Smart Glasses: ಮೆಟಾದಿಂದ ಎಐ ಫೀಚರ್ಸ್‌ನೊಂದಿಗೆ ರೇ ಬ್ಯಾನ್ ಸ್ಮಾರ್ಟ್ ಗ್ಲಾಸ್: ಎಲ್ಲವೂ ಕಣ್ಣಮುಂದೆಯೇ!
ಮೆಟಾ (Meta) ಕಂಪೆನಿ ಈಗಾಗಲೇ ವಿಶೇಷ ಸೌಲಭ್ಯಗಳನ್ನು ತನ್ನ ಬಳಕೆದಾರರಿಗೆ ನೀಡಿದೆ. ಇದರಲ್ಲಿ ಪ್ರಮುಖವಾದುದು ರೇ ಬ್ಯಾನ್ ಗ್ಲಾಸ್. ಅಂದರೆ ಇದೀಗ ರೇ ಬ್ಯಾನ್ (Ray-Ban) ಜೊತೆಗಿನ ಸಹಭಾಗಿತ್ವದಲ್ಲಿ ಮೆಟಾವು ಸುಧಾರಿತ ಎಐ ಫೀಚರ್ಸ್ ಹೊಂದಿರುವ ಸ್ಮಾರ್ಟ್ ಗ್ಲಾಸ್‌ಗಳನ್ನು ( Smart Glasses) ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ.
ಹೌದು, ರೇ ಬ್ಯಾನ್ ಸಂಸ್ಥೆಯ ಸಹಯೋಗದೊಂದಿಗೆ ಹೊಸ ಸ್ಮಾರ್ಟ್ ಗ್ಲಾಸ್‌ಗಳನ್ನು ಈಗಾಗಲೇ ಲಾಂಚ್ ಮಾಡಿ ಸದ್ದು ಮಾಡಲಾಗಿತ್ತು. ಆದರೆ ಈಗ ಇದೇ ವಿಭಾಗದಲ್ಲಿ ಮತ್ತಷ್ಟು ವಿಶೇಷ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಮೆಟಾ ಮುಂದಾಗಿದೆ. ಅಂದರೆ ಹೊಂದಾಣಿಕೆಯ ಬಟ್ಟೆಗಳನ್ನು ಸೂಚಿಸುವುದು, ಟೆಕ್ಸ್ಟ್ ಅನ್ನು ಅನುವಾದಿಸುವುದು ಮತ್ತು ಚಿತ್ರ ಶೀರ್ಷಿಕೆಗಳನ್ನು ಪ್ರದರ್ಶಿಸುವ ಕೆಲಸ ಮಾಡಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಸ್ಮಾರ್ಟ್ ಗ್ಲಾಸ್‌ನ ಸಂಪೂರ್ಣ ಫೀಚರ್ಸ್ ಏನು ಅನ್ನೋದನ್ನು ತಿಳಿಯೋಣ ಬನ್ನಿ.

ಎಐ ಆಧಾರಿತ ವಿಶೇಷ ರೇ ಬ್ಯಾನ್ ಗ್ಲಾಸ್: ಮೆಟಾ ಇದೀಗ ರೇ ಬ್ಯಾನ್‌ನ ಪಾಲುದಾರಿಕೆಯಲ್ಲಿ ಒಂದು ಜೋಡಿ ಸ್ಮಾರ್ಟ್ ಗ್ಲಾಸ್‌ಗಳನ್ನು ಅಭಿವೃದ್ಧಿಪಡಿಸಿದೆ. ಕೃತಕ ಬುದ್ಧಿಮತ್ತೆ (AI) ಫೀಚರ್ಸ್ ಒಳಗೊಂಡಂತೆ ಸುಧಾರಿತ ತಂತ್ರಜ್ಞಾನದೊಂದಿಗೆ ಈ ಕನ್ನಡಕಗಳನ್ನು ತಯಾರಿಸಲಾಗಿದ್ದು, ಈ ಗ್ಲಾಸ್‌ಗಳ ಎಐ ಕಾರ್ಯಗಳನ್ನು ಪ್ರಯತ್ನಿಸಲು ಕೆಲವು ಜನರಿಗೆ ಇದೀಗ ಅವಕಾಶ ನೀಡುವುದಾಗಿ ಕಂಪನಿಯು ಮಾಹಿತಿ ನೀಡಿದೆ.
ಈ ಗ್ಲಾಸ್‌ನಲ್ಲಿ ಇರುವ ಕ್ಯಾಮೆರಾಗಳು ಮತ್ತು ಮೈಕ್ರೊಫೋನ್‌ಗಳನ್ನು ಎಐ ಬಳಕೆ ಮಾಡಲಿದೆ ಎಂದು ಹೇಳಲಾಗಿದೆ. ಅಂದರೆ ಈ ಗ್ಲಾಸ್ ನೋಡುವ ಮತ್ತು ಕೇಳುವ ಕಂಟೆಂಟ್ ಅನ್ನು ಬಳಕೆದಾರರಿಗೆ ಅರ್ಥಮಾಡಿಕೊಳ್ಳಲು ಮತ್ತು ಅರ್ಥೈಸಲು ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ. ಸುಲಭವಾಗಿ ಹೇಳುವುದಾದರೆ ಈ ಗ್ಲಾಸ್‌ನಲ್ಲಿ ಇರುವ ಎಐ ಅಸಿಸ್ಟೆಂಟ್ ಕ್ಯಾಮರಾ ಮತ್ತು ಮೈಕ್ರೊಫೋನ್ ಮೂಲಕ ಸುತ್ತಮುತ್ತಲಿನ ಪ್ರದೇಶಗಳನ್ನು ವಿಶ್ಲೇಷಿಸುವ ಕೆಲಸ ಮಾಡುತ್ತದೆ. ಜೊತೆಗೆ ಅದರ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುತ್ತದೆ.

ನೀವು ಈ ಸ್ಮಾರ್ಟ್ ಗ್ಲಾಸ್‌ಗಳನ್ನು ಧರಿಸಿಕೊಂಡಿದ್ದಾಗ ನೀವು ನೋಡುತ್ತಿರುವ ಲ್ಯಾಂಡ್‌ಮಾರ್ಕ್ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕರಾಗಿದ್ದೀರಿ ಎಂದಾದರೆ ಕನ್ನಡಕದ ಎಐ ಕ್ಯಾಮೆರಾದ ಮೂಲಕ ಲ್ಯಾಂಡ್‌ಮಾರ್ಕ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ನಿಮ್ಮ ಕಣ್ಣುಗಳ ಮುಂದೆ ಅದರ ಬಗ್ಗೆ ಎಲ್ಲಾ ಮಾಹಿತಿಯನ್ನು ಡಿಸ್‌ಪ್ಲೇ ಮಾಡುತ್ತದೆ. ಇದರೊಂದಿಗೆ ನೀವು ಪ್ರಶ್ನೆಯನ್ನು ಕೇಳಿದರೆ ಅಥವಾ ಸಹಾಯದ ಅಗತ್ಯವಿದ್ದರೆ, ಮೈಕ್ರೊಫೋನ್ ಮೂಲಕ ನಿಮ್ಮ ಧ್ವನಿ ಆಜ್ಞೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಡಿಸ್‌ಪ್ಲೇ ಮಾಡುವ ಕೆಲಸ ಮಾಡುತ್ತದೆ.
ಮಾರ್ಕ್ ಜುಕರ್‌ಬರ್ಗ್ ಸಹ ಬಳಕೆ ಮಾಡಿದ್ದಾರೆ: ಈ ಗ್ಲಾಸ್ ಅನ್ನು ಈಗಾಗಲೇ ಮಾರ್ಕ್ ಜುಕರ್‌ಬರ್ಗ್ ಬಳಕೆ ಮಾಡಿದ್ದಾರೆ. ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಅದರಲ್ಲಿ ಅವರು ಅಂಗಿಯನ್ನು ತೋರಿಸಿ ಮತ್ತು ಅದಕ್ಕೆ ಹೊಂದಿಕೆಯಾಗುವ ಪ್ಯಾಂಟ್‌ಗಳನ್ನು ಸೂಚಿಸಲು ಕೇಳಿದ್ದಾರೆ. ಕನ್ನಡಕವು ಅಂಗಿ ಬಗ್ಗೆ ಬಗ್ಗೆ ಮಾಹಿತಿ ಪಡೆದು ಹೊಂದಿಕೆಯಾಗಬಹುದಾದ ಕೆಲವು ಪ್ಯಾಂಟ್ ಆಯ್ಕೆಗಳನ್ನು ಶಿಫಾರಸು ಮಾಡಿದೆ.

ಸದ್ಯಕ್ಕೆ ಇದು ಎಲ್ಲರಿಗೂ ಲಭ್ಯ ಇಲ್ಲ: ಈ ವಿಶೇಷ ಫೀಚರ್ಸ್ ಆಯ್ಕೆಯ ಕನ್ನಡಕಗಳು ಆರಂಭಿಕ ಪರೀಕ್ಷಾ ಹಂತದಲ್ಲಿವೆ. ಅದರಂತೆ ಸೀಮಿತ ಸಂಖ್ಯೆಯ ಜನರಿಗೆ ಈ ಎಐ ಫೀಚರ್ಸ್ ಅನ್ನು ಅನುಭವಿಸಲು ಮತ್ತು ಅನ್ವೇಷಿಸಲು ಮೆಟಾ ಅನುಕೂಲ ಮಾಡಿಕೊಡಲಿದೆ. ಅಂದರೆ, ನೀವು ಸಹ ಈ ವಿಶೇಷ ಅನುಭವ ಪಡೆಯಬೇಕು ಎಂದರೆ ಅದಕ್ಕೂ ಅವಕಾಶ ಇದೆ. ರೇ-ಬ್ಯಾನ್ ಮೆಟಾ ಸ್ಮಾರ್ಟ್ ಗ್ಲಾಸ್‌ಗಳಿಗಾಗಿ ನಮ್ಮ ಆರಂಭಿಕ ಪ್ರವೇಶ ಪ್ರೋಗ್ರಾಂನೊಂದಿಗೆ, ನಮ್ಮ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳನ್ನು ಅನುಭವಿಸಲು ನೀವು ಮೊದಲಿಗರಾಗಬಹುದು ಎಂದು ತಿಳಿಸಿದೆ.

ಈ ಗ್ಲಾಸ್ ಪಡೆಯಲು ಸೈನ್ ಅಪ್ ಮಾಡುವುದು ಹೇಗೆ?: ಮೊದಲು ನೀವು ನಿಮ್ಮ ಫೋನ್‌ನಲ್ಲಿ ಮೆಟಾ ವ್ಯೂ ಆಪ್ ಓಪನ್ ಮಾಡಿ. ಬಳಿಕ ಕೆಳಗಿನ ಬಲ ಮೂಲೆಯಲ್ಲಿರುವ ಐಕಾನ್ ಅನ್ನು ಟ್ಯಾಪ್ ಮಾಡಿ. ನಂತರದಲ್ಲಿ ಕೆಳಗೆ ಸ್ವೈಪ್ ಮಾಡಿ ಮತ್ತು 'ಮುಂಚಿನ ಪ್ರವೇಶ' (Early Access) ಆಯ್ಕೆಮಾಡಿ. ಈ ವೇಳೆ ಟಾಗಲ್ ಆನ್ ಮಾಡಿ. ನಂತರದಲ್ಲಿ ನಿಮಗೂ ಸಹ ಈ ಗ್ಲಾಸ್ ತಲುಪುವ ಸಾಧ್ಯತೆ ಇರುತ್ತದೆ.


Click it and Unblock the Notifications








