Home
ಸುದ್ದಿಜಾಲ

Bangalore; ಬೆಂಗಳೂರಿನಲ್ಲಿ ಮೆಟ್ರೋ ಮಿತ್ರ ಆಪ್‌ ಲಾಂಚ್; ಯಾವ ಸ್ಟೇಷನ್‌ನಲ್ಲಿ ಈ ಸೇವೆ ಲಭ್ಯ?

ಬೆಂಗಳೂರು(Bangalore) ಎಲ್ಲರಿಗೂ ಅವಶ್ಯಕವಾಗಿರುವ ನಗರ. ಇಲ್ಲಿ ಎಲ್ಲಾ ರೀತಿಯ ಉದ್ಯೋಗಗಳು ಸಿಗುವುದರಿಂದ ಎಲ್ಲೆಲ್ಲಿಂದಲೋ ಇಲ್ಲಿಗೆ ಬಂದು ಜೀವನ ಮಾಡುವ ಕೋಟ್ಯಂತರ ಮಂದಿ ಇದ್ದಾರೆ. ಈ ಕಾರಣಕ್ಕೆ ಸಾರಿಗೆ ವ್ಯವಸ್ಥೆ ಸುಗಮವಾಗಲಿ ಎಂದು ಮೆಟ್ರೋ ಆರಂಭಿಸಲಾಗಿದ್ದು, ಇದರಿಂದ ಕಡಿಮೆ ಸಮಯದಲ್ಲಿ ಬೇಕಾದ ಸ್ಥಳಕ್ಕೆ ಜನ ತಲುಪುತ್ತಿದ್ದಾರೆ. ಈ ನಡುವೆ ಈ ವಿಭಾಗದಲ್ಲಿ ಮತ್ತೊಂದು ಹೊಸ ಸೇವೆ ಆರಂಭ ಆಗಿದೆ.

ಹೌದು, ಬೆಂಗಳೂರಿಗರ ಬಹುನಿರೀಕ್ಷಿತ ಸೇವೆಯನ್ನು ಇಂದು ಲಾಂಚ್‌ ಮಾಡಲಾಗಿದೆ. ಅಂದರೆ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (ADU) ಸಹಭಾಗಿತ್ವದಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅನ್ನು ಒಳಗೊಂಡಿರುವ ಸಹಕಾರಿ ಚಲನಶೀಲ ಉಪಕ್ರಮದ ಭಾಗವಾಗಿ 'ಮೆಟ್ರೋ ಮಿತ್ರ' ಆಪ್‌ (Metro Mitra App) ಅನ್ನು ಲಾಂಚ್‌ ಮಾಡಲಾಗಿದೆ. ಹಾಗಿದ್ರೆ, ಈ ಆಪ್‌ನಿಂದ ಪ್ರಯಾಣಿಕರಿಗೆ ಆಗುವ ಅನುಕೂಲ ಏನು?, ಮೊದಲು ಇದು ಯಾವ ಸ್ಟೇಷನ್‌ನಿಂದ ಕಾರ್ಯಾರಂಭ ಮಾಡಲಿದೆ? ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಬೆಂಗಳೂರಿನಲ್ಲಿ ಮೆಟ್ರೋ ಮಿತ್ರ ಆಪ್‌ ಲಾಂಚ್; ಯಾವ ಸ್ಟೇಷನ್‌ನಲ್ಲಿ ಈ ಸೇವೆ ಲಭ್ಯ?

ಮೆಟ್ರೋ ಮಿತ್ರ ಆಪ್‌ ಲಾಂಚ್: ಹಲವಾರು ದಿನಗಳ ಅನಿಶ್ಚಿತತೆಯ ನಂತರ ಅಂತಿಮವಾಗಿ ನಗರದಲ್ಲಿ ಮೆಟ್ರೋ ಮಿತ್ರ ಆಪ್‌ ಅನ್ನು ಪರಿಚಯಿಸಲಾಗಿದೆ. ಇದನ್ನು ಪ್ರಾಥಮಿಕವಾಗಿ ಜಯನಗರ ಮೆಟ್ರೋ ನಿಲ್ದಾಣದಲ್ಲಿ ಬಳಕೆ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಅಂದರೆ ಮೆಟ್ರೋ ನಿಲ್ದಾಣಗಳಿಂದ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಆಪ್‌ ಇದಾಗಿದ್ದು ಈ ಮೂಲಕ ಮೆಟ್ರೋ ಇಳಿದ ತಕ್ಷಣ ಬೇಕಾದ ಸ್ಥಳವನ್ನು ಕ್ಷಣಮಾತ್ರದಲ್ಲೇ ತಲುಪಬಹುದಾಗಿದೆ.

ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (ADU) ಸಹಭಾಗಿತ್ವದಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಅನ್ನು ಒಳಗೊಂಡಿರುವ ಸಹಕಾರಿ ಚಲನಶೀಲ ಉಪಕ್ರಮ ಇದಾಗಿದೆ. ಈ ಸಂಬಂಧ ದಿ ಹಿಂದೂ ಪತ್ರಿಕೆಯೊಂದಿಗೆ ಬೆಂಗಳೂರಿನ ಆಟೋ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಇದನ್ನು ಹೇಗೆ ಬಳಕೆ ಮಾಡಬಹುದು ಎಂಬುದನ್ನು ತಿಳಿಸಿದ್ದಾರೆ.

ಆಪ್‌ ಅಧಿಕೃತ ಬಿಡುಗಡೆಯು ಸೆಪ್ಟೆಂಬರ್ 27 ರಂದು ಜಯನಗರದಲ್ಲಿ ಆರಂಭ ಆಗಿದೆ. ಮುಂದಿನ ದಿನಗಳಲ್ಲಿ, ಆಪ್‌ ಅನ್ನು ಗ್ರೀನ್ ಲೈನ್‌ನಲ್ಲಿರುವ ಎಲ್ಲಾ ನಿಲ್ದಾಣಗಳಿಗೆ ಪರಿಚಯಿಸಲಾಗುತ್ತದೆ. ಆದರೆ ನೇರಳೆ ಮಾರ್ಗದಲ್ಲಿ ಈ ಸೇವೆಯನ್ನು ನಂತರದಲ್ಲಿ ಪರಿಚಯಿಸಲಾಗುತ್ತದೆ. ಅಂದರೆ ಬೈಯಪ್ಪನಹಳ್ಳಿ-ಕೆ.ಆರ್ ಮೆಟ್ರೋ ಕಾರ್ಯಾರಂಭ ಮಾಡುವ ವೇಳೆಗೆ ಇದನ್ನು ಅಲ್ಲಿ ಪರಿಚಯಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಆಪ್‌ ಅನ್ನು ಹೇಗೆ ಬಳಸುವುದು?: ಮೆಟ್ರೋ ಮಿತ್ರ ಸೌಲಭ್ಯ ಬಳಕೆ ಮಾಡಬೇಕು ಎಂದರೆ ಪ್ರಯಾಣಿಕರು BMRCL ಆಪ್‌ನಿಂದ ಅಥವಾ ವಾಟ್ಸಾಪ್‌ ಚಾಟ್‌ಬಾಟ್ ಫೀಚರ್ಸ್‌ ಮೂಲಕ ಮೆಟ್ರೋ ಟಿಕೆಟ್ ಖರೀದಿ ಮಾಡುವಾಗ ಆಟೋ ರೈಡ್ ಅನ್ನು ಬುಕ್ ಮಾಡಬಹುದಾಗಿದೆ. ಒಮ್ಮೆ ಅವರು ಆಪ್‌ನಲ್ಲಿ ಗಮ್ಯಸ್ಥಾನವನ್ನು ಪ್ರವೇಶಿಸಿದಾಗ ಅಂದಾಜು ದರವು ತೋರಿಸುತ್ತದೆ. ಬುಕಿಂಗ್ ನಂತರ ಪ್ರಯಾಣಿಕರು ಇತರ ಸವಾರಿ ವಿವರಗಳೊಂದಿಗೆ ಒಂದು-ಬಾರಿಯ ಪಾಸ್‌ವರ್ಡ್ ಅನ್ನು ಸ್ವೀಕರಿಸುತ್ತಾರೆ.

ಇನ್ನು ಈ ಸೇವೆ ಪಡೆದುಕೊಳ್ಳಲು ಮೆಟ್ರೋ ಮಿತ್ರ ವಲಯವನ್ನು ನಿಗದಿಪಡಿಸಲಾಗಿದೆ. ಈ ವ್ಯವಸ್ಥೆಯು ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮಾದರಿಯನ್ನು ಅನುಸರಿಸಲಿದ್ದು, ಇದು ಮೆಟ್ರೋದ ಆಸುಪಾಸಿನ ವಲಯವಾಗಿದೆ. ಈ ಮೂಲಕ ಯಾರೆಲ್ಲಾ ಮೆಟ್ರೋ ಇಳಿದು ಆಫೀಸ್‌ಗೆ ಅಥವಾ ಮನೆಗೆ ತಲುಪಲು ಮುಂದಾಗುತ್ತಾರೋ ಅವರು ಬಳಕೆ ಮಾಡಿಕೊಳ್ಳಬಹುದಾಗಿದೆ.

ಬೆಂಗಳೂರಿನಲ್ಲಿ ಮೆಟ್ರೋ ಮಿತ್ರ ಆಪ್‌ ಲಾಂಚ್; ಯಾವ ಸ್ಟೇಷನ್‌ನಲ್ಲಿ ಈ ಸೇವೆ ಲಭ್ಯ?

ಮೆಟ್ರೊ ಮಿತ್ರಕ್ಕೆ ಸೇರುವ ಆಟೋಗಳ ಮೇಲೆ ಈ ಸಂಬಂಧ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿರುತ್ತದೆ. ಈ ಮೂಲಕ ಈ ಆಟೋಗಳನ್ನು ಇತರ ಸೇವಾ ಆಟೋಗಳಿಂದ ಪ್ರತ್ಯೇಕಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಸ್ಟಿಕ್ಕರ್‌ಗಳು ಕ್ಯೂಆರ್ ಕೋಡ್ ಹೊಂದಿದ್ದು, ಪ್ರಯಾಣಿಕರಿಗೆ ಚಾಲಕನ ಮಾಹಿತಿಯನ್ನು ತಿಳಿದುಕೊಳ್ಳಲು ಮತ್ತು ಅವರ ಸವಾರಿಯ ಅನುಭವದ ಕುರಿತು ಪ್ರತಿಕ್ರಿಯೆಯನ್ನು ನೀಡಲು ಅನುವು ಮಾಡಿಕೊಡುತ್ತದೆ.

Best Mobiles in India

English summary
Metro Mitra App has been launched as part of a collaborative mobility initiative involving Bangalore Metro Rail Corporation Limited(BMRCL).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+