Subscribe to Gizbot

ಆನ್‌ಲೈನ್‌ ಹಿಂಸೆಯಲ್ಲಿ ಹೆಚ್ಚು ಮಹಿಳೆಯರೇ ಬಲಿಪಶು

Posted By:

ಸೈಬರ್‌ ಕ್ರೈಂ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇವೆ. ಪ್ರಪಂಚದಾದ್ಯಂತ ಶೇಕಡ 75 ರಷ್ಟು ಮಹಿಳೆಯರು ಆನ್‌ಲೈನ್‌ ಹಿಂಸೆಗೆ ಒಳಗಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ನೀಡಿದೆ.

ಓದಿರಿ: ಶೂನಲ್ಲಿ ಹಿಡನ್ ಕ್ಯಾಮೆರಾ ಬಳಸಿ ಅಶ್ಲೀಲ ಫೋಟೋ ತೆಗೆದ ಕಿಲಾಡಿ ವಕೀಲ

86 ದೇಶಗಳಲ್ಲಿ ಶೇಕಡ 26 ಮಾತ್ರ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಎಜೆನ್ಸಿ ಹೇಳಿದ್ದು, ಸೈಬರ್‌ ಬೆದರಿಕೆಯ ವರದಿಯಲ್ಲಿ ಕಡಿಮೆ ಇರುವ ದೇಶಗಳಲ್ಲಿ ಭಾರತವು ಒಂದಾಗಿದೆ. ಈ ಬಗ್ಗೆ ವಿಶ್ವ ಸಂಸ್ಥೆಯು ವರದಿಯೊಂದನ್ನು ಪ್ರಕಟಿಸಿದ್ದು, ಈ ಲೇಖನದಲ್ಲಿ ನಿಮಗೆ ವಿಶ್ವಸಂಸ್ಥೆಯು ವರದಿಯಲ್ಲಿ ಹೇಳಿರುವ ಮಾಹಿತಿಯನ್ನು ತಿಳಿಸಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಹಿಳೆ ಮತ್ತು ಹುಡುಗಿಯರ ಸೈಬರ್‌ ಹಿಂಸೆಯ ವರದಿ

ಮಹಿಳೆ ಮತ್ತು ಹುಡುಗಿಯರ ಸೈಬರ್‌ ಹಿಂಸೆಯ ವರದಿ

ವಿಶ್ವಸಂಸ್ಥೆಯ ಬ್ರಾಡ್ಬ್ಯಾಂಡ್ ಆಯೋಗದ, 'ವಿಶ್ವವ್ಯಾಪಿ ಎಚ್ಚರಗೊಳಿಸುವ ಕರೆಯು' ಭಾರತದಲ್ಲಿ ಶೇಕಡ 35 ರಷ್ಟು ಮಹಿಳೆಯರು ಪ್ರಕರಣ ದಾಖಲಿಸುತ್ತಿದ್ದು, ಇನ್ನುಳಿದ ಶೇಕಡ 46.7 ರಷ್ಟು ಮಹಿಳೆಯರು ಪ್ರಕರಣ ದಾಖಲಿಸುತ್ತಿಲ್ಲ ಎಂದು ಹೇಳಿದೆ.

ಮಹಿಳೆಯರಿಗೆ ತಾವು ಸೈಬರ್‌ ಹಿಂಸೆಗೆ ಒಳಗಾಗಿರುವ ಬಗ್ಗೆ ಅರಿವು ಇಲ್ಲ

ಮಹಿಳೆಯರಿಗೆ ತಾವು ಸೈಬರ್‌ ಹಿಂಸೆಗೆ ಒಳಗಾಗಿರುವ ಬಗ್ಗೆ ಅರಿವು ಇಲ್ಲ

ಅಲ್ಲದೆ ಇನ್ನುಳಿದ ಶೇಕಡ 18.3 ರಷ್ಟು ಮಹಿಳೆಯರಿಗೆ ತಾವು ಸೈಬರ್‌ ಹಿಂಸೆಗೆ ಒಳಗಾಗಿರುವ ಬಗ್ಗೆ ಅರಿವು ಇಲ್ಲ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಗರಿಷ್ಟ ಶೇಕಡ 67

ಗರಿಷ್ಟ ಶೇಕಡ 67

ನಂಬುವಂತ ವಿಷಯ ಏನೆಂದರೆ ಸುರಕ್ಷತೆಗಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಗರಿಷ್ಟ ಶೇಕಡ 67 ಇರುವ ಆರು ದೇಶಗಳಲ್ಲಿ ಭಾರತವು ಒಂದಾಗಿದೆ.

ಸುರಕ್ಷತೆಗಾಗಿ ಅಭಿಪ್ರಾಯ ವ್ಯಕ್ತಪಡಿಸುವ ಇತರ ದೇಶಗಳು

ಸುರಕ್ಷತೆಗಾಗಿ ಅಭಿಪ್ರಾಯ ವ್ಯಕ್ತಪಡಿಸುವ ಇತರ ದೇಶಗಳು

ಪಾಕಿಸ್ತಾನ, ಪೆರು, ನೈಜೀರಿಯಾ, ಇಂಡೋನೇಶಿಯಾ ಮತ್ತು ಕೀನ್ಯಾ

ಡಾಟಾ ಗೌಪ್ಯತೆ

ಡಾಟಾ ಗೌಪ್ಯತೆ

ಡಾಟಾ ಗೌಪ್ಯತೆಗೆ ಸಂಬಂಧಿಸಿದಂತೆ ಅಂತರ್ಜಾಲ ಮತ್ತು ಡಿಜಿಟಲ್‌ ಸಂವಹನದ ಮುಖಾಂತರ ಅಪರಾಧ ಚಟುವಟಿಕೆಗಳಿಗೆ ಭಾರತದಲ್ಲಿ ಇನ್ನು ಸಹ ಕಾನೂನು ಬಲಪಡಿಸಬೇಕಾಗಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.

ಟ್ರ್ಯಾಕಿಂಗ್ ವಲ್ಡ್‌ವೈಡ್‌ ಸೆಂಟರ್ ವರದಿ

ಟ್ರ್ಯಾಕಿಂಗ್ ವಲ್ಡ್‌ವೈಡ್‌ ಸೆಂಟರ್ ವರದಿ

ಇಂಟರ್‌ನೆಟ್‌ ಬಳಕೆದಾರರಲ್ಲಿ 18 ರಿಂದ 24 ವಯಸ್ಸಿನ ಐದು ಮಹಿಳೆಯರಲ್ಲಿ ಒಬ್ಬರು ಹಿಂಬಾಲಿಸುವಿಕೆ, ಕಿರುಕುಳ, ದೈಹಿಕ ಬೆದರಿಕೆಗಳು, ಲೈಂಗಿಕ ಕಿರುಕುಳಗಳಂತಹ ಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ಟ್ರ್ಯಾಕಿಂಗ್ ವಲ್ಡ್‌ವೈಡ್‌ ಸೆಂಟರ್ ವರದಿ ಹೇಳಿದೆ. ಅಲ್ಲದೆ ಅಂತಹ ಕೃತ್ಯಗಳನ್ನು ಎಸಗಿದವರು ಅಸಂಭವನೀಯ ಶಿಕ್ಷೆಗೆ ಒಳಗಾಗುತ್ತಾರೆ.

ಆನ್‌ಲೈನ್‌ ಹಿಂಸಾಚಾರವು ಅಂತರ್ಜಾಲ ಸ್ವಾತಂತ್ರ್ಯದ ಭರವಸೆಯನ್ನು ಹಾಳುಮಾಡುತ್ತಿದೆ.

ಆನ್‌ಲೈನ್‌ ಹಿಂಸಾಚಾರವು ಅಂತರ್ಜಾಲ ಸ್ವಾತಂತ್ರ್ಯದ ಭರವಸೆಯನ್ನು ಹಾಳುಮಾಡುತ್ತಿದೆ.

ಆನ್‌ಲೈನ್‌ ಹಿಂಸಾಚಾರವು ಅಂತರ್ಜಾಲ ಸ್ವಾತಂತ್ರ್ಯದ ಭರವಸೆಯನ್ನು ಹಾಳುಮಾಡುತ್ತಿದೆ. ಅಲ್ಲದೆ ಅನಾಮಧೇಯರನ್ನು ಒಲಗೊಂಡಿದ್ದು, ಮಹಿಳೆಯರ ಕಿರುಕುಳಕ್ಕೆ ಸುಗಮವಾಗುವಂತ ಅವಕಾಶಗಳು ಹೆಚ್ಚಿವೆ ಎಂದು ವಿಶ್ವ ಸಂಸ್ಥೆಯ Women's Phumzile Mlambo-Ngcuka ಹೇಳಿದ್ದಾರೆ.

 ನೈಜ ಪರಿಣಾಮಗಳ ಜೊತೆಗೆ ಶಕ್ತಿಯುತವಾಗಿ ಆನ್‌ಲೈನ್‌ ನಿಂದನೆಯನ್ನು ನಿಲ್ಲಿಸಬೇಕಿದೆ

ನೈಜ ಪರಿಣಾಮಗಳ ಜೊತೆಗೆ ಶಕ್ತಿಯುತವಾಗಿ ಆನ್‌ಲೈನ್‌ ನಿಂದನೆಯನ್ನು ನಿಲ್ಲಿಸಬೇಕಿದೆ

ಅಲ್ಲದೆ ಇದು ನೀಡಿರುವ ಅವಕಾಶಗಳನ್ನು ಮತ್ತೊಮ್ಮೆ ನಾಗರಿಕಗೊಳಿಸಬೇಕಿದೆ. ನೈಜ ಪರಿಣಾಮಗಳ ಜೊತೆಗೆ ಶಕ್ತಿಯುತವಾಗಿ ಆನ್‌ಲೈನ್‌ ನಿಂದನೆಯನ್ನು ನಿಲ್ಲಿಸಬೇಕಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಮೂರು ಎಸ್‌ಗಳ ಆಧಾರ

ಮೂರು ಎಸ್‌ಗಳ ಆಧಾರ

ವಿಶ್ವಸಂಸ್ಥೆಯ ವರದಿಯು ಜಾಗತಿಕ ಚೌಕಟ್ಟನ್ನು ಪ್ರಸ್ತಾಪಿಸುವುದರೊಂದಿಗೆ ಮೂರು ಎಸ್‌ಗಳ ಆಧಾರದ ಮೇಲೆ ಸಂವೇದನಾಶೀಲತೆ(Sensitization), ರಕ್ಷಣೋಪಾಯ(Safeguards) ಮತ್ತು ನಿಷೇಧದಂತಹ(Sanctions) ಶಿಪಾರಸ್ಸುಗಳನ್ನು ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A new UN report reveals that almost three quarters women online are exposed to some form of cyber violence worldwide and only 26% law enforcement agencies in 86 countries surveyed are taking appropriate action. India is one of the countries where reporting about cyber bullying is low.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot