ಈ ಮಿ ಸ್ಮಾರ್ಟ್‌ಟಿವಿಗೆ 48% ರಷ್ಟು ರಿಯಾಯಿತಿ, ಭಾರೀ ಉಳಿತಾಯ ಪಕ್ಕಾ!
ಸ್ಮಾರ್ಟ್‌ಟಿವಿಗಳು ಇಂದು ಬಳಕೆದಾರರಿಗೆ ವಿವಿಧ ರೀತಿಯ ಸೌಲಭ್ಯ ಕಲ್ಪಿಸಿಕೊಡುತ್ತವೆ. ಈ ನಡುವೆ ಅತ್ಯುತ್ತಮ ಸ್ಮಾರ್ಟ್‌ಟಿವಿಗಳಿಗೆ ಜನರು ಅಪ್‌ಗ್ರೇಡ್ ಆಗುವುದು ಸಾಮಾನ್ಯವಾದ ವಿಷಯ. ಆದರೆ, ನೀವು ಈಗ ಭರ್ಜರಿ ರಿಯಾಯಿತಿಯೊಂದಿಗೆ ಮಿ ಸ್ಮಾರ್ಟ್‌ಟಿವಿ ಖರೀದಿ ಮಾಡಬಹುದು.
ಹೌದು, ಸ್ಮಾರ್ಟ್‌ಟಿವಿ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಭಿನ್ನ ವಿಭಿನ್ನ ಫೀಚರ್ಸ್ ಇರುವ ಸ್ಮಾರ್ಟ್‌ಟಿವಿಗಳು ಲಭ್ಯ ಇವೆ. ಆದರೆ, ಪ್ರತಿ ಟಿವಿಗಳು ಸಹ ವಿವಿಧ ಬೆಲೆ ಪಡೆಯುವ ಮೂಲಕ ಬಳಕೆದಾರರ ಅಗತ್ಯತೆಗಳನ್ನು ಪೂರೈಕೆ ಮಾಡುತ್ತವೆ. ಮಿ 5A ಹೆಚ್‌ಡಿ ರೆಡಿ LED ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಬಹುಕಾಂತೀಯ ಲೋಹದ ಚೌಕಟ್ಟಿನೊಂದಿಗೆ ಕಾಣಿಸಿಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್ ಹಾಗೂ ಆಫರ್ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮಿ 5A ಹೆಚ್‌ಡಿ ರೆಡಿ LED ಸ್ಮಾರ್ಟ್‌ಟಿವಿ ಆಫರ್ ವಿವರ: ಈ ಸ್ಮಾರ್ಟ್‌ಟಿವಿಗೆ (Mi 5A HD Ready LED Smart TV) ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್‌ನಲ್ಲಿ 48% ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಂದರೆ ಈ ಸ್ಮಾರ್ಟ್‌ಟಿವಿ 24,999ರೂ.ಗಳ ಬೆಲೆ ಹೊಂದಿದ್ದು, ನೀವು ಈಗ ಈ ಟಿವಿಯನ್ನು ಕೇವಲ 12,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.
ಮಿ 5A ಹೆಚ್‌ಡಿ ರೆಡಿ LED ಸ್ಮಾರ್ಟ್‌ಟಿವಿ ಫೀಚರ್ಸ್: ಈ ಸ್ಮಾರ್ಟ್‌ಟಿವಿ 32 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 5A ಸರಣಿಯ ಈ ಟಿವಿ ಬಹುಕಾಂತೀಯ ಲೋಹದ ಚೌಕಟ್ಟಿನೊಂದಿಗೆ ಕಾಣಿಸಿಕೊಂಡಿದೆ. ಈ ಮೂಲಕ ಬಳಕೆದಾರರು ಆಹ್ಲಾದಿಸಬಹುದಾದ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಈ ಟಿವಿಯ ವಿಶೇಷ ಪಿಕ್ಚರ್ ಎಂಜಿನ್ ಇದ್ದು, ಇದಕ್ಕೆ ಜೀವ ತುಂಬಲು ಕಾಂಟ್ರಾಸ್ಟ್, ಬಣ್ಣಗಳು ಮತ್ತು ಡೀಪ್ ಅನ್ನು ಹೊಂದಿಸಬಹುದಾಗಿದೆ.
ಇದರೊಂದಿಗೆ ಡಾಲ್ಬಿ ಆಡಿಯೋ ಮತ್ತು 20 W ಹೈ-ಫಿಡೆಲಿಟಿ ಸೌಂಡ್‌ನೊಂದಿಗೆ ಈ ಸ್ಮಾರ್ಟ್‌ಟಿವಿ ಕಾಣಿಸಿಕೊಂಡಿದ್ದು, ಆಡಿಯೋ ವಿಭಾಗದಲ್ಲಿ ನಿಮಗೆ ಪ್ರೀಮಿಯಂ ಅನುಭವ ನೀಡಲಿದೆ. ಈ ಮೂಲಕ ನೀವು ಸ್ಮಾರ್ಟ್‌ಟಿವಿಯಲ್ಲಿ ವಿಡಿಯೋ ನೋಡುವಾಗ ಅಂದರೆ ಸಿನಿಮಾ ವೀಕ್ಷಣೆ ಮಾಡುವಾಗ ಮನರಂಜನೆ ಲೋಕದಲ್ಲಿ ಮುಳುಗುವುದು ಪಕ್ಕಾ. ಅಷ್ಟೇ ಅಲ್ಲದೆ ಕ್ವಾಡ್-ಕೋರ್ A35 ಚಿಪ್‌ಸೆಟ್ ಪ್ರೊಸೆಸರ್ ಬಲ ಪಡೆದಿದ್ದು, ಎಲ್ಲಾ ರೀತಿಯಲ್ಲಿ ಉತ್ತಮ ಮನರಂಜನೆ ನೀಡಲಿದೆ.
50,000ರೂ.ಗಿಂತ ಕಡಿಮೆ ಲಭ್ಯವಿರುವ ಸ್ಮಾರ್ಟ್‌ಟಿವಿಗಳು:
LG 4K ಅಲ್ಟ್ರಾ HD ಸ್ಮಾರ್ಟ್ LED TV 55UQ8020PSB: LG ಯ ಈ ಸ್ಮಾರ್ಟ್ ಟಿವಿ ಪ್ರಸ್ತುತ ಬೆಲೆ 49,990ರೂ.ಗಳಾಗಿದೆ. ಒನ್‌ಕಾರ್ಡ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟಿನ ಮೇಲೆ ಗ್ರಾಹಕರು ಫ್ಲಾಟ್ 1250ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದು ಇನ್‌ಬಿಲ್ಟ್ ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸಾವನ್ನು ಹೊಂದಿದೆ.ಹೋಮ್‌ಕಿಟ್ ಜೊತೆಗೆ ಆಪಲ್ ಏರ್‌ಪ್ಲೇ ಅನ್ನು ಬೆಂಬಲಿಸುತ್ತದೆ.
ಸೋನಿ ಬ್ರಾವಿಯಾ 4K ಅಲ್ಟ್ರಾ HD ಸ್ಮಾರ್ಟ್ LED ಗೂಗಲ್ TV KD-43X74K: ಈ ಟಿವಿಯನ್ನು ಅಮೆಜಾನ್‌ನಲ್ಲಿ 41,990ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಗ್ರಾಹಕರು ಎಲ್ಲಾ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಫ್ಲಾಟ್ 2000 ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದು 60 Hz ರಿಫ್ರೆಶ್ ರೇಟ್, X1 4K ಪ್ರೊಸೆಸರ್‌ನ ರಿಫ್ರೆಶ್ ದರದೊಂದಿಗೆ 4K ಅಲ್ಟ್ರಾ HD ಡಿಸ್‌ಪ್ಲೇ ಹೊಂದಿದೆ.
ಸ್ಯಾಮ್‌ಸಂಗ್ ಕ್ರಿಸ್ಟಲ್ ಐಸ್ಮಾರ್ಟ್ 4K ಅಲ್ಟ್ರಾ HD ಸ್ಮಾರ್ಟ್ LED TV UA55CUE60AKLXL: ಈ ಟಿವಿ 47,990 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು ಎಲ್ಲಾ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಫ್ಲಾಟ್ 3000ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈ ಸ್ಮಾರ್ಟ್ ಟಿವಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಯೂಟ್ಯೂಬ್ ಮತ್ತು ಇತರ ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಬೆಂಬಲಿಸುತ್ತದೆ.


Click it and Unblock the Notifications