ಈ ಸ್ಟೈಲಿಶ್ ಫ್ಲಿಪ್ ಫೋನಿನ ಡಿಸ್ಕೌಂಟ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಹೈ ಎಂಡ್ ಮಾದರಿಯ ಫೋನ್‌ಗಳಿಗೂ ರಿಯಾಯಿತಿ ಘೋಷಿಸುತ್ತದೆ. ಇನ್ನು ಯಾವುದಾದರೂ ವಿಶೇಷ ಸೇಲ್ ಮೇಳ ಬಂದಾಗ ಆಕರ್ಷಕ ಡಿಸ್ಕೌಂಟ್ ಜೋರಾಗಿರುತ್ತದೆ. ಸದ್ಯ ಟೆಕ್ನೋ ಸಂಸ್ಥೆಯ ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G (TECNO Phantom V Flip 5G ) ಮೊಬೈಲ್ ಗಮನಾರ್ಹ ದರ ಇಳಿಕೆ ಪಡೆದುಕೊಂಡಿದೆ. ಇನ್ನು ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8050 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತನ್ನ ವೆಬ್‌ಸೈಟ್‌ನಲ್ಲಿ ವಿವೋ ಸಂಸ್ಥೆಯ ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G (TECNO Phantom V Flip 5G ) ಮೊಬೈಲ್ ಶೇ. 24% ರಷ್ಟು ನೇರ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೊಬೈಲ್‌ನ 6GB RAM + 128 GB ವೇರಿಯಂಟ್ ಆಫರ್‌ನಲ್ಲಿ 54,899ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಲಭ್ಯ ಇರುವ ಎಲ್ಲ ಕೊಡುಗೆ ಪಡೆದುಕೊಂಡರೇ, ಇದನ್ನು 28,999ರೂ. ಗಳಿಗೆ ಪಡೆಯಬಹುದಾಗಿದೆ.

ಇನ್ನು ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G ಮೊಬೈಲ್ 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಹ ಒಳಗೊಂಡಿದೆ. ಇದರೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 8050 SoC ಪ್ರೊಸೆಸರ್ ಶಕ್ತಿಯೊಂದಿಗೆ ಕೆಲಸ ಮಾಡಲಿದೆ. ಹಾಗಾದರೇ ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G ಫೀಚರ್ಸ್
ಟೆಕ್ನೋ ಸಂಸ್ಥೆಯ ಈ ಫೋನ್ 6.9 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 1000 ನೀಟ್ಸ್ ಬ್ರೈಟ್‌ನೆಸ್ ಲೆವೆಲ್ ಅನ್ನು ಪಡೆದಿದ್ದು, ಇದಲ್ಲದೆ 1.32 ಇಂಚಿನ ಕವರ್ ಡಿಸ್‌ಪ್ಲೇ ಅನ್ನು ಹೊಂದಿದೆ. ಕವರ್ ಡಿಸ್‌ಪ್ಲೇ ಮೂಲಕವೇ ಬಳಕೆದಾರರು ಮೆಸೆಜ್‌ಗಳಿಗೆ ರಿಪ್ಲೇ ಮಾಡಬಹುದು.
ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8050 SoC ಪ್ರೊಸೆಸರ್‌ನಲ್ಲಿ ಕಾರ್ಯ ಮಾಡಲಿದ್ದು, ಜೊತೆಗೆ ಮಾಲಿ-G77 GPU ಸಪೊರ್ಟ್ ಹೊಂದಿದೆ. ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 13.5 ಬೆಂಬಲ ಕೂಡಾ ಒಳಗೊಂಡಿದೆ. ಹಾಗೆಯೇ 8GB RAM ಅನ್ನು 256GB ಆಂತರೀಕ ಸ್ಟೋರೇಜ್ ಅನ್ನು ಹೊಂದಿದ್ದು, ಇದರೊಂದಿಗೆ 16GB ವರೆಗೆ ವರ್ಚುವಲ್ RAM ಅನ್ನು ವಿಸ್ತರಿಸುವ ಚಾನ್ಸ್ ಇದೆ.
ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಎರಡನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿರುವ ಜೊತೆಗೆ ಕ್ವಾಡ್ ಫ್ಲ್ಯಾಶ್‌ಲೈಟ್ ಯೂನಿಟ್ ಸೌಲಭ್ಯ ಪಡೆದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.
ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G ಮೊಬೈಲ್ 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 6, NFC ಮತ್ತು ಬ್ಲೂಟೂತ್ 5.1 ಜೊತೆಗೆ ಎಲ್ಲಾ GPT 3.0 ಅನ್ನು ಸಹ ಸಪೋರ್ಟ್ ಮಾಡುತ್ತದೆ. ಇನ್ನು ಸ್ಮಾರ್ಟ್‌ಫೋನ್ ಅನ್ನು ನೀವು ಫೋಲ್ಡ್ ಮಾಡಿದಾಗ 88.77mm x 74.05mm x 14.95mm ಗಾತ್ರದಲ್ಲಿ ಇದೆ.


Click it and Unblock the Notifications








