Home
ಸುದ್ದಿಜಾಲ

Meta: ಸಾಕು ಸಂತೋಷದಿಂದ ನಿದ್ರೆ ಮಾಡಿ... ಇದು ಹದಿಹರೆಯದವರಿಗಾಗಿ ಮಾತ್ರ! ಏನಿದು ಮೆಟಾದ ಹೊಸ ಫೀಚರ್ಸ್?

ಮೆಟಾ (Meta) ತನ್ನದೇ ಆದ ಭಿನ್ನ ಆಪ್‌ಗಳ ಮೂಲ ವಿವಿಧ ರೀತಿಯಲ್ಲಿ ಸೌಲಭ್ಯ ನೀಡುತ್ತಿದೆ. ಅದರಲ್ಲೂ ಯುವ ಪೀಳಿಗೆ ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ (Instagram and Facebook) ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅದರಂತೆ ಸಾಕಷ್ಟು ಫೀಚರ್ಸ್‌ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಇದೀಗ ಹದಿಹರೆಯದವರಿಗಾಗಿಯೇ ವಿಶೇಷ ಫೀಚರ್ಸ್‌ ಅನ್ನು ಘೋಷಣೆ ಮಾಡಿದೆ.

ಹೌದು, ಹದಿಹರೆಯದವರು (Teenagers) ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಾರೆ ಎಂದರೆ ಬಹುಪಾಲು ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ ಅನ್ನೇ ಬಳಕೆ ಮಾಡುತ್ತಾರೆ ಎಂದೇ ಅರ್ಥ ಮಾಡಿಕೊಳ್ಳಬಹುದು. ಅಷ್ಟರ ಮಟ್ಟಿಗೆ ಇವು ಆಕರ್ಷಿತವಾದ ಫೀಚರ್ಸ್‌ ಪಡೆದಿವೆ. ಅದಾಗ್ಯೂ ಹದಿಹರೆಯದವರನ್ನು ಕಂಟ್ರೋಲ್‌ ಮಾಡುವ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಈ ಮೂಲಕ ಭದ್ರತಾ ಕಾಳಜಿಯನ್ನೂ ಸಹ ಮೆಟಾ ಎತ್ತಿ ತೋರಿಸಿದೆ. ಈ ನಡುವೆ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಘೋಷಣೆ ಮಾಡಿದ್ದು, ನಿದ್ದೆಗೆ ಸಹಕಾರ ಮಾಡಲಿದೆ.

ಇದು ಹದಿಹರೆಯದವರಿಗಾಗಿ ಮಾತ್ರ! ಏನಿದು ಮೆಟಾದ ಹೊಸ ಫೀಚರ್ಸ್?

ಹದಿಹರೆಯದವರಿಗಾಗಿ ಮೆಟಾದಿಂದ ನಡ್ಜ್ ಫೀಚರ್: ಹದಿಹರೆಯದವರು ಮಲಗುವಾಗ, ಮಲಗಿದ್ದು ಎದ್ದ ತಕ್ಷಣ ಫೋನ್‌ ತೆಗೆದುಕೊಂಡು ಸಾಮಾಜಿಕ ಆಪ್‌ಗಳ ಕಡೆ ಕಣ್ಣಾಯಿಸುವುದು ಸಾಮಾನ್ಯವಾದ ವಿಚಾರವಾಗಿದೆ. ಆದರೆ ಇದನ್ನು ಕಂಟ್ರೋಲ್‌ ಮಾಡಲೆಂದೇ ಮೆಟಾ ಈ ನಡ್ಜ್ ಫೀಚರ್ (Nudge feature) ಅನ್ನು ಘೋಷಣೆ ಮಾಡಿದೆ. ಈ ಮೂಲಕ ಉತ್ತಮ ನಿದ್ದೆ ಮಾಡಲು ಪ್ರೋತ್ಸಾಹ ನೀಡುತ್ತಿದೆ.

ಈ ಮೊದಲು ಹದಿಹರೆಯದವನ್ನು ಸಾಮಾಜಿಕ ಜಾಲತಾಣದಿಂದ ಹೊರಗೆ ಕರೆತರು ಪೋಷಕರು ಹರಸಾಹಸ ಪಡುತ್ತಿದ್ದರು. ಆದರೂ ಸಹ ಇದು ವಿಫಲವಾಗುತ್ತಿತ್ತು. ಆದರೆ ಇನ್ಮುಂದೆ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಸ್ವತಃ ಹದಿಹರೆಯದ ಬಳಕೆದಾರರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತದೆ. ಅಂದರೆ ಸಮಯ ಮೀರಿ ಬಳಕೆ ಮಾಡಲು ಮುಂದಾದರೆ ಅಥವಾ ಮಧ್ಯರಾತ್ರಿಯಲ್ಲಿ ತಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ರೀಲ್‌ಗಳು ಮತ್ತು ಮೆಸೆಜ್‌ಗಳನ್ನು ಪರಿಶೀಲಿಸಿದ ನಂತರ ಪ್ರತಿ 10 ನಿಮಿಷಗಳಿಗೊಮ್ಮೆ ಲಾಗ್ ಆಫ್ ಮಾಡಲು ನೆನಪಿಸುತ್ತದೆ. ನೀವು ಲಾಗ್ ಆಫ್ ಆಗುವವರೆಗೂ ಈ ರಿಮೈಂಡರ್ ಬರುತ್ತಲೇ ಇರುತ್ತದೆ.

ಇದು ಹದಿಹರೆಯದವರಿಗಾಗಿ ಮಾತ್ರ! ಏನಿದು ಮೆಟಾದ ಹೊಸ ಫೀಚರ್ಸ್?

ಇಷ್ಟೇ ಅಲ್ಲ, ಮೆಸೆಂಜರ್ ಪೇರೆಂಟಲ್ ಸೂಪರ್‌ವಿಷನ್ ಎಂಬ ಟೂಲ್ ಅನ್ನು ಸಹ ಇದು ಹೊಂದಿದ್ದು, ಈ ಟೂಲ್ಸ್‌ ಬಳಕೆ ಮಾಡಿಕೊಂಡು ಪೋಷಕರು ತಮ್ಮ ಹದಿಹರೆಯದ ಮಕ್ಕಳ ಮೆಸೆಂಜರ್ ಚಟುವಟಿಕೆಯನ್ನು ತಿಳಿದುಕೊಳ್ಳಬಹುದು. ಅವರು ಆನ್‌ಲೈನ್‌ಗೆ ಬಂದಾಗಲೆಲ್ಲಾ ಟ್ರ್ಯಾಕ್ ಮಾಡಿ ಏನೇನೆಲ್ಲಾ ವೀಕ್ಷಣೆ ಮಾಡುತ್ತಾರೆ ಎಂದು ಪತ್ತೆ ಮಾಡಿ ಅವರಿಗೆ ಎಚ್ಚರಿಕೆ ನೀಡಬಹುದಾಗಿದೆ.

ಅಷ್ಟೇ ಅಲ್ಲದೆ ಯಾರಿಂದ ಮೆಸೆಜ್‌ ಬರುತ್ತಿದೆ ಎಂದೂ ಸಹ ತಿಳಿಯಬಹುದಾಗಿದ್ದು, ಈ ಮೂಲಕ ಯಾರಾದರೂ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದರೆ ಎಚ್ಚೆತ್ತುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ನಿಮ್ಮ ಮಕ್ಕಳಿಗೆ ಯಾರು ಮೆಸೆಜ್‌ಗಳನ್ನು ಕಳುಹಿಸಬೇಕು ಮತ್ತು ಯಾರು ಕಳುಹಿಸಬಾರದು ಎಂಬುದನ್ನು ಸಹ ನೀವು ಕಂಟ್ರೋಲ್‌ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಮೆಸೆಜ್‌ ಅನ್ನು ಯಾರೊಂದಿಗೆ ಹೆಚ್ಚು ಶೇರ್‌ ಮಾಡಿಕೊಳ್ಳಲಾಗುತ್ತಿದೆ ಅನ್ನೋದನ್ನು ಸಹ ನೀವು ತಿಳಿದುಕೊಳ್ಳಬಹುದು.

ಇದು ಹದಿಹರೆಯದವರಿಗಾಗಿ ಮಾತ್ರ! ಏನಿದು ಮೆಟಾದ ಹೊಸ ಫೀಚರ್ಸ್?

ಇದಿಷ್ಟೇ ಎಂದುಕೊಳ್ಳಬೇಡಿ. ಇದರ ಹೊರತಾಗಿ ತಮ್ಮ ಮಕ್ಕಳ ಮೆಸೆಂಜರ್ ಸ್ಟೋರಿಗಳನ್ನು ಯಾರು ನೋಡಬೇಕು ಮತ್ತು ನೋಡಬಾರದು ಎಂಬುದನ್ನು ಸಹ ನಿರ್ಧರಿಸಬಹುದು. ಈ ಮೂಲಕ ಈ ಪೋಷಕರ ಮೇಲ್ವಿಚಾರಣಾ ಟೂಲ್ಸ್‌ ವಿವಿಧ ಪ್ರಯೋಜನಗಳನ್ನು ನೀಡಲಿದೆ. ಈ ಎಲ್ಲಾ ಫೀಚರ್ಸ್‌ ಅನ್ವಯ ಆಗುವುದು 18 ವರ್ಷದೊಳಗಿನ ಹದಿಹರೆಯದವರಿಗೆ ಮಾತ್ರ ಅನ್ನೋದು ನಿಮಗೆ ತಿಳಿದಿರಲಿ.

ಇನ್ನು ಮೆಟಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಆಪ್‌ಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಇತ್ತೀಚಿನ ನ್ಯಾಯಾಲಯದ ಪ್ರಕರಣವು 2021 ರ ಆಂತರಿಕ ಕಂಪನಿಯ ಅಂದಾಜಿನ ಪ್ರಕಾರ ಪ್ರತಿದಿನ 100,000 ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದೆ. ಅಂತರ್ಜಾಲದಲ್ಲಿ ಅಪ್ರಾಪ್ತ ವಯಸ್ಕರನ್ನು ರಕ್ಷಿಸುವ ಕಂಪನಿಯ ಪ್ರಯತ್ನಗಳ ಕುರಿತು ಸಾಮಾಜಿಕ ಮಾಧ್ಯಮ ದೈತ್ಯನ ವಿರುದ್ಧ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ನ್ಯೂ ಮೆಕ್ಸಿಕೊದ ಅಟಾರ್ನಿ ಜನರಲ್ ಸಲ್ಲಿಸಿದ ದೂರಿನ ಸೀಲ್ ಮಾಡದ ವಿಭಾಗಗಳಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ.

Best Mobiles in India

English summary
Meta offers its own variety of different apps based on different ways. Meanwhile, meta has also announced Nudge feature on Instagram and facebook to control teenagers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+