ಅಗ್ಗದ ಫೋನ್ ಖರೀದಿಸೋಕೆ ಇದು ಬೆಸ್ಟ್ ಟೈಮ್...ಈ ಫೋನ್ ಬೆಲೆಯಲ್ಲಿ ಇಳಿಕೆ!
ಲೀಡಿಂಗ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್ ಹಬ್ಬದ ಪ್ರಯುಕ್ತ ವಿಶೇಷ ಸೇಲ್ ಮೇಳವನ್ನು ಆಯೋಜಿಸಿ ಗ್ರಾಹಕರ ಗಮನ ಸೆಳೆದದೆ. ಈ ಸೇಲ್‌ನಲ್ಲಿ ಪ್ರಮುಖ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಕೊಡುಗೆ ನೀಡಿದ್ದು, ಆ ಪೈಕಿ ಪೊಕೊ ಕಂಪನಿಯ ಪೊಕೊ C55 ಮೊಬೈಲ್ ಫೋನ್ ಸ್ಪೆಷಲ್ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ.
ಹೌದು, ಫ್ಲಿಪ್‌ಕಾರ್ಟ್ ತಾಣದ ಸೇಲ್‌ನಲ್ಲಿ ಪೊಕೊ C55 ಮೊಬೈಲ್ ಶೇ. 44% ರಷ್ಟು ಡಿಸ್ಕೌಂಟ್ ಹೊಂದಿದೆ. ಹೀಗಾಗಿ ಈ ಮೊಬೈಲ್‌ನ 6 GB RAM + 128 GB ಸ್ಟೋರೇಜ್ ವೇರಿಯಂಟ್ 7,799ರೂ. ಗಳಿಗೆ ಖರೀದಿ ಮಾಡಲು ಅವಕಾಶ ಇದೆ. ಅಂದಹಾಗೆ ಈ ಮೊಬೈಲ್‌ಗೆ ಲಭ್ಯ ಇತರೆ ಎಲ್ಲ ಕೊಡುಗೆ ಸೇರಿದರೆ ಈ ಫೋನ್ ಅನ್ನು 6,799ರೂ. ಗಳಿಗೂ ಕೂಡಾ ಖರೀದಿ ಮಾಡಬಹುದಾಗಿದೆ.

ಪೊಕೊ ಸಂಸ್ಥೆಯ ಈ ಎಂಟ್ರಿ ಲೆವೆಲ್ ಫೋನ್ ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್ ವೇಗದಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಇದು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾ ಪಿಕ್ಸೆಲ್ ಸೆನ್ಸಾರ್ ಪ್ರಾಥಮಿಕ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗಾದರೆ ಪೊಕೊ C55 ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸೈನ್ ಹಾಗೂ ಡಿಸ್‌ಪ್ಲೇ ರಚನೆ ಹೇಗಿದೆ
ಪೊಕೊ C55 ಮೊಬೈಲ್ 6.71 ಇಂಚಿನ HD+ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 720 x 1650 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಇದರ ಜೊತೆಗೆ 120Hz ಟಚ್ ಸ್ಯಾಂಪಲಿಂಗ್ ರೇಟ್ ಬೆಂಬಲಿದ್ದು, ಪಾಂಡಾ ಗ್ಲಾಸ್ ಲೇಯರ್ ಮೂಲಕ ಹೆಚ್ಚಿನ ರಕ್ಷಣೆ ಒದಗಿಸುತ್ತದೆ.

ಯಾವ ಪ್ರೊಸೆಸರ್ ಪವರ್ ಪಡೆದಿದೆ
ಪೊಕೊ C55 ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್ ಮೂಲಕ ಕೆಲಸ ನಿರ್ವಹಿಸಲಿದ್ದು, ಇದರೊಂದಿಗೆ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಮಾಡುತ್ತದೆ. ಹಾಗೆಯೇ 6GB RAM ನೊಂದಿಗೆ 64GB ಹಾಗೂ 4GB ಯೊಂದಿಗೆ 64GB ಹಾಗೂ 128GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ RAM ಅನ್ನು 11GB ವರೆಗೆ ವಿಸ್ತರಿಸಬಹುದಾದ ಆಯ್ಕೆ ಸಹ ಇದ್ದು, ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಆಯ್ಕೆ ಇದೆ.
ಕ್ಯಾಮೆರಾ ಸೆನ್ಸಾರ್ ಮಾಹಿತಿ
ಪೊಕೊ C55 ಮೊಬೈಲ್ ಹಿಂಬದಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾ ಪಿಕ್ಸೆಲ್ ಮುಖ್ಯ ಸೆನ್ಸರ್ f/1.8 ಅನ್ನು ಪಡೆದುಕೊಂಡಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಡೆಪ್ತ್ ಸೆನ್ಸಾರ್‌ನ f/2.4 ಅನ್ನು ಹೊಂದಿದೆ. ಇದರ ಜೊತೆಗೆ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.

ಬ್ಯಾಟರಿ ಬ್ಯಾಕ್‌ಅಪ್ ಹಾಗೂ ಇತರೆ ಸೌಲಭ್ಯಗಳು
ಪೊಕೊ C55 ಮೊಬೈಲ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸಪೋರ್ಟ್ ಕೂಡಾ ಪಡೆದಿದೆ. ಇನ್ನುಳಿದಂತೆ ಈ ಫೋನ್ ರಿಯರ್ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ ಸೌಲಭ್ಯ ಒಳಗೊಂಡಿದ್ದು, IP52 ರೇಟಿಂಗ್‌ನೊಂದಿಗೆ ಇದು ಧೂಳು ಮತ್ತು ಸ್ಪ್ಲಾಶ್ ನಿರೋಧಕವಾಗಿದೆ.
ಮೆಮೊರಿ ಹಾಗೂ ಕಲರ್ ಆಯ್ಕೆ
ಪೊಕೊ C55 ಸ್ಮಾರ್ಟ್‌ಫೋನ್ 4GB + 64GB ವೇರಿಯಂಟ್ ಹಾಗೂ 6GB + 128GB ವೇರಿಯಂಟ್‌ನ ಆಯ್ಕೆ ಗಳನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ ಫಾರೆಸ್ಟ್ ಗ್ರೀನ್, ಪವರ್ ಬ್ಲಾಕ್ ಮತ್ತು ಕೂಲ್ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.


Click it and Unblock the Notifications








