Home
ಸುದ್ದಿಜಾಲ

ಶಿಯೋಮಿಯ ಈ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 8,000ರೂ. ಇಳಿಕೆ!

ಶಿಯೋಮಿ ಕಂಪನಿಯ ಬಜೆಟ್‌ ಫೋನ್‌ಗಳ ಜೊತೆಗೆ ಮೀಡ್‌ರೇಂಜ್‌ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಆಕರ್ಷಕ ಎನಿಸಿವೆ. ಆ ಪೈಕಿ ಶಿಯೋಮಿ ಮಿ 11 ಲೈಟ್‌ (Mi 11 Lite) ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಇದೀಗ ಮಿ 11 ಲೈಟ್‌ (Mi 11 Lite) ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದ್ದು, ಮತ್ತೆ ಗ್ರಾಹಕರು ತಿರುಗಿ ನೋಡುವಂತೆ ಮಾಡಿದೆ.

ಶಿಯೋಮಿ ಮಿ 11 ಲೈಟ್‌

ಹೌದು, ಶಿಯೋಮಿ ಕಂಪನಿಯ ಶಿಯೋಮಿ ಮಿ 11 ಲೈಟ್‌ (Mi 11 Lite) ಬೆಲೆಯಲ್ಲಿ ಈಗ ಬರೋಬ್ಬರಿ 8,000ರೂ. ಇಳಿಕೆ ಆಗಿದೆ. ಇನ್ನು ಈ ಫೋನ್‌ 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಸ್ಟೋರೇಜ್‌ನ ಎರಡು ವೇರಿಯಂಟ್‌ ಮಾದರಿಗಳನ್ನು ಒಳಗೊಂಡಿದ್ದು, ಇವುಗಳಲ್ಲಿ 8GB RAM ಮತ್ತು 128GB ವೇರಿಯಂಟ್‌ ಮಾತ್ರ ದರ ಕಡಿತ ಕಂಡಿದೆ.

 ಮಿ 11 ಲೈಟ್‌

ಶಿಯೋಮಿ ಮಿ 11 ಲೈಟ್‌ 8GB RAM ಮತ್ತು 128GB ಸ್ಮಾರ್ಟ್‌ಫೋನ್‌ 23,999ರೂ. ಬೆಲೆ ಹೊಂದಿದ್ದು, ಬೆಲೆ ಇಳಿಕೆ ಬಳಿಕ 15,999ರೂ. ಗಳಿಗೆ ಲಭ್ಯವಾಗಲಿದೆ. ಇನ್ನು 6GB RAM ಮತ್ತು 128GB ವೇರಿಯಂಟ್‌ 21,999ರೂ. ಬೆಲೆಯನ್ನು ಹೊಂದಿದ್ದು, ಬೆಲೆ ಇಳಿಕೆ ಕಂಡಿಲ್ಲ. ಹಾಗಾದರೆ ಶಿಯೋಮಿ ಮಿ 11 ಲೈಟ್‌ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಶಿಯೋಮಿ ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ + AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದ್ದು ಜೊತೆಗೆ 90Hz ರಿಫ್ರೆಶ್ ರೇಟ್‌ ಹೊಂದಿದೆ. ಡಿಸ್‌ಪ್ಲೇಯು HDR10+ ಸಪೋರ್ಟ್‌ ಸಹ ಒಳಗೊಂಡಿದೆ.

ಪ್ರೊಸೆಸರ್‌ ಪವರ್ ಯಾವುದು

ಪ್ರೊಸೆಸರ್‌ ಪವರ್ ಯಾವುದು

ಶಿಯೋಮಿ ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಾಕಾಶ ನೀಡಿದೆ.

ಟ್ರಿಪಲ್ ಕ್ಯಾಮೆರಾ ಸೆಟಅಪ್ ರಚನೆ

ಟ್ರಿಪಲ್ ಕ್ಯಾಮೆರಾ ಸೆಟಅಪ್ ರಚನೆ

ಶಿಯೋಮಿ ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇದಲ್ಲದೆ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಶಿಯೋಮಿ ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ 4,250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಈ ಫೋನ್ 33W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಯುಎಸ್‌ಬಿ ಟೈಪ್‌ ಸಿ 2 ಯನ್ನು ಬೆಂಬಲಿಸುತ್ತದೆ. ಹಾಗೆಯೇ ಡಾಲ್ಬಿ ವಿಜನ್, ಸಪೋರ್ಟ್‌ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ?

ಬೆಲೆ ಮತ್ತು ಲಭ್ಯತೆ?

ಶಿಯೋಮಿ ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ವೇರಿಯಂಟ್ ಬೆಲೆಯು 21,999ರೂ ಆಗಿದೆ. ಅದೇ ರೀತಿ 8GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್ ಬೆಲೆಯು 15,999ರೂ. ಆಗಿದೆ. ಇನ್ನು ಈ ಫೋನ್ ಜಾಝ್ ಬ್ಲೂ, ಟಸ್ಕನಿ ಕೋರಲ್ ಮತ್ತು ವಿನೈಲ್ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಪಡೆದಿದೆ.

Best Mobiles in India

English summary
​Mi 11 Lite receives price cut of Rs 8,000: Check New Price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+