15 ರ ಬುದ್ಧಿವಂತೆಯ ಅಪ್ಲಿಕೇಶನ್ ಹದಿಹರೆಯದವರಿಗೆ ಶ್ರೀರಕ್ಷೆ

Written By:

ಸೈಬರ್ ಕಿರುಕುಳಕ್ಕೆ ಅಂತ್ಯಹಾಡುವ ನಿಟ್ಟಿನಲ್ಲಿ ಭಾರತೀಯ ಮೂಲದ ಅಮೇರಿಕನ್ ನಿವಾಸಿಯಾಗಿರುವ 15ರ ಹರೆಯದ ತ್ರಿಶಾ ಪ್ರಭು ಅದ್ಭುತ ಯೋಜನೆಯೊಂದನ್ನು ರೂಪಿಸಿದ್ದಾರೆ. ಅಮೇರಿಕಾದ ಇಲಿಯನ್ಸ್ ಸ್ಕೂಲ್‌ನ ವಿದ್ಯಾರ್ಥಿನಿಯಾಗಿರುವ ತ್ರಿಶಾ ರಿಥಿಂಕ್ ಎನ್ನುವ ಸಾಫ್ಟ್‌ವೇರ್ ಪ್ರೊಗ್ರಾಮ್ ಅನ್ನು ಸೈಬರ್ ಕಿರುಕುಳವನ್ನು ತಡೆಹಿಡಯುವುದಕ್ಕಾಗಿ ಬಳಸಿದ್ದಾರೆ.

ಓದಿರಿ: ಆನ್‌ಲೈನ್‌ ಹಿಂಸೆಯಲ್ಲಿ ಹೆಚ್ಚು ಮಹಿಳೆಯರೇ ಬಲಿಪಶು

ಬನ್ನಿ ಸೈಬರ್ ಕಿರುಕುಳಕ್ಕೆ ಅಂತ್ಯಹಾಡುವ ಈ ಸಾಫ್ಟ್‌ವೇರ್ ಹೇಗೆ ಕೆಲಸ ಮಾಡುತ್ತದೆ ಮತ್ತು ಇದನ್ನು ರೂಪಿಸಲು ತ್ರಿಶಾಗೆ ಉಪಾಯ ಹೇಗೆ ಹೊಳೆಯಿತು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರೊಗ್ರಾಮ್ ಕೆಲಸ

ಪ್ರೊಗ್ರಾಮ್ ಕೆಲಸ ಮಾಡುವುದು ಹೇಗೆ?

ಈ ಪ್ರೊಗ್ರಾಮ್ ಹೇಗೆ ಕೆಲಸ ಮಾಡುತ್ತದೆ ಎಂದರೆ ಸೈಬರ್ ಕಿರುಕುಳಕ್ಕಾಗಿ ಹೆಚ್ಚು ಬಳಸಲಾದ ನುಡಿಗಟ್ಟನ್ನು ಬಳಕೆದಾರರು ನಮೂದಿಸಿದಾಗ ಇದನ್ನು ಟೆಕ್ಸ್ಟ್ ಬಾಕ್ಸ್‌ನಂತೆ ಪರಿವರ್ತಿಸುತ್ತದೆ ಮತ್ತು ಬರಹಗಾರರು ಅದನ್ನು ಮರುಪರಿಶೀಲಿಸುವಂತೆ ಕೇಳುವ ಪಾಪ್ ಅಪ್ ವಿಂಡೋ ಪ್ರದರ್ಶನಗೊಳ್ಳುತ್ತದೆ.

ಯುವ ವಿದ್ಯಾರ್ಥಿಯ ದುರಂತ ಸಾವು

ಯೋಜನೆ ಸಿದ್ಧಗೊಂಡಿದ್ದು ಹೇಗೆ

ಇಂಟರ್ನೆಟ್‌ನಲ್ಲಿ 2013 ರಲ್ಲಿ ಸೈಬರ್ ಕಿರುಕುಳಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಯುವ ವಿದ್ಯಾರ್ಥಿಯ ದುರಂತ ಸಾವು ತ್ರಿಶಾ ಮನಸ್ಸಿನಲ್ಲಿ ಕಿರುಕುಳಕ್ಕೆ ತಕ್ಕ ಶಾಸ್ತಿಯನ್ನು ಕಲಿಸುವ ಯೋಜನೆ ರೂಪಿಸಲು ನೆರವಾಗಿದೆ.

ಕಿರುಕುಳದ ವಿರುದ್ಧ ಹೋರಾಡುವ ಸಾಫ್ಟ್‌ವೇರ್

ಅಪ್ಲಿಕೇಶನ್ ಎಲ್ಲೆಲ್ಲಿ ಲಭ್ಯ

ಇದಕ್ಕಾಗಿ ಏನಾದರೂ ವಿಶೇಷವಾಗಿರುವುದನ್ನು ರೂಪಿಸಬೇಕು ಎಂಬುದು ತ್ರಿಶಾ ಮನದಲ್ಲಿ ಬಂದಿದ್ದು ಅದಕ್ಕಾಗಿಯೇ ಈ ಬುದ್ಧಿವಂತೆ ಆನ್‌ಲೈನ್‌ನಲ್ಲಿ ಕಿರುಕುಳದ ವಿರುದ್ಧ ಹೋರಾಡುವ ಸಾಫ್ಟ್‌ವೇರ್ ಅನ್ನು ಸಿದ್ಧಪಡಿಸಿದ್ದಾರೆ. ಈ ಅಪ್ಲಿಕೇಶನ್ ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು ಆಪಲ್ ಡಿವೈಸ್‌ಗಳಿಗೆ ಸದ್ಯದಲ್ಲಿಯೇ ಲಭ್ಯವಾಗಲಿದೆ.

ವಿಶ್ವವ್ಯಾಪಿ ಎಚ್ಚರಗೊಳಿಸುವ ಕರೆಯು

ಮಹಿಳೆ ಮತ್ತು ಹುಡುಗಿಯರ ಸೈಬರ್‌ ಹಿಂಸೆಯ ವರದಿ

ವಿಶ್ವಸಂಸ್ಥೆಯ ಬ್ರಾಡ್ಬ್ಯಾಂಡ್ ಆಯೋಗದ, 'ವಿಶ್ವವ್ಯಾಪಿ ಎಚ್ಚರಗೊಳಿಸುವ ಕರೆಯು' ಭಾರತದಲ್ಲಿ ಶೇಕಡ 35 ರಷ್ಟು ಮಹಿಳೆಯರು ಪ್ರಕರಣ ದಾಖಲಿಸುತ್ತಿದ್ದು, ಇನ್ನುಳಿದ ಶೇಕಡ 46.7 ರಷ್ಟು ಮಹಿಳೆಯರು ಪ್ರಕರಣ ದಾಖಲಿಸುತ್ತಿಲ್ಲ ಎಂದು ಹೇಳಿದೆ.

ಸೈಬರ್‌ ಹಿಂಸೆ

ಮಹಿಳೆಯರಿಗೆ ತಾವು ಸೈಬರ್‌ ಹಿಂಸೆಗೆ ಒಳಗಾಗಿರುವ ಬಗ್ಗೆ ಅರಿವು ಇಲ್ಲ

ಅಲ್ಲದೆ ಇನ್ನುಳಿದ ಶೇಕಡ 18.3 ರಷ್ಟು ಮಹಿಳೆಯರಿಗೆ ತಾವು ಸೈಬರ್‌ ಹಿಂಸೆಗೆ ಒಳಗಾಗಿರುವ ಬಗ್ಗೆ ಅರಿವು ಇಲ್ಲ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಸುರಕ್ಷತೆ

ಗರಿಷ್ಟ ಶೇಕಡ 67

ನಂಬುವಂತ ವಿಷಯ ಏನೆಂದರೆ ಸುರಕ್ಷತೆಗಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಗರಿಷ್ಟ ಶೇಕಡ 67 ಇರುವ ಆರು ದೇಶಗಳಲ್ಲಿ ಭಾರತವು ಒಂದಾಗಿದೆ.

ಅಭಿಪ್ರಾಯ ವ್ಯಕ್ತಪಡಿಸುವ ಇತರ ದೇಶಗಳು

ಸುರಕ್ಷತೆಗಾಗಿ ಅಭಿಪ್ರಾಯ ವ್ಯಕ್ತಪಡಿಸುವ ಇತರ ದೇಶಗಳು

ಪಾಕಿಸ್ತಾನ, ಪೆರು, ನೈಜೀರಿಯಾ, ಇಂಡೋನೇಶಿಯಾ ಮತ್ತು ಕೀನ್ಯಾ

ಅಂತರ್ಜಾಲ ಮತ್ತು ಡಿಜಿಟಲ್‌ ಸಂವಹನ

ಡಾಟಾ ಗೌಪ್ಯತೆ

ಡಾಟಾ ಗೌಪ್ಯತೆಗೆ ಸಂಬಂಧಿಸಿದಂತೆ ಅಂತರ್ಜಾಲ ಮತ್ತು ಡಿಜಿಟಲ್‌ ಸಂವಹನದ ಮುಖಾಂತರ ಅಪರಾಧ ಚಟುವಟಿಕೆಗಳಿಗೆ ಭಾರತದಲ್ಲಿ ಇನ್ನು ಸಹ ಕಾನೂನು ಬಲಪಡಿಸಬೇಕಾಗಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.

ಅಸಂಭವನೀಯ ಶಿಕ್ಷೆ

ಟ್ರ್ಯಾಕಿಂಗ್ ವಲ್ಡ್‌ವೈಡ್‌ ಸೆಂಟರ್ ವರದಿ

ಇಂಟರ್‌ನೆಟ್‌ ಬಳಕೆದಾರರಲ್ಲಿ 18 ರಿಂದ 24 ವಯಸ್ಸಿನ ಐದು ಮಹಿಳೆಯರಲ್ಲಿ ಒಬ್ಬರು ಹಿಂಬಾಲಿಸುವಿಕೆ, ಕಿರುಕುಳ, ದೈಹಿಕ ಬೆದರಿಕೆಗಳು, ಲೈಂಗಿಕ ಕಿರುಕುಳಗಳಂತಹ ಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ಟ್ರ್ಯಾಕಿಂಗ್ ವಲ್ಡ್‌ವೈಡ್‌ ಸೆಂಟರ್ ವರದಿ ಹೇಳಿದೆ. ಅಲ್ಲದೆ ಅಂತಹ ಕೃತ್ಯಗಳನ್ನು ಎಸಗಿದವರು ಅಸಂಭವನೀಯ ಶಿಕ್ಷೆಗೆ ಒಳಗಾಗುತ್ತಾರೆ.

ಅಂತರ್ಜಾಲ ಸ್ವಾತಂತ್ರ್ಯದ ಭರವಸೆ

ಆನ್‌ಲೈನ್‌ ಹಿಂಸಾಚಾರವು ಅಂತರ್ಜಾಲ ಸ್ವಾತಂತ್ರ್ಯದ ಭರವಸೆಯನ್ನು ಹಾಳುಮಾಡುತ್ತಿದೆ.

ಆನ್‌ಲೈನ್‌ ಹಿಂಸಾಚಾರವು ಅಂತರ್ಜಾಲ ಸ್ವಾತಂತ್ರ್ಯದ ಭರವಸೆಯನ್ನು ಹಾಳುಮಾಡುತ್ತಿದೆ. ಅಲ್ಲದೆ ಅನಾಮಧೇಯರನ್ನು ಒಲಗೊಂಡಿದ್ದು, ಮಹಿಳೆಯರ ಕಿರುಕುಳಕ್ಕೆ ಸುಗಮವಾಗುವಂತ ಅವಕಾಶಗಳು ಹೆಚ್ಚಿವೆ ಎಂದು ವಿಶ್ವ ಸಂಸ್ಥೆಯ Women's Phumzile Mlambo-Ngcuka ಹೇಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
15- year-old Trisha Prabhu - an Indian-origin teenager in US - is a girl on a mission; to put an end to cyber bullying.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot