ವಿವೋದ ಈ ದೈತ್ಯ ಫೋನಿನ ಡಿಸ್ಕೌಂಟ್ ಬೆಲೆ ತಿಳಿದ್ರೆ, ನೀವು ಅಚ್ಚರಿ ಪಡ್ತೀರಾ!
ದಿಗ್ಗಜ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಗ್ರಾಹಕರನ್ನು ಸೆಳೆಯಲು ಒಂದಿಲ್ಲೊಂದು ಸೇಲ್ ಆಯೋಜಿಸುತ್ತ ಸಾಗಿದೆ. ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಸೂಪರ್ ವ್ಯಾಲ್ಯೂ ಡೇಸ್ ಮಾರಾಟ ಭರದಿಂದ ಚಾಲ್ತಿ ಇದೆ. ಈ ಸೇಲ್‌ನಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ವಿವೋದ ಜಬರ್ದಸ್ತ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ವಿವೋ X100 ಸಖತ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ವಿವೋ X100 ಸ್ಮಾರ್ಟ್‌ಫೋನ್ ಶೇ. 7% ರಷ್ಟು ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ಖುಷಿ ಎನಿಸಿದೆ. ಈ ಮೊಬೈಲ್‌ನ 12 GB RAM + 256 GB ಸ್ಟೋರೇಜ್ ವೇರಿಯಂಟ್ ಆಫರ್‌ನಲ್ಲಿ 63,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಇತರೆ ಕೆಲವು ಡಿಸ್ಕೌಂಟ್ ಕೊಡುಗೆಗಳು ಕೂಡಾ ಖರೀದಿದಾರರಿಗೆ ಸಿಗಲಿವೆ.

ಅಂದಹಾಗೆ ಈ ಫ್ಲ್ಯಾಗ್‌ಶಿಪ್ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300SoC ಪ್ರೊಸೆಸರ್ ಸೌಲಭ್ಯ ಪಡೆದಿದೆ. ಹಾಗೆಯೇ 120W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದೆ. ಇನ್ನು ಈ ಫೋನ್ 50MP + 50MP + 64MP ಸೆನ್ಸಾರ್‌ನ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದೆ. ಇನ್ನುಳಿದಂತೆ ವಿವೋ X100 ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ವಿವೋ X100 ಮೊಬೈಲ್ - ಫೀಚರ್ಸ್
ವಿವೋ X100 ಮೊಬೈಲ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 2800 x 1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಇದು 386 ಪಿಪಿಐ ಪಿಕ್ಸೆಲ್ ಸಾಂದ್ರತೆ ಅನ್ನು ಒಳಗೊಂಡಿದ್ದು, ಇನ್ನು ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಸ್ಕ್ರೀನ್ ಪ್ರೊಟೆಕ್ಷನ್‌ನಲ್ಲಿ ಸಹ ಪಡೆದಿದೆ. ಇದಲ್ಲದೆ ಡಿಸ್‌ಪ್ಲೇ 120 Hz ರಿಫ್ರೆಶ್ ರೇಟ್ ಸಪೋರ್ಟ್ ಪಡೆದಿದೆ.

ಹಾಗೆಯೇ ವಿವೋ X100 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300SoC ಪ್ರೊಸೆಸರ್ ಸೌಲಬ್ಯದ ಪವರ್ ಅನ್ನು ಪಡೆದಿದ್ದು, ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಇದು 12GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಇದು Funtouch OS 14 ಸಪೋರ್ಟ್ ಕೂಡಾ ಪಡೆದಿದೆ.
ವಿವೋ X100 ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಆಗಿದೆ. ದ್ವಿತೀಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ ಮತ್ತು ತೃತೀಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.
ಇನ್ನು ವಿವೋ X100 ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಕೂಡಾ ಪಡೆದಿದ್ದು, ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಪಡೆದುಕೊಂಡಿದೆ.
ವಿವೋದ ಈ ದೈತ್ಯ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 12GB RAM ಮತ್ತು 256GB ಹಾಗೂ 16GB RAM+ 512GB ಆಂತರೀಕ ಸ್ಟೋರೇಜ್ ಆಗಿವೆ. ಇನ್ನು ಈ ಫೋನ್ ಬ್ಲೂ ಹಾಗೂ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.


Click it and Unblock the Notifications








