ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೋನ್ ಬೆಲೆಯಲ್ಲಿ ಶೇ 61 ರಷ್ಟು ಇಳಿಕೆ!..ಅಚ್ಚರಿ ಡಿಸ್ಕೌಂಟ್!
ದಿಗ್ಗಜ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್ ಮೊಬೈಲ್‌ಗಳಿಗೆ ಒಂದಿಲ್ಲೊಂದು ಆಫರ್ ಘೋಷಿಸುತ್ತಾ ಸಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಇದೀಗ ಕೆಲವು ಮೊಬೈಲ್‌ಗಳು ಆಕರ್ಷಕ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE (SAMSUNG Galaxy S23 FE) ಮೊಬೈಲ್ ಗ್ರಾಹಕರು ವಾವ್ ಎಂದು ನೋಡುವಂತಹ ಸಖತ್ ಡಿಸ್ಕೌಂಟ್ ಹೊಂದಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE (SAMSUNG Galaxy S23 FE) ಮೊಬೈಲ್ ಶೇ. 61% ರಷ್ಟು ನೇರ ರಿಯಾಯಿತಿ ಪಡೆದಿದೆ. ಈ ಮೊಬೈಲ್‌ನ 8GB RAM + 128GB ವೇರಿಯಂಟ್ 30,999ರೂ. ಗಳ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಗ್ರಾಹಕರು ಬ್ಯಾಂಕ್, ಎಕ್ಸ್‌ಚೇಂಜ್ ಮತ್ತು ಇತರೆ ಆಫರ್ ಸಹ ಖರೀದಿಸಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೋನ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಪವರ್ ಪಡೆದಿದೆ. ಹಾಗೆಯೇ ಇದು 8 GB RAM + 256GB ವೇರಿಯಂಟ್ ಆಯ್ಕೆಗಳನ್ನು ಇಳಗೊಂಡಿದೆ. ಇನ್ನುಳಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE (SAMSUNG Galaxy S23 FE) ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೋನ್ 6.4 ಇಂಚಿನ ಡೈನಾಮಿಕ್ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದಿದೆ. ಈ ಡಿಸ್‌ಪ್ಲೇ 1080 x 2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ವರೆಗೆ ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಇದು 83.2% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಇದಲ್ಲದೆ ಡಿಸ್‌ಪ್ಲೇ 19.5:9 ರಚನೆಯ ಅನುಪಾತವನ್ನು ಒಳಗೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 1 SoC ಪ್ರೊಸೆಸರ್ ಪವರ್ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್ 14 ಬೆಂಬಲದ ಜೊತೆಗೆ ಕೆಲಸ ನಿರ್ವಹಿಸಲಿದೆ. ಅಲ್ಲದೇ 8GB RAM + 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೋನ್ ಟ್ರಿಪಲ್ ರಿಯರ್ ಫ್ಲೋಟಿಂಗ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ದ್ವಿತೀಯ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಅಲ್ಟ್ರಾವೈಡ್ ಲೆನ್ಸ್ ಅನ್ನು ಪಡೆದಿದೆ. ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಪಡೆದಿದೆ. ಇದಲ್ಲದೆ 10 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಹೊಂದಿದೆ. ಇದು 30 ನಿಮಿಷಗಳಲ್ಲಿ ಫೋನ್ ಅನ್ನು ಶೂನ್ಯದಿಂದ 50% ಚಾರ್ಜಿಂಗ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ Wi-Fi, GPS, NFC ಮತ್ತು ಬ್ಲೂಟೂತ್ 5.3 ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP68 ರೇಟಿಂಗ್ ಪಡೆದಿದೆ.


Click it and Unblock the Notifications








