ಗೂಗಲ್‌ನ ಈ ಅತ್ಯುತ್ತಮ 5 ಸೇವೆಗಳನ್ನು ನೀವು ಬಳಸದೇ ಇರಬಹುದು!!

|

ಗೂಗಲ್ ಇಲ್ಲದೆ ಜೀವನವೇ ಮುಂದೆ ಸಾಗದು ಎಂಬಂತಹಾ ಪರಿಸ್ಥಿತಿ ನಿರ್ಮಾಣವಾಗಿರುವುದು ಹೆಚ್ಚಿನವರಿಗೆ ಗೊತ್ತು. ಅಂತರ್ಜಾಲದಲ್ಲಿ ಮಾಹಿತಿಯ ಹುಡುಕಾಟಕ್ಕೆ ಸಂಬಂಧಿಸಿದಂತೆ ಗೂಗ್ಲಿಸುವುದು ಎಂಬ ಕ್ರಿಯಾಪದವೇ ಹುಟ್ಟಿಕೊಂಡಿದೆ ಎಂದಾದರೆ, ಸರ್ಚ್ ಎಂಜಿನ್ ಗೂಗಲ್‌ನ ಸಾಮರ್ಥ್ಯ ಮತ್ತು ವ್ಯಾಪ್ತಿ ಎಷ್ಟೆಂಬುದು ಅರ್ಥವಾಗುತ್ತದೆ.

ಗೂಗಲ್ ಸರ್ಚ್, ಜಿಮೇಲ್, ಮ್ಯಾಪ್ಸ್, ಗೂಗಲ್ ಹೋಮ್, ಗೂಗಲ್ ಡಾಕ್ಸ್ ಹೀಗೆ ಹೇಳುತ್ತಿದ್ದರೆ ನೂರಾರು ಸೇವೆಗಳು ನಿಮಗೆ ಸಿಗುತ್ತವೆ. ಆದರೆ, ಇವುಗಳಲ್ಲಿ ಕೆಲವೊಂದು ಅತ್ಯುತ್ತಮ ಗೂಗಲ್ ಸೇವೆಗಳನ್ನು ನೀವು ಮಿಸ್ ಮಾಡಿಕೊಳ್ಳಬಹುದು. ಏಕೆಂದರೆ, ಗೂಗಲ್ ಮತ್ತೆ ಅಪ್‌ಡೇಟ್ ಆಗುಗಿರುವ ಸುದ್ದಿ ನಿಮ್ಮಿಂದ ದೂರವಿರಬಹುದು.

ಗೂಗಲ್‌ನ ಈ ಅತ್ಯುತ್ತಮ 5 ಸೇವೆಗಳನ್ನು ನೀವು ಬಳಸದೇ ಇರಬಹುದು!!

ಹಾಗಾಗಿ, ಇಂದಿನ ಲೇಖನದಲ್ಲಿ ಗೂಗಲ್‌ನಿಂದ ಸಿಗುತ್ತಿರುವ ಇನ್ನಿತರ ಪ್ರಮುಖ ಸೇವೆಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಈ ಸೇವೆಗಳ ಬಗ್ಗೆ ನಿಮಗೆ ತಿಳಿದಿದ್ದರೂ ಕೂಡ , ಇವುಗಳ ಅಪ್‌ಡೇಟ್ ಬಗ್ಗೆ ನಿವು ತಿಳಿಯದಿರಬಹುದು. ಹಾಗಾದರೆ, ಬಹುತೇಕರು ಬಳಸದೇ ಇರುವ ಗೂಗಲ್‌ 5 ಸೇವೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಫೈಂಡ್ ಮೈ ಡಿವೈಸ್

ಫೈಂಡ್ ಮೈ ಡಿವೈಸ್

ನಿಮ್ಮ ಹೊಸ ಆಂಡ್ರಾಯ್ಡ್ ಫೋನ್‌ನ ಜವಾಬ್ದಾರಿಗೆ ಫೈಂಡ್ ಮೈ ಡಿವೈಸ್ ಆಪ್‌ ಲಭ್ಯವಿದೆ. ಇದೊಂದು ಟ್ರ್ಯಾಕಿಂಗ್‌ ಆಪ್‌ ಆಗಿದ್ದು, ಇದರಿಂದ ಕಳೆದುಹೋದ ಮೊಬೈಲ್‌ ಪಡೆದುಕೊಳ್ಳಬಹುದು. ಈ ಆಪ್‌ ಡೌನ್‌ಲೋಡ್‌ ಮಾಡಿದ ಬಳಿಕ ಪಿಸಿಗೆ ಸಿಂಕ್ರೋನೈಸ್ ಮಾಡಲಾಗುತ್ತದೆ. ಒಂದು ಸಲ ನಿಮ್ಮ ಕಂಪ್ಯೂಟರ್‌ಗೆ ಕನೆಕ್ಟ್ ಆದರೆ ಮತ್ತೆ ನಿಮ್ಮ ಫೋನ್‌ನ ಎಲ್ಲಾ ಮಾಹಿತಿಯನ್ನು ಅದು ನಿಮ್ಮ ಕಂಪ್ಯೂಟರ್‌ಗೆ ರವಾನಿಸುತ್ತದೆ.

ಗೂಗಲ್‌ ಮ್ಯಾಪ್‌!

ಗೂಗಲ್‌ ಮ್ಯಾಪ್‌!

ಈಗ ಗೂಗಲ್‌ ಮ್ಯಾಪ್‌ ಬಗ್ಗೆ ತಿಳಿಯದವರೇ ಇಲ್ಲ ಎನ್ನಬಹುದು. ಆದರೂ, ಮ್ಯಾಪ್ಸ್ ಯಾವ ರೀತಿ ಉಪಯೋಗ ಮಾಡಬೇಕು ಎಂಬುದಕ್ಕೆ ಆ ಆಪ್‌ನಲ್ಲಿಯೇ ಎಲ್ಲಾ ರೀತಿಯ ಸಲಹೆ ಇರುತ್ತದೆ. ಅದಕ್ಕಾಗಿ ನಿಮಗೆ ಗೂಗಲ್ ಆಪ್ಸ್ ಸೆಟ್ಟಿಂಗ್‌ಗೆ ತೆರೆದು ಟಿಪ್ಸ್ ಮತ್ತು ಟ್ರಿಕ್ಸ್ ಆಪ್ಷನ್ ಮೇಲೆ ಕ್ಲಿಕ್‌ ಮಾಡಿದರೆ ಸಾಕು, ಈಗ ನೀವು ತಿಳಿದಿರುವುದಕ್ಕಿಂತಲೂ ಹೆಚ್ಚಿನದನ್ನು ಗೂಗಲ್‌ ಮ್ಯಾಪ್‌ನಲ್ಲಿ ತಿಳಿಯಬಹುದು.

ಅಟೊಮ್ಯಾಟಿಕ್ ಅಪ್‌ಡೇಟ್

ಅಟೊಮ್ಯಾಟಿಕ್ ಅಪ್‌ಡೇಟ್

ನಿಮ್ಮ ಮೊಬೈಲ್‌ನ ಎಲ್ಲಾ ಆಪ್‌ ಸರಿಯಾಗಿ ವರ್ಕ್‌ ಮಾಡಬೇಕಾದರೆ ಆಪ್‌ಗಳು ಸರಿಯಾಗಿ ಅಪ್‌ಡೇಟ್‌ ಆಗುವುದು ಮುಖ್ಯ. ಆದುದರಿಂದ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಅಟೊಮ್ಯಾಟಿಕ್ ಅಪ್‌ಡೇಟ್ ಆಪ್ಷನ್ ಇರುತ್ತದೆ ಅದನ್ನು ಬಳಕೆ ಮಾಡಿ. ಗೂಗಲ್ ಪ್ಲೇ ಸ್ಟೋರ್‌ ತೆರೆದು ಸೆಟ್ಟಿಂಗ್ಸ್ ಕ್ಲಿಕ್ ಮಾಡಿದರೆ, ಅಲ್ಲಿ ಆಟೊ ಆಪ್‌ಡೇಟ್ಸ್ ಮಾಡಬಹುದಾದ ಆಯ್ಕೆ ಕಾಣಿಸಲಿದೆ. ವೈಫೈ ಇದ್ದಾಗ ಆಪ್‌ಗಳು ಆಟೊ ಅಪ್‌ಡೇಟ್ ಆಗುವಂತೆ ಮಾಡಿಕೊಳ್ಳಿ.

ಗೂಗಲ್‌ ನೌ !!

ಗೂಗಲ್‌ ನೌ !!

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ್‌ನಿನಲ್ಲಿ ಲೇಟೆಸ್ಟ್ ವರ್ಶನ್ ಇದ್ದರೆ ನೀವು ಗೂಗಲ್‌ ನೌ ಬಳಕೆ ಮಾಡಬಹುದು. ಇದು ಬಳಕೆದಾರರ ವಾಯ್ಸ್‌ ಕಮಾಂಡ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಈ ಡಿಜಿಟಲ್ ಯುಗದಲ್ಲಿ ಟೈಪಿಸುವುದಕ್ಕಿಂತ ಸುಲಭವಾಗಿ ವಾಯ್ಸ್‌ ಕಮಾಂಡ್‌ ಮಾಡುವ ಆಯ್ಕೆಯನ್ನು ಬಳಸದೇ ಇದ್ದರೆ, ನೀವು ಬಹಳ ಹಿಂದುಳಿದಿದ್ದೀರಾ ಎಂದರ್ಥ.

ಕೃತಕ ಬುದ್ದಿಮತ್ತೆ ಹೊಸ ಜಿ-ಮೇಲ್

ಕೃತಕ ಬುದ್ದಿಮತ್ತೆ ಹೊಸ ಜಿ-ಮೇಲ್

ಮೇಲ್ ಬಳಕೆಯನ್ನು ಇನ್ನಷ್ಟು ಗ್ರಾಹಕ ಸ್ನೇಹಿಯಾಗಿಸುವ ಮತ್ತು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದು, ಈ ಕಾಲದ ಕಾಂತ್ರಿಕಾರಕ ತಂತ್ರಜ್ಞಾನ ಎಂದೇ ಹೆಸರಾದ ಕೃತಕ ಬುದ್ಧಿಮತ್ತೆಯನ್ನು (Artificial intelligence) ಜಿಮೇಲ್‌ನಲ್ಲಿ ಅಳವಡಿಸಿಕೊಳ್ಳಲಾಗಿದೆ. ಜಿಮೇಲ್‌ನ ಬಲತುದಿಯಲ್ಲಿರುವ ಸೆಟ್ಟಿಂಗ್ಸ್ ಆಯ್ಕೆಗೆ ಹೋದರೆ ಅಲ್ಲಿ ''Try the new Gmail' ಎಂಬ ಆಯ್ಕೆಯನ್ನು ನೀಡಲಾಗಿದೆ. ಇದರ ಮೇಲೆ ಕ್ಲಿಕ್‌ ಮಾಡುವ ಮೂಲಕ ಹೊಸ ಜಿಮೇಲ್ ತೆರೆಯಬಹುದುದಾಗಿದೆ.

Best Mobiles in India

English summary
Google Search's learning curve is an odd one. You use it every day, but still all you know is how to search. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X