Home
ಸುದ್ದಿಜಾಲ

ಈ ಸ್ಮಾರ್ಟ್‌ಫೋನ್‌ಗೆ 45% ರಿಯಾಯಿತಿ! 128 GB ಸ್ಟೋರೇಜ್‌.. 108MP ಕ್ಯಾಮೆರಾ

ಸ್ಮಾರ್ಟ್‌ಫೋನ್‌‌ಗಳ ವಿಭಾಗದಲ್ಲಿ ಮಿ (Mi) ಫೋನ್‌ಗಳು ಸಹ ಭಾರೀ ಸೌಂಡ್‌ ಮಾಡುತ್ತಿದ್ದು, ಅದರಂತೆ ಈಗ ಮಿ ಕಂಪೆನಿಯ ಜನಪ್ರಿಯ ಫೋನ್‌ಗೆ ಬರೋಬ್ಬರಿ 45% ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 8 GB RAM ಆಯ್ಕೆ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.

ಹೌದು, ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಇದೀಗ ಮಿ 10T ಪ್ರೊ ಸ್ಮಾರ್ಟ್‌ಫೋನ್‌ಗೆ (Mi 10T Pro smartphone) ಭರ್ಜರಿ ಆಫರ್ ನೀಡಲಾಗಿದೆ. ಈ ಫೋನ್ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯುವ ಮೂಲಕ ಉತ್ತಮ ಎನಿಸಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಆಫರ್ ವಿವರ ಹಾಗೂ ಇದರ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಈ ಸ್ಮಾರ್ಟ್‌ಫೋನ್‌ಗೆ 45% ರಿಯಾಯಿತಿ! 128 GB ಸ್ಟೋರೇಜ್‌.. 108MP ಕ್ಯಾಮೆರಾ

ಮಿ 10T ಪ್ರೊ ಸ್ಮಾರ್ಟ್‌ಫೋನ್‌ ಅಪರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 47,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 25,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಭರ್ಜರಿ 45% ವರೆಗೆ ರಿಯಾಯಿತಿ ನೀಡಲಾಗಿದೆ. ಅಲ್ಲದೆ ನೀವು ಬ್ಯಾಂಕ್‌ ಅಫರ್ ಬಳಕೆ ಮಾಡುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಂದಿಗೆ 915ರೂ.ಗಳ ತಿಂಗಳ ಇಎಮ್‌ಐ ಆಯ್ಕೆ ಸಹ ಲಭ್ಯ ಇದ್ದು, ಈ ಮೂಲಕ ಅಗ್ಗದ ದರದಲ್ಲಿ ಅತ್ಯುತ್ತಮ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಫೋನ್‌ ಇಷ್ಟು ಬೆಲೆಗೆ ಯೋಗ್ಯವೇ ಎಂದು ತಿಳಿಯಲು ಇದರ ಫೀಚರ್ಸ್‌ ಕಡೆ ಕಣ್ಣಾಯಿಸಿ.

ಈ ಸ್ಮಾರ್ಟ್‌ಫೋನ್‌ಗೆ 45% ರಿಯಾಯಿತಿ! 128 GB ಸ್ಟೋರೇಜ್‌.. 108MP ಕ್ಯಾಮೆರಾ

ಮಿ 10T ಪ್ರೊ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.67 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 144Hz ರಿಫ್ರೆಶ್ ರೇಟ್‌ ಆಯ್ಕೆ HDR10+, 650 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ. ಅಲ್ಲದೆ 85.2% ಸ್ಕ್ರೀನ್-ಟು-ಬಾಡಿ ಅನುಪಾತ, 395 ಪಿಪಿಐ ಸಾಂದ್ರತೆಯೊಂದಿಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದಿದೆ.

ಮಿ 10T ಪ್ರೊ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಇನ್ನು ಕ್ವಾಲ್ಕಾಮ್ SM8250 ಸ್ನಾಪ್ಡ್ರಾಗನ್ 865 5G (7 nm+) ಪ್ರೊಸೆಸರ್‌ನಲ್ಲಿ ಈ ಫೋನ್‌ ಕಾರ್ಯನಿರ್ವಹಿಸಲಿದ್ದು, ಓಎಸ್ ಆಂಡ್ರಾಯ್ಡ್ 10, ಆಂಡ್ರಾಯ್ಡ್ 11, ಎಂಐಯುಐ 12.5 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಜೊತೆಗೆ ಅಡ್ರಿನೊ 650 ಗ್ರಾಫಿಕ್ಸ್ ಕಾರ್ಡ್‌ ಬಲದೊಂದಿಗೆ ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಮತ್ತು ಅಫರ್ ಬೆಲೆಗೆ ಲಭ್ಯ ಇರುವ ಈ ಫೋನ್ 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 8GB RAM ಆಯ್ಕೆ ಪಡೆದುಕೊಂಡಿದೆ.

ಮಿ 10T ಪ್ರೊ ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ ವಿವರ: ಇನ್ನು ಈ ಫೋನ್ ಟ್ರಿಪಲ್ ರಿಯಲ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್‌, ಪನೋರಮಾ ಫೀಚರ್ಸ್‌ ಅನ್ನು ಕಾಣಬಹುದಾಗಿದೆ. ಅಲ್ಲದೆ ಈ ಫೋನ್‌ನಲ್ಲಿ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕಾಣಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ಗೆ 45% ರಿಯಾಯಿತಿ! 128 GB ಸ್ಟೋರೇಜ್‌.. 108MP ಕ್ಯಾಮೆರಾ

ಮಿ 10T ಪ್ರೊ ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 33W ವೈರ್ಡ್ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ. ಇದರೊಂದಿಗೆ ವೈ-ಫೈ 802.11 a/b/g/n/ac/6, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.1, A2DP, LE, aptX HD, aptX ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

Best Mobiles in India

English summary
Mi 10T Pro smartphone has been given a great Offer. This phone has a triple rear camera option along with a 108 megapixel main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+