ವಾಟ್ಸಾಪ್‌ನಲ್ಲಿ 'ಚಾನಲ್ಸ್'; ಏನಿದು ಇನ್‌ಸ್ಟಾಗ್ರಾಮ್ ಶೈಲಿಯ ಹೊಸ ಫೀಚರ್ಸ್?
ವಾಟ್ಸಾಪ್ (Whatsapp) ಇಂದು ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಸೌಲಭ್ಯ ಕಲ್ಪಿಸಿಕೊಡುತ್ತಿದೆ. ಈ ಮೂಲಕ ಕೇವಲ ಮೆಸೆಜಿಂಗ್‌ಗೆ ಮಾತ್ರವಲ್ಲದೆ ಬಳಕೆದಾರರು ಹಲವು ಅಗತ್ಯತೆಗಳಿಗೆ ಯೋಗ್ಯವಾಗಿದೆ. ಈ ನಡುವೆ ವಾಟ್ಸಾಪ್ ಹೊಸ ಹೊಸ ಫೀಚರ್ಸ್ ಅನ್ನು ಪಡೆಯುತ್ತಿದ್ದು, ಈ ಫೀಚರ್ಸ್ ವಿಭಾಗದಲ್ಲಿ ಈಗ ಘೋಷಣೆ ಮಾಡಲಾದ ಮತ್ತೊಂದು ಫೀಚರ್ಸ್ ಮಾತ್ರ ಎಲ್ಲರ ನೆಚ್ಚಿನ ಫೀಚರ್ಸ್ ಆಗಿ ಗುರುತಿಸಿಕೊಳ್ಳಲಿದೆ.
ಹೌದು, ಮೆಟಾ ಒಡೆತನದ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಭಾರತದಲ್ಲಿ ಇನ್‌ಸ್ಟಾಗ್ರಾಮ್(Instagram) ರೀತಿಯ ಫೀಚರ್ಸ್ ಆಗಿರುವ ಚಾನಲ್ಸ್ ಅನ್ನು (Channels) ಬಗ್ಗೆ ಘೋಷಣೆ ಮಾಡಿದೆ. ಈ ಮೂಲಕ ಬಳಕೆದಾರರು ಅದರಲ್ಲೂ ಕ್ರಿಕೆಟ್ ಪ್ರೇಮಿಗಳು ತಮ್ಮ ವಾಟ್ಸಾಪ್‌ನಲ್ಲಿಯೇ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ನವೀಕರಣಗಳನ್ನು ಪಡೆಯಬಹುದು. ಹಾಗಿದ್ರೆ, ಏನಿದು ಚಾನಲ್ ಫೀಚರ್ಸ್?, ಇದರಿಂದ ಬಳಕೆದಾರರಿಗೆ ಹೇಗೆಲ್ಲಾ ಅನುಕೂಲ? ಎಂಬ ಮಾಹಿತಿ ಈ ಲೇಖನದಲ್ಲಿ ಇದೆ ಓದಿರಿ.

ವಾಟ್ಸಾಪ್‌ನಲ್ಲಿ ಚಾನಲ್ಸ್: ವಾಟ್ಸಾಪ್ ಚಾನೆಲ್‌ಗಳು ಏಕಮುಖ ಪ್ರಸಾರ ಸಾಧನವಾಗಿದ್ದು, ಲಭ್ಯವಿರುವ ಅತ್ಯಂತ ಖಾಸಗಿ ಪ್ರಸಾರ ಸೇವೆಯನ್ನು ನೀಡುವುದು ಇದರ ಗುರಿಯಾಗಿದೆ. ಅಷ್ಟೇ ಅಲ್ಲದೆ ಭಾರತೀಯ ಕ್ರಿಕೆಟ್ ತಂಡವು ವಾಟ್ಸಾಪ್‌ನೊಂದಿಗೆ ಪಾಲುದಾರರಾಗಿದೆ. ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ನೊಂದಿಗೆ ನಾವು ವಾಟ್ಸಾಪ್ ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಪ್ರಾರಂಭಿಸುತ್ತೇವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಿಳಿಸಿದೆ.
ಈ ವಾಟ್ಸಾಪ್ ಚಾನಲ್ಸ್‌ನಲ್ಲಿ ಪಂದ್ಯದ ವೇಳಾಪಟ್ಟಿಗಳು, ಸಮಯಗಳು, ಸ್ಕೋರ್‌ಕಾರ್ಡ್‌ಗಳು ಇತ್ಯಾದಿಗಳ ಸುತ್ತ ಪ್ರಮುಖ ಮತ್ತು ನಿಖರವಾದ ಮಾಹಿತಿ ಮತ್ತು ಸುದ್ದಿಗಳ ಬಗ್ಗೆ ಅಭಿಮಾನಿಗಳು ತಿಳಿಯುತ್ತಾರೆ. ವಾಟ್ಸಾಪ್ ಚಾನಲ್ಸ್ ಪಡೆಯಿರಿ ಮತ್ತು ಮೈದಾನದ ಒಳಗೆ ಮತ್ತು ಹೊರಗೆ ನವೀಕರಣಗಳನ್ನು ಎಂದಿಗೂ ಕಳೆದುಕೊಳ್ಳಬೇಡಿ ಎಂದು ಇದೇ ವೇಳೆ BCCI ಮಾಹಿತಿ ನೀಡಿದೆ.
ಕೇವಲ ಇದು ಕ್ರೀಡೆಗೆ ಸಂಬಂಧಿಸಿದ ವಿಚಾರವಲ್ಲ ಬದಲಾಗಿ ಕತ್ರಿನಾ ಕೈಫ್, ದಿಲ್ಜಿತ್ ದೋಸಾಂಜ್, ಅಕ್ಷಯ್ ಕುಮಾರ್, ವಿಜಯ್ ದೇವರಕೊಂಡ, ನೇಹಾ ಕಕ್ಕರ್ ಮತ್ತು ಇತರರು ತಮ್ಮ ವಾಟ್ಸಾಪ್ ಚಾನೆಲ್‌ಗಳನ್ನು ಸಹ ಪ್ರಾರಂಭಿಸಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ವಾಟ್ಸಾಪ್ ಮಾಹಿತಿ ನೀಡಿದೆ. ಈ ಮೂಲಕ ಅವರ ಎಲ್ಲಾ ಅಪ್‌ಡೇಟ್‌ಗಳನ್ನು ನೀವು ವಾಟ್ಸಾಪ್ ಮೂಲಕವೇ ತಿಳಿದುಕೊಳ್ಳಬಹುದಾಗಿದೆ.
ಇದರೊಂದಿಗೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಸಹ ತಮ್ಮದೇ ಆದ ಚಾನಲ್ ಅನ್ನು ಆರಂಭಿಸಿದ್ದು, ಈ ಮೂಲಕ ವಾಟ್ಸಾಪ್ ಬಳಕೆದಾರರಿಗೆ ಇನ್ನಷ್ಟು ಕುತೂಹಲ ಹೆಚ್ಚಿಗೆ ಮಾಡಿದ್ದಾರೆ. ನಾವು ಜಾಗತಿಕವಾಗಿ ವಾಟ್ಸಾಪ್ ಚಾನಲ್ಸ್ ಅನ್ನು ಹೊರತರಲು ಮುಂದಾಗಿದ್ದೇವೆ ಮತ್ತು ಜನರು ವಾಟ್ಸಾಪ್ ನಲ್ಲಿ ಅನುಸರಿಸಬಹುದಾದ ಸಾವಿರಾರು ಹೊಸ ಚಾನಲ್ಸ್ ಅನ್ನು ಸೇರಿಸುತ್ತಿದ್ದೇವೆ. ಹೊಸ 'ಅಪ್‌ಡೇಟ್‌ಗಳು' ಟ್ಯಾಬ್‌ನಲ್ಲಿ ನೀವು ಚಾನಲ್‌ಗಳನ್ನು ಕಾಣಬಹುದು ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ.
ಈ ಚಾನಲ್ಸ್ ಫೀಚರ್ಸ್ ಎಂದಿನಿಂದ ಲಭ್ಯ ? : ಮೆಟಾ ಮುಂಬರುವ ವಾರಗಳಲ್ಲಿ ಈ ಚಾನಲ್ಸ್ ಫೀಚರ್ಸ್ ಅನ್ನು ಹೊರತರಲಿದೆ ಎಂದು ತಿಳಿದುಬಂದಿದೆ. ಇದರಲ್ಲಿ ಅಪ್‌ಡೇಟ್ ಎಂಬ ಎಂಬ ಹೊಸ ಟ್ಯಾಬ್ ಆಯ್ಕೆ ಇದ್ದು, ಬಳಕೆದಾರರು ಇತರರನ್ನು ಅನುಸರಿಸಲು ಹಾಗೂ ಸ್ಟೇಟಸ್ ತಿಳಿಯಲು ಮತ್ತು ಚಾನಲ್ಸ್ ಅನ್ನು ಹುಡುಕಲು ಬಳಕೆ ಮಾಡಬಹುದು ಎಂದು ಹೇಳಲಾಗಿದೆ. ಈ ನಿರ್ದಿಷ್ಟ ಟ್ಯಾಬ್ ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳೊಂದಿಗಿನ ಚಾಟ್‌ಗಳಿಂದ ಪ್ರತ್ಯೇಕವಾಗಿ ಇರಲಿದೆ.

ಮೆಟಾ-ಮಾಲೀಕತ್ವದ ಇನ್‌ಸ್ಟೆಂಟ್ ಮೆಸೇಜಿಂಗ್ ಆಪ್ ಆಗಿರುವ ವಾಟ್ಸಾಪ್ ಚಾನಲ್ಸ್‌ಗಳ ಜೊತೆಗೆ ನಾಲ್ಕು ನವೀಕರಣಗಳನ್ನು ಸಹ ಪರಿಚಯಿಸುತ್ತಿದೆ ಎಂದು ತಿಳಿದುಬಂದಿದೆ. ಹಾಗೆಯೆ ಈ ಸಂಬಂಧ ವಾಟ್ಸಾಪ್, ಜಾಗತಿಕವಾಗಿ ಚಾನಲ್ಸ್ ಅನ್ನು ಹೊರತರಲು ಉತ್ಸುಕನಾಗಿದ್ದೇವೆ! ಚಾನೆಲ್‌ಗಳು ನಿಮ್ಮ ವೈಯಕ್ತಿಕ ಚಾಟ್‌ಗಳಿಂದ ಪ್ರತ್ಯೇಕವಾಗಿರುತ್ತವೆ ಮತ್ತು ಅಪ್‌ಡೇಟ್‌ಗಳು ಎಂಬ ಹೊಸ ಟ್ಯಾಬ್‌ನಲ್ಲಿ ನೀವು ಅನುಸರಿಸುವ ಜನರಿಂದ ಇತ್ತೀಚಿನದನ್ನು ಖಾಸಗಿಯಾಗಿ ನೋಡಬಹುದು ಎಂದು ತಿಳಿಸಿದೆ.


Click it and Unblock the Notifications








