ಇದೇ ಮಾರ್ಚ್ 31ಕ್ಕೆ ಆಧಾರ್ ಡೆಡ್-ಲೈನ್: ನೀವು ಮಾಡಬೇಕಾದ್ದು ಏನು..?
ಇದೇ ಮಾರ್ಚ್ 31ಕ್ಕೆ ಬ್ಯಾಂಕ್ ಖಾತಯೆಗಳಿಗೆ, ಪ್ಯಾನ್ ಕಾರ್ಡ್‌ಗೆ ಮತ್ತು ವಿವಿಧ ಸೇವೆಗಳಿಗೆ ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕವಾಗಿದೆ. ಈಗಾಗಲೇ ಹಲವು ಬಾರಿ ಪ್ಯಾನ್-ಆಧಾರ್ ಲಿಂಕ್ ಮಾಡಲು ಗಡುವನ್ನು ವಿಸ್ತರಿಸಿದ ಮಾದರಿಯಲ್ಲಿ ಈ ಬಾರಿ ವಿಸ್ತರಿಸುವುದು ಸಾಧ್ಯವಿಲ್ಲ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ನೀವು ಇನ್ನು ಆಧಾರ್ ಲಿಂಕ್ ಮಾಡಿಲ್ಲವಾದರೆ ಅದನ್ನು ಆನ್‌ಲೈನಿನಲ್ಲೇ ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ ಅದನ್ನು ಮಾಡುವುದು ಹೇಗೆ ಎಂಬುದನ್ನು ಸರಳ ವಿಧಾನಗಳಲ್ಲಿ ತೋರಿಸಿಕೊಡುವ ಪ್ರಯತ್ನವೇ ಇದಾಗಿದೆ.

ತೆರಿಗೆ ಇಲಾಖೆಯ ವೆಬ್‌ಸೈಟ್ ತೆರೆಯಿರಿ:
ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ತೆರೆಯಿರಿ. incometaxindiaefiling.gov.in ಇದು ತೆರಿಗೆ ಪಾವತಿ ಮಾಡಲು ಇರುವ ವೈಬ್ ತಾಣವಾಗಿದ್ದು, ನೀವು ಇಲ್ಲಿಯೇ ಆಧಾರ್-PAN ಲಿಂಕ್ ಮಾಡಬಹುದಾಗಿದೆ.

ರಿಜಿಸ್ಟರ್ ಬೇಕಾಗಿಲ್ಲ:
ನೀವು ಆಧಾರ್-PAN ಲಿಂಕ್ ಮಾಡಲು ನೀವು ರಿಜಿಸ್ಟರ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇದಕ್ಕಾಗಿ ವೆಬ್ ಸೈಟಿನ ಕೆಳಭಾಗದಲ್ಲಿ ಲಿಂಕ್ ಆಧಾರ್ ಎಂಬ ಆಯ್ಕೆಯನ್ನು ನೀಡಲಾಗಿದೆ. ಅದನ್ನು ನೇರಾವಾಗಿ ಕ್ಲಿಕ್ ಮಾಡಿರಿ.

ಹೆಸರು ದಾಖಲಿಸಿ:
ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರದಲ್ಲಿ ಪಾನ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಮತ್ತು ಹೆಸರನ್ನು ನಮೂದಿಸಬೇಕಾಗಿದೆ. ನಂತರ ಅಲ್ಲಿ ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನೇ ನಮೂದಿಸಬೇಕಾಗಿದೆ.

ವೆರಿಫಿಕೇಷನ್:
ನಿಮ್ಮ ಮಾಹಿತಿಗಳನ್ನು ನೀಡಿದ ನಂತರದಲ್ಲಿ ನಿಮ್ಮ ಮಾಹಿತಿಗಳನ್ನು ಆಧಾರ್ ವೆರಿಫಿಕೇಷನ್ ಮಾಡಲಿದೆ.

ಮಾಹಿತಿಯೂ ಒಂದೇ ಆಗಿರಬೇಕು:
ನಿಮ್ಮ ಆಧಾರ್ ಮತ್ತು ಪ್ಯಾನ್ ನಡುವೆ ಲಿಂಕ್ ಮಾಡಲು ಅತ್ಯವಶ್ಯಕವಾಗಿದೆ. ಎರಡು ಕಾರ್ಡ್‌ಗಳಿಗೆ ನೀಡಿರುವ ಮಾಹಿತಿಯೂ ಒಂದೇ ಆಗಿರಬೇಕಾಗಿದೆ.

ಲಿಂಕ್ ಆಗಲಿದೆ:
ಇದಾದ ನಂತರ ನಿಮ್ಮ ಎರಡು ಕಾರ್ಡ್ ಗಳ ನಡುವೆ ಲಿಂಕ್ ಆಗಿದ್ದು, ಆಧಾರ್ -ಪ್ಯಾನ್ ಎರಡರಲ್ಲೂ ನೀಡಿರುವ ಮಾಹಿತಿಯೂ ಸರಿಯಿದ್ದ ಪಕ್ಷದಲ್ಲಿ, ಇಲ್ಲವಾದರೆ ಎರಡರಲ್ಲಿ ಯಾವುದರಲ್ಲದರೂ ನಿಮ್ಮ ಮಾಹಿತಿಗಳನನ್ನು ಬದಲಾಯಿಸಬೇಕಾಗಿದೆ.

ಆಧಾರ್-ಸಿಮ್ ಲಿಂಕ್ ಮಾಡಿ!
ಕೇಂದ್ರ ಸರಕಾರವೂ ಮೊಬೈಲ್ ನಂಬರ್ ನೊಂದಿಗೆ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡುತ್ತಿದೆ.

ಕರೆ ಮಾಡಿ:
ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ನೀವು ಎಲ್ಲಿಯೂ ಹೋಗಬೇಕಾದ ಅವಶ್ಯಕತೆ ಇಲ್ಲ. ಇದಕ್ಕಾಗಿ ನಿಮ್ಮ ಮೊಬೈಲ್ ನಿಂದ ಒಂದು ಕರೆಯನ್ನು ಮಾಡಬೇಕಾಗದೆ ಅಷ್ಟೆ. 14546 ಸಂಖ್ಯೆಗೆ ಕರೆ ಮಾಡಬೇಕಾಗಿದ್ದು, ಇದು ಉಚಿತ ಸೇವೆಯಾಗಿದೆ.


14546 ಸಂಖ್ಯೆ:
ನಿಮ್ಮ ಫೋನಿಂದ 14546 ಸಂಖ್ಯೆಗೆ ಕರೆಯನ್ನು ಮಾಡಬೇಕಾಗಿದೆ. ಮಾಡಿದ ನಂತರದಲ್ಲಿ IVR ದ್ವನಿಯೂ ಕೇಳುವವರೆಗೂ ಕಾಯಬೇಕಾಗಿದೆ.

ಭಾಷೆ ಆಯ್ಕೆ ಮಾಡಿಕೊಳ್ಳಿ;
ನಿಮ್ಮ ಕರೆಯೂ ಕನೆಕ್ಟ್ ಆದ ನಂತರದಲ್ಲಿ ನೀವು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೆಕಾಗಿದೆ. ಅಲ್ಲಿ ಹೇಳುವ ಮಾದರಿಯಲ್ಲಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.

ಆಧಾರ್ ಸಂಖ್ಯೆ ನೀಡಿ:
ಇದಾದ ನಂತರದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟ್ರಿ ಮಾಡುವಂತೆ ತಿಳಿಸಲಾಗುತ್ತದೆ. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟ್ರಿ ಮಾಡಿರಿ. ಹೀಗೆ ಮಾಡಿದ ನಂತರಲ್ಲಿ ಟೆಲಿಕಾಂ ಆಪರೇಟರ್ ನಿಮ್ಮ ಆಧಾರ್ ಮಾಹಿತಿಯನ್ನು UIDAIಗೆ ವೆರಿಫಿಕೇಷನ್‌ಗೆ ವರ್ಗಾಹಿಸುತ್ತದೆ.

ಲಿಂಕ್ ಆಗಲಿದೆ;
ಇದಾದ ನಂತರದಲ್ಲಿ ಟೆಲಿಕಾಂ ಆಪರೇಟರ್ ನಿಮಗೊಂದು OTPಯನ್ನು ಕಳುಹಿಸಲಿದ್ದು, ನೀವು ಕರೆಯಲ್ಲಿ ಇರುವ ಸಂದರ್ಭದಲ್ಲಿಯೇ ಈ OTPಯನ್ನು ಡಯಲ್ ಮಾಡಬೇಕಾಗಿದೆ. ಹೀಗೆ ಮಾಡಿದ ನಂತರದಲ್ಲಿ ನಿಮ್ಮ ಮೊಬೈಲ್ ಲಿಂಕ್ ಆಗಿರುದಕ್ಕೆ ಧೃಡೀಕರಣ SMS ಬರಲಿದೆ.
ಓದಿರಿ: ವಾಟ್ಸ್ಆಪ್-ಪೇಟಿಎಂಗೆ ಸೆಡ್ಡು: ಗೂಗಲ್ ತೇಜ್ ನಿಂದ ಹಣ ಪಡೆಯುವುದು ಇನ್ನು ಸುಲಭ..!


Click it and Unblock the Notifications