Home
ಸುದ್ದಿಜಾಲ

SmartTV:ಈ ಬಹುಬೇಡಿಕೆಯ ಸ್ಮಾರ್ಟ್‌ಟಿವಿಗೆ 66% ರಿಯಾಯಿತಿ! ಫೀಚರ್ಸ್‌ ಬಗ್ಗೆ ತಿಳಿಯಿರಿ

ಸ್ಮಾರ್ಟ್‌ಟಿವಿಗಳು (SmartTV) ಇಂದು ಸ್ಮಾರ್ಟ್‌ಫೋನ್‌ ಅನ್ನೇ ಮೀರಿಸುವಷ್ಟು ಫೀಚರ್ಸ್‌ ಆಯ್ಕೆ ಪಡೆಯುತ್ತಿವೆ. ಅದರಂತೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಹೊಸ ಹೊಸ ಸ್ಮಾರ್ಟ್‌ಟಿವಿಗೆ ಅಪ್‌ಗ್ರೇಡ್‌ ಆಗುತ್ತಿದ್ದು, ಈ ಮೂಲಕ ಹೊಸ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಇದೀಗ ಬಹುಬೇಡಿಕೆ ಇರುವ ಹಳೆಯ ಸ್ಮಾರ್ಟ್‌ಟಿವಿಯೊಂದಕ್ಕೆ ಭರ್ಜರಿ 66% ರಿಯಾಯಿತಿ ನೀಡಲಾಗಿದೆ.

ಹೌದು, ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ(Flipkart) ಸಾಕಷ್ಟು ಸ್ಮಾರ್ಟ್‌ಡಿವೈಸ್‌ಗಳಿಗೆ ದೊಡ್ಡ ಮಟ್ಟದ ಆಫರ್ ಅನ್ನು ನೀಡಲಾಗುತ್ತದೆ. ಅದರಂತೆ ಈಗ ಮಾರ್ಕ್ಯೂ ಬೈ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಟಿವಿಗೆ ಆಫರ್ ನೀಡಲಾಗಿದೆ. ಈ ಟಿವಿ 24 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 60 Hz ರಿಫ್ರೆಶ್‌ ರೇಟ್‌ ಆಯ್ಕೆಯೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಹಾಗಿದ್ರೆ ಈ ಸ್ಮಾರ್ಟ್‌ಟಿವಿಗೆ ಇರುವ ಆಫರ್ ಬೆಲೆ ಎಷ್ಟು?, ಇದರ ಫೀಚರ್ಸ್‌ ಏನು ಅನ್ನೋದನ್ನು ತಿಳಿದುಕೊಳ್ಳಿ.

ಈ ಬಹುಬೇಡಿಕೆಯ ಸ್ಮಾರ್ಟ್‌ಟಿವಿಗೆ 66% ರಿಯಾಯಿತಿ! ಫೀಚರ್ಸ್‌ ಬಗ್ಗೆ ತಿಳಿಯಿರಿ

ಮಾರ್ಕ್ಯೂ ಬೈ ಫ್ಲಿಪ್‌ಕಾರ್ಟ್ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಕೂಲಿಟಾ ಟಿವಿ (24HDCDQEE1B): ಈ ಸ್ಮಾರ್ಟ್‌ಟಿವಿಯನ್ನು (MarQ by Flipkart 60 cm (24 inch) HD Ready LED Smart Coolita TV 24HDCDQEE1B) ಇದೀಗ ಭಾರೀ ಆಫರ್ ಬೆಲೆಯೊಂದಿಗೆ ಖರೀದಿ ಮಾಡಬಹುದಾಗಿದೆ. ಅಂದರೆ ಈ ಸ್ಮಾರ್ಟ್‌ಟಿವಿ 19,9906 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು ಕೇವಲ 6,699ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಮೊದಲೇ ತಿಳಿಸಿದಂತೆ ಫ್ಲಿಪ್‌ಕಾರ್ಟ್‌ ಈ ಸ್ಮಾರ್ಟ್‌ಟಿವಿಗೆ 66% ರಿಯಾಯಿತಿ ಘೋಷಣೆ ಮಾಡಿದೆ.

ಅದಾಗ್ಯೂ ಸಹ ನೀವು ಇನ್ನೂ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಟಿವಿ ಖರೀದಿ ಮಾಡಬಹುದು. ಅಂದರೆ ಸಿಟಿ-ಬ್ರಾಂಡೆಡ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರದ ಮೇಲೆ ಬ್ಯಾಂಕ್ ಆಫರ್ 10% ರಿಯಾಯಿತಿ, ಸಿಟಿ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ ಬ್ಯಾಂಕ್ ಆಫರ್ 10% ರಿಯಾಯಿತಿ, ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 10% ರಿಯಾಯಿತಿ ಸೇರಿದಂತೆ ಅನೇಕ ಬ್ಯಾಂಕ್‌ ಆಫರ್ ಈ ಟಿವಿಗೆ ಇದೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿ ಏನೆಲ್ಲಾ ಫೀಚರ್ಸ್ ಹೊಂದಿದೆ ಅನ್ನೋದನ್ನು ನೋಡೋಣ ಬನ್ನಿ.

ಈ ಬಹುಬೇಡಿಕೆಯ ಸ್ಮಾರ್ಟ್‌ಟಿವಿಗೆ 66% ರಿಯಾಯಿತಿ! ಫೀಚರ್ಸ್‌ ಬಗ್ಗೆ ತಿಳಿಯಿರಿ

ಮಾರ್ಕ್ಯೂ ಬೈ ಫ್ಲಿಪ್‌ಕಾರ್ಟ್ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಕೂಲಿಟಾ ಟಿವಿ (24HDCDQEE1B) ಫೀಚರ್ಸ್‌: ಈ ಸ್ಮಾರ್ಟ್‌ಟಿವಿ 24 ಇಂಚಿನ ಎಲ್‌ಇಡಿ ಹೆಚ್‌ಡಿ ರೆಡಿ ಡಿಸ್‌ಪ್ಲೇ ಹೊಂದಿದ್ದು, ಇದು 1366*768 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 178 ಡಿಗ್ರಿ ವೀಕ್ಷಣೆ ಅನುಭವ, 16:09 ಆಕಾರ ಅನುಪಾತ 60 Hz ರಿಫ್ರೆಶ್ ರೇಟ್‌ನೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ಹಾಗೆಯೇ ಈ ಟಿವಿ ಎರಡು ಸ್ಪೀಕರ್ ಅನ್ನು ಹೊಂದಿದ್ದು, 20 W ಸೌಂಡ್‌ ಔಟ್‌ ಪುಟ್‌ ನೀಡಲಿದೆ. ಇದರೊಂದಿಗೆ ನೆಟ್‌ಫ್ಲಿಕ್ಸ್, ಯೂಟ್ಯೂಬ್‌, ಡಿಸ್ನಿ+ಹಾಟ್‌ಸ್ಟಾರ್, ಪ್ರೈಮ್‌ ವಿಡಿಯೋ ಸೇರಿದಂತೆ ಅನೇಕ ಅಗತ್ಯ ಆಪ್‌ಗಳಿಗೆ ಬೆಂಬಲ ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಕೂಲಿಟಾ ಆಪರೇಟಿಂಗ್ ಸಿಸ್ಟಮ್ ಅನ್ನು ರನ್‌ ಮಾಡಲಿದ್ದು, ಸ್ಕ್ರೀನ್ ಮಿರರಿಂಗ್, ವೈ-ಫೈ, ಎರಡು ಹೆಚ್‌ಡಿಎಮ್‌ಐ ಪೋರ್ಟ್‌, ಎರಡು ಯುಎಸ್‌ಬಿ ಪೋರ್ಟ್‌ ನ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಈ ಟಿವಿ ಕ್ವಾಡ್ ಕೋರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 512 MB RAM ಆಯ್ಕೆ ಪಡೆದಿದೆ.

ಈ ಬಹುಬೇಡಿಕೆಯ ಸ್ಮಾರ್ಟ್‌ಟಿವಿಗೆ 66% ರಿಯಾಯಿತಿ! ಫೀಚರ್ಸ್‌ ಬಗ್ಗೆ ತಿಳಿಯಿರಿ

ಈ ಸ್ಮಾರ್ಟ್‌ಟಿವಿ ಈಗ ಲಭ್ಯ ಇರುವ ಬೆಲೆಗೆ ಉತ್ತಮ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ಸ್ಮಾರ್ಟ್‌ಟಿವಿಗಳು ಸಾಕಷ್ಟು ಭಿನ್ನ ಫೀಚರ್ಸ್‌ ಆಯ್ಕೆಯೊಂದಿಗೆ ಲಭ್ಯ ಇದ್ದರೂ ಸಹ ಸಾಕಷ್ಟು ಜನರು ಬೆಲೆ ಆಧಾರದ ಮೇಲೆ ಕೇವಲ ಸಾಮಾನ್ಯ ವಿಡಿಯೋ ವೀಕ್ಷಣೆಗೆ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಮುಂದಾಗುತ್ತಾರೆ. ಅಂತಹವರು ಈ ಸ್ಮಾರ್ಟ್‌ಟಿವಿ ಖರೀದಿ ಮಾಡಬಹುದಾಗಿದೆ. ಬದಲಾಗಿ ಹೆಚ್ಚಿನ ಫೀಚರ್ಸ್‌ ಬೇಕು ಎಂದರೆ ಇತ್ತೀಚಿನ ಹೊಸ ಸ್ಮಾರ್ಟ್‌ಟಿವಿಗಳ ಕಡೆ ಕಣ್ಣಾಯಿಸುವುದು ಉತ್ತಮ

Best Mobiles in India

English summary
Offered on MarQ by Flipkart HD Ready LED Smart Coolita TV (24HDCDQEE1B) SmartTV. Through this you can buy for Rs.6,699.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+