Home
ಸುದ್ದಿಜಾಲ

ಶಿಯೋಮಿಯ ಹೈ ಎಂಡ್‌ ಫೀಚರ್ಸ್‌ನ 'ಮಿ 10s' ಫೋನ್‌ ಲಾಂಚ್: ಬೆಲೆ ಎಷ್ಟು?

ಪ್ರತಿಷ್ಠಿತ ಮೊಬೈಲ್‌ ತಯಾರಿಕಾ ಕಂಪನಿಗಳಲ್ಲಿ ಒಂದಾದ ಶಿಯೋಮಿ ಕಂಪನಿಯು ತನ್ನ ಬಹುನಿರೀಕ್ಷಿತ ಮಿ 10s ಸ್ಮಾರ್ಟ್‌ಫೋನ್‌ ಅನ್ನು ಅಧಿಕೃತವಾಗಿ ಅನಾವರಣ ಮಾಡಿದೆ. ಈಗಾಗಲೇ ಭಾರೀ ಕುತೂಹಲ ಮೂಡಿಸಿದ್ದ ಮಿ10 ಸ್ಮಾರ್ಟ್‌ಫೋನ್ ಸರಣಿಯಲ್ಲಿಯೇ ಈ ಫೋನ್ ಲಾಂಚ್ ಆಗಿದ್ದು, ಮುಖ್ಯ ಕ್ಯಾಮೆರಾ 108ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿರುವುದು ಈ ಫೋನಿನ ಪ್ರಮುಖ ಹೈಲೈಟ್‌ ಆಗಿದೆ. ಜೊತೆಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 870 SOC ಪ್ರೊಸೆಸರ್‌ ಹಾಗೂ 12GB + 256GB ಆಂತರೀಕ ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳು ಪ್ಲಸ್‌ ಪಾಯಿಂಟ್‌ ಆಗಿ ಕಾಣಿಸಿಕೊಂಡಿವೆ.

ಶಿಯೋಮಿಯ ಹೈ ಎಂಡ್‌ ಫೀಚರ್ಸ್‌ನ 'ಮಿ 10s' ಫೋನ್‌ ಲಾಂಚ್: ಬೆಲೆ ಎಷ್ಟು?

ಹೌದು, ಜನಪ್ರಿಯ ಶಿಯೋಮಿ ಸಂಸ್ಥೆಯು ನೂತನವಾಗಿ ಮಿ 10s ಸ್ಮಾರ್ಟ್‌ಫೋನ್‌ ಅನ್ನು ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಮಿ 10 ಸರಣಿಯಲ್ಲಿ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್ ಸಹ 108ಎಂಪಿ ಸೆನ್ಸಾರ್‌ನ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿದೆ. ಇದರೊಂದಿಗೆ 20ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಅನ್ನು ಹೊಂದಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು AMOLED ಮಾದರಿಯಲ್ಲಿದ್ದು, ಅಧಿಕ ಪಿಕ್ಸಲ್ ರೆಸಲ್ಯೂಶನ್‌ ಅನ್ನು ಪಡೆದಿದೆ. ಸ್ಕ್ರೀನ್‌ ಅಧಿಕ ರೀಫ್ರೇಶ್‌ ರೇಟ್‌ ಅನ್ನು ಪಡೆದಿದೆ.

ಶಿಯೋಮಿಯ ಹೈ ಎಂಡ್‌ ಫೀಚರ್ಸ್‌ನ 'ಮಿ 10s' ಫೋನ್‌ ಲಾಂಚ್: ಬೆಲೆ ಎಷ್ಟು?

ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿರುವ ಈ ಫೋನ್ ಕರ್ವ್ ಮಾದರಿಯ ಡಿಸ್ಪ್ಲೇಯೊಂದಿಗೆ ಸೆಲ್ಫಿ ಕ್ಯಾಮೆರಾಕ್ಕಾಗಿ ಪಂಚ್ ಹೋಲ್ ರಚನೆಯನ್ನು ಪಡೆದಿದೆ. ಹಾಗೆಯೇ ಈ ಫೋನ್ 4,780mAh ಬ್ಯಾಟರಿ ಬಾಳಿಕಯನ್ನು ಹೊಂದಿದ್ದು, ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ವೇಗದ ಪ್ರೊಸೆಸರ್‌ ಬಲದೊಂದಿಗೆ ಗ್ರಾಫಿಕ್‌ ಸೌಲಭ್ಯವನ್ನು ಈ ಫೋನ್ ಹೊಂದಿದೆ. ಇನ್ನು ಈ ಫೋನ್ ಒಟ್ಟು ಮೂರು ಕಲರ್ ಆಯ್ಕೆಗಳನ್ನು ಹೊಂದಿದ್ದು, ಅವುಗಳ ಕ್ರಮವಾಗಿ ಬ್ಲ್ಯಾಕ್‌, ಬ್ಲೂ ಮತ್ತು ವೈಟ್‌ ಆಗಿವೆ. ಹಾಗಾದರೇ ಶಿಯೋಮಿಯ ಮಿ 10s ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಶಿಯೋಮಿ ಮಿ 10s ಸ್ಮಾರ್ಟ್‌ಫೋನ್‌ 1080x2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಜೊತೆಗೆ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನ ಹೊಂದಿದೆ. ಈ ಫೋನ್ ಡಿಸ್‌ಪ್ಲೇಯು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒಳಗೊಂಡಿದ್ದು, ರೀಫ್ರೇಶ್‌ ರೇಟ್‌ 90Hz ಆಗಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ಇದರ ಜೊತೆಗೆ ಈ ಡಿಸ್‌ಪ್ಲೇಯು 1120 ನಿಟ್ಸ್ ಬ್ರೈಟ್ನೆಸ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ DCI-P3 ಮತ್ತು sRGB ಬೆಂಬಲ ಪಡೆದಿದೆ.

ಶಿಯೋಮಿಯ ಹೈ ಎಂಡ್‌ ಫೀಚರ್ಸ್‌ನ 'ಮಿ 10s' ಫೋನ್‌ ಲಾಂಚ್: ಬೆಲೆ ಎಷ್ಟು?

ಪ್ರೊಸೆಸರ್‌ ಸಾಮರ್ಥ್ಯ ಹೇಗಿದೆ
ಶಿಯೋಮಿ ಮಿ 10s ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್ 650 GPU ಗ್ರಾಫಿಕ್ಸ್‌ ಸಪೋರ್ಟ್‌ ಅನ್ನು ಹೊಂದಿರುವುದು ವಿಶೇಷವಾಗಿದೆ. ಇದರೊಂದಿಗೆ ಈ ಫೋನ್ ಮೂರು ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 8GB + 128GB, 8GB + 256GB ಮತ್ತು 12GB + 256GB ಆಗಿವೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯ ವಿಸ್ತರಿಸಿಕೊಳ್ಳುವ ಅವಕಾಶದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಕ್ವಾಡ್‌ ಕ್ಯಾಮೆರಾ ವಿನ್ಯಾಸ
ಶಿಯೋಮಿ ಮಿ 10s ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ f/1.69 ಲೆನ್ಸ್‌ ಬೆಂಬಲದೊಂದಿಗೆ 108 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು f/2.4 ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ನೊಂದಿಗೆ 13 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮೂರನೇ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ f/2.4 ಡೆಪ್ತ್ ಲೆನ್ಸ್ ಹಾಗೂ ಮೈಕ್ರೋ ಸೆನ್ಸಾರ್‌ ಲೆನ್ಸ್‌ನ ಸಪೋರ್ಟ್‌ ಹೊಂದಿವೆ. ಇನ್ನು ಈ ಫೋನಿನ ಸೆಲ್ಫಿ ಕ್ಯಾಮೆರಾವು 20 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾವನ್ನು ನೀಡಲಾಗಿದೆ. ಫೋಟೊ ಹಾಗೂ ವಿಡಿಯೊ ಕರೆಗಳಿಗೆ ಸೆಲ್ಫಿ ಕ್ಯಾಮೆರಾವು ಆಕರ್ಷಕ ಎನಿಸುವ ರಚನೆ ಪಡೆದಿದೆ.

ಶಿಯೋಮಿಯ ಹೈ ಎಂಡ್‌ ಫೀಚರ್ಸ್‌ನ 'ಮಿ 10s' ಫೋನ್‌ ಲಾಂಚ್: ಬೆಲೆ ಎಷ್ಟು?

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಶಿಯೋಮಿ ಮಿ 10s ಸ್ಮಾರ್ಟ್‌ಫೋನ್‌ 4,780mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದರ ಜೊತೆಗೆ 33W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಪೋರ್ಟ್‌ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇತ್ತೀಚಿಗಿನ ಅಗತ್ಯ 5 ಜಿ, ವೈ-ಫೈ 6, ಬ್ಲೂಟೂತ್ ವಿ 5.1, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ. ಆನ್‌ಬೋರ್ಡ್‌ನಲ್ಲಿ ಸಂವೇದಕಗಳು ಸಾಮೀಪ್ಯ ಸಂವೇದಕ, ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಇ-ದಿಕ್ಸೂಚಿ, ಆಂಬಿಯೆಂಟ್ ಲೈಟ್ ಸೆನ್ಸರ್, ಐಆರ್ ಬ್ಲಾಸ್ಟರ್ ಮತ್ತು ಬಾರೋಮೀಟರ್ ಸೌಲಭ್ಯಗಳನ್ನು ಅನ್ನು ಒಳಗೊಂಡಿವೆ.

ಈ ಫೋನಿನ ಬೆಲೆ ಎಷ್ಟು?.ಲಭ್ಯತೆ?
ಚೀನಾದಲ್ಲಿ ಅನಾವರಣ ಆಗಿರುವ ಹೊಸ ಶಿಯೋಮಿ ಮಿ 10s ಸ್ಮಾರ್ಟ್‌ಫೋನ್‌ ಮೂರು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಆರಂಭಿಕ 8GB + 128GB ಆಂತರೀಕ ಸ್ಟೋರೇಜ್‌ನ ವೇರಿಯಂಟ್‌ ಬೆಲೆಯು ಚೀನಾದಲ್ಲಿ CNY 3,299 (ಭಾರತದಲ್ಲಿ ಅಂದಾಜು 37,000ರೂ. ಎಂದು ಊಹಿಸಲಾಗಿದೆ). ಹಾಗೆಯೇ 8GB + 128GB ಸ್ಟೋರೇಜ್‌ನ ವೇರಿಯಂಟ್‌ ಬೆಲೆಯು CNY 3,499 (ಭಾರತದಲ್ಲಿ ಅಂದಾಜು 39,300ರೂ. ಎಂದು ಹೇಳಲಾಗುತ್ತಿದೆ). ಅದೇ ರೀತಿ ಹೈ ಎಂಡ್‌ ಮಾದರಿಯ 12GB + 256GB ಸ್ಟೋರೇಜ್ ವೇರಿಯಂಟ್‌ ಬೆಲೆಯು CNY 3,799 ಆಗಿದೆ (ಭಾರತದಲ್ಲಿ 42,600ರೂ. ಇರಬಹುದು ಎಂದು ಅಂದಾಜಿಸಲಾಗಿದೆ). ಇನ್ನು ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್‌, ಬ್ಲೂ ಮತ್ತು ವೈಟ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಸದ್ಯ ಚೀನಾದಲ್ಲಿ ಲಭ್ಯವಾಗಿದ್ದುಇನ್ನೂ ಈ ಫೋನಿನ ಅಂತರರಾಷ್ಟ್ರೀಯ ಲಭ್ಯತೆಯ ವಿವರಗಳನ್ನು ಕಂಪನಿಯು ಬಹಿರಂಗ ಪಡಿಸಿಲ್ಲ.

Best Mobiles in India

English summary
Mi 10S is backed by a 4,780mAh battery that supports 33W wired fast charging and 30W wireless fast charging.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+