ಫೋನ್‌ನ ಬ್ಯಾಟರಿ ಬ್ಯಾಕಪ್ ಅನ್ನು ಸದ್ದಿಲ್ಲದೆ ಕೊಲ್ಲುವ ಆಪ್‌ಗಳಿವು! McAfee ನೀಡಿದ ಎಚ್ಚರಿಕೆ ಏನು?
ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೆಚ್ಚು ಸಮಸ್ಯೆಗೆ ಸಿಲುಕುವ ಹಾಗೂ ಸ್ಕ್ಯಾಮರ್‌ಗಳಿಂದ(Scammer) ನೇರ ದಾಳಿಗೆ ಒಳಗಾಗುವ ಫೋನ್‌ಗಳೆಂದರೆ ಅವು ಆಂಡ್ರಾಯ್ಡ್ ಫೋನ್ ಎಂದೇ ಹೇಳಬಹುದು. ಈ ನಡುವೆ ಆಂಡ್ರಾಯ್ಡ್ ಫೋನ್ ಬಳಕೆದಾರರು (Android phone users) ಈವರೆಗೂ ಬಳಕೆ ಮಾಡುತ್ತಿದ್ದ ಹಾಗೂ ಬಳಕೆ ಮಾಡುತ್ತಿರುವ ಕೆಲವು ಆಪ್ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದೆ.
ಹೌದು, ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಬಳಕೆದಾರರು ಮಗದೊಮ್ಮೆ ಡಿವೈಸ್‌ಗಳನ್ನು ಪರಿಶೀಲಿಸಲು ಮತ್ತು ಅನಗತ್ಯ ಆಪ್‌ಗಳನ್ನು ತೆಗೆದುಹಾಕಲು ಮ್ಯಾಕ್‌ಅಫೀ(McAfee) ಮಾಹಿತಿ ನೀಡಿದೆ. ಈ ಆಪ್‌ಗಳು ಬ್ಯಾಟರಿ ಬ್ಯಾಕಪ್ (Battery backup) ಅನ್ನು ಕಡಿಮೆ ಮಾಡುವುದರ ಜೊತೆಗೆ ಡಿಸ್‌ಪ್ಲೇ ಆಫ್ ಆಗಿರುವಾಗಲೂ ಮೊಬೈಲ್ ಡೇಟಾವನ್ನು ಬಳಕೆ ಮಾಡುತ್ತವೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಯಾವುವು ಈ ಡೇಂಜರ್ ಆಪ್‌ಗಳು? ಇವುಗಳಿಂದ ಎಚ್ಚರಿಕೆ ವಹಿಸುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

43 ಡೇಂಜರ್ ಆಪ್‌ಗಳು: ಈ ಅನುಮಾನಾಸ್ಪದ ಆಪ್‌ಗಳು ನಿಮ್ಮ ಫೋನ್‌ನ ಡಿಸ್‌ಪ್ಲೇ (phone display) ಆಫ್ ಆಗಿರುವಾಗಲೂ ಸಹ ಕೆಲಸ ಮಾಡಲಿದ್ದು, ಇವು ಜಾಹೀರಾತುಗಳನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಮ್ಯಾಕ್‌ಅಫೀಯ ಭದ್ರತಾ ತಂಡವು ಮಾಹಿತಿ ನೀಡಿದೆ. ಆಪ್‌ಗಳ ಈ ರೀತಿಯ ನಡವಳಿಕೆ ಗೂಗಲ್‌ನ ನಿಯಮಗಳ ನೇರ ಉಲ್ಲಂಘನೆಯಾಗಿದೆ ಮತ್ತು ಕಂಪನಿಯ ಗೂಗಲ್ ಪ್ಲೇ ಡೆವಲಪರ್ ನೀತಿಯನ್ನು ವಿರೋಧಿಸುತ್ತದೆ ಎಂದು ತಿಳಿಸಲಾಗಿದೆ.
ಇಷ್ಟು ಮಾತ್ರವಲ್ಲದೆ ಬಳಕೆದಾರರ ಒಪ್ಪಿಗೆಯಿಲ್ಲದೆ ಜಾಹೀರಾತು ಕ್ಲಿಕ್‌ಗಳನ್ನು ರಚಿಸಲು ಕೆಲವು ಡೆವಲಪರ್‌ಗಳು ಇವುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರಂತೆ. ಈ ಆಪ್‌ಗಳಲ್ಲಿ ಹಲವು ಆಪ್‌ಗಳನ್ನು ಗೂಗಲ್‌ನಿಂದ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲ್ಪಟ್ಟಿದ್ದರೂ, ಉಲ್ಲೇಖಿಸಿದ ಮೂಲದ ಪ್ರಕಾರ, ತೆಗೆದುಹಾಕುವ ಮೊದಲು ಸುಮಾರು 2.5 ಮಿಲಿಯನ್ ಬಳಕೆದಾರರು ಅವುಗಳನ್ನು ಈಗಾಗಲೇ ಇನ್‌ಸ್ಟಾಲ್ ಮಾಡಿಕೊಂಡಿದ್ದರಂತೆ.
ಮ್ಯಾಕ್‌ಅಫೀ ಗುರುತಿಸಿರುವ ಕೆಲವು ಆಪ್‌ಗಳಲ್ಲಿ ಟಿವಿ/ಡಿಎಮ್‌ಬಿ ಪ್ಲೇಯರ್, ಮ್ಯೂಸಿಕ್ ಡೌನ್‌ಲೋಡರ್, ನ್ಯೂಸ್ ಆಂಡ್ ಕ್ಯಾಲೆಂಡರ್ ಅಪ್ಲಿಕೇಶನ್ ಆಗಿವೆ. ಉಳಿದ ಲಿಸ್ಟ್ ಅನ್ನು ತಿಳಿಸಲಾಗಿಲ್ಲ. ಅದಾಗ್ಯೂ ಈ ಎಲ್ಲಾ ಕಳ್ಳ ಆಪ್‌ಗಳು ಆರಂಭದಲ್ಲಿ ಬಳಕದಾರರಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲವಂತೆ. ಆದರೆ, ಕೆಲವು ವಾರಗಳ ನಂತರ ಜಾಹೀರಾತುಗಳನ್ನು ಡಿಸ್‌ಪ್ಲೇ ಮಾಡುವ ಕೆಲಸ ಮಾಡುತ್ತವಂತೆ.
ಇದರೊಂದಿಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿರುವ ಮ್ಯಾಕ್‌ಅಫೀ, ತಮ್ಮ ಫೋನ್‌ಗಳಿಗೆ ಹೊಸ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವಾಗ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ಅಂದರೆ ಇನ್‌ಸ್ಟಾಲ್ ಮಾಡುವಾಗ ಮೊದಲು ಅದು ವಿನಂತಿಸಿದ ಅನುಮತಿಗಳನ್ನು ಪರಿಶೀಲಿಸಿ ಎಂದು ಒತ್ತಿ ಹೇಳಿದೆ. ಇದರೊಂದಿಗೆ ಹೊಸ ಆಪ್ ಅನ್ನು ಇನ್‌ಸ್ಟಾಲ್ ಮಾಡಿದ ನಂತರ ಬಳಕೆದಾರರು ತಮ್ಮ ಡಿವೈಸ್‌ನ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಬೇಕು, ಈ ವೇಳೆ ಬ್ಯಾಟರಿ ಬಾಳಿಕೆ ಹಠಾತ್ ಕುಸಿತ ಕಂಡರೆ ದುರುದ್ದೇಶಪೂರಿತ ಇನ್‌ಸ್ಟಾಲ್ ಆಗಿದೆ ಎಂದರ್ಥ.
ಈ ರೀತಿಯ ಆಪ್‌ಗಳಿಂದ ಸುರಕ್ಷಿತವಾಗಿರುವುದು ಹೇಗೆ? : ಸಾಮಾನ್ಯವಾಗಿ ಬ್ಯಾಟರಿ ಡ್ರೈನ್ ಸಮಸ್ಯೆಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತುಕೊಳ್ಳಿ. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಹಳೆಯ ಫೋನ್‌ಗಳ ಬ್ಯಾಟರಿ ಬ್ಯಾಕಪ್ ಸಹ ಈ ರೀತಿಯ ಸಮಸ್ಯೆ ಉಂಟು ಮಾಡುತ್ತದೆ. ಹಾಗಂದ ಮಾತ್ರಕ್ಕೆ ಇದೂ ಸಹ ಆಪ್‌ನಿಂದಲೇ ಆಗುತ್ತಿರುವುದು ಅಂದುಕೊಳ್ಳಬೇಡಿ. ಇದರೊಂದಿಗೆ ನೀವು ಒಪ್ಪಿಗೆ ಸೂಚಿಸುವ ಅನುಮತಿಗಳ ಬಗ್ಗೆ ಸಾದಾ ಜಾಗೃತರಾಗಿರಿ.
ಅಧಿಕೃತ ಆಪ್ ಸ್ಟೋರ್‌ಗಳಿಂದಲೇ ಇನ್‌ಸ್ಟಾಲ್ ಮಾಡಿ: ನೀವು ಯಾವುದೇ ಆಪ್‌ಗಳನ್ನಾದರೂ ಸಹ ಗೂಗಲ್ ಪ್ಲೇ ಸ್ಟೋರ್ ಅಥವಾ ಅಪ್ಲಿಕೇಶನ್‌ಗಳಿಗಾಗಿ ಕಠಿಣ ಸ್ಕ್ರೀನಿಂಗ್ ಪ್ರಕ್ರಿಯೆಗಳನ್ನು ಹೊಂದಿರುವ ಇತರ ವಿಶ್ವಾಸಾರ್ಹ ಪ್ಲಾಟ್‌ಫಾರ್ಮ್‌ಗಳಿಂದ ಮಾತ್ರ ಇನ್‌ಸ್ಟಾಲ್ ಮಾಡುವ ಕೆಲಸ ಮಾಡಿ. ಇದರ ಬದಲಾಗಿ ಮೂರನೇ ವ್ಯಕ್ತಿಯ ವೆಬ್‌ಸೈಟ್‌ಗಳು ಅಥವಾ ಅನಧಿಕೃತ ಸ್ಟೋರ್‌ಗಳಿಂದ ಆಪ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ.

ಆಪ್‌ನ ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ: ಯಾವುದೇ ಆಪ್ ಅನ್ನು ಇನ್‌ಸ್ಟಾಲ್ ಮಾಡುವ ಮುನ್ನ ಅದರ ರೇಟಿಂಗ್‌ಗಳನ್ನು ಪರಿಶೀಲಿಸಿ ಮತ್ತು ಬಳಕೆದಾರರ ವಿಮರ್ಶೆಗಳನ್ನು ಓದಿ. ಇದು ಅಪ್ಲಿಕೇಶನ್‌ನ ಗುಣಮಟ್ಟ ಮತ್ತು ಇತರ ಬಳಕೆದಾರರು ಅದರೊಂದಿಗೆ ಸಕಾರಾತ್ಮಕ ಅನುಭವಗಳನ್ನು ಹೊಂದಿದ್ದಾರೆಯೇ ಎಂಬ ಕಲ್ಪನೆಯನ್ನು ನಿಮಗೆ ನೀಡುತ್ತದೆ.ಇದನ್ನು ನೋಡಿದ ಮೇಲೆ ನಿಮಗೆ ಈ ಆಪ್ ಅಗತ್ಯವೋ ಇಲ್ಲವೋ ಎಂಬುದನ್ನು ನಿರ್ಧರಿಸಬಹುದು.
ನಿಮ್ಮ ಡಿವೈಸ್ ಅನ್ನು ಅಪ್‌ಡೇಟ್ ಮಾಡಿ: ಇದರೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡಿ. ನವೀಕರಣಗಳು ಸಾಮಾನ್ಯವಾಗಿ ಈಗಾಗಲೇ ಕಂಡು ಬಂದಿರುವ ದೋಷಗಳನ್ನು ಪರಿಹರಿಸುವ ಭದ್ರತಾ ಪ್ಯಾಚ್‌ಗಳನ್ನು ಒಳಗೊಂಡಿರುತ್ತವೆ. ಇದರಿಂದಾಗಿ ನೀವು ನಿಮ್ಮ ಫೋನ್ ಅನ್ನು ತುಂಬಾ ಸೇಫ್ ಆಗಿ ಬಳಕೆ ಮಾಡಲು ಅನುಕೂಲ ಆಗುತ್ತದೆ.


Click it and Unblock the Notifications








