ವಾಟ್ಸ್ಆಪ್-ಪೇಟಿಎಂಗೆ ಸೆಡ್ಡು: ಗೂಗಲ್ ತೇಜ್ ನಿಂದ ಹಣ ಪಡೆಯುವುದು ಇನ್ನು ಸುಲಭ..!

|

ದೇಶಿಯ ಮಾರುಕಟ್ಟೆಯಲ್ಲಿ ವಾಟ್ಸ್‌ಆಪ್ ಪೇಮೆಂಟ್ ಸೇವೆಯೂ ಆರಂಭವಾಗಿದ್ದು, ಇನ್ನು ಹೆಚ್ಚಿನ ಬಳಕೆದಾರರಿಗೆ ಈ ಸೌಲಭ್ಯ ದೊರೆತಿಲ್ಲ. ಒಂದು ವೇಳೆ ವಾಟ್ಸ್‌ಆಪ್ ಬಳಕೆದಾರರೆಲ್ಲರೂ ಪೇಮೆಂಟ್ ಆಯ್ಕೆಯನ್ನು ಪಡೆದುಕೊಂಡಲ್ಲಿ ದೇಶದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುವ ಪೇಮೆಂಟ್ ಆಪ್ ಎನ್ನುವ ಖ್ಯಾತಿಗೆ ವಾಟ್ಸ್‌ಆಪ್ ಪಾತ್ರವಾಗಲಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಗೂಗಲ್ ಅಭಿವೃದ್ಧಿ ಪಡಿಸಿರುವ ತೇಜ್ ಆಪ್ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲು ಮುಂದಾಗಿದೆ.

ವಾಟ್ಸ್ಆಪ್-ಪೇಟಿಎಂಗೆ ಸೆಡ್ಡು: ಗೂಗಲ್ ತೇಜ್ ನಿಂದ ಹಣ ಪಡೆಯುವುದು ಇನ್ನು ಸುಲಭ..!

ಮಾರುಕಟ್ಟೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪೇಟಿಎಂ ಸಹ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ಪೇಟಿಎಂ ಇನ್ ಬ್ಯಾಕ್ಸ್ ಸೇವೆಯನ್ನ ಆರಂಭಿಸಿತ್ತು. ಇದು ಸಹ ವಾಟ್ಸ್‌ಆಪ್ ಸೆಡ್ಡು ಹೊಡೆಯುವ ಸಲುವಾಗಿಯೇ ನೀಡಿದ್ದ ಆಯ್ಕೆಯಾಗಿತ್ತು. ಇದೇ ಮಾದರಿಯಲ್ಲಿ ಗೂಗಲ್ ತೇಜ್ ಆಪ್ ಸಹ ಪೇಟಿಎಂ ಇನ್ ಬಾಕ್ಸ್ ಮತ್ತು ವಾಟ್ಸ್‌ಆಪ್ ಗೆ ಸೆಡ್ಡು ಹೊಡೆಯುವ ಸಲುವಾಗಿ ತನ್ನ ಬಳಕೆದಾರರಿಗೆ ಚಾಟ್ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ.

ಈಗಾಗಲೇ ಪರೀಕ್ಷೆ:

ಈಗಾಗಲೇ ಪರೀಕ್ಷೆ:

ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್ ಒಂದು ಕಡೆ ತನ್ನ ಪೇಮೆಂಟ್ ಸೇವೆಯನ್ನು ಪರೀಕ್ಷೆ ಮಾಡುತ್ತಿರುವ ಮಾದರಿಯಲ್ಲಿಯೇ, ಗೂಗಲ್ ತೇಜ್ ಆಪ್ ಸಹ ತನ್ನ ಚಾಟ್ ಆಯ್ಕೆಯನ್ನು ಕೆಲವು ಬಳಕೆದಾರರಿಗೆ ನೀಡಿ ಪರೀಕ್ಷೆಯನ್ನು ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸರಳ ಚಾಟಿಂಗ್:

ಸರಳ ಚಾಟಿಂಗ್:

ಗೂಗಲ್ ತೇಜ್ ಆಪ್ ಬಳಕೆದಾರರು ಸರಳವಾಗಿ ಚಾಟಿಂಗ್ ಮಾಡುವ ಅವಕಾಶವನ್ನು ಗೂಗಲ್ ಮಾಡಿಕೊಡಲು ಮುಂದಾಗಿದೆ. ಇದರಿಂದಾಗಿ ಪೇಮೆಂಟ್ ಆಪ್ ನಲ್ಲಿಯೇ ಬಳಕೆದಾರರು ಚಾಟಿಂಗ್ ಸಹ ಮಾಡಬಹುದಾಗಿದೆ.

ನೂತನ್ ಆಪ್‌ಡೇಟ್:

ನೂತನ್ ಆಪ್‌ಡೇಟ್:

ಗೂಗಲ್ ತೇಜ್ ಬಳಕೆದಾರರು ಹೊಸ ಆಪ್‌ಡೇಟ್ ಅನ್ನು ಹೊಂದಿದ್ದರೇ ಮಾತ್ರವೇ ಈ ಚಾಟಿಂಗ್ ಸಾಧ್ಯವಾಗಲಿದೆ. ಚಾಟಿಂಗ್ ಆಪ್ ಮಾದರಿಯಲ್ಲಿ ಬಳಕೆಯಾಗದಿದ್ದರೂ, ಪೇಮೆಂಟ್ ಉದ್ದೇಶದಿಂದ ಮಾತು ಕತೆ ನಡೆಸಲು ಸಹಾಯಕಾರಿಯಾಗಿದೆ.

ಚಾಟ್ ಬಟನ್:

ಚಾಟ್ ಬಟನ್:

ಪೇಮೆಂಟ್ ಮತ್ತು ರಿಕ್ವೇಸ್ಟ್ ಜೊತೆಗೆ ಚಾಟ್ ಬಟನ್ ಅನ್ನು ನೀಡಲು ತೇಜ್ ಮುಂದಾಗಿದ್ದು, ಬಳಕೆದಾರರಿಗೆ ಇನ್ನಷ್ಟು ಸ್ನೇಹಿಯಾಗುವ ಯೋಜನೆಯನ್ನು ರೂಪಿಸುತ್ತಿದೆ. ಈ ಮೂಲಕ ಮತ್ತಷ್ಟು ಜನರನ್ನು ತಲುಪುವ ಕಾರ್ಯವನ್ನು ಮಾಡುತ್ತಿದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
12 ಮಿಲಿಯನ್ ಬಳಕೆದಾರರು:

12 ಮಿಲಿಯನ್ ಬಳಕೆದಾರರು:

ಗೂಗಲ್ ತೇಜ್ ಆಪ್ ಅನ್ನು ದೇಶದಲ್ಲಿ ಸುಮಾರು 12 ಮಿಲಿಯನ್ ಮಂದಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು, ಸುಮಾರು 140 ಮಿಲಿಯುನ್ ಟ್ರಾನ್ಸಕ್ಷನ್ ಆಗಿದೆ ಎಂದು ಮೂಲಗಳು ತಿಳಿಸಿವೆ.

Best Mobiles in India

English summary
Google Tez Adds Simple Chat Feature to Take on WhatsApp, Paytm. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X