Home
ಸುದ್ದಿಜಾಲ

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಈ ಸೇವೆ ಆರಂಭಿಸಿದ ಮೆಟಾ!

ಮೆಟಾ ಒಡೆತನದ ಫೆಸ್‌ಬುಕ್‌ ಎಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರಿಗೆ ಸಾಕಷ್ಟು ಅನುಕೂಲ ಆಗುವ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರ ನಡುವೆ ಮೆಟಾ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಸೌಲಭ್ಯ ಪಡೆದುಕೊಳ್ಳಲು ಬಳಕೆದಾರರಿಗೆ ಅನುವು ಮಾಡಿಕೊಟ್ಟಿದೆ.

ಹೌದು, ಈವರೆಗೂ ಬ್ಲೂಟಿಕ್‌ ವಿಚಾರ ಕೇವಲ ಟ್ಟಿಟ್ಟರ್‌ನಲ್ಲಿ ಮಾತ್ರ ಸದ್ದು ಮಾಡುತ್ತಿತ್ತು. ಆದರೆ, ಇನ್ಮುಂದೆ ಫೇಸ್‌ಬುಕ್‌ ಹಾಗೂ ಇನ್‌ಸ್ಟಾ‌ಗ್ರಾಮ್‌ ಬಳಕೆದಾರರು ಸಹ ಈ ಬ್ಲೂಟಿಕ್‌ ಪಡೆದುಕೊಳ್ಳಬಹುದಾಗಿದ್ದು, ಈ ಮೂಲಕ ತಮ್ಮ ಖಾತೆಯನ್ನು ಅಧಿಕೃತ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಮತ್ಯಾಕೆ ತಡ ಯಾರೆಲ್ಲಾ ಇದಕ್ಕೆ ಅರ್ಹರು?, ಈ ಸೇವೆ ಪಡೆದುಕೊಳ್ಳಲು ಎಷ್ಟು ಹಣ ಪಾವತಿ ಮಾಡಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಈ ಸೇವೆ ಆರಂಭಿಸಿದ ಮೆಟಾ!

ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ಬ್ಲೂಟಿಕ್‌: ಈ ಹಿಂದೆ ಟ್ವಿಟರ್ ಬ್ಲೂಟಿಕ್ ಅನ್ನು ಎಲ್ಲರಿಗೂ ಮುಕ್ತ ಮಾಡಲಾಗಿತ್ತು. ಇದಾದ ನಂತರ ಗಮನಾರ್ಹ ವ್ಯಕ್ತಿಗಳಿಗೆ ಮಾತ್ರ ಮೀಸಲಿರಲಾಯ್ತು. ಜೊತೆಗೆ ಇಂತಿಷ್ಟು ಹಣ ಪಾವತಿ ಮಾಡಬೇಕು ಎಂದೂ ಸಹ ತಿಳಿಸಿಲಾಗಿದೆ. ಇದರ ನಡುವೆ ಈಗ ಮೆಟಾ ಸಹ ಇದೇ ಹಾದಿ ಹಿಡಿದಿದ್ದು, ಬ್ಲೂಟಿಕ್‌ ಮಾರಾಟಕ್ಕೆ ಮುಂದಾಗಿದೆ. ಈ ಮೂಲಕ ತನ್ನ ಆದಾಯವನ್ನು ಹೆಚ್ಚಿಗೆ ಮಾಡಿಕೊಳ್ಳಲು ಮಾರ್ಗ ಕಂಡುಕೊಂಡಿದೆ.

ಇನ್ನು ಯಾರೆಲ್ಲಾ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಖಾತೆದಾರರು ಬ್ಲೂಟಿಕ್‌ ಪಡೆಯಲು ಇಚ್ಚಿಸುತ್ತಾರೋ ಅವರು ಹಣ ಪಾವತಿ ಮಾಡುವ ಮೂಲಕ ಈ ಸೇವೆ ಪಡೆದುಕೊಳ್ಳಬಹುದು ಎಂದು ಮೆಟಾ ತಿಳಿಸಿದೆ. ಈ ಬ್ಲೂಟಿಕ್‌ ಅನ್ನು ಖರೀದಿ ಮಾಡಿದ ಬಳಕೆದಾರರ ಪ್ರೊಫೈಲ್‌ ಮೇಲೆ ಬ್ಲೂಟಿಕ್‌ಕಾಣಿಸಿಕೊಳ್ಳಲಿದೆ. ಇದರಿಂದ ಈ ಖಾತೆಯ ಅಧಿಕೃತತೆಯನ್ನು ಇತರರು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಈ ಸೇವೆ ಆರಂಭಿಸಿದ ಮೆಟಾ!

ಯಾರೆಲ್ಲಾ ಅರ್ಹರು?: ಮೆಟಾ ಯುಎಸ್‌ನಲ್ಲಿ ಸದ್ಯಕ್ಕೆ ಈ ಸೌಲಭ್ಯ ಕಲ್ಪಿಸಿದ್ದು, ಅದರಂತೆ ಇನ್‌ಸ್ಟಾಗ್ರಾಮ್‌ ನೀತಿಯ ಪ್ರಕಾರ ಮಾಧ್ಯಮ ಸಂಸ್ಥೆಗಳು, ಪ್ರಭಾವಿಗಳು, ಪ್ರಸಿದ್ಧ ವ್ಯಕ್ತಿಗಳು ಮತ್ತು ರಾಜಕಾರಣಿಗಳು ತಮ್ಮ ಖಾತೆಯಲ್ಲಿರುವ ಅವರ ಹೆಸರಿನ ಪಕ್ಕದಲ್ಲಿ ಈ ಬ್ಲೂಟಿಕ್‌ ಅನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಬ್ಲೂಟಿಕ್‌ಗೆ ಬೆಲೆ ಎಷ್ಟು?: ಈ ಸೇವೆ ಪಡೆದುಕೊಳ್ಳಬೇಕಾದರೆ ಬಳಕೆದಾರರು ತಿಂಗಳಿಗೆ 989ರೂ. ಗಳನ್ನು ಪಾವತಿ ಮಾಡಬೇಕಿದೆ. ಇನ್ನು ಈ ಬ್ಲೂ ಚೆಕ್‌ಮಾರ್ಕ್ ಪರಿಶೀಲನೆ ಬ್ಯಾಡ್ಜ್ ಆಗಿದ್ದು, ಅದು ಖಾತೆಯು ಅಧಿಕೃತವಾಗಿದೆ ಮತ್ತು ಸಾರ್ವಜನಿಕ ವ್ಯಕ್ತಿ, ಸೆಲೆಬ್ರಿಟಿ ಅಥವಾ ಬ್ರಾಂಡ್‌ಗೆ ಸೇರಿದ ಖಾತೆ ಎಂದು ಸೂಚಿಸುತ್ತದೆ.

ಇದರಿಂದ ಪ್ರಯೋಜ ಏನು?: ಕೆಲವು ನಕಲಿ ವ್ಯಕ್ತಿಗಳು ಹಾಗೂ ನಕಲಿ ಬ್ರ್ಯಾಂಡ್‌ಗಳು ಜನರನ್ನು ಮೋಸ ಮಾಡಲು ಅಧಿಕೃತ ಖಾತೆ ಎಂದೇಳಿಕೊಂಡು ನಕಲಿ ಖಾತೆ ಮೂಲಕ ಜನರನ್ನು ಮೋಸ ಮಾಡುತ್ತಿರುವ ಅದೆಷ್ಟೊ ಪ್ರಕರಣಗಳು ಕಂಡು ಬಂದಿವೆ. ಹೀಗಾಗಿ ಜನರನ್ನು ಇಂತಹ ಮೋಸದ ಬಲೆಗೆ ಬೀಳದಂತೆ ತಡೆಯಲು ಮೆಟಾ ಈ ನಿರ್ಧಾರ ಮಾಡಿದೆ.

ಬ್ಲೂಟಿಕ್‌ ಪಡೆಯಲು ಅರ್ಹತೆ ಏನು?: ಸಾಮಾಜಿಕ ಜಾಲತಾಣವನ್ನು ಯಾರೂ ಬೇಕಾದರೂ ಬಳಕೆ ಮಾಡಬಹುದಾಗಿದ್ದರು ಕೆಲವು ನೀತಿ ನಿಯಮಗಳ ಪ್ರಕಾರ 18 ವರ್ಷ ಮೀರಿದವರು ಮಾತ್ರ ಈ ಬ್ಲೂಟಿಕ್‌ ಸೇವೆ ಪಡೆದುಕೊಳ್ಳಲು ಅರ್ಹರು ಎಂದು ಮೆಟಾ ತಿಳಿಸಿದೆ. ಇದಕ್ಕಾಗಿ ಬಳಕೆದಾರರು ಫೋಟೋ ಐಡಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಜೊತೆಗೆ ಮೆಟಾ ನಡೆಸುವ ಕೆಲವು ಪರಶೀಲನಾ ಹಂತಗಳಲ್ಲಿ ಪಾಸ್‌ ಆಗಬೇಕಿದೆ. ಇದಾದ ನಂತರ ಅರ್ಹತೆ ಇದ್ದರೆ ಮಾತ್ರ ಈ ಟಿಕ್‌ ಲಭ್ಯವಾಗುತ್ತದೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಈ ಸೇವೆ ಆರಂಭಿಸಿದ ಮೆಟಾ!

ಭಾರತೀಯರಿಗೆ ಯಾವಾಗ? : ಸದ್ಯಕ್ಕೆ ಯುಎಸ್‌ ಬಳಕೆದಾರರಿಗೆ ಈ ಸೇವೆ ಕಲ್ಪಿಸಲಾಗಿದ್ದು, ಕಾಲಾನಂತರದಲ್ಲಿ ಅಥವಾ ಶೀಘ್ರದಲ್ಲೇ ಪ್ರಮುಖ ದೇಶಗಳಿಗೂ ಈ ಸೇವೆ ವಿಸ್ತರಿಸಲು ಮೆಟಾ ಮುಂದಾಗಿದೆ ಎಂದು ತಿಳಿದುಬಂದಿದ್ದು, ಅದರಲ್ಲಿ ಭಾರತವೂ ಇದೆ ಎಂದು ಹೇಳಲಾಗಿದೆ. ಈ ಮೂಲಕ ಭಾರತದ ಅದೆಷ್ಟೋ ರಾಜಕಾರಣಿಗಳು, ಸೆಲೆಬ್ರಿಟಿಗಳು ಈ ಬ್ಲೂಟಿಕ್‌ ಅನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

Best Mobiles in India

English summary
Meta is now offering to sell Blue Ticks for Instagram and Facebook users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+