Home
ಸುದ್ದಿಜಾಲ

ಎಂಟ್ರಿ ಕೊಟ್ಟೆ ಬಿಡ್ತು ರೇ-ಬ್ಯಾನ್ ಮೆಟಾ ಸ್ಮಾರ್ಟ್‌ ಗ್ಲಾಸ್‌! ವಿನ್ಯಾಸ ನೋಡಿ ಟೆಕ್‌ ವಲಯವೇ ಶಾಕ್‌!

ಮೆಟಾ ಕಂಪೆನಿ ರೇ ಬ್ಯಾನ್‌ ಸಂಸ್ಥೆಯ ಸಹಯೋಗದೊಂದಿಗೆ ಹೊಸ ಸ್ಮಾರ್ಟ್‌ ಗ್ಲಾಸ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಗ್ಲಾಸ್‌ಗಳನ್ನು ಬಳಸಿಕೊಂಡು ಬಳಕೆದಾರರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಲೈವ್‌ಸ್ಟ್ರೀಮ್ ವೀಡಿಯೊಗಳನ್ನು ಮಾಡಬಹುದು. ಇದರ ಫ್ರೇಮ್ 12 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್‌ ಮತ್ತು ಎಲ್ಇಡಿ ಯೂನಿಟ್‌ನೊಂದಿಗೆ ಬರಲಿದೆ.

ಹೌದು, ರೇ-ಬ್ಯಾನ್ ಮೆಟಾ ಸ್ಮಾರ್ಟ್‌ ಗ್ಲಾಸ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇವುಗಳನ್ನು ಬಳಸಿಕೊಂಡು ಲೈವ್‌ಸ್ಟ್ರೀಮ್‌ ವೀಡಿಯೋ ಮಾಡಬಹುದು ಅನ್ನೊದು ಮೇನ್‌ ಹೈಲೈಟ್‌ ಆಗಿದೆ. ರೇ-ಬಾನ್ ಮೆಟಾ ಸ್ಮಾರ್ಟ್ ಗ್ಲಾಸ್‌ಗಳ ಚೌಕಟ್ಟಿನ ಎರಡೂ ಬದಿಗಳಲ್ಲಿ ಎರಡು ವೃತ್ತಾಕಾರದ ಕಟೌಟ್‌ಗಳಲ್ಲಿ ಇರಿಸಲಾಗುತ್ತದೆ. ಹಾಗಾದ್ರೆ ರೇ ಬ್ಯಾನ್‌ ಮೆಟಾ ಸ್ಮಾರ್ಟ್‌ ಗ್ಲಾಸ್‌ ಯಾವಡೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಂಟ್ರಿ ಕೊಟ್ಟೆ ಬಿಡ್ತು ರೇ-ಬ್ಯಾನ್ ಮೆಟಾ ಸ್ಮಾರ್ಟ್‌ ಗ್ಲಾಸ್‌!ಟೆಕ್‌ ವಲಯವೇ ಶಾಕ್

ರೇ-ಬ್ಯಾನ್ ಮೆಟಾ ಸ್ಮಾರ್ಟ್ ಗ್ಲಾಸ್ ಫೀಚರ್ಸ್‌ ಹೇಗಿದೆ?
ರೇ-ಬ್ಯಾನ್ ಮೆಟಾ ಸ್ಮಾರ್ಟ್ ಗ್ಲಾಸ್ ಹ್ಯಾಂಡ್ಸ್-ಫ್ರೀ ಸ್ಮಾರ್ಟ್ ಗ್ಲಾಸ್‌ ಆಗಿದೆ. ಇದು 12 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಮತ್ತು ಎಲ್ಇಡಿ ಲೈಟ್ ಅನ್ನು ಹೊಂದಿದೆ. ಇದು ರೆಕಾರ್ಡಿಂಗ್ ಸೂಚಕವಾಗಿ ದ್ವಿಗುಣಗೊಳ್ಳುತ್ತದೆ. ಇನ್ನು ರೇ-ಬಾನ್ ಮೆಟಾ ಸ್ಮಾರ್ಟ್ ಗ್ಲಾಸ್‌ಗಳ ಚೌಕಟ್ಟಿನ ಎರಡೂ ಬದಿಗಳಲ್ಲಿ ಎರಡು ವೃತ್ತಾಕಾರದ ಕಟೌಟ್‌ಗಳಲ್ಲಿ ಇರಿಸಲಾಗಿದೆ. ಈ ಸ್ಮಾರ್ಟ್‌ಗ್ಲಾಸ್‌ ಮೂಲಕ 3,024 x 4,032 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಬಹುದು. ಅಲ್ಲದೆ 60 ಸೆಕೆಂಡುಗಳವರೆಗೆ 1080p ವೀಡಿಯೊಗಳನ್ನು ತೆಗೆದುಕೊಳ್ಳಲು ಅವಕಾಶವಿದೆ.

ಇನ್ನು ಸ್ಮಾರ್ಟ್‌ಗ್ಲಾಸ್‌ ಮೂಲಕ ರೆಕಾರ್ಡಿಂಗ್‌ ಮಾಡಿದ ವೀಡಿಯೊಗಳನ್ನು ಮೆಟಾ ವ್ಯೂ ಅಪ್ಲಿಕೇಶನ್‌ನೊಂದಿಗೆ ಶೇರ್‌ ಮಾಡಬಹುದಾಗಿದೆ. ರೇ-ಬ್ಯಾನ್ ಮೆಟಾ ಸ್ಮಾರ್ಟ್ ಗ್ಲಾಸ್‌ಗಳು ಫಸ್ಟ್ ಪರ್ಸನ್ ಪೆರ್ಸ್‌ಪೆಕ್ಟಿವ್ ಲೈವ್‌ಸ್ಟ್ರೀಮಿಂಗ್ ಅನ್ನು ಸಹ ಸಕ್ರಿಯಗೊಳಿಸುತ್ತದೆ. ಇದರಲ್ಲಿ ಬಳಕೆದಾರರು ಕನ್ನಡಕದೊಂದಿಗೆ ಅವರು ನೋಡುತ್ತಿರುವುದನ್ನು ರಿಯಲ್‌ ಟೈಂನಲ್ಲಿ ತಮ್ಮ Instagram ಮತ್ತು Facebook ಪ್ರೊಫೈಲ್‌ಗಳಿಗೆ ಸ್ಟ್ರೀಮ್ ಮಾಡಬಹುದು.

ಇದರಲ್ಲಿ ಹ್ಯಾಂಡ್ಸ್‌ಫ್ರೀ ಕಾರ್ಯಗಳನ್ನು ಸಕ್ರಿಯಗೊಳಿಸಲು ಬಳಕೆದಾರರು 'ಹೇ ಮೆಟಾ' ಪ್ರಾಂಪ್ಟ್ ಅನ್ನು ಸಹ ಬಳಸಬಹುದಾಗಿದೆ. ಇನ್ನು ರೇ-ಬ್ಯಾನ್ ಮೆಟಾ ಸ್ಮಾರ್ಟ್ ಗ್ಲಾಸ್‌ಗಳು ಡಿಸ್‌ಪ್ಲೇಯೊಂದಿಗೆ ಬರುವುದಿಲ್ಲ. ಆದರೆ ಡ್ಯುಯಲ್ ಓಪನ್-ಇಯರ್ ಸ್ಪೀಕರ್‌ಗಳು ಕಡಿಮೆ ಆಡಿಯೊ ಸೋರಿಕೆಯನ್ನು ನೀಡುತ್ತವೆ ಎನ್ನಲಾಗಿದೆ. ಈ ಸ್ಮಾರ್ಟ್‌ಗ್ಲಾಸ್‌ಗಳು ಹೊಸ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ AR1 Gen1 ಪ್ಲಾಟ್‌ಫಾರ್ಮ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 32GB ಇಂಟರ್‌ ಸ್ಟೋರೇಜ್‌ನೊಂದಿಗೆ ಬರಲಿದೆ.

ಆದರೆ ಈ ಸ್ಮಾರ್ಟ್‌ಗ್ಲಾಸ್‌ಗಳು ಹಿಂದಿನ ಮಾದರಿಗಿಂತ ವಿನ್ಯಾಸದಲ್ಲಿ ಸ್ಲೀಕರ್ ಎಂದು ಮೆಟಾ ಕಂಪೆನಿ ಹೇಳಿಕೊಂಡಿದೆ. ಈ ಸ್ಮಾರ್ಟ್‌ಗ್ಲಾಸ್‌ಗಳು ನಾಲ್ಕು ಗಂಟೆಗಳ ಬ್ಯಾಟರಿ ಅವಧಿಯೊಂದಿಗೆ ಮತ್ತು ಹೆಚ್ಚುವರಿ 32 ಗಂಟೆಗಳ ಚಾರ್ಜಿಂಗ್ ಕೇಸ್‌ನೊಂದಿಗೆ ಬರುತ್ತವೆ. ಒಂದು ಭಾರಿ ಸಂಪೂರ್ಣ ಚಾರ್ಜ್‌ ಆಗುವುದಕ್ಕೆ 75 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಗ್ಲಾಸ್‌ಗಳು IPX4 ರೇಟಿಂಗ್‌ ಹೊಂದಿದ್ದು, ದೂಳು ಮತ್ತು ನೀರಿನಿಂದ ರಕ್ಷಣೆಯನ್ನು ನೀಡಲಿವೆ.

ರೇ-ಬ್ಯಾನ್ ಮೆಟಾ ಸ್ಮಾರ್ಟ್ ಗ್ಲಾಸ್‌ಗಳ ಬೆಲೆ ಮತ್ತು ಲಭ್ಯತೆ
ಸ್ಟ್ಯಾಂಡರ್ಡ್ ಲೆನ್ಸ್‌ಗಳನ್ನು ಹೊಂದಿರುವ ರೇ-ಬ್ಯಾನ್ ಮೆಟಾ ಸ್ಮಾರ್ಟ್ ಗ್ಲಾಸ್‌ಗಳು $299 (ಸುಮಾರು 24,999ರೂ)ಬೆಲೆಯಿಂದ ಪ್ರಾರಂಭವಾಗುತ್ತವೆ. ಆದರೆ ಧ್ರುವೀಕೃತ ಮಸೂರಗಳು ಮತ್ತು ಟ್ರಾನ್ಸಿಶನ್ ಲೆನ್ಸ್‌ಗಳು ಕ್ರಮವಾಗಿ $329 (ಸುಮಾರು 27,400ರೂ) ಮತ್ತು $379 (ಸುಮಾರು 31,500ರೂ)ಬೆಲೆಯಲ್ಲಿ ಲಭ್ಯವಾಗಲಿವೆ. ಇವುಗಳನ್ನು 150 ವಿಭಿನ್ನ ಕಸ್ಟಮ್ ಫ್ರೇಮ್ ಮತ್ತು ಲೆನ್ಸ್ ವಿನ್ಯಾಸ ಸಂಯೋಜನೆಗಳಲ್ಲಿ ನೀಡಲಾಗುತ್ತದೆ.

ಸದ್ಯ ರೇ-ಬ್ಯಾನ್ ಮೆಟಾ ಸ್ಮಾರ್ಟ್ ಗ್ಲಾಸ್‌ಗಳು US, ಕೆನಡಾ, ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ಮಾರುಕಟ್ಟೆಗಳನ್ನು ಒಳಗೊಂಡಂತೆ 15 ದೇಶಗಳಲ್ಲಿ ಅಕ್ಟೋಬರ್ 17 ರಿಂದ ಸ್ಮಾರ್ಟ್ ಗ್ಲಾಸ್‌ಗಳ ಮಾರಾಟ ಪ್ರಾರಂಭವಾಗಲಿದೆ. ಅಲ್ಲದೆ ಈಗಾಗಲೇ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದೆ. ಇದಲ್ಲದೆ ಈ ರೇ-ಬ್ಯಾನ್ ಮೆಟಾ ಸ್ಮಾರ್ಟ್ ಗ್ಲಾಸ್‌ಗಳು ಭಾರತದಲ್ಲಿ ಯಾವಾಗ ಬಿಡುಗಡೆ ಆಗಲಿವೆ ಎಂಬುದರ ಬಗ್ಗೆ ಇನ್ನು ಕೂಡ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
Meta launches new Ray-Ban Smart Glasses with 12MP camera
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+