ಫೇಸ್‌ಬುಕ್‌ನಲ್ಲಿ ತಂತಾನೆ ಬಂದ ಸ್ನೇಹಿತರ ವಿನಂತಿಗಳು: ಕ್ಷಮೆಯಾಚಿಸಿದ ಮೆಟಾ
ಪ್ರಮುಖ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್ ಇಂದು ಬಳಕೆದಾರರಿಗೆ ಹಲವಾರು ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ಈ ನಡುವೆ ಈ ಪ್ಲಾಟ್‌ಫಾರ್ಮ್‌ನಲ್ಲಿ ದೊಡ್ಡ ದೋಷವೊಂದು ಕಂಡುಬಂದಿದ್ದು, ಕೆಲವರು ಆತಂಕಗೊಂಡರೆ ಇನ್ನೂ ಕೆಲವರು ತಮಾಷೆ ಮಾಡಿದ್ದಾರೆ. ಈ ನಡುವೆ ಮೆಟಾ ತನ್ನೆಲ್ಲಾ ಬಳಕೆದಾರರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.
ಹೌದು, ಫೇಸ್‌ಬುಕ್ ಇಂದು ತುಂಬಾ ಅಗತ್ಯವಾದ ಹಾಗೂ ವಿವಿಧ ಮಾಹಿತಿ ನೀಡುವ ಪ್ಲಾಟ್‌ಫಾರ್ಮ್ ಆಗಿದ್ದು, ದಿನ ನಿತ್ಯದ ಯಾವುದೇ ಮಾಹಿತಿ ತಿಳಿದುಕೊಳ್ಳಬೇಕು ಎಂದರೆ ಫೇಸ್‌ಬುಕ್ ಓಪನ್ ಮಾಡಿದರೆ ಸಾಕು ಎನ್ನುವ ಮಟ್ಟಕ್ಕೆ ಬಂದಿದ್ದೇವೆ. ಈ ನಡುವೆ ಫೇಸ್‌ಬುಕ್‌ನಲ್ಲಿ ದೊಡ್ಡ ದೋಷವೊಂದು ಕಂಡುಬಂದಿದ್ದು, ಇದು ಬಳಕೆದಾರರನ್ನು ಭಾರೀ ಗೊಂದಲಕ್ಕೆ ಒಳಗಾಗುವಂತೆ ಮಾಡಿತ್ತು. ಇದೀಗ ಮೆಟಾ ಈ ಸಮಸ್ಯೆ ಪರಿಹರಿಸಿದೆ. ಬನ್ನಿ ಇದರ ವಿವರ ತಿಳಿಯೋಣ.

ಫೇಸ್‌ಬುಕ್‌ನಲ್ಲಿ ಕಂಡುಬಂದ ದೋಷ ಏನು?: ಫೇಸ್‌ಬುಕ್‌ನಲ್ಲಿ ಬಳಕೆದಾರರು ಸಾಮಾನ್ಯವಾಗಿ ಪ್ರೊಫೈಲ್‌ಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ದುರಂತ ಎಂದರೆ ಯಾವೆಲ್ಲಾ ಪ್ರೊಫೈಲ್‌ಗೆ ಭೇಟಿ ನೀಡಲಾಗಿದೆಯೋ ಆ ಎಲ್ಲಾ ಪ್ರೊಫೈಲ್‌ಗಳಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಈ ಮೂಲಕ ಬಳಕೆದಾರರು ಆತಂಕಕ್ಕೆ ಒಳಗಾಗುವಂತೆ ಆಗಿದೆ. ಈ ಕಾರಣಕ್ಕಾಗಿಯೇ ಮೆಟಾ ಕ್ಷಮೆ ಯಾಚಿಸಿದೆ. ಜೊತೆಗೆ ಈ ಸಮಸ್ಯೆ ಪರಿಹರಿಸಲಾಗಿದೆ ಎಂದು ತಿಳಿಸಿದೆ.
ಈ ಘಟನೆ ಸಂಬಂಧ ಫೇಸ್‌ಬುಕ್ ಹಲವಾರು ದೂರುಗಳನ್ನು ಸ್ವೀಕಾರ ಮಾಡಿತ್ತು. ಜೊತೆಗೆ ಟ್ವಿಟರ್‌ನಲ್ಲಿ ಈ ಗ್ಲಿಚ್ ಅನ್ನು ವ್ಯಾಪಕವಾಗಿ ವರದಿ ಮಾಡಲಾಗಿತ್ತು. ಈ ಬಗ್ಗೆ ಜನರು ಭಾರೀ ಗೊಂದಲಕ್ಕೆ ಒಳಗಾಗಿ ಫೇಸ್‌ಬುಕ್‌ನಲ್ಲಿ ಏನು ನಡೆಯುತ್ತಿದೆ ಎಂಬುವ ಸ್ಕ್ರೀನ್‌ಶಾಟ್‌ಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಲಾಗಿದ್ದು, ಫೇಸ್‌ಬುಕ್ ಅಗತ್ಯ ಕ್ರಮ ತೆಗೆದುಕೊಂಡಿದೆ.

ಈ ರೀತಿ ಸಂಭವಿಸಿದ್ದು ಯಾವಾಗ?: ಈ ದೋಷ ಕಳೆದ ಶುಕ್ರವಾರ ಕಂಡುಬಂದಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ದೋಷವನ್ನು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಕೆಲವು ಬಳಕೆದಾರರು ತಮ್ಮ ಗೌಪ್ಯತೆಯ ಬಗ್ಗೆ ಕಾಳಜಿ ವಹಿಸಿದರೆ, ಇತರರು ಅದರ ಬಗ್ಗೆ ತಮಾಷೆ ಮಾಡಿದ್ದಾರೆ. ಅದರಂತೆ ಪ್ರಮುಖ ವರದಿಗಳ ಪ್ರಕಾರ ಬಾಂಗ್ಲಾದೇಶ, ಫಿಲಿಪೈನ್ಸ್ ಮತ್ತು ಶ್ರೀಲಂಕಾದ ಬಳಕೆದಾರರು ಈ ರೀತಿಯ ಹೆಚ್ಚು ದೋಷವನ್ನು ವರದಿ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮೆಟಾ, ನಾವು ಇತ್ತೀಚಿನ ಅಪ್ಲಿಕೇಶನ್ ಅಪ್‌ಡೇಟ್‌ಗೆ ಸಂಬಂಧಿಸಿದ ದೋಷವನ್ನು ಸರಿಪಡಿಸಿದ್ದೇವೆ ಅದು ಕೆಲವು ಫೇಸ್‌ಬುಕ್ ಸ್ನೇಹಿತರ ವಿನಂತಿಗಳನ್ನು ತಪ್ಪಾಗಿ ಕಳುಹಿಸಲು ಕಾರಣವಾಯಿತು. ಈ ರೀತಿ ಆಗುತ್ತಿರುವುದನ್ನು ನಾವು ನಿಲ್ಲಿಸಿದ್ದೇವೆ. ಹಾಗೆಯೇ ಈ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಲಾಗಿದೆ. ಅದಾಗ್ಯೂ ಇದೊಂದು ಸ್ಕ್ಯಾಮರ್‌ಗಳ ತಂತ್ರ ಎಂದು ಹಲವಾರು ಬಳಕೆದಾರರು ನಂಬಿದ್ದರು ಎನ್ನಲಾಗಿದೆ.
ಫೇಸ್‌ಬುಕ್‌ನಲ್ಲಿ ಹೆಚ್ಚಾಗುತ್ತಿದೆ ವಂಚನೆ ಪ್ರಕರಣ: ಇನ್ನು ದುರುದ್ದೇಶಪೂರಿತ ಉದ್ದೇಶಗಳಿಗಾಗಿ ಅಮಾಯಕ ಬಳಕೆದಾರರನ್ನು ಗುರಿಯಾಗಿಸಿಕೊಂಡು ಫೇಸ್‌ಬುಕ್ ಅನ್ನು ಸ್ಕ್ಯಾಮರ್‌ಗಳು ಹೆಚ್ಚಾಗಿ ಬಳಕೆ ಮಾಡುತ್ತಿರುವುದು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಂತೆ ಬಳಕೆದಾರರ ಖಾತೆಗಳಿಗೆ ಮಾಲ್‌ವೇರ್ ಹರಡಲು ಫೇಸ್‌ಬುಕ್ ಪುಟಗಳನ್ನು ಬಳಕೆ ಮಾಡಲಾಗುತ್ತಿದೆ ಎನ್ನುವ ಹಗರಣ ಈ ವರ್ಷದ ಮಾರ್ಚ್‌ನಲ್ಲಿ ವರದಿಯಾಗಿದೆ.
ಇದರೊಂದಿಗೆ ಕ್ಲೌಡ್‌ಸೆಕ್‌ನ ಸಂಶೋಧನೆಯು ಫೇಸ್‌ಬುಕ್‌ನಲ್ಲಿನ ನಕಲಿ ಚಾಟ್‌ಜಿಪಿಟಿ ಪೇಜ್‌ಗಳನ್ನು ಬಲಿಪಶುಗಳಿಗೆ ಮಾಲ್‌ವೇರ್ ಅನ್ನು ವಿತರಿಸಲು ಬಳಸಲಾಗುತ್ತಿದೆ ಎಂದು ಎಚ್ಚರಿಸಿದೆ. ಅಂದರೆ ಸ್ಕ್ಯಾಮರ್‌ಗಳು ಫೇಸ್‌ಬುಕ್ ಖಾತೆ ಅಥವಾ ಪೇಜ್ ತೆರೆದಿದ್ದು, ಅದನ್ನು ಅಧಿಕೃತ ಚಾಟ್‌ಜಿಪಿಟಿ ಪೇಜ್‌ನಂತೆ ಕಾಣುವಂತೆ ಮಾಡಿದ್ದಾರೆ. ಇದನ್ನು ನಂಬಿದ್ದ ಅದೆಷ್ಟೋ ಬಳಕೆದಾರರು ಮೋಸ ಹೋಗಿರುವ ಘಟನೆ ವರದಿಯಾಗಿದೆ.

ಇಷ್ಟು ಮಾತ್ರವಲ್ಲದೆ ಮಾಲ್‌ವೇರ್ ಅನ್ನು ಹರಡಲು ಮೀಸಲಾಗಿರುವ 13 ನಕಲಿ ಫೇಸ್‌ಬುಕ್ ಪೇಜ್‌ಗಳನ್ನು ಕಂಡುಕೊಳ್ಳಲಾಗಿದೆ. ಈ ಖಾತೆಗಳು ಸುಮಾರು 5 ಲಕ್ಷ ಅನುಯಾಯಿಗಳನ್ನು ಹೊಂದಿದ್ದವು ಎಂದು ಕ್ಲೌಡ್‌ಸೆಕ್ ಮಾಹಿತಿ ನೀಡಿದೆ. ಅಂದರೆ ಇಷ್ಟೂ ಬಳಕೆದಾರರು ತಮಗೆ ಅರಿವಿಲ್ಲದಂತೆ ತಮ್ಮ ಸ್ಮಾರ್ಟ್‌ಡಿವೈಸ್‌ಗಳಿಗೆ ಮಾಲ್‌ವೇರ್ ಅನ್ನು ಸೇರಿಸಿಕೊಂಡಿದ್ದಾರೆ. ಇದರಿಂದಾಗಿ ಸ್ಕ್ಯಾಮರ್‌ಗಳು ತಾವು ಅಂದುಕೊಂಡಿದ್ದನ್ನು ಸಾಧಿಸಲು ಮುಂದಾಗಿದ್ದಾರೆ.


Click it and Unblock the Notifications








