ಈ ರೆಡ್ಮಿ ಫೋನಿಗೆ ಇರುವ ಆಫರ್ ಬಗ್ಗೆ ತಿಳಿದ್ರೆ, ನೀವು ವಾವ್ ಅನ್ನೋದು ಪಕ್ಕಾ!
ದಿಗ್ಗಜ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಹಾಟ್ ಫೇವರೇಟ್ ಆಗಿದೆ. ಅಮೆಜಾನ್ ಸಂಸ್ಥೆಯು ಫೋನ್‌ಗಳಿಗೂ ಏನಾದರೊಂದು ಆಕರ್ಷಕ ಡಿಸ್ಕೌಂಟ್ ಲಭ್ಯ ಮಾಡುವ ಮೂಲಕ ಮತ್ತಷ್ಟು ಖರೀದಿದಾರರನ್ನು ತನ್ನತ್ತ ಸೆಳೆಯುತ್ತ ಸಾಗಿವೆ. ಸದ್ಯ ರೆಡ್ಮಿ ಕಂಪನಿಯ ರೆಡ್ಮಿ 11 ಪ್ರೈಮ್ ಮೊಬೈಲ್ ಬೊಂಬಾಟ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.
ಹೌದು, ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ ರೆಡ್ಮಿ 11 ಪ್ರೈಮ್ ಫೋನ್ ಬರೋಬ್ಬರಿ ಶೇ. 39% ರಷ್ಟು ರಿಯಾಯಿತಿ ಪಡೆದಿದ್ದು, 6 GB RAM + 128 GB ವೇರಿಯಂಟ್ ಫೋನ್ 10,249ರೂ. ಗಳ ವಿಶೇಷ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳ ರಿಯಾಯಿತಿ, ಕ್ಯಾಶ್‌ಬ್ಯಾಕ್ ಕೊಡುಗೆ ಸಹ ಲಭ್ಯ ಆಗಲಿವೆ. ಹೀಗಾಗಿ ಈ ಫೋನ್ ಅನ್ನು ಗ್ರಾಹಕರು ಇನ್ನಷ್ಟು ಕಡಿಮೆ ಮೊತ್ತದಲ್ಲಿ ತಮ್ಮದಾಗಿಸಿಕೊಳ್ಳಬಹುದು.

ಅಂದಹಾಗೆ ರೆಡ್ಮಿಯ ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G99 ಚಿಪ್‌ಸೆಟ್ ಸೌಲಭ್ಯ ಪಡೆದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಈ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಕೂಡಾ ಒಳಗೊಂಡಿದೆ. ಇನ್ನು ಈ ಮೊಬೈಲ್ ಗ್ರೀನ್ ಮತ್ತು ಪರ್ಪಲ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ದೊರೆಯುತ್ತದೆ. ಹಾಗಾದರೇ ರೆಡ್ಮಿ 11 ಪ್ರೈಮ್ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್ಪ್ಲೇ ವಿನ್ಯಾಸ ಹಾಗೂ ರಚನೆ ಮಾಹಿತಿ
ರೆಡ್ಮಿ 11 ಪ್ರೈಮ್ 6.58 ಇಂಚಿನ ಡಿಸ್ಪ್ಲೇ ಅನ್ನು ಹೊಂದಿದ್ದು, ಇದರ ಡಿಸ್‌ಪ್ಲೇಯು 1080 x 2408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ ಇದು 20:9 ಆಕಾರ ಅನುಪಾತ ಪಡೆದಿದ್ದು, ಇದರೊಂದಿಗೆ 401ppi ಪಿಕ್ಸೆಲ್ ಸಾಂದ್ರತೆ ಹಾಗೂ 90Hz ನ ರಿಫ್ರೆಶ್ ರೇಟ್ ಕೂಡಾ ಒಳಗೊಂಡಿದೆ. ಡಿಸ್‌ಪ್ಲೇ ಮೇಲ್ಭಾಗದ ಮಧ್ಯದಲ್ಲಿ ಪಂಚ್ ಹೋಲ್ ಆಯ್ಕೆ ಇದ್ದು, ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
ಪ್ರೊಸೆಸರ್ ಪವರ್ ಹಾಗೂ ಮೆಮೊರಿ
ರೆಡ್ಮಿ 11 ಪ್ರೈಮ್ ಈ ಫೋನ್ ಆಂತರಿಕ ಕಾರ್ಯಾಚರಣೆಗಳ ನಡೆಸಲು ಕಾರ್ಟೆಕ್ಸ್ A76 ಮತ್ತು ಕಾರ್ಟೆಕ್ಸ್ A55 ವಿನ್ಯಾಸಗಳೊಂದಿಗೆ ಆಕ್ಟಾ-ಕೋರ್ CPU ಕೆಲಸ ನಿರ್ವಹಿಸಲಿದೆ. ಅಲ್ಲದೇ ಇದು ಮೀಡಿಯಾ ಟೆಕ್ ಹಿಲಿಯೋ G99 ಚಿಪ್‌ಸೆಟ್ ಪ್ರೊಸೆಸರ್ ಪವರ್ ಸಾಮರ್ಥ್ಯವನ್ನು ಪಡೆದುಕೊಂಡಿರುವ ಜೊತೆಗೆ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಇದರ ಜೊತೆಗೆ ಮಾಲಿ G57 MP2 GPU ಸೌಲಭ್ಯ ಕೂಡಾ ಪಡೆದುಕೊಂಡಿದೆ.

ಕ್ಯಾಮೆರಾ ಸೆನ್ಸಾರ್ ಮಾಹಿತಿ
ರೆಡ್ಮಿ ರೆಡ್ಮಿ 11 ಪ್ರೈಮ್ ಸ್ಮಾರ್ಟ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ನ ವೈಡ್-ಆಂಗಲ್ ಹೊಂದಿದೆ. ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಹಾಗೂ ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ನ ಡೆಪ್ತ್ ಸೆನ್ಸಾರ್ ಅನ್ನು ಪಡೆದಿದೆ. ಮುಂಭಾಗದಲ್ಲಿ ಈ ಫೋನ್ 8 ಮೆಗಾ ಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಕೂಡಾ ಒಳಗೊಂಡಿದೆ.
ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ ಹಾಗೂ ಇತರೆ
ರೆಡ್ಮಿ ಕಂಪನಿಯ ಈ ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಅದಲ್ಲದೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇತ್ತೀಚಿನ ಕೆಲವು ಅಗತ್ಯ ಆಯ್ಕೆಗಳನ್ನು ಈ ಫೋನ್ ಪಡೆದಿದೆ.


Click it and Unblock the Notifications








