ರಾಯ್ಡ್ 14 ಓಎಸ್ ಅನ್ನು ರನ್ ಮಾಡಲಿದೆ ಎಂದು ತಿಳಿದುಬಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A55 5G: ಸ್ಯಾಮ್‌ಸಂಗ್‌ನ ಮಿಡ್ ರೇಂಜ್ ಫೋನ್ ಆಗಿ ಇದು (Samsung Galaxy A55 5G) ಗುರುತಿಸಿಕೊಳ್ಳಲಿದ್ದು, ಮಾರ್ಚ್ ಮತ್ತು ಏಪ್ರಿಲ್ ನಡುವೆ ಇದು ಲಾಂಚ್ ಆಗಲಿದೆ ಎನ್ನಲಾಗಿದೆ. ಈ ಫೋನ್ 120Hz ರಿಫ್ರೆಶ್ ದರದೊಂದಿಗೆ 6.5 ಇಂಚಿನ ಫುಲ್ ಹೆಚ್‌ಡಿ+ OLED ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, ಟ್ರಿಪಲ್ ಕ್ಯಾಮೆರಾ ಮಾಡ್ಯೂಲ್ ಇರುವ ಸಾಧ್ಯತೆಯಿದೆ. ಜೊತೆಗೆ ಇದು ಎಕ್ಸಿನೋಸ್ 1480 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಶಿಯೋಮಿ 14: ಈ ಸ್ಮಾರ್ಟ್‌ಫೋನ್ ಸರಣಿ (Xiaomi 14) ಭಾರತದಲ್ಲಿ ಮಾರ್ಚ್ 7 ರಂದು ಬಿಡುಗಡೆಯಾಗಲಿದೆ. ಈ ಫೋನ್‌ನ ಚೈನೀಸ್ ವೇರಿಯಂಟ್ ಬಗ್ಗೆ ಮಾಹಿತಿ ತಿಳಿದುಬಂದಿದ್ದು, 6.36 ಇಂಚಿನ OLED ಡಿಸ್ಪ್ಲೇ ಹೊಂದಿದ್ದು, 120Hz ನ ರಿಫ್ರೆಶ್ ರೇಟ್ ಮೂಲಕ ಉತ್ತಮವಾಗಿ ಕೆಲಸ ಮಾಡಲಿದೆ. ಅಲ್ಲದೆ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದ್ದು, 50 ಮೆಗಾಪಿಕ್ಸೆಲ್ ಲೆನ್ಸ್, 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ.
ರಿಯಲ್‌ಮಿ 12+ 5G : ರಿಯಲ್‌ಮಿ 12 ಪ್ರೊ ಮತ್ತು ರಿಯಲ್‌ಮಿ 12 ಪ್ರೊ+ 5G ಅನ್ನು ಭಾರತದಲ್ಲಿ ಈಗಾಗಲೇ ಅಂದರೆ ಜನವರಿ 29, 2024 ರಂದು ಲಾಂಚ್ ಮಾಡಲಾಗಿದೆ. ಅದರಂತೆ ನವೆಂಬರ್ 21, 2023 ರಂದು ಚೀನಾದಲ್ಲಿ ರಿಯಲ್‌ಮಿ 12+ 5G (Realme 12+ 5G) ಅನ್ನು ಅನಾವರಣ ಮಾಡಲಾಗಿದ್ದು, ಇದೇ ಫೋನ್ ಅನ್ನು ಈಗ ಭಾರತದಲ್ಲಿ ಲಾಂಚ್ ಮಾಡಲಾಗುತ್ತಿದೆ. ಮಿಡ್ ರೇಂಜ್ ವಿಭಾಗದಲ್ಲಿ ರಿಯಲ್‌ಮಿ 12+ ಅನ್ನು ಮಾರ್ಚ್ 6 ರಂದು ಅನಾವರಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ವಿವೋ V30 ಪ್ರೊ: ವಿವೋ V30 ಸ್ಮಾರ್ಟ್‌ಫೋನ್ ಅನಾವರಣದ ನಂತರ, ಫೋನ್‌ನ ಪ್ರೊ ರೂಪಾಂತರವು ಫೆಬ್ರವರಿ 28 ರಂದು ಲಾಂಚ್ ಆಗುವ ನಿರೀಕ್ಷೆಯಿದೆ. ಟಿಪ್‌ಸ್ಟರ್‌ಗಳ ಪ್ರಕಾರ, ಈ ಫೋನ್ (Vivo V30 Pro) ಕರ್ವ್ಡ್ 3D ಡಿಸ್ಪ್ಲೇ ಮತ್ತು ಟ್ರಿಪಲ್ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಲಿದೆ ಎನ್ನಲಾಗಿದ್ದು, 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಆಂಡ್ರಾಯ್ಡ್ 14 ಓಎಸ್ ಅನ್ನು ರನ್ ಮಾಡಲಿದೆ ಎಂಬ ಮಾಹಿತಿ ಇದೆ.


Click it and Unblock the Notifications