ಗೂಗಲ್ ಮ್ಯಾಪ್ಸ್‌ನಲ್ಲಿ ನಮಗೆ ಕೇಳಿಸುವ ಹೆಣ್ಣಿನ ಧ್ವನಿ ಯಾರದ್ದು ಗೊತ್ತಾ?..ಇಂಟ್ರೆಸ್ಟಿಂಗ್ ಸೋರಿ!!
ಗೂಗಲ್ ಮ್ಯಾಪ್ ಬಳಸುವ ಪ್ರತಿಯೋರ್ವರಿಗೂ ಈ ಧ್ವನಿ ಒಮ್ಮೆ ಕಿವಿಯಲ್ಲಿ ಗುನುಗುತ್ತದೆ ಅಲ್ಲವೆ? ಹಾಗಾದರೆ, ಆ ಹೆಣ್ಣಿನ ಧ್ವನಿ ಯಾರದ್ದು ಎಂಬ ಕುತೋಹಲ ನಿಮಗೆ ಉಂಟಾಗಿದ್ದರೆ!
ಒಂದು ಕಾಲದಲ್ಲಿ ನಮಗೆ ಗೊತ್ತಿಲ್ಲದ ಯಾವುದಾದರೂ ಪ್ರದೇಶಕ್ಕೆ ಹೋದರೆ ದಾರಿಯಲ್ಲಿ ಕಾಣಿಸುವವರನ್ನು ವಿಳಾಸ ಕೇಳುತ್ತಾ ಹೋಗುತ್ತಿದ್ದೆವು. ಅದರೆ ಈಗ ಆ ರೀತಿ ಇಲ್ಲ. ಕೈಯಲ್ಲಿ ಸ್ಮಾರ್ಟ್‌ಫೋನ್, ಅದರಲ್ಲಿ ಗೂಗಲ್ ಮ್ಯಾಪ್ಸ್ ಇದ್ದರೆ ಸಾಕು. ನಾವು ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನ ಯಾವುದಾದರೂ ವಿಳಾಸ ಸುಲಭವಾಗಿ ಪತ್ತೆಹಚ್ಚಬಹುದು.
ಇಂತಹ ಗೂಗಲ್ ಮ್ಯಾಪ್ಸ್‌ನಲ್ಲಿ ನಮಗೆ ಲಭಿಸುತ್ತಿರುವ ಮುಖ್ಯವಾದ ಫೀಚರ್ ನಾವಿಗೇಷನ್.! ನಾವು ಯಾವ ಮಾರ್ಗದಲ್ಲಿ ಹೋಗಬೇಕು ಎಂದುಕೊಂಡರೆ ನಾವಿಗೇಷನ್ ಆನ್ ಮಾಡಿದರೆ ಸಾಕು ನಮಗೆ ಒಂದು ಹೆಣ್ಣಿ ಧ್ವನಿ ಕೇಳಿಸುತ್ತದೆ. ಇಂತಹ ದಾರಿಯಲ್ಲಿ ಹೋಗಿ ಎಂದು, ಇಂತಹ ಸ್ಟಾಪ್ ಬಳಿ ತಿರುವು ತೆಗೆದುಕೊಳ್ಳಿ ಎಂದು ನಿಲ್ಲಿ ಎಂದು ಹೇಳುತ್ತಾ ಡೈರೆಕ್ಷನ್ ನೀಡುತ್ತದೆ.

ಗೂಗಲ್ ಮ್ಯಾಪ್ ಬಳಸುವ ಪ್ರತಿಯೋರ್ವರಿಗೂ ಈ ಧ್ವನಿ ಒಮ್ಮೆ ಕಿವಿಯಲ್ಲಿ ಗುನುಗುತ್ತದೆ ಅಲ್ಲವೆ? ಹಾಗಾದರೆ, ಆ ಹೆಣ್ಣಿನ ಧ್ವನಿ ಯಾರದ್ದು ಎಂಬ ಕುತೋಹಲ ನಿಮಗೆ ಉಂಟಾಗಿದ್ದರೆ, ಗೂಗಲ್ ಮ್ಯಾಪಿನಲ್ಲಿ ಬಳಸಿರುವ ನೀವು ಕೇಳವ ಆ ಮಹಿಳೆ ಯಾರು ಮತ್ತು ಆ ಮಹಿಳೆ ಹೇಗಿದ್ದಾರೆ ಎಂಬುದನ್ನು ಇಂದಿನ ಲೇಖನದಲ್ಲಿ ಆ ಮಾಹಿತಿಯನ್ನು ನಾವು ತಿಳಿಯೋಣ.
ಗೂಗಲ್ ಮ್ಯಾಪ್ಸ್‌ನ ನ್ಯಾವಿಗೇಷನ್‌ನಲ್ಲಿ ನಮಗೆ ಕೇಳಿಸುವ ಆ ಹೆಣ್ಣು ಧ್ವನಿ ಆಸ್ಟ್ರೇಲಿಯಾ ಮೂಲದ ಕಾರೆನ್ ಜಾಕಬ್‌ಸನ್ ಎಂಬ ಗಾಯಕಿಯದು. ಆಸ್ಟ್ರೇಲಿಯಾದಲ್ಲಿನ ಕ್ವೀನ್ಸ್‌ಲ್ಯಾಂಡ್ ಮೂಲಕ ಕಾರೆನ್ ಜಾಕಬ್‌ಸನ್ ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದು, ಒಳ್ಳೆಯ ಗಾಯಕಿ ಅಷ್ಟೇ ಅಲ್ಲದೇ, ವಾಯ್ಸ್ ಓವರ್ ಕಲಾವಿದೆಯಾಗಿ, ಸಾಂಗ್ ರೈಟರ್ ಆಗಿ ಹೆಸರು ಗಳಿಸಿದ್ದವರು.

ಗೂಗಲ್ ಮ್ಯಾಪ್ಸ್ ವಾಯಿಸ್ ಸೇವೆಗೆ ಧ್ವನಿಗಾಗಿ ಗೂಗಲ್ ಹುಡುಕುತ್ತಿದ್ದಾಗ, ಕಾರೆನ್ ವಾಯ್ಸ್ ಅವರ ಚೆನ್ನಾಗಿ ಸೆಟ್ ಆಗುತ್ತದೆಂದು ಭಾವಿಸಿದ ಗೂಗಲ್ ಕಂಪೆನಿ ಆಕೆ ವಾಯ್ಸನ್ನು ಗೂಗಲ್ ಮ್ಯಾಪ್ಸ್‌ನ ನ್ಯಾವಿಗೇಷನ್‌ನಲ್ಲಿ ವ್ಯವಸ್ಥೆ ಮಾಡಿತು. ನಂತರ ಗೂಗಲ್ ಮ್ಯಾಪ್ಸ್‌ನಲ್ಲಿ ಕೇಳಿಸುವ ಬ್ಯಾಕ್ ಗ್ರೌಂಡ್ ಧ್ವನಿಗೆ ಕಾರೆನ್ ವಾಯ್ಸ್ ಅವರ ಧ್ವನಿಯೇ ಪಕ್ಕಾ ಆಯಿತು.

ತನ್ನ ವಾಯ್ಸ್‌ನ್ನು ಗೂಗಲ್ ಮ್ಯಾಪ್ಸ್‌ಗೆ ಕೊಟ್ಟ ಕಾರಣ, ಕಾರೆನ್ ಜಾಕಬ್‌ಸನ್ ಅವರನ್ನು ಇಂದು ಜಿಪಿಎಸ್ ಗರ್ಲ್ ಎಂದೂ ಕರೆಯುತ್ತಾರೆ. ಜಿಪಿಎಸ್ ಗರ್ಲ್ ಎಂದರೆ ಆಸ್ಟ್ರೇಲಿಯಾದಲ್ಲಷ್ಟೇ ಅಲ್ಲ ಅಮೆರಿಕಾದಲ್ಲೂ ಎಲ್ಲರಿಗೂ ಜಾಕಬ್ ನೆನಪಾಗುತ್ತಾರೆ. ಅದೇನೇ ಇರಲಿ ಆಕೆಯ (ಗೂಗಲ್ ಮ್ಯಾಪ್ಸ್ ವಾಯ್ಸ್) ಧ್ವನಿಯಂತೂ ತುಂಬಾ ಚೆನ್ನಾಗಿದೆ ಅಲ್ಲವೇ..?
ಓದಿರಿ: ಗೂಗಲ್‌ನ ಈ ಅತ್ಯುತ್ತಮ 5 ಸೇವೆಗಳನ್ನು ನೀವು ಬಳಸದೇ ಇರಬಹುದು!!


Click it and Unblock the Notifications








