Home
ಸುದ್ದಿಜಾಲ

21 ಸೆಕೆಂಡ್‌ಗಳಲ್ಲಿ 25 ಸಾವಿರ ಫೋನ್‌ ಸೇಲ್! 200MP ಕ್ಯಾಮೆರಾ.. 12GB RAM, ಯಾವುದು ಈ ಫೋನ್?

ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ನೀವು ಸಾಕಷ್ಟು ಭಿನ್ನ ಫೀಚರ್ಸ್‌ ಆಯ್ಕೆಯ ಫೋನ್‌ಗಳನ್ನು ನೋಡಿರಬಹುದು. ಆದರೆ, ಈ ವೇಳೆ ಕೆಲವು ಬ್ರ್ಯಾಂಡ್‌ಗಳು ಉತ್ತಮವಾಗಿ ಹೆಸರು ಪಡೆದು ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆಯೂರಿದ್ರೆ ಇನ್ನೂ ಕೆಲವು ಬ್ರ್ಯಾಂಡ್‌ಗಳು ಕಣ್ಣರೆಯಾಗಿಬಿಡುತ್ತವೆ. ಆದರೆ, ಇಲ್ಲೊಂದು ಬ್ರ್ಯಾಂಡ್‌ನ ಫೋನ್‌ ಮಾತ್ರ ಕೇವಲ 21 ಸೆಕೆಂಡ್‌ಗಳಲ್ಲಿ 25 ಸಾವಿರ ಯೂನಿಟ್‌ ಸಾಗಣೆ ಆಗಿದೆ.

ಹೌದು, ಅಚ್ಚರಿ ಎನಿಸಿದರೂ ಇದು ಸತ್ಯ. ಈ ಬಗ್ಗೆ ಈ ಸ್ಮಾರ್ಟ್‌ಫೋನ್‌ ಕಂಪೆನಿ ಅಧಿಕೃತ ಮಾಹಿತಿ ಬಹಿರಂಗಪಡಿಸಿದೆ. ಮೀಜು (Meizu) ಎಂಬ ಕಾರು ತಯಾರಕರ ಬ್ರಾಂಡ್, ಇತ್ತೀಚೆಗೆ ತನ್ನ ಹೊಸ ಸ್ಮಾರ್ಟ್‌ಫೋನ್ ಮಾದರಿ ಮೀಜು 21 ಸ್ಮಾರ್ಟ್‌ಫೋನ್‌ (Meizu 21 smartphone) ಅನ್ನು ಲಾಂಚ್‌ ಮಾಡಿತ್ತು. ಈ ಫೋನ್‌ ಈ ಮಾರಾಟದ ದಾಖಲೆಗೂ ಮುನ್ನ ಇದರ ಫೀಚರ್ಸ್‌ಗೆ ಮಾರ್ಕೆಟ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹಾಗಿದ್ರೆ ಈ ಫೋನ್‌ನ ಪ್ರಮುಖ ಫೀಚರ್ಸ್‌ ಏನು, ಇಷ್ಟೊಂದು ಕಡಿಮೆ ಸಮಯದಲ್ಲಿ ಇಷ್ಟೊಂದು ಯೂನಿಟ್‌ ಮಾರಾಟವಾಗಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

21 ಸೆಕೆಂಡ್‌ಗಳಲ್ಲಿ 25 ಸಾವಿರ ಫೋನ್‌ ಸೇಲ್! 200MP ಕ್ಯಾಮೆರಾ.. 12GB RAM...

ಮೀಜು 21 ಸ್ಮಾರ್ಟ್‌ಫೋನ್‌: ಮೀಜು ಬ್ರ್ಯಾಂಡ್ ಎಲೆಕ್ಟ್ರಿಕ್ ಕಾರು ಉತ್ಪಾದನಾ ದೈತ್ಯ ಗೀಲಿ (geely) ಆಟೋಮೊಬೈಲ್ ಒಡೆತನದಲ್ಲಿ ಕೆಲಸ ಮಾಡುತ್ತದೆ. ಗೀಲಿ ಆಟೋಮೊಬೈಲ್ಸ್ ವೋಲ್ವೋ ಕಾರುಗಳ ಫ್ರಾಂಚೈಸ್ ಅನ್ನು ಹೊಂದಿದ್ದು, ವೋಲ್ವೋ ಕಾರುಗಳು ಸ್ವೀಡನ್‌ನಲ್ಲಿ ತಯಾರಾಗಿದ್ದರೂ, ಚೀನಾ ಮೂಲದ ಗೀಲಿ ಆಟೋಮೊಬೈಲ್ಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಆದರೆ, ಈಗ ಈ ಕಂಪೆನಿ ಸ್ಮಾರ್ಟ್‌ಫೋನ್‌ ವಲಯದಲ್ಲಿ ದೊಡ್ಡ ಸಂಚಲವನ್ನೇ ಉಂಟು ಮಾಡಿದೆ.

21 ಸೆಕೆಂಡುಗಳಲ್ಲಿ 25,000 ಯೂನಿಟ್‌ ಮಾರಾಟ: ಗೀಲಿ ಆಟೋಮೊಬೈಲ್ಸ್‌ನ ಬ್ರಾಂಡ್ ಆದ ಮೀಜು ಈಗ ಮೀಜು 21 ಎಂಬ ಸ್ಮಾರ್ಟ್‌ಫೋನ್ ವೇರಿಯಂಟ್‌ ಅನ್ನು ಅನಾವರಣ ಮಾಡಿದ್ದು, ವೈಬೋ ಪ್ಲಾಟ್‌ಫಾರ್ಮ್ ಮೂಲಕ ಇದನ್ನು ಮಾರಾಟ ಮಾಡಲಾಗಿದೆ. ವಿಷಯ ಏನೆಂದರೆ ಮಾರಾಟಕ್ಕೆ ಮುಕ್ತವಾದ ಸೆಕೆಂಡುಗಳಲ್ಲಿಯೇ ದಾಖಲೆ ಬರೆದಿದೆ. ಅಂದರೆ ಮೀಜು ಕೆಲವೇ ಸೆಕೆಂಡುಗಳಲ್ಲಿ 25,000 ರಿಂದ 29,000 ಯೂನಿಟ್‌ಗಳನ್ನು ಸೇಲ್‌ ಮಾಡಿದೆ.

21 ಸೆಕೆಂಡ್‌ಗಳಲ್ಲಿ 25 ಸಾವಿರ ಫೋನ್‌ ಸೇಲ್! 200MP ಕ್ಯಾಮೆರಾ.. 12GB RAM...

ಅಂತಹುದ್ದೇನಿದೆ ಈ ಫೋನ್‌ನಲ್ಲಿ?: ಈ ಸ್ಮಾರ್ಟ್‌ಫೋನ್ ಕಾರು ತಯಾರಕ ಬ್ರ್ಯಾಂಡ್‌ ಮೂಲಕ ಲಾಂಚ್‌ ಆಗಿದ್ದರಿಂದ ಫ್ಲೈಮ್ ಆಟೋ ಫೀಚರ್ಸ್‌ ಎಲ್ಲರ ಗಮನಸೆಳೆದಿದೆ. ಇದರೊಂದಿಗೆ ಹೊಸ ಪೀಳಿಗೆಯ ಅಂದರೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 3 ಪ್ರೊಸೆಸರ್‌ ಬಲವನ್ನು ಈ ಫೋನ್‌ ಹೊಂದಿದೆ. ಅಷ್ಟೇ ಅಲ್ಲದೆ 200 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆಯುವ ಮೂಲಕ ಅತ್ಯುತ್ತಮ ಎನಿಸಿದೆ. ಹಾಗಿದ್ರೆ, ಈ ಫೋನ್‌ ನ ಸಂಪೂರ್ಣ ಫೀಚರ್ಸ್ ಕಡೆ ಕಣ್ಣಾಯಿಸೋಣ ಬನ್ನಿ.

ಮೀಜು 21 ಸ್ಮಾರ್ಟ್‌ಫೋನ್‌ ಫೀಚರ್ಸ್‌: ಈ ಫೋನ್ 6.55 ಇಂಚಿನ ಫುಲ್‌ ಹೆಚ್‌ಡಿ + ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 120Hz ರಿಫ್ರೆಶ್ ರೇಟ್‌ ಹಾಗೂ 1100 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ. ಈ ಮೂಲಕ ಗೇಮಿಂಗ್‌ ಪ್ರಿಯರಿಗೆ ಹಾಗೂ ವಿಡಿಯೋ ವೀಕ್ಷಣೆ ಮಾಡುವವರಿಗೆ ಅತ್ಯದ್ಭುತ ಅನುಭವ ನೀಡಲಿದೆ.

21 ಸೆಕೆಂಡ್‌ಗಳಲ್ಲಿ 25 ಸಾವಿರ ಫೋನ್‌ ಸೇಲ್! 200MP ಕ್ಯಾಮೆರಾ.. 12GB RAM...

ಇದೆಲ್ಲಕ್ಕಿಂತ ಮಿಗಿಲಾಗಿ ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 3 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಆಧಾರಿತ ಫ್ಲೈಮ್ ಓಎಸ್ 10.5 ನೊಂದಿಗೆ ರನ್‌ ಆಲಿದೆ. ಇದರೊಂದಿಗೆ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ವೇರಿಯಂಟ್‌ನಲ್ಲಿ ಈ ಫೋನ್‌ ಕಾಣಿಸಿಕೊಂಡಿದೆ.

ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಸ್ಯಾಮ್‌ಸಂಗ್‌ನ ISOCELL HP3 ಜೊತೆಗೆ 200 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಪಡೆದಿದೆ. ಇದು 1/1.4 ಇಂಚಿನ ದೊಡ್ಡ ಸೆನ್ಸರ್ ಆಯ್ಕೆ ಪಡೆದಿದ್ದು, ಓಐಎಸ್ ನೊಂದಿಗೆ ಪ್ಯಾಕ್‌ ಆಗಿದೆ. ಅದೇ ರೀತಿ 13 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 5 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಜೊತೆಗೆ ಈ ಫೋನ್‌ ಬಂದಿದ್ದು, ಕ್ಯಾಮೆರಾ ಪ್ರಿಯರಿಗೆ ನೆಚ್ಚಿನ ಫೋನ್‌ ಆಗಿ ಗುರುತಿಸಿಕೊಳ್ಳಲಿದೆ.

ಹಾಗೆಯೇ 4,800mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 80W ವೈರ್ಡ್ ಚಾರ್ಜಿಂಗ್ ಹಾಗೂ 50W ಸೂಪರ್ ವೈರ್‌ಲೆಸ್ ಎಮ್‌ಚಾರ್ಜ್‌ ತಂತ್ರಜ್ಞಾನದೊಂದಿಗೆ ಕಾಣಿಸಿಕೊಂಡಿದೆ. ಈ ಮೂಲಕ ಕ್ಷಣ ಮಾತ್ರದಲ್ಲಿ ಈ ಫೋನ್‌ ಚಾರ್ಜಿಂಗ್‌ ಆಗಲಿದೆ. ಜೊತೆಗೆ 8GB RAM ಆಯ್ಕೆಯ ಫೋನ್ ಭಾರತದ ಬೆಲೆ ಪ್ರಕಾರ 39,999 ರೂ. ಗಳನ್ನು ಹೊಂದಿದ್ದರೆ 12GB RAM ಆಯ್ಕೆಯ ಫೋನ್ 47,112 ರೂ.ಗಳ ದರದಲ್ಲಿ ಕಾಣಿಸಿಕೊಂಡಿದೆ. ಸದ್ಯಕ್ಕೆ ಈ ಫೋನ್‌ ಚೀನಾದಲ್ಲಿ ಮಾತ್ರ ಲಭ್ಯ ಇದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಲಭ್ಯವಾಗಲಿದೆ ಎನ್ನಲಾಗಿದೆ.

Best Mobiles in India

English summary
Meizu 21 has created a record in the smartphone sales segment. 25 thousand phones were sold in just 21 seconds. Also, this phone made a lot of noise by getting a 200MP camera sensor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+