Home
ಸುದ್ದಿಜಾಲ

ಅರೆರೇ..ಇದು ಬಿಗ್‌ ಆಫರ್‌!..ಪೊಕೊ M5 ಫೋನಿಗೆ ಈಗ 51% ನೇರ ಡಿಸ್ಕೌಂಟ್‌!

ಪೊಕೊ ಮೊಬೈಲ್‌ ಬ್ರ್ಯಾಂಡ್‌ ಕೆಲವು ಮೀಡ್‌ರೇಂಜ್‌ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದ್ದು, ಹಾಗೆಯೇ ಕೆಲವು ಬಜೆಟ್‌ ದರದ ಫೋನ್‌ಗಳ ಆಯ್ಕೆ ಕೂಡಾ ಹೊಂದಿದೆ. ಆ ಪೈಕಿ ಸಂಸ್ಥೆಯ ಪೊಕೊ M5 ಸ್ಮಾರ್ಟ್‌ಫೋನ್‌ ತನ್ನ ವರ್ಗದಲ್ಲೇ ಜಬರ್ದಸ್ತ್‌ ಫೀಚರ್ಸ್‌ ಹೊಂದಿದ್ದು, ಈಗ ಭರ್ಜರಿ ಬೆಲೆ ಇಳಿಕೆ ಕಂಡಿದೆ.

ಹೌದು, ಪ್ರಮುಖ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ನಲ್ಲಿ ಪೊಕೊ M5 ಮೊಬೈಲ್‌ಗೆ ಶೇ. 51% ರಷ್ಟು ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 4 GB RAM + 64 GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 15,999ರೂ. ಆಗಿದ್ದು, ಆಫರ್‌ನಲ್ಲಿ ಈಗ 7,777ರೂ. ಗಳಿಗೆ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಇತರೆ ಕೊಡುಗೆಗಳು ಸಹ ಲಭ್ಯ ಆಗಲಿವೆ.

ಅರೆರೇ..ಇದು ಬಿಗ್‌ ಆಫರ್‌!..ಪೊಕೊ M5 ಫೋನಿಗೆ ಈಗ 51% ನೇರ ಡಿಸ್ಕೌಂಟ್‌!

ಇನ್ನು ಈ ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಆಗಿದೆ. ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಹಾಗಾದರೇ ಪೊಕೊ M5 ಮೊಬೈಲ್‌ ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಪೊಕೊ M5 ಡಿಸ್‌ಪ್ಲೇ ರಚನೆ ಹೀಗಿದೆ
ಪೊಕೊ M5 ಮೊಬೈಲ್‌ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 30Hz ನಿಂದ 90Hz ವರೆಗಿನ ವೇರಿಯಬಲ್ ರಿಫ್ರೆಶ್ ರೇಟ್‌ ಅನ್ನು ಸಪೋರ್ಟ್ ಮಾಡುತ್ತದೆ. ಈ ಡಿಸ್‌ಪ್ಲೇ 240Hz, DCI-P3 ಬಣ್ಣದ ಹರವುಗಳ ಟಚ್‌ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಒಳಗೊಂಡಿದೆ.

ಪೊಕೊ M5 ಪ್ರೊಸೆಸರ್‌ ಬಲ ಎಷ್ಟು
ಪೊಕೊ M5 ಮೊಬೈಲ್‌ ಆಕ್ಟಾ-ಕೋರ್ 6nm ಮೀಡಿಯಾ ಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಇದು ಆಂಡ್ರಾಯ್ಡ್‌ 12 ಬೆಂಬಲ ಪಡೆದಿದೆ. ಹಾಗೆಯೇ 6GB RAM ಮತ್ತು 128GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿದ್ದು, ಟರ್ಬೊ RAM ಫೀಚರ್ಸ್‌ ಅನ್ನು ಬಳಸಿಕೊಂಡು RAM ಅನ್ನು ವಿಸ್ತರಿಸಲು ಅನುವು ಇದೆ.

ಪೊಕೊ M5 ಕ್ಯಾಮೆರಾ ಸೆನ್ಸಾರ್ ರಚನೆ
ಪೊಕೊ M5 ಮೊಬೈಲ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಸೆಕೆಂಡರಿ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಮತ್ತು ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಪಡೆದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.

ಪೊಕೊ M5 ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಪೊಕೊ M5 ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 18W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಇದೆ. ಇನ್ನು ಈ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಪ್ಲೇಟೈಮ್ ಅನ್ನು ಒದಗಿಸಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5, GPS/ A-GPS, ಇನ್‌ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ ಆಯ್ಕೆ ಪಡೆದಿದೆ.

ಪೊಕೊ M5 ಮೆಮೊರಿ ಮತ್ತು ಕಲರ್
ಪೊಕೊ M5 ಮೊಬೈಲ್‌ 4GB RAM + 64GB ಸ್ಟೋರೇಜ್ ವೇರಿಯಂಟ್‌ ಹಾಗೂ 6GB RAM + 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಅನ್ನು ಹೊಂದಿದೆ. ಈ ಫೋನ್‌ ಐಸಿ ಬ್ಲೂ, ಪೊಕೊ ಹಳದಿ ಮತ್ತು ಪವರ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
POCO M5 available at big discount price on flipkart website. all details here in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+