Home
ಸುದ್ದಿಜಾಲ

Realme ಸಂಸ್ಥೆಯ ಈ ಅಗ್ಗದ ಫೋನಿಗೆ ಜಬರ್ದಸ್ತ್‌ ಡಿಸ್ಕೌಂಟ್‌; ಗ್ರಾಹಕರಿಗೆ ಖುಷಿ!

ಸದ್ಯ ಅಮೆಜಾನ್ ತಾಣದಲ್ಲಿ ಈಗ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 (Amazon Great Indian Festival 2024) ಮಾರಾಟ ಜೋರಾಗಿ ನಡೆಯುತ್ತಿದೆ. ಈ ಸೇಲ್‌ನಲ್ಲಿ ಪ್ರಮುಖ ಮೊಬೈಲ್‌ಗಳು ಆಕರ್ಷಕ ರಿಯಾಯಿತಿ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ಡಿಸ್ಕೌಂಟ್‌ ದರದಲ್ಲಿ ಫೋನ್‌ ಖರೀದಿಸುವ ಗ್ರಾಹಕರನ್ನು ಸೆಳೆಯುತ್ತಿದೆ. ಅಮೆಜಾನ್‌ ವೆಬ್‌ಸೈಟ್‌ನಲ್ಲಿ ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ ನಾರ್ಜೋ N65 5G ಫೋನ್‌ ಜಬರ್ದಸ್ತ್‌ ಆಫರ್‌ ಪಡೆದಿದೆ.

ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ರಿಯಲ್‌ಮಿ ನಾರ್ಜೋ N65 5G (realme GT 6T 5G) ಸ್ಮಾರ್ಟ್‌ಫೋನ್‌ ಶೇ. 25% ರಷ್ಟು ನೇರ ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 4GB + 128 GB ಸ್ಟೋರೇಜ್‌ ವೇರಿಯಂಟ್‌ 10,499ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ ಕಾರ್ಡ್‌ ಮೂಲಕ ಖರೀದಿ ಮಾಡಿದರೆ, 9749ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಸಬಹುದು.

Realme ಸಂಸ್ಥೆಯ ಈ ಅಗ್ಗದ ಫೋನಿಗೆ ಜಬರ್ದಸ್ತ್‌ ಡಿಸ್ಕೌಂಟ್‌; ಗ್ರಾಹಕರಿಗೆ ಖುಷಿ!

ಹಾಗೆಯೇ ಈ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದರ ಜೊತೆಗೆ 15W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್‌ ಅಂಬರ್ ಗೋಲ್ಡ್ ಮತ್ತು ಡೀಪ್ ಗ್ರೀನ್ ಆಯ್ಕೆಯಲ್ಲಿ ಈ ಫೋನ್‌ ಖರೀದಿಗೆ ಲಭ್ಯ ಆಗಲಿದೆ. ಇನ್ನುಳಿದಂತೆ ರಿಯಲ್‌ಮಿ ನಾರ್ಜೋ N65 5G ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ರಿಯಲ್‌ಮಿ ನಾರ್ಜೋ N65 5G - ಫೀಚರ್ಸ್‌
ರಿಯಲ್‌ಮಿ ನಾರ್ಜೋ N65 5G ಫೋನ್‌ 6.67 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌, 89.97 ಪ್ರತಿಶತ ಸ್ಕ್ರೀನ್ ಟು ಬಾಡಿ ಅನುಪಾತ ಹಾಗೂ 625 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಡಿಸ್‌ಪ್ಲೇಯು ಪಂಚ್‌ ಹೋಲ್‌ ಕಟೌಟ್ ಪಡೆದುಕೊಂಡಿದೆ.

ರಿಯಲ್‌ಮಿ ನಾರ್ಜೋ N65 5G ಮೊಬೈಲ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6300 5G ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಇದೆ. ಅಲ್ಲದೇ 6GB RAM ಡೈನಾಮಿಕ್ RAM ಸೌಲಭ್ಯ ಸಹ ಈ ಫೋನ್‌ ಪಡೆದಿದೆ. ಇದರೊಂದಿಗೆ 4GB + 12GB ಹಾಗೂ 6GB + 128GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದಿದೆ.

ರಿಯಲ್‌ಮಿ ನಾರ್ಜೋ N65 5G ಮೊಬೈಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸರ್‌ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಇದರ ಜೊತೆಗೆ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಪಡೆದುಕೊಂಡಿದೆ.

ರಿಯಲ್‌ಮಿ ನಾರ್ಜೋ N65 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಪಡೆದುಕೊಂಡಿದ್ದು, ಇದರೊಂದಿಗೆ 15W ಫಾಸ್ಟ್‌ ಚಾರ್ಜಿಂಗ್‌ಗೆ ಸೌಲಭ್ಯ ಸಹ ಇದೆ. ಅಲ್ಲದೇ ಕ್ವಿಕ್‌ ಚಾರ್ಜ್‌ ರಿವರ್ಸ್ ಚಾರ್ಜಿಂಗ್ ಪಡೆದಿರುವುದು ಪ್ಲಸ್‌ ಪಾಯಿಂಟ್‌ ಆಗಿ ಕಾಣಿಸಿಕೊಂಡಿದೆ. ಒಂದು ಪೂರ್ಣ ಚಾರ್ಜ್‌ನಲ್ಲಿ 28 ದಿನಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು ಪಡೆಯಬಹುದಾಗಿದೆ.

ರಿಯಲ್‌ಮಿ ನಾರ್ಜೋ N65 5G ಮೊಬೈಲ್‌ 5G ವೈ-ಫೈ ಮತ್ತು ಬ್ಲೂಟೂತ್ ಸೌಲಭ್ಯ ಪಡೆದಿದ್ದು, ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್ ಹೊಂದಿದೆ. ಇನ್ನು ಈ ಫೋನ್ ಈ ಫೋನ್ 190 ಗ್ರಾಂ ತೂಕ ಪಡೆದಿದ್ದು, 7.89mm ದಪ್ಪವನ್ನು ಪಡೆದುಕೊಂಡಿದೆ. ಹಾಗೆಯೇ ಇದು ಅಂಬರ್ ಗೋಲ್ಡ್ ಮತ್ತು ಡೀಪ್ ಗ್ರೀನ್ ಕಲರ್ ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
Massive Discount on Realme NARZO N65 5G on Amazon Great Indian Festival Sale 2024. check other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+