Home
ಸುದ್ದಿಜಾಲ

ಯೂಟ್ಯೂಬ್‌ನಲ್ಲಿ ವೈರಲ್‌ ಆದ ಈ ವಿಡಿಯೋ ನಿಜಕ್ಕೂ ಭಯಾನಕ!

ಯೂಟ್ಯೂಬ್​ ಲೈವ್​ನಲ್ಲಿ ಮಹಿಳೆಯೊಬ್ಬಳನ್ನು ರೇಪ್​ ಮಾಡುತ್ತಿರುವಂತೆಯೂ ಮತ್ತು ಆಕೆಯ ಅಪಾರ್ಟ್​ಮೆಂಟ್ ಫ್ಲ್ಯಾಟ್​ ಅನ್ನು ಧ್ವಂಸಗೊಳಿಸಿರುವ ರಷ್ಯಾದ ಯೂಟ್ಯೂಬ್​ ಸ್ಟ್ರೀಮರ್ಸ್​ ಗ್ಯಾಂಗ್​ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯೂಟ್ಯೂಬರ್ಸ್​ ದಾಳಿಯು ರಷ್ಯಾ ರಾಜಧಾನಿ ಮಾಸ್ಕೋದಿಂದ 150 ಮೈಲಿ ದೂರದಲ್ಲಿರುವ ಯಾರೋಸ್ಲಾವ್ಲ್​ದಲ್ಲಿ ನಡೆದಿದೆ ಎನ್ನಲಾಗಿದೆ. ದಾಳಿಯ ವಿಡಿಯೋ ಕ್ಲಿಪ್‌ಗಳು ಯೂಟ್ಯೂಬ್​ ಲೈವ್​ ಮತ್ತು ಟೆಲಿಗ್ರಾಮ್​ನಲ್ಲಿ ಪ್ಲಾಟ್‌ಫಾರ್ಮ್ ನಲ್ಲಿ ಹರಿದಾಡಿವೆ. ಅಚ್ಚರಿಯ ವಿಷಯವೆಂದರೇ ಯೂಟ್ಯೂಬರ್ಸ್​ ಈ ಕೃತ್ಯಕ್ಕೆ ಕೆಲ ಯೂಟ್ಯೂಬ್ ವೀಕ್ಷಕರು ಆನ್​ಲೈನ್​ನಲ್ಲಿಯೇ ಹಣವನ್ನು ನೀಡಿದ್ದಾರೆ.

ಯೂಟ್ಯೂಬ್‌ನಲ್ಲಿ ವೈರಲ್‌ ಆದ ಈ ವಿಡಿಯೋ ನಿಜಕ್ಕೂ ಭಯಾನಕ!

ಮೂರು ಮಕ್ಕಳ ತಾಯಿ ಆಗಿರುವ ಮಹಿಳೆ, 18 ವರ್ಷದ ಅರ್ತೆಮ್​ ಎಸ್​ ಎಂಬಾತನೊಂದಿಗೆ ಡೇಟಿಂಗ್​ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ದಾಳಿಯ ವಿಡಿಯೋ ಆನ್​ಲೈನ್​ನಲ್ಲಿ ಹರಿದಾಡುತ್ತಿದ್ದು, ಅದರಲ್ಲಿರುವ ಯುವಕರ ಗ್ಯಾಂಗ್​ ಗಹಗಹಿಸಿ ನಗುವುದು ಮತ್ತು ಹಣಕ್ಕಾಗಿ ಬೇಡಿಕೆ ಇಡುವುದು ಹಾಗೂ ಅಪಾರ್ಟ್​ಮೆಂಟ್​ ಫ್ಲ್ಯಾಟ್​ ಅನ್ನು ನಾಶ ಮಾಡುತ್ತಿರುವ ದೃಶ್ಯವಿದೆ.
ಲೈವ್​ ನಡುವೆಯೇ ಯೂಟ್ಯೂಬ್​ ವೀಕ್ಷಕರ ಬಳಿ ದೇಣಿಗೆ ಕೇಳಿರುವ ದಾಳಿಕೋರರು ಪ್ರತಿ ದೇಣಿಗೆಗೆ ಒಂದೊಂದು ಹಾನಿ ಮಾಡುವುದಾಗಿಯೂ ಮಾತು ಮಾಡಿದ್ದಾರೆ. ಅದರಂತೆಯೇ ಬಾಗಿಲನ್ನು ಒಡೆಯುವುದು, ಫ್ರಿಡ್ಜ್​ ಅನ್ನು ಹಾಳು ಮಾಡುವುದು, ಟಾಯ್ಲೆಟ್​ ಒಡೆದು ಹಾಕುವುದು ಮತ್ತು ಪಾಟ್‌ ಸೇರಿದಂತೆ ಅನೇಕ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.

ಯೂಟ್ಯೂಬ್‌ನಲ್ಲಿ ವೈರಲ್‌ ಆದ ಈ ವಿಡಿಯೋ ನಿಜಕ್ಕೂ ಭಯಾನಕ!

ಸದ್ಯ ಆನ್​ಲೈನ್​ನಿಂದ ತೆಗೆದು ಹಾಕಿರುವ ಹೆಚ್ಚುವರಿ ವಿಡಿಯೋವೊಂದರಲ್ಲಿ ಒಂದು ಗುಂಪಿನ ಸದಸ್ಯರು ಮಹಿಳೆಯ ಮೇಲೆ ಬಲತ್ಕಾರ ಮಾಡಿದ್ದಾರೆ. ಆ ಗುಂಪಿನಲ್ಲಿ ಆಕೆ ಡೇಟಿಂಗ್​ ಮಾಡುತ್ತಿದ್ದ ಅರ್ತೆಮ್​ ಸಹ ಭಾಗಿಯಾಗಿದ್ದಾನೆ. ಅಂದಹಾಗೆ ಆ ಮಹಿಳೆ ಗಂಡನಿಂದ ದೂರಾಗಿ ಅರ್ತೆಮ್​ ಜತೆ ಡೇಟಿಂಗ್​ ಮಾಡುತ್ತಿದ್ದಳು. ಇದೊಂದು ಡೇಟ್​ ರೇಪ್​ ಎಂದು ವೈದ್ಯಕೀಯ ಪರಿಣಿತರು ತಿಳಿಸಿದ್ದಾರೆ. ಅರ್ತೆಮ್​ ಮಹಿಳೆಯೊಂದಿಗೆ ಸಲುಗೆ ಬೆಳೆಸಿ ಡೇಟಿಂಗ್​ ನಡೆಸಿ ತನ್ನ ಸ್ನೇಹಿತರೊಂದಿಗೆ ಸೇರಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಯೂಟ್ಯೂಬ್‌ನಲ್ಲಿ ವೈರಲ್‌ ಆದ ಈ ವಿಡಿಯೋ ನಿಜಕ್ಕೂ ಭಯಾನಕ!

ಮಹಿಳೆಯ ಪಾಲಕರು ವಿಡಿಯೋದಲ್ಲಿ ಅರ್ತೆಮ್​ನನ್ನು ಪತ್ತೆಹಚ್ಚಿದ್ದಾರೆ. ಆತ ಸ್ನೇಹಿತರೊಂದಿಗೆ ಸೇರಿ ಮಹಿಳೆಗೆ ಥಳಿಸುತ್ತಿರುವ ದೃಶ್ಯವಿದೆ. ವಿಡಿಯೋ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ಕುರಿತು ತನಿಖೆಯು ಆರಂಭವಾಗಿದೆ. ಈ ದಾಳಿಯಿಂದ ಫ್ಲ್ಯಾಟ್​ಗೆ ಆಗಿರುವ ಹಾನಿಯನ್ನು ಅರ್ತೆಮ್​ ಭರಿಸಬೇಕೆಂದು ಮಹಿಳೆಯ ಪಾಲಕರು ಒತ್ತಾಯಿಸಿದ್ದಾರೆ. ಈ ಗ್ಯಾಂಗ್​ ಹಣ ಗಳಿಸಲು ಈ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ತಿಳಿದುಬಂದಿದೆ.

ಕಳೆದ ವರ್ಷ ಜನಪ್ರಿಯ ಯೂಟ್ಯೂಬರ್ ಸ್ಟಾಸ್ ರೆಶೆಟ್ನಿಕೋವ್, 30, ಅಕಾ ರೀಫ್ಲೇ, ತನ್ನ ಗೆಳತಿ ವ್ಯಾಲೆಂಟಿನಾ ವಲ್ಯವಗ್ರಿಗೊರಿಯೆವಾ, 28, ಲೈವ್‌ಸ್ಟ್ರೀಮ್‌ನಲ್ಲಿ ಅವಳನ್ನು ಹೊಡೆದ ನಂತರ ಸಬ್‌ಜೆರೊ ಬೆತ್ತಲೆಯಾಗಿ ನಿಲ್ಲುವಂತೆ ಒತ್ತಾಯಿಸಿದ ನಂತರ ಲೈವ್‌ಸ್ಟ್ರೀಮ್‌ನಲ್ಲಿ ಸಾಯುತ್ತಿರುವುದನ್ನು ತೋರಿಸಿದ. ದೈಹಿಕ ದೈಹಿಕ ಹಾನಿ ಉಂಟುಮಾಡಿದ ಕಾರಣಕ್ಕಾಗಿ ಅವರು ತನಿಖೆಯಲ್ಲಿದ್ದಾರೆ ಮತ್ತು ಬಂಧನದಲ್ಲಿದ್ದಾರೆ.

Best Mobiles in India

English summary
Horror YouTube Livestream Shows Men Drugging And Raping Mum-Of Three As Viewers Pay Them To Abuse Her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+