Home
ಸುದ್ದಿಜಾಲ

ಭಾರತದಲ್ಲಿ ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ ಲಾಂಚ್; ಆಕರ್ಷಕ ಪ್ರೈಸ್‌ಟ್ಯಾಗ್?

ಜನಪ್ರಿಯ ಮೊಬೈಲ್ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಶಿಯೋಮಿ ಈಗಾಗಲೇ ಮಿ ಸರಣಿಯಲ್ಲಿ ಹಲವು ಆಕರ್ಷಕ ಫೋನ್‌ಗಳನ್ನು ಲಾಂಚ್ ಮಾಡಿ ಸೈ ಅನಿಸಿಕೊಂಡಿದೆ. ಇತ್ತೀಚಿಗಷ್ಟೆ ಮಿ 11 ಸ್ಮಾರ್ಟ್‌ಫೋನ್‌ ಸರಣಿಯನ್ನು ಅನಾವರಣ ಗ್ರಾಹಕರ ಗಮನ ಸೆಳೆದಿತ್ತು. ಕಂಪನಿಯು ಇದೀಗ ಮಿ 11 ಸರಣಿಯಲ್ಲಿನ ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಶಿಯೋಮಿ

ಹೌದು, ಶಿಯೋಮಿ ತನ್ನ ಹೊಸ ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ ಅನ್ನು ದೇಶಿಯ ಮಾರುಕಟ್ಟೆಗೆ ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಅಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಪಡೆದಿದೆ. ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಬ್ಯಾಟರಿ ಬ್ಯಾಕ್‌ಅಪ್‌ ಸಹ ಆಕರ್ಷಕವಾಗಿದ್ದು, ಫಾಸ್ಟ್‌ ಚಾರ್ಜಿಂಗ್ ಬೆಂಬಲವಿದೆ. ಇನ್ನು ಈ ಫೋನ್ ಜಾಜ್‌ ಬ್ಲೂ, ಟಸ್ಕನಿ ಕೋರಲ್ ಮತ್ತು ವಿನೈಲ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.ಹಾಗಾದರೇ ಶಿಯೋಮಿ ಮಿ 11 ಲೈಟ್‌ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮಿ 11 ಲೈಟ್‌- ಡಿಸ್‌ಪ್ಲೇ

ಮಿ 11 ಲೈಟ್‌- ಡಿಸ್‌ಪ್ಲೇ

ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ 3,200× 1,440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಹೊಂದಿದೆ. ಗೊರಿಲ್ಲಾ ಗ್ಲಾಸ್ 6 ರಕ್ಷಣೆ ಇದ್ದು, 90Hz ರೀಫ್ರೇಶ್‌ ರೇಟ್‌ ಪಡೆದಿದೆ. ಹಾಗೆಯೇ HDR10+ ಹಾಗೂ ಡಾಲ್ಬಿ ವಿಷನ್ ಸಪೋರ್ಟ್‌ ಪಡೆದಿದೆ.

ಮಿ 11 ಲೈಟ್‌- ಪ್ರೊಸೆಸರ್

ಮಿ 11 ಲೈಟ್‌- ಪ್ರೊಸೆಸರ್

ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಅಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಪಡೆದಿದೆ. ಈ ಫೋನ್ 6GB RAM+128GB ಮತ್ತು 8GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ.

ಮಿ 11 ಲೈಟ್‌- ಕ್ಯಾಮೆರಾ

ಮಿ 11 ಲೈಟ್‌- ಕ್ಯಾಮೆರಾ

ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್‌ ಬಲದಲ್ಲಿ ಇದೆ. ಹಾಗೂ ತೃತೀಯ ಕ್ಯಾಮೆರಾವು 5 ಮೆಗಾ ಪಿಕ್ಸಲ್ ಸೆನ್ಸಾರ್ ಬಲ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 20 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಮಿ 11 ಲೈಟ್‌- ಬ್ಯಾಟರಿ

ಮಿ 11 ಲೈಟ್‌- ಬ್ಯಾಟರಿ

ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ 4,250mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 33W ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇದರೊಂದಿಗೆ ವೈ-ಫೈ, 4 ಜಿ, ಬ್ಲೂಟೂತ್ ವಿ 5.1, ಎನ್‌ಎಫ್‌ಸಿ, ಜಿಪಿಎಸ್ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ. ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಸಹ ಇದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮಿ 11 ಲೈಟ್‌ ಸ್ಮಾರ್ಟ್‌ಫೋನ್‌ 6GB RAM+128GB ವೇರಿಯಂಟ್ ದರವು 21,999 ರೂ. ಆಗಿದೆ. ಹಾಗೂ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 23,999ರೂ.ಗಳಾಗಿದೆ. ಜಾಜ್‌ ಬ್ಲೂ, ಟಸ್ಕನಿ ಕೋರಲ್ ಮತ್ತು ವಿನೈಲ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಫೋನಿನ ಓಪೆನ್ ಸೇಲ್ ಫ್ಲಿಪ್‌ಕಾರ್ಟ್‌, ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಇದೇ ಜೂನ್ 28ರಂದು ಪ್ರಾರಂಭವಾಗಲಿದೆ. ಇನ್ನು ಫೋನ್‌ ಖರೀದಿಸುವ ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಸಿ ಮುಂಗಡ ಬುಕಿಂಗ್ ಮಾಡಿದರೇ 1,500 ರೂ.ಗಳ ಹೆಚ್ಚುವರಿ ರಿಯಾಯಿತಿ ಸಿಗಲಿದೆ.

Best Mobiles in India

English summary
Mi 11 Lite will go on sale in India with a starting price of Rs. 21,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+