ಮಾರ್ಷಲ್ ಮಿಡಲ್ಟನ್ ಸ್ಪೀಕರ್ ಅನಾವರಣ: ಸೌಂಡ್ ಮೂಲಕವೇ ಧೂಳೆಬ್ಬಿಸಲಿದೆ!
ಸ್ಮಾರ್ಟ್‌ಗ್ಯಾಜೆಟ್ ವಿಭಾಗದಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ ಹಾಗೂ ಇನ್ನಿತರೆ ಗ್ಯಾಜೆಟ್‌ಗಳಂತೆಯೇ ಸ್ಪೀಕರ್‌ಗಳಿಗೆ ಭಾರೀ ಜನಪ್ರಿಯತೆ ಇದ್ದು, ಈಗಂತೂ ಸುಧಾರಿತ ಟೆಕ್ನಾಲಜಿ ಮೂಲಕ ಬಳಕೆದಾರರನ್ನು ಬೇರೆಯದೇ ಸಂತೋಷದ ಲೋಕಕ್ಕೆ ಕರೆದುಕೊಂಡು ಹೋಗುವಂತಹ ಸಾಮರ್ಥ್ಯವನ್ನು ಇದು ಹೊಂದಿವೆ. ಈ ನಡುವೆ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸೌಂಡ್ ಮಾಡಲು ಮುಂದಾಗಿದೆ ಮಾರ್ಷಲ್ ಮಿಡಲ್ಟನ್ ಬ್ಲೂಟೂತ್ ಸ್ಪೀಕರ್.
ಹೌದು, ಭಾರತದಲ್ಲಿ ಮಾರ್ಷಲ್ ಮಿಡಲ್ಟನ್ ಬ್ಲೂಟೂತ್ ಸ್ಪೀಕರ್ (Marshall Middleton bluetooth speaker) ಅನ್ನು ಅನಾವರಣ ಮಾಡಲಾಗಿದೆ. ಇದು 20 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿದ್ದು, ಕ್ವಾಡ್-ಸ್ಪೀಕರ್ ಸೌಲಭ್ಯದೊಂದಿಗೆ ದೊಡ್ಡ ಮಟ್ಟದ ಸೌಂಡ್ ಮಾಡಲಿದೆ. ಇದಿಷ್ಟೇ ಅಲ್ಲದೆ IP67 ರೇಟೆಡ್ ಹೊಂದಿರುವುದರಿಂದ ಎಲ್ಲಿ ಬೇಕಾದರೂ ಇದನ್ನು ಬಳಕೆ ಮಾಡಬಹುದು. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಆಫರ್ ಬೆಲೆ ಎಷ್ಟೆಂದು ತಿಳಿದುಕೊಳ್ಳಿ.

ಮಾರ್ಷಲ್ ಮಿಡಲ್ಟನ್ ಬ್ಲೂಟೂತ್ ಸ್ಪೀಕರ್ ವಿನ್ಯಾಸ: ಮಾರ್ಷಲ್‌ನ ಪೋರ್ಟಬಲ್ ಸ್ಪೀಕರ್ ಅನ್ನು 55 ಪ್ರತಿಶತ ಮರುಬಳಕೆಯ ಪ್ಲಾಸ್ಟಿಕ್‌ನಿಂದ ಮಾಡಲಾಗಿದ್ದು, ಮೃದುವಾದ ಹೊರಭಾಗವನ್ನು ಹೊಂದಿದೆ. ಹಾಗೆಯೇ ಇದರಲ್ಲಿ PVC ಅನ್ನು ಬಳಕೆ ಮಾಡಲಾಗಿಲ್ಲ. ಈ ಮೂಲಕ ಪರಿಸರ ಸ್ನೇಹಿ ಗ್ಯಾಜೆಟ್‌ಗಳ ಸಾಲಿಗೆ ಸೇರಲಿದೆ. ಹಾಗೆಯೇ ಮ್ಯೂಸಿಕ್ ಅನ್ನು ಕಂಟ್ರೋಲ್ ಮಾಡಲು ಅದರಲ್ಲೂ ಪ್ರಮುಖವಾಗಿ ವಾಲ್ಯೂಮ್ ಅನ್ನು ನಿಯಂತ್ರಿಸಲು ಮೇಲ್ಭಾಗದಲ್ಲಿ ಬಟನ್‌ಗಳನ್ನು ನೀಡಲಾಗಿದೆ.
ಮಾರ್ಷಲ್ ಮಿಡಲ್ಟನ್ ಬ್ಲೂಟೂತ್ ಸ್ಪೀಕರ್ ಫೀಚರ್ಸ್: ಈ ಸ್ಪೀಕರ್ ಫೀಚರ್ಸ್ ಅಂತೂ ಬಳಕೆದಾರರಿಗೆ ಮೋಜಿನ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಇದು ಎರಡು 15W ವೂಫರ್‌ಗಳು, ಎರಡು 10W ಟ್ವೀಟರ್‌ಗಳು ಮತ್ತು ಸರೌಂಡ್ ಸೌಂಡ್ ಎಫೆಕ್ಟ್‌ಗಾಗಿ ಎರಡು ರೇಡಿಯೇಟರ್‌ಗಳನ್ನು ಒಳಗೊಂಡಂತೆ ಕ್ವಾಡ್-ಸ್ಪೀಕರ್ ಸಿಸ್ಟಮ್ ಅನ್ನು ಪಡೆದುಕೊಂಡಿದೆ.
ಹಾಗೆಯೇ ಈ ವಿಶೇಷ ಸ್ಪೀಕರ್ ಡೈನಾಮಿಕ್ ಲೌಡ್‌ನೆಸ್ ಫೀಚರ್ಸ್ ಅನ್ನು ಪಡೆದುಕೊಂಡಿದ್ದು, ಈ ಟೆಕ್ನಾಲಜಿಯು ವಾಲ್ಯೂಮ್ ಮಟ್ಟವನ್ನು ಅವಲಂಬಿಸಿ ಧ್ವನಿಯ ಟೋನ್ ಅನ್ನು ಬದಲು ಮಾಡುತ್ತದೆ. ಇದೆಲ್ಲಕ್ಕೂ ಮಿಗಿಲಾಗಿ IP67 ರೇಟ್ ಅನ್ನು ಪಡೆದುಕೊಂಡಿರುವುದರಿಂದ ಬಿಸಿಲು-ಮಳೆ ಎನ್ನದೆ ಎಲ್ಲಿ ಬೇಕೆಂದರಲ್ಲಿ ಈ ಡಿವೈಸ್ ಅನ್ನು ನೀವು ಬಳಕೆ ಮಾಡಿದರೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಇನ್ನು ಬ್ಲೂಟೂತ್ ಸ್ಪೀಕರ್ ಟ್ರೂ ಸ್ಟಿರಿಯೋ ಫೋನಿಕ್ ಅನ್ನು ಸಹ ಹೊಂದಿದೆ. ಅಂದರೆ ಇದು ಬಹು-ದಿಕ್ಕಿನ ಸ್ಟಿರಿಯೊ ಧ್ವನಿಯ ಪ್ರಕಾರವಾಗಿದ್ದು, ತಲ್ಲೀನಗೊಳಿಸುವ ಅನುಭವಕ್ಕಾಗಿ ಪ್ರಾದೇಶಿಕ ಮತ್ತು ಬೈನೌರಲ್ ಸೌಂಡ್ ಅನ್ನು ಇದು ಉತ್ಪಾದಿಸುತ್ತದೆ. ಇದರೊಂದಿಗೆ ಸ್ಟಾಕ್ ಮೋಡ್ ಅನ್ನು ಬಳಸಿಕೊಂಡು ಬಳಕೆದಾರರು ಬಹು ಸ್ಪೀಕರ್‌ಗಳನ್ನು ಪರಸ್ಪರ ಜೋಡಣೆ ಮಾಡುವ ಅವಕಾಶ ಸಹ ಇದರಲ್ಲಿದೆ.
ಮಾರ್ಷಲ್ ಮಿಡಲ್ಟನ್ ಬ್ಲೂಟೂತ್ ಸ್ಪೀಕರ್ ಬ್ಯಾಟರಿ ಸಾಮರ್ಥ್ಯ: ಮಾರ್ಷಲ್ ಮಿಡಲ್‌ಟನ್ ಒಂದು ಫೂರ್ಣ ಚಾರ್ಜಿಂಗ್‌ನಲ್ಲಿ ಬಿಮಗೆ 20 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ. ಅದರಂತೆ ನೀವು 20 ನಿಮಿಷಗಳ ಚಾರ್ಜಿಂಗ್ ನಲ್ಲಿ 2 ಗಂಟೆಗಳ ಪ್ಲೇಟೈಮ್ ಪಡೆದುಕೊಳ್ಳಬಹುದು. ಇದಕ್ಕಾಗಿ ಯುಎಸ್‌ಬಿ ಟೈಪ್- ಸಿ ಚಾರ್ಜಿಂಗ್ ಪೋರ್ಟ್ ಆಯ್ಕೆಯನ್ನು ಪಡೆದುಕೊಂಡಿದೆ. ಹಾಗೆಯೇ ವೈರ್ಡ್ ಸಂಪರ್ಕಕ್ಕಾಗಿ 3.5mm ಇನ್‌ಪುಟ್ ಸೌಲಭ್ಯ ಸಹ ಲಭ್ಯ.

ಮಾರ್ಷಲ್ ಮಿಡಲ್ಟನ್ ಬ್ಲೂಟೂತ್ ಸ್ಪೀಕರ್ ಬೆಲೆ ಹಾಗೂ ಲಭ್ಯತೆ: ಇನ್ನು ಈ ಸ್ಪೀಕರ್‌ನ ಬೆಲೆ ವಿಚಾರಕ್ಕೆ ಬರುವುದಾದರೆ 31,999ರೂ. ಗಳ ಬೆಲೆಯನ್ನು ಹೊಂದಿದೆ. ಇದನ್ನು ನೀವು ಮಾರ್ಷಲ್‌ನ ಅಧಿಕೃತ ವೆಬ್‌ಸೈಟ್ ಹಾಗೂ ರಿಟೇಲರ್ ಸ್ಟೋರ್ ಮೂಲಕ ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಜೊತೆಗೆ ಈ ಡಿವೈಸ್ ಕಪ್ಪು ಮತ್ತು ಬ್ರಾಸ್ ಕ್ರೀಮ್‌ನ ಎರಡು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ.


Click it and Unblock the Notifications








