Home
ಸುದ್ದಿಜಾಲ

ಶಿಯೋಮಿಯ ಈ ಹಳೆಯ ಜನಪ್ರಿಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಶಿಯೋಮಿ ಸಂಸ್ಥೆಯು ತನ್ನ ಕೆಲವು ಮೀಡ್‌ರೇಂಜ್‌ ಹಾಗೂ ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅವುಗಳಲ್ಲಿ ಮಿ 11X ಪ್ರೊ 5G ಫೋನ್ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಂಡಿದೆ. ಈ ಫೋನ್‌ ಇದೀಗ ಭರ್ಜರಿ ರಿಯಾಯಿತಿ ಪಡೆದಿದ್ದು, ಗ್ರಾಹಕರನ್ನು ಮತ್ತೇ ಆಕರ್ಷಿಸಿದೆ.

ಹೌದು, ಅಧಿಕೃತ ಶಿಯೋಮಿ (ಮಿ.ಕಾಮ್‌) ವೆಬ್‌ಸೈಟ್‌ ನಲ್ಲಿ ಸಂಸ್ಥೆಯ 'ಮಿ 11X ಪ್ರೊ 5G' ಮೊಬೈಲ್‌ ಬೊಂಬಾಟ್‌ ರಿಯಾಯಿತಿ ಪಡೆದಿದೆ. ಈ ಫೋನಿನ 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಫರ್‌ನಲ್ಲಿ 24,999ರೂ. ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.

ಶಿಯೋಮಿಯ ಈ ಹಳೆಯ ಜನಪ್ರಿಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಅಂದಹಾಗೆ ಈ ಮೊಬೈಲ್‌ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಸೆನ್ಸಾರ್‌ ಹೊಂದಿದ್ದು, ಇದರ ಮೊದಲ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. ಹಾಗೆಯೇ 4,520mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಹಾಗಾದರೇ ಮಿ 11X ಪ್ರೊ 5G ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿಯ ಈ ಹಳೆಯ ಜನಪ್ರಿಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಡಿಸ್‌ಪ್ಲೇ ರಚನೆ ಹೀಗಿದೆ

ಮಿ 11X ಪ್ರೊ 5G ಮೊಬೈಲ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಅನ್ನು ಹೊಂದಿವೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌, 360Hz ಟಚ್ ಸ್ಯಾಂಪ್ಲಿಂಗ್ ರೇಟ್‌, 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದಿದೆ. ಅಲ್ಲದೇ ಈ ಡಿಸ್‌ಪ್ಲೇಯು ಹೆಚ್‌ಡಿಆರ್ 10 + ಬೆಂಬಲ, 100% ಡಿಸಿಐ-ಪಿ3 ಯನ್ನು ಪಡೆದುಕೊಂಡಿದೆ.

ಪ್ರೊಸೆಸರ್‌ ಪವರ್‌ ಯಾವುದು

ಮಿ 11X ಪ್ರೊ 5G ಮೊಬೈಲ್‌ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಕೂಡಾ ಪಡೆದಿದೆ. ಇದರ ಜೊತೆಗೆ ಈ ಫೋನ್ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಶಿಯೋಮಿಯ ಈ ಹಳೆಯ ಜನಪ್ರಿಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಕ್ಯಾಮೆರಾ ಸೆನ್ಸಾರ್ ಸೌಲಭ್ಯ

ಮಿ 11X ಪ್ರೊ 5G ಮೊಬೈಲ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮೊದಲ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್, ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ ವೈಡ್ ಲೆನ್ಸ್‌, ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಪಡೆದಿದೆ. ಇನ್ನು ಈ ಮೊಬೈಲ್‌ 20 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಅನ್ನು ನೀಡಲಾಗಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ

ಮಿ 11X ಪ್ರೊ 5G ಮೊಬೈಲ್‌ 4,520mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 33W ವೇಗದ ಚಾರ್ಜಿಂಗ್ ಮತ್ತು 2.5W ನಲ್ಲಿ ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಈ ಮೊಬೈಲ್‌ ಡಾಲ್ಬಿ ಅಟ್ಮೋಸ್ ಸಪೋರ್ಟ್‌ ಜೊತೆಗೆ ಡ್ಯುಯಲ್ ಸ್ಪೀಕರ್‌ ಆಯ್ಕೆ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, ಡ್ಯುಯಲ್ ಬ್ಯಾಂಡ್ ವೈ ಫೈ, ವೈ ಫೈ 6, ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಇವೆ.

ಮೆಮೊರಿ ಹಾಗೂ ಕಲರ್‌

ಮಿ ಸಂಸ್ಥೆಯ ಈ ಮೊಬೈಲ್‌ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ. ಇನ್ನು ಈ ಮೊಬೈಲ್‌ ಸೆಲೆಸ್ಟಿಯಲ್ ಸಿಲ್ವರ್, ಕಾಸ್ಮಿಕ್ ಬ್ಲ್ಯಾಕ್ ಮತ್ತು ಫ್ರಾಸ್ಟಿ ವೈಟ್ ಕಲರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Mi 11X Pro 5G direct Price Drop on Mi website. offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+