ಆಕಾಶದಿಂದ ಸಪ್ಪಳದೊಂದಿಗೆ ಭೂಮಿಗೆ ಅಪ್ಪಳಿಸಿದ ವಸ್ತು: ಜನರಲ್ಲಿ ಆತಂಕ!

|

ರಾಜಸ್ಥಾನದ ಸಾಂಚೋರ ಪಟ್ಟಣದಲ್ಲಿ ಅಚ್ಚರಿಯ ದೊಡ್ಡ ಸ್ಫೋಟವಾಗಿ ಆನಂತರದಲ್ಲಿ ಬಾಂಬ್ ಆಕಾರದ ಒಂದು ಲೋಹದ ವಸ್ತು ಆಕಾಶದಿಂದ ಕೆಳಗಡೆ ಬಿದ್ದಿದೆ. ಈ ಲೋಹದ ವಸ್ತು ಅಪ್ಪಳಿಸಿದ ಪರಿಣಾಮ ಭೂಮಿಯಲ್ಲಿ ಸುಮಾರು ಒಂದು ಅಡಿ ಆಳದ ಕುಳಿ ಉಂಟಾಗಿದೆ ಎಂದು ವರದಿಯಾಗಿದೆ.

2.78 ಕೆಜಿ

ಸುಮಾರು 2.78 ಕೆಜಿ ತೂಕದ ಲೋಹದ ವಸ್ತುವೊಂದು ಆಕಾಶದಿಂದ ಬಿದಿರುವ ಪರಿಣಾಮವಾಗಿ ಸುಮಾರು 2 ಕಿ.ಮಿ ಗಳಷ್ಟು ದೂರದವರೆಗೆ ದೊಡ್ಡ ಶಬ್ದ ಕೇಳಿಸಿರುವ ಘಟನೆ ಶುಕ್ರವಾರ ಮುಂಜಾನೆ ಸುಮಾರು 6 ಗಂಟೆಯ ಹೊತ್ತಿಗೆ ನಡೆದಿರುವ ವರದಿಯಾಗಿದೆ. ಈ ಘಟನೆಯಿಂದ ಅಲ್ಲಿಯ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಲೋಹದ ವಸ್ತು

ಭಾರಿ ದೊಡ್ಡ ಸದ್ದಿನೊಂದಿಗೆ ಅಪ್ಪಳಿಸಿರುವ ಲೋಹದ ವಸ್ತು ನೆಲಕ್ಕೆ ಬಿದ್ದ ಸುಮಾರು 3 ಗಂಟೆಗಳ ನಂತರವೂ ತುಂಬಾ ಬಿಸಿಯಾಗಿತ್ತು. ಇದನ್ನು ನಡಿದ ಕೆಲವು ಜನರು ಅದನ್ನು ಉಲ್ಕಾಪಾತ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಹಡಗಿನ ತುಂಡಾದ ಭಾಗವಿರಬಹುದು ಎಂದು ಹೇಳಿದ್ದಾರೆ.

ಅಧಿಕಾರಿಗಳು

ಸ್ಥಳಕ್ಕೆ ಭೇಟಿ ನೀಡಿ ವಸ್ತುವನ್ನು ಪರೀಶಿಲಿಸಿದ ಅಧಿಕಾರಿಗಳು ಆಕಾಶದಿಂದ ಅಪ್ಪಳಿಸಿರುವ ವಸ್ತು ಮೇಲ್ನೋಟಕ್ಕೆ ಉಲ್ಕಾಶಿಲೆ ತುಂಡು ಎಂದು ತೋರುತ್ತದೆ ಎಂದಿದ್ದಾರೆ. ವಸ್ತುವಿನ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಲು ಭೌಗೋಳಿಕ ಸಮೀಕ್ಷೆ ಅಹಮದಾಬಾದ್ ಮತ್ತು ಜೈಪುರ ಕಚೇರಿಯಲ್ಲಿ ಭೂವಿಜ್ಞಾನಿಗಳ ತಂಡಗಳನ್ನು ಸಂಪರ್ಕಿಸಲಾಗಿದೆ. ಈ ವಸ್ತು ಪ್ರಸ್ತುತ ಸ್ಯಾಂಚೋರ್ ಪೊಲೀಸ್ ಠಾಣೆಯಲ್ಲಿದೆ ಎಂದು ವರದಿಯಾಗಿದೆ.

Best Mobiles in India

Read more about:
English summary
A meteorite-like object falling from the sky in Rajasthan's Sanchore town has left the locals bemused.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X