Home
ಸುದ್ದಿಜಾಲ

ಭಾರತದಲ್ಲಿ ಮಾರ್ಷಲ್ ಕಂಪೆನಿಯ ಹೊಸ ಇಯರ್‌ಬಡ್ಸ್‌ ಲಾಂಚ್, ಬೆಲೆ 19,999ರೂ.ಗಳು!

ಇಯರ್‌ಬಡ್ಸ್‌ಗಳ (Earbuds) ವಿಭಾಗದಲ್ಲಿ ನಾವು ಸಾಕಷ್ಟು ಸುಧಾರಿತ ಹೊಸ ಹೊಸ ಇಯರ್‌ಬಡ್ಸ್‌ಗಳನ್ನು ಮಾರುಕಟ್ಟೆಯಲ್ಲಿ ನೋಡಿರಬಹುದು. ಈ ನಡುವೆ ಮಾರ್ಷಲ್ ಕಂಪೆನಿಯು ಭಾರತದಲ್ಲಿ ವಿಶೇಷವಾದ ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡುವ ಮೂಲಕ ಇತರೆ ಕಂಪೆನಿಗಳಿಗೆ ಚಳಿಜ್ವರ ಬರುವಂತೆ ಮಾಡಿದೆ.

ಹೌದು, ಮಾರ್ಷಲ್ (marshall) ಭಾರತದಲ್ಲಿ ಮೋಟಿಫ್ II ANC (MOTIF II ANC) ಇಯರ್‌ಬಡ್‌ಗಳನ್ನು ಲಾಂಚ್‌ ಮಾಡಲಾಗಿದೆ. ಈ ಮೂಲಕ ಬ್ರಿಟಿಷ್ ಕಂಪನಿ ಮಾರ್ಷಲ್ ಭಾರತದಲ್ಲಿ ಮೋಟಿಫ್ ANC ಗೆ ಅಪ್‌ಗ್ರೇಡ್ ಆಗಿದೆ. ಈ ಮಾರ್ಷಲ್ ಮೋಟಿಫ್ II ANC ಇನ್-ಇಯರ್ ಶೈಲಿ ಹೊಂದಿದ್ದು, ಸಿಲಿಕೋನ್ ಇಯರ್ ಟಿಪ್ಸ್‌ ಅಯ್ಕೆ ಪಡೆದಿದೆ. ಈ ಮೂಲಕ 19,999ರೂ.ಗಳ ಬೆಲೆ ಹೊಂದಿದೆ. ಹಾಗಿದ್ರೆ, ಈ ಡಿವೈಸ್‌ನ ಪ್ರಮುಖ ಫೀಚರ್ಸ್‌ ಏನು ಎಂಬುದನ್ನು ನೋಡೋಣ ಬನ್ನಿ.

ಭಾರತದಲ್ಲಿ ಮಾರ್ಷಲ್ ಕಂಪೆನಿಯ ಹೊಸ ಇಯರ್‌ಬಡ್ಸ್‌ ಲಾಂಚ್, ಬೆಲೆ 19,999ರೂ.ಗಳು!

ಮೋಟಿಫ್ II ANC ಶೈಲಿ: ಮಾರ್ಷಲ್ ಮೋಟಿಫ್ II ANC ಇನ್-ಇಯರ್‌ ವಿನ್ಯಾಸ ಪಡೆದಿದ್ದು, ಸಿಲಿಕೋನ್ ಇಯರ್ ಟಿಪ್ಸ್‌ಗಳ ಆಯ್ಕೆ ಪಡೆಯುವ ಮೂಲಕ ಆಕರ್ಷಕ ನೋಟ ಪಡೆದುಕೊಂಡಿದೆ. ಈ ಮೂಲಕ ಈ ಇದು ಆಪಲ್‌ ಏರ್‌ಪಾಡ್ಸ್‌ ಪ್ರೊ ಅನ್ನೇ ಹೋಲಲಿದೆ. ಅಷ್ಟೇ ಅಲ್ಲದೆ ಬಡ್ಸ್‌ನ ಕೆಳಗಿನ ಭಾಗವು ಚಿನ್ನದ ಬಣ್ಣವನ್ನು ಹೊಂದಿದ್ದು, ಲೆದರ್‌ ಫಿನಿಶ್‌ ಮೂಲಕ ವಿಶೇಷವಾಗಿ ಕಾಣಿಸಿಕೊಂಡಿವೆ.

ಮೋಟಿಫ್ II ANC ಫೀಚರ್ಸ್‌:ಉಳಿದಂತೆ ಇದರ ಫೀಚರ್ಸ್‌ ಕಡೆ ಕಣ್ಣಾಯಿಸುವುದಾದರೆ 6mm ಡೈನಾಮಿಕ್ ಡ್ರೈವರ್ಸ್‌ ಆಯ್ಕೆ ನೀಡಲಾಗಿದ್ದು. 108dB ಡ್ರೈವರ್ ಸೆನ್ಸಿಟಿವಿಟಿಯೊಂದಿಗೆ ಬರುತ್ತವೆ. ಇದರೊಂದಿಗೆ ಟಚ್‌ ಕಂಟ್ರೋಲ್‌ ಆಯ್ಕೆ ನೀಡಲಾಗಿದ್ದು, ಈ ಮೂಲಕ ಬಳಕೆದಾರು ಸಂಗೀತ ಆಲಿಸುವಾಗ, ಕರೆ ಮಾಡುವಾಗ ಹಲವಾರು ಅನುಕೂಲ ಪಡೆದುಕೊಳ್ಳಬಹುದು.

ಇದರೊಂದಿಗೆ ಸ್ಪಾಟಿಫೈ (Spotify TAP) ಫೀಚರ್ಸ್‌ ಆಯ್ಕೆಯನ್ನೂ ಸಹ ಇದರಲ್ಲಿ ನೀಡಲಾಗಿದೆ. ಅಂದರೆ ಈ ಬಡ್ಸ್‌ ಅನ್ನು ಟಚ್‌ ಮಾಡುವ ಮೂಲಕವೇ ನೀವು ಸ್ಪಾಟಿಫೈ ಗೆ ಎಂಟ್ರಿ ನೀಡಿ ನಿಮ್ಮಿಷ್ಟದ ಹಾಡುಗಳನ್ನು ಆಲಿಸಬಹುದಾಗಿದೆ. ಉಳಿದಂತೆ ಕರೆಗಳಲ್ಲಿ ಉತ್ತಮ ಅನುಭವ ಸಿಗುವಂತೆ ಮಾಡಲು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದ್ದು, ಇದು ಬಳಕೆದಾರರನ್ನು ಇನ್ನಷ್ಟು ಸಂತಸಕ್ಕೆ ಒಳಗಾಗುವಂತೆ ಮಾಡುತ್ತದೆ.

ಉಳಿದಂತೆ ಇವು IPX5 ಪ್ರಮಾಣೀಕರಣದೊಂದಿಗೆ ಬರಲಿದ್ದು ನೀರು ನಿರೋಧಕವಾಗಿದೆ ಅಷ್ಟೇ ಅಲ್ಲದೆ ಈ ಡಿವೈಸ್‌ ಅನ್ನು ಶೇಕಡಾ 70 ರಷ್ಟು ಮರುಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ ಮತ್ತು ಬ್ಲೂಟೂತ್ ಆವೃತ್ತಿ 5.3 ಸಂಪರ್ಕದೊಂದಿಗೆ ಇಯರ್‌ಬಡ್‌ಗಳನ್ನು ಏಕಕಾಲದಲ್ಲಿ ಎರಡು ಡಿವೈಸ್‌ಗಳಿಗೆ ಸಂಪರ್ಕಿಸಬಹುದು. ಇದರ ಹೊರತಾಗಿ ಹಲವಾರು ಪ್ರಮುಖ ಫೀಚರ್ಸ್‌ ಆಯ್ಕೆಯನ್ನು ಇದು ಪಡೆದುಕೊಂಡಿದೆ.

ಮೋಟಿಫ್ II ANC ಬ್ಯಾಟರಿ ಸಾಮರ್ಥ್ಯ: ಇದರ ಬ್ಯಾಟರಿ ವಿಚಾರಕ್ಕೆ ಬಂದರೆ ಈ ಡಿವೈಸ್‌ನಲ್ಲಿ ANC ಅನ್ನು ಸಕ್ರಿಯಗೊಳಿಸಿ ಬಳಕೆ ಮಾಡುವಾಗ ಇಯರ್‌ಬಡ್‌ಗಳು 6 ಗಂಟೆಗಳವರೆಗೆ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡುತ್ತವೆ. ಹಾಗೆಯೇ ಅದನ್ನು ನಿಷ್ಕ್ರಿಯಗೊಳಿಸಿದಾಗ ಇಯರ್‌ಬಡ್‌ಗಳೊಂದಿಗೆ 9 ಗಂಟೆಗಳವರೆಗೆ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡುತ್ತವೆ ಎಂದು ಕಂಪೆನಿ ತಿಳಿಸಿದೆ. ಇದರೊಂದಿಗೆ ವೈರ್‌ಲೆಸ್ ಚಾರ್ಜಿಂಗ್, ಬ್ಯಾಟರಿ ಪ್ರೊಟೆಕ್ಟ್ ಸೌಲಭ್ಯ ಸಹ ಲಭ್ಯ.

ತ್ವರಿತ ಚಾರ್ಜಿಂಗ್ ಆಯ್ಕೆ ಇದರಲ್ಲಿ ಇದ್ದು, 15 ನಿಮಿಷಗಳು ಚಾರ್ಜಿಂಗ್‌ ಮಾಡಿದರೆ ನಿಮಗೆ ಒಂದು ಗಂಟೆಯ ಪ್ಲೇ ಟೈಮ್‌ ಅನ್ನು ನೀಡಲಿದೆ ಎಂದು ಕಂಪೆನಿ ಹೇಳಿದೆ. ಇದಕ್ಕಾಗಿ ಟೈಪ್-ಸಿ ಚಾರ್ಜಿಂಗ್‌ ಪೋರ್ಟ್‌ ಆಯ್ಕೆ ನೀಡಲಾಗಿದ್ದು, ಇದನ್ನು ನೀವು ಎಂತಹ ಸಂದರ್ಭದಲ್ಲೂ ಸಹ ಯಾವುದೇ ಸಮಸ್ಯೆ ಇಲ್ಲದೆ ಬಳಕೆ ಮಾಡಬಹುದಾಗಿದೆ.

ಭಾರತದಲ್ಲಿ ಮಾರ್ಷಲ್ ಕಂಪೆನಿಯ ಹೊಸ ಇಯರ್‌ಬಡ್ಸ್‌ ಲಾಂಚ್, ಬೆಲೆ 19,999ರೂ.ಗಳು!

ಮೋಟಿಫ್ II ANC ಬೆಲೆ ಹಾಗೂ ಲಭ್ಯತೆ: ಇನ್ನು ಈ ಇಯರ್‌ಬಡ್ಸ್‌ಗೆ ಬರೋಬ್ಬರಿ 19,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದು ಕಪ್ಪು ಬಣ್ಣದ ಆಯ್ಕೆಯಲ್ಲಿ ಮಾತ್ರ ಕಾಣಿಸಿಕೊಂಡಿದೆ. ನೀವು ಸೆಪ್ಟೆಂಬರ್ 12 ರಿಂದ ಅಧಿಕೃತ ವೆಬ್‌ಸೈಟ್‌ನಿಂದ ಮೂಲಕ ಖರೀದಿ ಮಾಡಬುದಾಗಿದೆ. ಇದಕ್ಕಾಗಿ ನೀವು https://www.marshallheadphones.com/in/en/motif-ii-anc.html ಈ ಲಿಂಕ್‌ ಅನ್ನು ಬಳಕೆ ಮಾಡಬಹುದು.

Best Mobiles in India

English summary
Marshall has launched the Motif II ANC earbuds in India. The device is priced at Rs 19,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+