ಶಿಯೋಮಿಯ ಮಿ 11 ಅಲ್ಟ್ರಾ, ಮಿ 11 ಪ್ರೊ ಹಾಗೂ ಮಿ 11 ಲೈಟ್‌ 5G ಫೋನ್ ಲಾಂಚ್!

|

ಜನಪ್ರಿಯ ಮೊಬೈಲ್ ತಯಾರಕ ಕಂಪನಿ ಶಿಯೋಮಿ ಈಗಾಗಲೇ ಮಿ ಸರಣಿಯಲ್ಲಿ ಹಲವು ಆಕರ್ಷಕ ಫೋನ್‌ಗಳನ್ನು ಲಾಂಚ್ ಮಾಡಿ ಸೈ ಅನಿಸಿಕೊಂಡಿದೆ. ಅದರ ಬೆನ್ನಲ್ಲೇ ಈಗ ತನ್ನ ಬಹುನಿರೀಕ್ಷಿಯ ಮಿ 11 ಸ್ಮಾರ್ಟ್‌ಫೋನ್‌ ಸರಣಿಯನ್ನು ಅನಾವರಣ ಮಾಡಿದ್ದು ಗ್ರಾಹಕರ ಗಮನ ಸೆಳೆದಿದೆ. ಇನ್ನು ಮಿ 11 ಸರಣಿಯು ಮೂರು ಸ್ಮಾರ್ಟ್‌ಫೋನ್‌ ಮಾಡೆಲ್‌ಗಳನ್ನು ಹೊಂದದ್ದು, ಅವುಗಳು ಕ್ರಮವಾಗಿ ಮಿ 11 ಅಲ್ಟ್ರಾ, ಮಿ 11 ಪ್ರೊ ಹಾಗೂ ಮಿ 11 ಲೈಟ್‌ 5G ಆಗಿವೆ.

ಶಿಯೋಮಿಯ ಮಿ 11 ಅಲ್ಟ್ರಾ, ಮಿ 11 ಪ್ರೊ ಹಾಗೂ ಮಿ 11 ಲೈಟ್‌ 5G ಫೋನ್ ಲಾಂಚ್!

ಹೌದು, ಶಿಯೋಮಿ ತನ್ನ ಬಹು ನಿರೀಕ್ಷಿತ ಮಿ 11 ಸ್ಮಾರ್ಟ್‌ಫೋನ್‌ ಸರಣಿಯನ್ನು ಚೀನಾ ಮಾರುಕಟ್ಟೆಗೆ ಅನಾವರಣ ಮಾಡಿದೆ. ಈ ಸರಣಿಯಲ್ಲಿ ಬಿಡುಗಡೆ ಆದ ಮೂರು ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಅದರೊಂದಿಗೆ ಪವರ್‌ಪುಲ್ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿವೆ. ಇನ್ನು ಈ ಫೋನ್‌ಗಳ ವೇಗದ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿರುವುದು ಪ್ರಮುಖ ಆಕರ್ಷಣೆ ಆಗಿದೆ. ಹಾಗಾದರೇ ಮಿ 11 ಅಲ್ಟ್ರಾ, ಮಿ 11 ಪ್ರೊ ಹಾಗೂ ಮಿ 11 ಲೈಟ್‌ 5G ಫೋನ್‌ಗಳ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮಿ 11 ಅಲ್ಟ್ರಾ- ಡಿಸ್‌ಪ್ಲೇ ಹಾಗೂ ಪ್ರೊಸೆಸರ್‌
ಮಿ 11 ಅಲ್ಟ್ರಾ ಫೋನ್ 3,200× 1,440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.81 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ E4 AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದ್ದು, 120Hz ರೀಫ್ರೇಶ್‌ ರೇಟ್‌ ಪಡೆದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಹೊಂದಿದ್ದು, 8GB RAM + 256GB, 12GB RAM + 256GB ಆಯ್ಕೆಗಳನ್ನು ಒಳಗೊಂಡಿದೆ.

ಶಿಯೋಮಿಯ ಮಿ 11 ಅಲ್ಟ್ರಾ, ಮಿ 11 ಪ್ರೊ ಹಾಗೂ ಮಿ 11 ಲೈಟ್‌ 5G ಫೋನ್ ಲಾಂಚ್!

ಮಿ 11 ಅಲ್ಟ್ರಾ- ಕ್ಯಾಮೆರಾ ಹಾಗೂ ಬ್ಯಾಟರಿ
ಮಿ 11 ಅಲ್ಟ್ರಾ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 48 ಎಂಪಿ ಸೆನ್ಸಾರ್‌ ಬಲದಲ್ಲಿ ಇದೆ. ಹಾಗೂ ತೃತೀಯ ಕ್ಯಾಮೆರಾವು ಅತ್ಯುತ್ತಮ ಸೆನ್ಸಾರ್ ಬಲ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 20 ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಮಿ 11 ಅಲ್ಟ್ರಾ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ.

ಮಿ 11 ಪ್ರೊ- ಡಿಸ್‌ಪ್ಲೇ ಹಾಗೂ ಪ್ರೊಸೆಸರ್‌
ಮಿ 11 ಪ್ರೊ ಫೋನ್ ಸಹ 3,200× 1,440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.81 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ E4 AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದ್ದು, 120Hz ರೀಫ್ರೇಶ್‌ ರೇಟ್‌ ಪಡೆದಿದೆ. ಹಾಗೆಯೇ HDR10+ ಹಾಗೂ ಡಾಲ್ಬಿ ವಿಷನ್ ಸಪೋರ್ಟ್‌ ಪಡೆದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಹೊಂದಿದ್ದು, 8GB RAM + 128GB, 8GB RAM + 256GB ಆಯ್ಕೆಗಳನ್ನು ಒಳಗೊಂಡಿದೆ.

ಶಿಯೋಮಿಯ ಮಿ 11 ಅಲ್ಟ್ರಾ, ಮಿ 11 ಪ್ರೊ ಹಾಗೂ ಮಿ 11 ಲೈಟ್‌ 5G ಫೋನ್ ಲಾಂಚ್!

ಮಿ 11 ಪ್ರೊ- ಕ್ಯಾಮೆರಾ ಹಾಗೂ ಬ್ಯಾಟರಿ
ಮಿ 11 ಪ್ರೊ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 13 ಎಂಪಿ ಸೆನ್ಸಾರ್‌ ಬಲದಲ್ಲಿ ಇದೆ. ಹಾಗೂ ತೃತೀಯ ಕ್ಯಾಮೆರಾವು 8 ಎಂಪಿ ಸೆನ್ಸಾರ್ ಬಲ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 20 ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಮಿ 11 ಪ್ರೊ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ.

ಮಿ 11 ಲೈಟ್‌- ಡಿಸ್‌ಪ್ಲೇ ಹಾಗೂ ಪ್ರೊಸೆಸರ್‌
ಮಿ 11 ಲೈಟ್‌ ಫೋನ್ ಸಹ 3,200× 1,440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಹೊಂದಿದೆ. ಗೊರಿಲ್ಲಾ ಗ್ಲಾಸ್ 6 ರಕ್ಷಣೆ ಇದ್ದು, 90Hz ರೀಫ್ರೇಶ್‌ ರೇಟ್‌ ಪಡೆದಿದೆ. ಹಾಗೆಯೇ HDR10+ ಹಾಗೂ ಡಾಲ್ಬಿ ವಿಷನ್ ಸಪೋರ್ಟ್‌ ಪಡೆದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಹೊಂದಿದ್ದು, 8GB RAM + 128GB, 8GB RAM + 256GB ಆಯ್ಕೆಗಳನ್ನು ಒಳಗೊಂಡಿದೆ.

ಶಿಯೋಮಿಯ ಮಿ 11 ಅಲ್ಟ್ರಾ, ಮಿ 11 ಪ್ರೊ ಹಾಗೂ ಮಿ 11 ಲೈಟ್‌ 5G ಫೋನ್ ಲಾಂಚ್!

ಮಿ 11 ಲೈಟ್‌- ಕ್ಯಾಮೆರಾ ಹಾಗೂ ಬ್ಯಾಟರಿ
ಮಿ 11 ಲೈಟ್‌ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಎಂಪಿ ಸೆನ್ಸಾರ್‌ ಬಲದಲ್ಲಿ ಇದೆ. ಹಾಗೂ ತೃತೀಯ ಕ್ಯಾಮೆರಾವು 5 ಎಂಪಿ ಸೆನ್ಸಾರ್ ಬಲ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 20 ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಮಿ 11 ಲೈಟ್‌ ಫೋನ್ 4,250mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ.

ಬೆಲೆ ಎಷ್ಟು?
ಚೀನಾದಲ್ಲಿ ಮಿ 11 ಅಲ್ಟ್ರಾ ಬೇಸ್‌ 8GB RAM + 256GB ವೇರಿಯಂಟ್‌ ದರವು CNY 5,999 (ಭಾರತದಲ್ಲಿ ಅಂದಾಜು 66,400ರೂ.ಎನ್ನಲಾಗಿದೆ). ಹಾಗೆಯೇ ಮಿ 11 ಪ್ರೊ ಫೋನಿನ 8GB RAM + 128GB ವೇರಿಯಂಟ್‌ ಬೆಲೆಯು CNY 4,999 (ಭಾರತದಲ್ಲಿ ಅಂದಾಜು 55,400ರೂ. ಎನ್ನಲಾಗಿದೆ) ಹಾಗೆಯೇ ಮಿ 11 ಲೈಟ್‌ 5G ಫೋನಿನ 8GB RAM + 128GB ವೇರಿಯಂಟ್ ದರವು CNY 2,299 (ಭಾರತದಲ್ಲಿ ಅಂದಾಜು 25,500ರೂ.ಗಳು ಎನ್ನಲಾಗಿದೆ).

Most Read Articles
Best Mobiles in India

English summary
Mi 11 Ultra, Mi 11 Pro, and Mi 11 Lite 5G smartphones in the Mi 11 series were launched by Xiaomi in China on Monday, March 29.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X