Home
ಸುದ್ದಿಜಾಲ

Smartphones: 2024 ರಲ್ಲಿ ಯಾವೆಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ?

ಈಗ ನಾವೆಲ್ಲಾ ಹೊಸ ವರ್ಷದ ಆರಂಭದಲ್ಲಿದ್ದೇವೆ. ಈ ನಡುವೆ ಹೊಸ ಹೊಸ ಸ್ಮಾರ್ಟ್‌ ಗ್ಯಾಜೆಟ್‌ಗಳು ಅನಾವರಣ ಆಗುತ್ತಿದ್ದು, ಈ ಮೂಲಕ ನೂತನ ತಂತ್ರಜ್ಞಾನದ ಅನುಭವ ಪಡೆಯಬಹುದಾಗಿದೆ. ಅದರಲ್ಲೂ ಸ್ಯಾಮ್‌ಸಂಗ್‌, ಆಪಲ್‌, ವಿವೋ ಸೇರಿದಂತೆ ಅನೇಕ ಕಂಪೆನಿಗಳು ಹೊಸ ಸ್ಮಾರ್ಟ್‌ಫೋನ್‌ಗಳನ್ನು (Smartphones) ಅನಾವರಣ ಮಾಡಲಿವೆ.

ಹೌದು, ಕಳೆದ ವರ್ಷ ಭಿನ್ನ ಫೀಚರ್ಸ್‌ ಆಯ್ಕೆಯ ಸ್ಮಾರ್ಟ್‌ಫೋನ್‌ಗಳು, ವಿಆರ್ ಹೆಡ್‌ಸೆಟ್‌ಗಳು ಮತ್ತು ಜನರೇಟಿವ್ ಎಐ ಬಹಳ ಸದ್ದು ಮಾಡಿದ್ದವು. ಆದರೆ, ಈಗ ಗ್ರಾಹಕ ತಂತ್ರಜ್ಞಾನ ಕಂಪನಿಗಳು ಎಲ್ಲಾ ರೀತಿಯಲ್ಲಿಯೂ ಒಂದು ಹೆಜ್ಜೆ ಮುಂದೆ ಇರುವಂತೆ ಕಾಣುತ್ತಿದೆ. ಪರಿಣಾಮ ವಿಶೇಷ ಅಪ್‌ಗ್ರೇಡ್‌ನೊಂದಿಗೆ ನೂತನ ತಂತ್ರಜ್ಞಾನ ಇರುವ ಉತ್ತಮವಾದ ಡಿವೈಸ್‌ಗಳನ್ನು ಅನಾವರಣ ಮಾಡಲಿವೆ. ಹಾಗಿದ್ರೆ, ಯಾವೆಲ್ಲಾ ಡಿವೈಸ್‌ಗಳು ಲಾಂಚ್‌ ಆಗಲಿಗೆ ಎನ್ನುವ ಮಾಹಿತಿ ತಿಳಿಯೋಣ ಬನ್ನಿ.

Smartphones: 2024 ರಲ್ಲಿ ಯಾವೆಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ?

ವಿವೋ X100 ಸರಣಿ: ವಿವೋ ತನ್ನ ಪ್ರಮುಖ X100 ಸರಣಿ (Vivo X100 series) ಡಿವೈಸ್‌ಗಳನ್ನು ಜನವರಿ 4 ರಂದು ಬಿಡುಗಡೆ ಮಾಡಲು ಮುಂದಾಗಿದೆ. ಇದು ಎರಡು ವೇರಿಯಂಟ್‌ ಅನ್ನು ಹೊಂದಿರಲಿದ್ದು, ವಿವೋ X100 ಮತ್ತು ವಿವೋ X100 ಪ್ರೊ ಅನ್ನು ಅನಾವರಣ ಮಾಡಲಿದೆ. ಈ ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, X90 ಸರಣಿಗೆ ಹೋಲಿಸಿದರೆ ಸ್ಮಾರ್ಟ್‌ಫೋನ್‌ಗಳು ವಿಶೇಷ ಆಪ್ಟಿಕಲ್ ಸುಧಾರಣೆಗಳೊಂದಿಗೆ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ.

Smartphones: 2024 ರಲ್ಲಿ ಯಾವೆಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ?

ಅಸುಸ್‌ ROG ಫೋನ್ 8 ಮತ್ತು ಫೋನ್ 8 ಪ್ರೊ: ಅಸುಸ್‌ ನಿಂದ ಗೇಮಿಂಗ್‌ ಆಧಾರಿತ ಸ್ಮಾರ್ಟ್‌ಫೋನ್‌ಗಳನ್ನು ಜನವರಿ 9 ರಂದು ಲಾಂಚ್‌ ಮಾಡಲಾಗುತ್ತದೆ ಎನ್ನುವ ಮಾಹಿತಿ ಇದೆ. ಈ ಹೊಸ ROG ಫೋನ್ 8 ಮತ್ತು ಫೋನ್ 8 ಪ್ರೊ ಫೋನ್‌ಗಳು (Asus ROG Phone 8 and Phone 8 Pro) ಶಕ್ತಿಯುತ ಪ್ರೊಸೆಸರ್ ಬಲದೊಂದಿಗೆ ವಿಶೇಷ ಕೂಲಿಂಗ್‌ ತಂತ್ರಜ್ಞಾನ ಹೊಂದಿರಲಿವೆ. ಈ ಮೂಲಕ ಗೇಮಿಂಗ್‌ ಪ್ರಿಯರಿಗೆ ವಿಶೇ‍ಷ ಅನುಭವ ನೀಡಲಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ: ಬಹು ನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ (Samsung Galaxy S24 series) ಫೋನ್‌ಗಳು ಇದೇ ತಿಂಗಳು ಅನಾವರಣ ಆಗಲಿವೆ. ಈ ಸರಣಿಯಲ್ಲಿ ಗ್ಯಾಲಕ್ಸಿ S24, ಗ್ಯಾಲಕ್ಸಿ S24+ ಮತ್ತು ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ಗಳನ್ನು ಈ ವರ್ಷ ಅನಾವರಣ ಮಾಡಲಾಗುತ್ತದೆ. ಇದರೊಂದಿಗೆ ಈ ಡಿವೈಸ್‌ಗಳು ಎಐ ಫೀಚರ್ಸ್‌ ಅನ್ನು ಪಡೆದಿರಲಿವೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಆರನೇ ತಲೆಮಾರಿನ ಫೋಲ್ಡ್‌ ಮಾಡಬಹುದಾದ ಫೋನ್‌ಗಳನ್ನು ಸಹ ಲಾಂಚ್‌ ಮಾಡಲಾಗುತ್ತದೆ ಎನ್ನಲಾಗಿದೆ.

Smartphones: 2024 ರಲ್ಲಿ ಯಾವೆಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ?

ಒನ್‌ಪ್ಲಸ್‌ ಫೋನ್‌ಗಳು: ಒನ್‌ಪ್ಲಸ್‌ ಸಹ ಈ ಬಾರಿ ವಿಶೇಷ ಫೋನ್‌ಗಳನ್ನು ಅನಾವರಣ ಮಾಡಲಿದೆ. ಒನ್‌ಪ್ಲಸ್ 12 (OnePlus 12) ಅನ್ನು ಜನವರಿ 23 ರಂದು ಲಾಂಚ್‌ ಮಾಡಲು ಕಂಪೆನಿ ಮುಂದಾಗಿದ್ದು, ಈ ವೇಳೆ ಒನ್‌ಪ್ಲಸ್‌ 12R ಸ್ಮಾರ್ಟ್‌ಫೋನ್ ಸಹ ಲಾಂಚ್‌ ಆಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಈ ಫೋನ್‌ಗಳ ಬಗ್ಗೆ ಸಾಕಷ್ಟು ಮಾಹಿತಿ ಲೀಕ್‌ ಆಗಿವೆ.

ಒಪ್ಪೋ ರೆನೋ 11 ಸರಣಿ ಹಾಗೂ ಫೈಂಡ್‌ X7 ಸರಣಿ: ಈ ವರ್ಷ ಒಪ್ಪೋ ಸಹ ಭಿನ್ನ ಫೋನ್‌ಗಳನ್ನು ಅನಾವರಣ ಮಾಡಲಿದೆ. ಅದರಲ್ಲಿ ಒಪ್ಪೋ ರೆನೋ 11 ಸರಣಿಯನ್ನು ಲಾಂಚ್‌ ಮಾಡಲಾಗುತ್ತದೆ ಎನ್ನಲಾಗಿದ್ದು, ಇದರೊಂದಿಗೆ ಒಪ್ಪೋ ಫೈಂಡ್‌ X7 ಸರಣಿ (Oppo Reno 11 series, Find X7 series) ಫೋನ್‌ಗಳನ್ನೂ ಸಹ ಅನಾವರಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಮೂಲಕ ಫೋಲ್ಡ್‌ ಮಾಡಬಹುದಾದ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡಲು ಸಜ್ಜಾಗಿದೆ.

Smartphones: 2024 ರಲ್ಲಿ ಯಾವೆಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ?

ಮೊಟೊರೊಲಾ ಫೋನ್‌ಗಳು: ಇನ್ನು ಮೊಟೊದ ವಿಚಾರಕ್ಕೆ ಬಂದರೆ ಕೈಗೆಟುಕುವ 5G ಸ್ಮಾರ್ಟ್‌ಫೋನ್ (Motorola phone) ಅನ್ನು ಲಾಂಚ್ ಮಾಡಲಿದೆ ಎಂದು ತಿಳಿದುಬಂದಿದೆ. ಮೊಟೊರೊಲಾ 2024 ರಲ್ಲಿ ಹೊಸ ಎಡ್ಜ್ ಸರಣಿಯನ್ನು ಪ್ರಾರಂಭಿಸಲಿದೆ ಎನ್ನಲಾಗಿದ್ದು, ಇದರೊಂದಿಗೆ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನೂ ಸಹ ಅನಾವರಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ವಿಶೇಷ ಏನೆಂದರೆ ಈ ಎಲ್ಲಾ ಫೋನ್‌ಗಳು ಇತರೆ ಫೋನ್‌ಗಳಿಗಿಂತ ಬೆಲೆಯಲ್ಲಿ ಕಡಿಮೆ ಇರಲಿವೆ ಎನ್ನಲಾಗಿದೆ.

ಆಪಲ್‌ ಐಫೋನ್‌ಗಳು: ಪ್ರತಿ ವರ್ಷದಂತೆ ಈ ವರ್ಷವೂ ಸಹ ಆಪಲ್‌ ಹೊಸ ಸರಣಿಯ ಫೋನ್‌ಗಳನ್ನು (Apple iPhones) ಅನಾವರಣ ಮಾಡಲಿದೆ. ಅಂದರೆ ಈ ವರ್ಷ ಆಪಲ್‌ ಐಫೋನ್‌ 16 ಸರಣಿ (iPhone 16 series) ಮತ್ತು ಐಫೋನ್‌ SE 4 ಸರಣಿಯಲ್ಲಿ ಅನಾವರಣ ಮಾಡಲಿದೆ. ಈಗಾಗಲೇ ಈ ಫೋನ್‌ಗಳ ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗಿದ್ದು, ಐಫೋನ್ 15 ಸರಣಿ ಫೋನ್‌ಗಳಿಗಿಂತ ಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಇವು ಕಾಣಿಸಿಕೊಳ್ಳಲಿವೆ ಎಂದು ತಿಳಿದುಬಂದಿದೆ.

ಗೂಗಲ್ ಪಿಕ್ಸೆಲ್‌ ಫೋನ್‌ಗಳು: ಗೂಗಲ್ ಈ ಬಾರಿ ರೇಸ್‌ನಲ್ಲಿದೆ. ಈ ಮೂಲಕ ಹೊಸ ಮತ್ತು ಅಪ್‌ಗ್ರೇಡ್ ಮಾಡಲಾದ ಪಿಕ್ಸೆಲ್ ಸ್ಮಾರ್ಟ್‌ಫೋನ್ (Google Pixel phones) ಅನಾವರಣ ಮಾಡಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಮುಂದಿನ ಪೀಳಿಗೆಯ ಫೋನ್‌ಗಳೊಂದಿಗೆ ಸ್ಪರ್ಧಿಸಲು ಪಿಕ್ಸೆಲ್‌ ಫೋನ್‌ಗಳು ಎಲ್ಲಾ ರೀತಿಯ ಸಾಮರ್ಥ್ಯ ಪಡೆಯಲಿವೆ ಎನ್ನಲಾಗಿದೆ. ಪ್ರಸ್ತುತ ಪಿಕ್ಸೆಲ್ ಲೈನ್‌ಅಪ್‌ಗೆ ಹೋಲಿಸಿದರೆ ಈ ಡಿವೈಸ್‌ಗಳು ಸುಧಾರಿತ ಎಐ ಫೀಚರ್ಸ್‌ ಅನ್ನು ಹೊಂದಿರಲಿವೆ ಎಂದು ಹೇಳಲಾಗಿದೆ.

Smartphones: 2024 ರಲ್ಲಿ ಯಾವೆಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ?

ನಥಿಂಗ್‌ ಫೋನ್‌ 3: ನಥಿಂಗ್ ಫೋನ್ 3 ಸ್ಮಾರ್ಟ್‌ಫೋನ್‌ (Nothing phone 3) ಸಹ ಈ ವರ್ಷ ಲಾಂಚ್‌ ಆಗಲಿವೆ ಎನ್ನಲಾಗಿದೆ. ಇದು ನಥಿಂಗ್‌ನ ಮೂರನೇ ಸ್ಮಾರ್ಟ್‌ಫೋನ್ ಆಗಿದ್ದು, ಎಂದಿನಂತೆ ಟ್ರಾನ್ಫರೆಂಟ್‌ ಥೀಮ್‌ನಲ್ಲಿ ಈ ಫೋನ್‌ಗಳು ಅನಾವರಣ ಆಗುವ ನಿರೀಕ್ಷೆಯಿದೆ. ಅಷ್ಟೆ ಅಲ್ಲದೆ ಈ ಹಿಂದಿನ ಫೋನ್‌ಗಳಿಗಿಂತಲೂ ಈ ಬಾರಿ ವಿಶೇಷ ಶೈಲಿಯನ್ನು ಈ ಫೋನ್‌ಗಳು ಹೊಂದಿರಲಿವೆ ಎಂದು ಹೇಳಲಾಗುತ್ತಿದೆ.

Best Mobiles in India

English summary
This year many smartphones will be launched including Vivo X100 series, Asus ROG Phone 8 and Phone 8 Pro, Samsung Galaxy S24 series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+