ಜುಕರ್‌ಬರ್ಗ್ ಫೇಸ್‌ಬುಕ್‌ಗೆ ರಜೆ ಹಾಕಿದ್ದು ಏಕೆ ?
ಅಂತೂ ಇಂತೂ ಮಾರ್ಕ್ ಜುಕರ್‌ಬರ್ಗ್ 2004 ರಿಂದ ಇಲ್ಲಿಯವರೆಗೆ ಯಾವುದೇ ರಜೆಗೆ ಹೋಗದವರು, ಈಗ ಎರಡು ತಿಂಗಳು ಪಿತೃತ್ವ ರಜೆಗೆ ಹೊರಡಲಿದ್ದಾರೆ. ಈ ಸಂಧರ್ಭದಲ್ಲಿ ಅವರು ಫೇಸ್‌ಬುಕ್‌ನ ವಿಶೇಷ ಸೇವೆ ಮತ್ತು ಅವರ ಕೆಲವು ಉತ್ತಮ ಅನಿಸಿಕೆಗಳನ್ನು ಹೇಳಿದ್ದು, ಗಿಜ್‌ಬಾಟ್ ಆ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನೀಡುತ್ತಿದೆ.
ಓದಿರಿ: ಹೊಸ ಗ್ರಹದ ಜನನ ಕಂಡ ಖಗೋಳವಿಜ್ಞಾನಿಗಳು

ಮಾರ್ಕ್ ಜುಕರ್‌ಬರ್ಕ್ ಪಿತೃತ್ವ ರಜೆ ತೆಗೆದು ಕೊಳ್ಳಲಿದ್ದಾರೆ.
ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ 2 ತಿಂಗಳ ಮಟ್ಟಿಗೆ ಈಗ ಫೇಸ್‌ಬುಕ್‌ನಿಂದ ಪಿತೃತ್ವ ರಜೆ ತೆಗೆದು ಕೊಳ್ಳಲಿದ್ದಾರಂತೆ.

ಪ್ರಿಸ್ಕಿಲ್ಲಾ ಮತ್ತು ಮಾರ್ಕ್ ಜುಕರ್‌ಬರ್ಗ್
2004ರಿಂದ ಈಚೆಗೆ ಜುಕರ್‌ಬರ್ಗ್ ಇದೇ ಮೊದಲ ಬಾರಿಗೆ 2 ತಿಂಗಳು ಮಾತ್ರ ತಮ್ಮ ಮಗಳ ಆಗಮನಕ್ಕೆಂದು ಪಿತೃತ್ವ ರಜೆ ತೆಗೆದುಕೊಳ್ಳುತ್ತಿದ್ದಾರಂತೆ. ಅಲ್ಲದೇ ಇದೇ ಖುಷಿಯಲ್ಲಿ ಅವರ ಬಾಲ್ಯದ ಪುಸ್ತಕಗಳು ಮತ್ತು ನೆಚ್ಚಿನ ಆಟಿಕೆಗಳನ್ನು ತೆಗೆದುಕೊಳ್ಳುತ್ತಿದ್ದೀವೆ ಎಂದು ಹೇಳಿದ್ದಾರೆ.

ಮಗಳ ಮೊದಲ ತಿಂಗಳ ಜೀವನಕ್ಕೆ ಸಜ್ಜು.
ಜುಕರ್‌ಬರ್ಗ್ ತಮ್ಮ ಮಗಳ ಮೊದಲ ತಿಂಗಳ ಜೀವನವನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಚಿಂತನೆಯಲ್ಲಿದ್ದು, ಈ ರಜೆ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಜುಕರ್‌ಬರ್ಗ್ ಹೇಳಿದ್ದೇನು ?
ಅಧ್ಯಯನವು 'ಹೊಸ ಮಗುವಿನ ಜನನಕ್ಕಾಗಿ ಕರ್ತವ್ಯನಿರತ ಪೋಷಕರು ಹೆಚ್ಚು ಸಮಯವನ್ನು ಮಕ್ಕಳೊಂದಿಗೆ ಮತ್ತು ಕುಟುಂಬಗಳೊಂದಿಗೆ ಸಮಯವನ್ನು ಮೀಸಲಿಡಬೇಕು'' ಹೇಳಿದೆ ಎಂದಿದ್ದಾರೆ.

ಫೇಸ್‌ಬುಕ್‌ನಲ್ಲಿ 4 ತಿಂಗಳ ರಜೆ
ಅಮೇರಿಕದಲ್ಲಿ ಫೇಸ್‌ಬುಕ್ ಉದ್ಯೋಗಿಗಳಿಗೆ ಪ್ರಸೂತಿ ಮತ್ತು ಪಿತೃತ್ವ ರಜೆಯಾಗಿ 4 ತಿಂಗಳು ರಜೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ಸಂಧರ್ಭದಲ್ಲಿ ಜುಕರ್‌ಬರ್ಗ್ ಅನಿಸಿಕೆ
''ದಿನನಿತ್ಯ ಚಟುವಟಿಕೆಗಳು ನಮಗೆ ಹೆಚ್ಚು ವಾಸ್ತವತೆಯನ್ನು ನಿಡುತ್ತಿವೆ. ಹಾಗೆಯೇ ಈ ಸಂಧರ್ಭದಲ್ಲಿ ನನ್ನ ಮುಂದಿನ ಹಂತವನ್ನು ಪ್ರಾರಂಭಿಸಲು ಉತ್ಸುಕನಾಗಿದ್ದೇನೆ.'' ಎಂದಿದ್ದಾರೆ.

ಜುಕರ್‌ಬರ್ಗ್ ಇಲ್ಲದ ಫೇಸ್‌ಬುಕ್
ಜುಕರ್‌ಬರ್ಗ್ ಇಲ್ಲದ ಫೇಸ್‌ಬುಕ್ ನೆಡೆ ಹೇಗೆ ಎಂಬುದನ್ನು ನೆನೆಸಿಕೊಳ್ಳಬೇಕಿದೆ ಆದರೂ ಸಹ ಕೆಲವು ಬದಲಾವಣೆ ಆಗಲಿದೆ.

ಮಾರ್ಕ್ ಜುಕರ್‌ಬರ್ಗ್ ಮನೆಯಲ್ಲಿ ಪ್ರಸ್ತುತದಲ್ಲಿ ಮಗುವಿನ ಸ್ಥಾನ ಹೊಂದಿರುವ ಪೆಟ್.
ಮಾರ್ಕ್ ಜುಕರ್‌ಬರ್ಗ್ ಮನೆಯಲ್ಲಿ ಪ್ರಸ್ತುತದಲ್ಲಿ ಮಗುವಿನ ಸ್ಥಾನ ಹೊಂದಿರುವ ಪೆಟ್.


Click it and Unblock the Notifications








