Home
ಸುದ್ದಿಜಾಲ

ನಾಳೆಯಿಂದ ಬೆಂಗಳೂರಿಗರಿಗೆ ಗುಡ್‌ ನ್ಯೂಸ್... ಸಹಾಯಕ್ಕೆ ಬರುತ್ತಿದೆ 'ಮೆಟ್ರೋ ಮಿತ್ರ'!

ಮಹಾನಗರಗಳಿಗೆಲ್ಲಾ ಮಹಾನಗರ ನಮ್ಮ ಬೆಂಗಳೂರು(Bangalore). ಈ ನಗರದಲ್ಲಿ ದೇಶದ ವಿವಿಧ ಕಡೆಯಿಂದ ಬಂದು ಬದುಕು ಕಟ್ಟಿಕೊಳ್ಳುವ ಅದೆಷ್ಟೋ ಮಂದಿ ಇದ್ದಾರೆ. ನಿತ್ಯವೂ ಕೆಲಕ್ಕೆಂದು ಮನೆಯಿಂದ ಹೊರಡುವ ಹಲವರು ಮೆಟ್ರೋ, ಬಸ್‌ ಹಾಗೂ ಆಟೋ ಬಳಕೆ ಮಾಡುವುದು ಸಾಮಾನ್ಯ. ಅದಾಗ್ಯೂ ಆಟೋ ವಿಚಾರಕ್ಕೆ ಬಂದರೆ ಕೆಲವರು ಹೆಚ್ಚಿನ ಹಣ ಪೀಕುತ್ತಾರೆ ಎಂಬ ಆರೋಪ ಅಂದಿನಿಂದ ಇಂದಿನವರೆಗೂ ಕೇಳಿಬರುತ್ತಿದೆ.

ಹೌದು, ಬೆಂಗಳೂರಿಗೆ ಕಾಲಿಟ್ಟರು ಎಂದರೆ ಯಾರೇ ಆದರೂ ಆಟೋದರಲ್ಲಿ ಸಂಚಾರ ಮಾಡುವ ಅನಿವಾರ್ಯತೆ ಎದುರಾಗುತ್ತಾರೆ. ಬಸ್‌ ಹಾಗೂ ಮೆಟ್ರೋದಲ್ಲಿ ಸಂಚಾರ ಮಾಡಿದರೂ ಅಲ್ಲಿಂದ ಹತ್ತಿರದ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪಲು ಆಟೋ ಅನಿವಾರ್ಯ. ಈ ಕಾರಣಕ್ಕೆ ಓಲಾ, ಊಬರ್‌ ಸೇರಿದಂತೆ ಅನೇಕ ಕಂಪೆನಿಗಳು ಈ ಸೇವೆ ನೀಡುತ್ತಿದ್ದು, ಈ ನಡುವೆ ನಮ್ಮ ಯಾತ್ರಿ ಆಪ್‌ ಸಹ ಜನರಿಗೆ ಹಲವು ರೀತಿಯಲ್ಲಿ ಅನುಕೂಲ ಮಾಡಿಕೊಟ್ಟಿದೆ. ಆದರೆ, ಇದೆಲ್ಲವನ್ನೂ ಮೀರಿಸಿದ ಸೇವೆಯೊಂದು ನಾಳೆಯಿಂದ ಜಾರಿಯಾಗಲಿದೆ. ಹಾಗಿದ್ರೆ, ಏನಿದು ಮೆಟ್ರೋ ಮಿತ್ರ?, ಇದರಿಂದ ಆಗುವ ಅನುಕೂಲ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ನಾಳೆಯಿಂದ ಬೆಂಗಳೂರಿಗರಿಗೆ ಗುಡ್‌ ನ್ಯೂಸ್... ಸಹಾಯಕ್ಕೆ ಬರುತ್ತಿದೆ ಮೆಟ್ರೋ ಮಿತ್ರ

ಮೆಟ್ರೋ ಮಿತ್ರ: ಬೆಂಗಳೂರಲ್ಲಿ ಮೆಟ್ರೋ ಸೇವೆ ಯಶಸ್ವಿಯಾಗಿದೆ. ಮನೆಯಿಂದ ಕೆಲಸದ ಸ್ಥಳಕ್ಕೆ ಬೇಗನೇ ತಲುಪುವಂತೆ ಇದು ಸಹಾಯ ಮಾಡಲಿದೆ. ಆದರೆ, ಮೆಟ್ರೋ ಇಳಿದ ನಂತರ ಅಲ್ಲಿಂದ ಆಫೀಸ್‌ಗೆ ಹೋಗಲು ಹಲವಾರು ಜನರು ಆಟೋವನ್ನು ಬಳಕೆ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಈ ವೇಳೆ ಕೆಲವು ಆಟೋ ಚಾಲಕರು ಹೆಚ್ಚಿನ ಹಣ ಹೇಳುವುದು ಸಾಮಾನ್ಯ ಜೊತೆಗೆ ಅಲ್ಲಿಗೆ ಬರೋಲ್ಲ ಎನ್ನುತ್ತಿದ್ದ ಹಲವಾರು ಆರೋಪಗಳು ಸಹ ಇದ್ದವು. ಆದರೆ, ಇವೆಲ್ಲಕ್ಕೂ ಈಗ ಮೆಟ್ರೋ ಮಿತ್ರದ (Metro Mitra) ಮೂಲಕ ವಿದಾಯ ಹಾಡಲಾಗುತ್ತದೆ.

ಮೆಟ್ರೋ ಮಿತ್ರ ಎಂದರೆ ಮೆಟ್ರೋ ನಿಲ್ದಾಣಗಳಿಂದ ನೀಡಲಾಗುವ ಆಟೋ ಸೇವೆ. ಈ ಮೊದಲು ಆಟೋ ಚಾಲಕರೇ ಸೇರಿಕೊಂಡು ಆರಂಭಿಸಲಾದ ನಮ್ಮ ಯಾತ್ರಿ ಸೌಲಭ್ಯದಂತೆಯೇ ಇದು ಕೆಲಸ ಮಾಡುತ್ತದೆಯಾದರೂ ಈ ಮೆಟ್ರೋ ಮಿತ್ರ ವಿಷಯಕ್ಕೆ ಬಂದಾಗ ಯಾವ ಆಪ್‌ ಅನ್ನೂ ಸಹ ಇನ್‌ಸ್ಟಾಲ್‌ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಬದಲಾಗಿ ಕ್ಯೂಆರ್‌ಕೋಡ್‌ ಮೂಲಕವೇ ಆಟೋ ಬುಕ್‌ ಮಾಡಬಹುದು.

ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (Auto Rickshaw Drivers Union) ವತಿಯಿಂದ ಈ ಸೇವೆ ನೀಡಲಾಗುತ್ತಿದ್ದು, ನಾಳೆಯಿಂದ ಈ ಸೇವೆ ಮೆಟ್ರೋ ಪ್ರಯಾಣಿಕರಿಗೆ ಲಭ್ಯ ಇರಲಿದೆ. ಈ ಮೂಲಕ ಬೆಂಗಳೂರು ನಗರದ ಮೆಟ್ರೋ ನಿಲ್ದಾಣಗಳಿಂದ ಜನರನ್ನು ಅವರಿಗೆ ಬೇಕಾದ ಸ್ಥಳಕ್ಕೆ ತಲುಪಿಸಲು ಇದು ಸಹಾಯ ಮಾಡಲಿದೆ. ಈ ಕ್ಯೂಆರ್‌ ಕೋಡ್‌ಗಳು ಎಲ್ಲಿರಲಿವೆ ಎಂದು ನೀವು ಕೇಳಬಹುದು. ಇದನ್ನು ಮೆಟ್ರೋ ನಿಲ್ದಾಣಗಳ ಹೊರಗೆ ಪ್ರದರ್ಶಿಸಲಾಗುತ್ತದೆ.

ಆಟೋ ಅಗತ್ಯ ಇರುವ ಯಾವುದೇ ಪ್ರಯಾಣಿಕರು ಮೆಟ್ರೋ ನಿಲ್ದಾಣದ ಹೊರಗೆ ಅಂಟಿಸಲಾಗಿರುವ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದ್ರೆ ಆ ಸ್ಥಳದಿಂದ ಐದು ಕಿಲೋ ಮೀಟರ್‌ ದೂರದ ಯಾವುದೇ ಪ್ರದೇಶಕ್ಕಾದರೂ ಆಟೋ ಬುಕಿಂಗ್‌ ಮಾಡುವಂತೆ ಅನುಮತಿಸುತ್ತದೆ. ಇನ್ನು ಪ್ರಯಾಣಿಕರು ಅಗತ್ಯ ಲ್ಯಾಂಡ್‌ಮಾರ್ಕ್ ಅನ್ನು ಆಯ್ಕೆ ಮಾಡಿದ ನಂತರ ರೈಡ್ ಅನ್ನು ಬುಕ್ ಮಾಡಲು ಒಂದು-ಬಾರಿ ಪಾಸ್‌ವರ್ಡ್ ಕೇಳಲಾಗುತ್ತದೆ.

ಇದಾದ ನಂತರದಲ್ಲಿ ಯಾವೆಲ್ಲಾ ಆಟೋ ಚಾಲಕರು ಈ ಮೆಟ್ರೋ ಮಿತ್ರ ಆಪ್‌ ಹೊಂದಿದ್ದಾರೋ ಅವರಿಗೆ ಇದರ ನೋಟಿಫಿಕೇಶನ್‌ ಹೋಗಲಿದ್ದು, ತಕ್ಷಣವೇ ಅವರು ಆ ಸ್ಥಳಕ್ಕೆ ಬರಲಿದ್ದಾರೆ. ನಂತರ ಅವರು ನೀವು ಹೇಳಿದ ಜಾಗಕ್ಕೆ ಕರೆದೊಯ್ಯುತ್ತಾರೆ. ಅಲ್ಲದೆ ಈ ಹೊಸ ಸೇವೆಯನ್ನು ಮುಂದಿನ ದಿನಗಳಲ್ಲಿ ವಾಟ್ಸಾಪ್ ಚಾಟ್‌ಬಾಕ್ಸ್‌ನೊಂದಿಗೆ ಕನೆಕ್ಟ್‌ ಮಾಡಲು ಚಿಂತನೆ ಸಹ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಾಳೆಯಿಂದ ಬೆಂಗಳೂರಿಗರಿಗೆ ಗುಡ್‌ ನ್ಯೂಸ್... ಸಹಾಯಕ್ಕೆ ಬರುತ್ತಿದೆ ಮೆಟ್ರೋ ಮಿತ್ರ

ಅದಾಗ್ಯೂ ಪ್ರಯಾಣಿಕರು ಈ ವಿಚಾರದಲ್ಲಿ ಕೆಲವು ಸಮಸ್ಯೆಗಳನ್ನೂ ಸಹ ಎದುರಿಸಬೇಕಾಗುತ್ತದೆ. ಅದೇನೆಂದರೆ ಇದರಲ್ಲಿ ಕೆಲವು ನಿರ್ದಿಷ್ಟ ಲ್ಯಾಂಡ್‌ ಮಾರ್ಕ್‌ಗಳನ್ನು ಮಾತ್ರ ತೋರಿಸಲಾಗುತ್ತಿದ್ದು, ಪರಿಣಾಮ ಪ್ರಯಾಣಿಕರು ಅಲ್ಲಿನವರೆಗೆ ಮಾತ್ರ ಆಟೋದಲ್ಲಿ ಸಂಚಾರ ಮಾಡಬಹುದಾಗಿದೆ. ಅಲ್ಲಿಂದ ಅವರು ತಮ್ಮ ಮನೆ ಅಥವಾ ಆಫೀಸ್‌ಗೆ ನಡೆದು ಹೋಗಬೇಕು ಅಥವಾ ಅದೇ ಆಟೋಗೆ ಮತ್ತಷ್ಟು ಹಣ ನೀಡಿ ಹೋಗಬೇಕಾಗುತ್ತದೆ. ಇನ್ನು ಈ ಆಟೋವನ್ನು ಬುಕ್‌ ಮಾಡಿದ ಬಳಿಕ ಸರ್ಕಾರ ನಿಗದಿ ಮಾಡಿದ ದರದೊಂದಿಗೆ ಹೆಚ್ಚುವರಿ ಹತ್ತು ರೂ.ಗಳನ್ನು ಪಾವತಿ ಮಾಡಬೇಕು.

Best Mobiles in India

English summary
Namma Yatri app has already benefited people in Bangalore in many ways. Meanwhile, MetroMitra service is being started for Metro passengers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+