ಶಿಯೋಮಿಯ ಈ ದೈತ್ಯ 5G ಫೋನ್ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!
ಪ್ರಮುಖ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ ಶಿಯೋಮಿ ಸಂಸ್ಥೆಯು ಸಹ ಒಂದಾಗಿದೆ. ಶಿಯೋಮಿ ಸಂಸ್ಥೆಯ ಭಿನ್ನ ಶ್ರೇಣಿಯ ಬೆಲೆಯಲ್ಲಿ ಫೋನ್‌ಗಳನ್ನು ಪರಿಚಯಿಸಿ, ಅಧಿಕ ಗ್ರಾಹಕ ಬಳಗವನ್ನು ಸೆಳೆದಿವೆ. ಆ ಪೈಕಿ ಸಂಸ್ಥೆಯು ಜನಪ್ರಿಯ ಫೋನ್‌ಗಳಲ್ಲಿ ಒಂದಾದ ಮಿ 11X ಫೋನ್ ಬೊಂಬಾಟ್ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆದ್ರೆ ಇದೀಗ ಈ ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಆಗಿದ್ದು, ಮತ್ತೆ ಗಮನ ಸೆಳೆದಿದೆ.
ಹೌದು, ಫ್ಲಿಪ್‌ಕಾರ್ಟ್ ತಾಣದಲ್ಲಿ ಮಿ 11X ಫೋನ್ 23% ರಿಯಾಯಿತಿ ಪಡೆದಿದೆ. 6GB RAM + 128 GB ವೇರಿಯಂಟ್ ಬೆಲೆ 29,999 ರೂ. ಇದ್ದು, ಈಗ 22,990 ರೂ. ಗಳ ಆಫರ್ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ನೋ ಕಾಸ್ಟ್ ಇಎಮ್‌ಐ ಸೌಲಭ್ಯದ ಆಯ್ಕೆಗಳು ಹಾಗೂ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಸಹ ಲಭ್ಯವಾಗಲಿದೆ. ಹಾಗಾದರೇ ಶಿಯೋಮಿ ಮಿ 11X ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ : ಮಿ 11X ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪ್ಲಿಂಗ್ ರೇಟ್, 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ ಹೆಚ್‌ಡಿಆರ್ 10 + ಬೆಂಬಲ, 100% ಡಿಸಿಐ-ಪಿ3 ಯನ್ನು ಹೊಂದಿದೆ.
ಪ್ರೊಸೆಸರ್ ಪವರ್ : ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 GB RAM ಮತ್ತು 128 GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
ಕ್ಯಾಮೆರಾ ಸೆನ್ಸಾರ್ : ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೋನಿ ಐಎಂಎಕ್ಸ್ 582 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್ ಲೆನ್ಸ್, ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಹೊಂದಿದೆ. ಇದಲ್ಲದೆ 20 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯ : ಮಿ 11X ಸ್ಮಾರ್ಟ್‌ಫೋನ್ 4,520 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಮತ್ತು 2.5W ನಲ್ಲಿ ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಡ್ಯುಯಲ್-ಬ್ಯಾಂಡ್ ವೈ-ಫೈ, ವೈ-ಫೈ 6, ಜಿಪಿಎಸ್, ಎಜಿಪಿಎಸ್, ನ್ಯಾವಿಕ್ ಬೆಂಬಲ, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.
ಮೆಮೊರಿ ಮತ್ತು ಕಲರ್ ಆಯ್ಕೆ : ಮಿ 11X ಸ್ಮಾರ್ಟ್‌ಫೋನ್ 6GB RAM + 128 GB ಹಾಗೂ 8GB RAM + 128 GB RAM ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನು ಈ ಸ್ಮಾರ್ಟ್‌ಫೋನ್ ಸೆಲೆಸ್ಟಿಯಲ್ ಸಿಲ್ವರ್, ಕಾಸ್ಮಿಕ್ ಬ್ಲ್ಯಾಕ್ ಮತ್ತು ಫ್ರಾಸ್ಟಿ ವೈಟ್ ಬಣ್ಣಗಳ ಆಯ್ಕೆ ಪಡೆದಿದೆ.


Click it and Unblock the Notifications








