Home
ಸುದ್ದಿಜಾಲ

SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!

ಸ್ಮಾರ್ಟ್‌ಗ್ಲಾಸ್‌ (SmartGlass) ಬಳಕೆ ಇದೀಗ ಹೆಚ್ಚಾಗುತ್ತಿದೆ. ಅಲ್ಲದೆ ಇದರ ಜನಪ್ರಿಯತೆ ಸಹ ಹೆಚ್ಚಾಗಿದ್ದು, ಪರಿಣಾಮ ಸಾಕಷ್ಟು ಕಂಪೆನಿಗಳು ತಮ್ಮದೇ ಆದ ವಿಶೇ‍ಷ ಫೀಚರ್ಸ್‌ ಆಯ್ಕೆಯ ಸ್ಮಾರ್ಟ್‌ ಗ್ಲಾಸ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಈ ನಡುವೆ ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ (Meta Ray-Ban SmartGlass) ಬಳಕೆದಾರರಿಗೆ ಗುಡ್‌ ನ್ಯೂಸ್ ನೀಡಲಾಗಿದೆ.

ಹೌದು, ಮೆಟಾದ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ಗಳಿಗೆ ಇದೀಗ ಅಪ್‌ಡೇಟ್‌ ಘೋಷಣೆ ಮಾಡಲಾಗಿದ್ದು, ಇದರಿಂದ ಬಳಕೆದಾರರು ವಿಡಿಯೋ ಕರೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಕನ್ನಡಕವು ಅಲ್ಟ್ರಾ-ವೈಡ್ 12 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಇಂಟಿಗ್ರೇಟೆಡ್ ಆಡಿಯೊದಂತಹ ಸುಧಾರಿತ ಫೀಚರ್ಸ್‌ ಅನ್ನು ಪಡೆದಿದೆ. ಹಾಗಿದ್ರೆ, ವಿಡಿಯೋ ಕರೆ ಮಾಡುವುದು ಹೇಗೆ?, ಈ ಗ್ಲಾಸ್‌ನ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ ಬಳಕೆದಾರರು ವಿಡಿಯೋ ಕಾಲ್ ಮಾಡಬಹುದು..

ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ ಮೂಲಕ ವಿಡಿಯೋ ಕರೆ: ಮೆಟಾ ತನ್ನ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ಗಳಿಗಾಗಿ ಅತ್ಯಾಕರ್ಷಕ ಹೊಸ ಅಪ್‌ಡೇಟ್‌ ಅನ್ನು ಅನಾವರಣಗೊಳಿಸಿದೆ. ಜನಪ್ರಿಯ ಮೆಸೇಜಿಂಗ್ ಆಪ್‌ಗಳಾದ ವಾಟ್ಸಾಪ್ ಮತ್ತು ಮೆಸೆಂಜರ್ ಮೂಲಕ ವಿಡಿಯೋ ಕರೆಗಳನ್ನು ಮಾಡಲು ಬಳಕೆದಾರರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಈ ಹೊಸ ಫೀಚರ್ಸ್‌ ಕರೆಗಳ ಸಮಯದಲ್ಲಿ ನೈಜ ಸಮಯದಲ್ಲಿ ವೀಕ್ಷಣೆಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಬಳಕೆದಾರರ ವಿಶೇಷ ಶೇರ್ ಅನುಭವವನ್ನೂ ಸಹ ನೀಡಲಿದೆ.

ಇನ್ನು ವಿಡಿಯೋ ಕರೆ ಮಾಡುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಹ್ಯಾಂಡ್ಸ್-ಫ್ರೀ ಆಗಿ ವಿನ್ಯಾಸಗೊಳಿಸಲಾಗಿದೆ. ಬಳಕೆದಾರರು ತಾವು ನೋಡುವುದನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಶೇರ್‌ ಮಾಡಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ. ಇಷ್ಟು ಮಾತ್ರವಲ್ಲದೆ ನೀವು ಏನಾದರೂ ಖರೀದಿ ಮಾಡುವಾಗ ಉತ್ತಮವಾದ ಬ್ರ್ಯಾಂಡ್‌ ಗಳ ವಸ್ತುಗಳನ್ನು ಆಯ್ಕೆ ಮಾಡಲು ಅನುಕೂಲ ಮಾಡಿಕೊಡುತ್ತದೆ.

ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ ಬಳಕೆದಾರರು ವಿಡಿಯೋ ಕಾಲ್ ಮಾಡಬಹುದು..

ರೇ-ಬ್ಯಾನ್ ಮೆಟಾ ಸ್ಮಾರ್ಟ್ ಗ್ಲಾಸ್‌ ಫೀಚರ್ಸ್‌: ಇನ್ನು ಈ ಸ್ಮಾರ್ಟ್‌ ಗ್ಲಾಸ್‌ ಇಂಟಿಗ್ರೇಟೆಡ್ ಆಡಿಯೊ ಮತ್ತು ಅಲ್ಟ್ರಾ-ವೈಡ್ 12 ಮೆಗಾಪಿಕ್ಸೆಲ್‌ ಕ್ಯಾಮೆರಾ ಸೇರಿದಂತೆ ಸುಧಾರಿತ ಫೀಚರ್ಸ್‌ ಆಯ್ಕೆ ಪಡೆದಿಕೊಂಡಿದೆ. ಯುಎಸ್‌ ಮತ್ತು ಕೆನಡಾದಲ್ಲಿನ ಬಳಕೆದಾರರು ಮೆಟಾ ಎಐ ನಿಂದ ಈ ಗ್ಲಾಸ್‌ನಲ್ಲಿ ವಿಶೇಷ ಅನುಭವ ಪಡೆಯಬಹುದಾಗಿದೆ. ಸಂಪರ್ಕಗಳನ್ನು ರಚಿಸುವ ಮತ್ತು ಧ್ವನಿ ಆಜ್ಞೆಗಳ ಮೂಲಕ ನೈಜ-ಸಮಯದ ಮಾಹಿತಿಗೆ ಪ್ರವೇಶವನ್ನು ಒದಗಿಸುವ ಕೆಲಸ ಮಾಡಲಿದೆ. ಇದರೊಂದಿಗೆ. ಮೆಟಾ ಎಐ ಯೊಂದಿಗೆ, ಬಳಕೆದಾರರು ಭಾಷಾಂತರ, ವಿದೇಶಿ ಭಾಷೆಗಳಲ್ಲಿ ಮೆನುಗಳನ್ನು ಓದುವುದು ಸೇರಿದಂತೆ ಇನ್ನೂ ಅನೇಕ ಸೌಲಭ್ಯಗಳನ್ನು ಈ ಗ್ಲಾಸ್‌ ಮೂಲಕ ಪಡೆಯಬಹುದಾಗಿದೆ.

ಈ ನಡುವೆ ಬೀಟಾದಲ್ಲಿ ಪರಿಚಯಿಸಲಾದ ಹೊಸ ಮಲ್ಟಿಮೋಡಲ್ ಎಐ ಅಪ್‌ಡೇಟ್, ಬಳಕೆದಾರರಿಂದ ದೃಶ್ಯ ಮತ್ತು ಮೌಖಿಕ ಇನ್‌ಪುಟ್‌ಗಳನ್ನು ಅರ್ಥೈಸುವ ಮೂಲಕ ಈ ಗ್ಲಾಸ್‌ನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಇದು ಮೆನುವಿನಿಂದ ಟೆಕ್ಸ್ಟ್್‌ ಅನ್ನು ಅನುವಾದಿಸುವುದು ಅಥವಾ ದೃಶ್ಯವೀಕ್ಷಣೆಯ ಸಮಯದಲ್ಲಿ ಇನ್‌ಸ್ಟಾಗ್ರಾಮ್‌ ಶೀರ್ಷಿಕೆಗಳೊಂದಿಗೆ ಸಹಾಯ ಪಡೆಯುವುದು ಸೇರಿದಂತೆ ಸಮಗ್ರವಾದ ಸಹಾಯವನ್ನು ನೀಡಲು ಈ ಗ್ಲಾಸ್‌ ಅನುಮತಿಸುತ್ತದೆ. ಈ ತಂತ್ರಜ್ಞಾನವು ಇನ್ನೂ ಆರಂಭಿಕ ಹಂತದಲ್ಲಿದೆ.

ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ ಬಳಕೆದಾರರು ವಿಡಿಯೋ ಕಾಲ್ ಮಾಡಬಹುದು..

ಎಸ್ಸಿಲೋರ್ ಲುಕ್ಸೋಟಿಕಾ ಜೊತೆಗಿನ ಪಾಲುದಾರರೊಂದಿಗೆ ಮೆಟಾ ಯಶಸ್ವಿಯಾಗಿ ತಂತ್ರಜ್ಞಾನದ ಗುಚ್ಚವನ್ನೇ ಸಾಂಪ್ರದಾಯಿಕ ರೇ-ಬ್ಯಾನ್ ಫ್ರೇಮ್‌ಗಳಿಗೆ ಸಂಯೋಜಿಸಿದೆ. ಇದು ಫ್ಯಾಷನ್ ಮತ್ತು ಕ್ರಿಯಾತ್ಮಕತೆಯ ತಡೆರಹಿತ ಮಿಶ್ರಣವನ್ನು ನೀಡಲಿದೆ. ಗ್ಲಾಸ್‌ಗಳು ಉತ್ತಮ ಗುಣಮಟ್ಟದ ಆಡಿಯೊವನ್ನು ಸಹ ನೀಡಲಿದ್ದು, ಹೆಚ್ಚುವರಿ ಇಯರ್‌ಪೀಸ್‌ಗಳ ಅಗತ್ಯವನ್ನು ನಿವಾರಿಸುವ ಕೆಲಸ ಮಾಡಲಿದೆ.

ಈ ನಡುವೆ ಜವಾಬ್ದಾರಿಯುತ ಮತ್ತು ಸುರಕ್ಷಿತ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿರುವ ಮೆಟಾ ತನ್ನ ಎಐ-ಚಾಲಿತ ಫೀಚರ್ಸ್‌ ಅನ್ನು ಪರೀಕ್ಷಿಸಲು ಮತ್ತು ಪರಿಷ್ಕರಿಸಲು ನಾಸಾ ಮತ್ತು ವಾಲಿಸ್ ಅನೆನ್‌ಬರ್ಗ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಂತಹ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಈ ಸಹಯೋಗವು ನವೀನ ತಂತ್ರಜ್ಞಾನದ ಅನುಭವ ನೀಡುವುದು ಮಾತ್ರವಲ್ಲದೆ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಪ್ರಯೋಜನಕಾರಿಯಾಗಿದೆ ಎನ್ನಲಾಗಿದೆ.

Best Mobiles in India

English summary
An update has just been announced for Meta's Ray-Ban SmartGlass to enable video calling for these users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+