Mi SmartTV: ಈ ಮಿ ಸ್ಮಾರ್ಟ್‌ಟಿವಿಗೆ 56% ರಿಯಾಯಿತಿ! 8 GB ಸ್ಟೋರೇಜ್.. ಉತ್ತಮ ಆಡಿಯೋ ಸೌಲಭ್ಯ
ಸ್ಮಾರ್ಟ್‌ಟಿವಿ (Smart TV) ವಿಭಾಗದಲ್ಲಿ ಮಿ ಸ್ಮಾರ್ಟ್‌ಟಿವಿಗಳಿಗೆ (Mi SmartTV) ಭರ್ಜರಿ ಬೇಡಿಕೆ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಿಶೇಷ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ಟಿವಿಗಳನ್ನೂ ಸಹ ಅನಾವರಣ ಮಾಡಿಕೊಂಡು ಬರಲಾಗುತ್ತಿದೆ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಭರ್ಜರಿ ಆಫರ್ ನೀಡಲಾಗಿದೆ.
ಹೌದು, ಮಿ ಕಂಪೆನಿಯ 32 ಇಂಚಿನ ಎ ಸರಣಿ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಗೂಗಲ್ ಟಿವಿ 2023 (L32M8-5AIN) ಸ್ಮಾರ್ಟ್‌ಟಿವಿಗೆ (Mi A series HD Ready LED Smart Google TV 2023 Edition) ಬೊಂಬಾಟ್ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಟಿವಿ ಡಾಲ್ಬಿ ಆಡಿಯೋ ಫೀಚರ್ಸ್, ಡಿಟಿಎಸ್ ಹೆಚ್‌ಡಿ ಸೌಲಭ್ಯದೊಂದಿಗೆ 20W ಸ್ಪೀಕರ್ ಆಯ್ಕೆ ನೀಡಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿಯ ಆಫರ್ ವಿವರ ಹಾಗೂ ಈ ಸ್ಮಾರ್ಟ್‌ಟಿವಿ ಹೊಂದಿರುವ ಸ್ಮಾರ್ಟ್ ಫೀಚರ್ಸ್ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಿ ಎ ಸರಣಿ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಗೂಗಲ್ ಟಿವಿ 2023 ಆಫರ್ ವಿವರ: ಈ ಸ್ಮಾರ್ಟ್‌ಟಿವಿ ಸಾಮಾನ್ಯ ದರ 24,999ರೂ.ಗಳಾಗಿದೆ. ಆದರೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ (Flipkart) ಇದಕ್ಕೆ 56% ರಿಯಾಯಿತಿ ನೀಡಿದೆ. ಈ ಮೂಲಕ ನೀವು ಕೇವಲ 10,990ರೂ.ಗಳಿಗೆ ಈ ಅತ್ಯುತ್ತಮ ಸ್ಮಾರ್ಟ್‌ಟಿವಿಯನ್ನು ಖರೀದಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಬ್ಯಾಂಕ್ ಆಫರ್ ಸಹ ನೀಡಲಾಗಿದ್ದು, ಇದರಿಂದ ಇನ್ನೂ ಅಗ್ಗದ ದರದಲ್ಲಿ ಈ ಟಿವಿ ಖರೀದಿ ಮಾಡಬಹುದಾಗಿದೆ.
ಬ್ಯಾಂಕ್ ಆಫರ್‌ನಲ್ಲಿ ನೀವು ಪೇಟಿಎಮ್ ವಾಲೆಟ್‌ನಲ್ಲಿ ಖರೀದಿ ಮಾಡಿದ್ರೆ 100 ಕ್ಯಾಶ್‌ಬ್ಯಾಕ್ ಸಿಗಲಿದೆ, ಇದರೊಂದಿಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ (Flipkart Axis Bank Card) ಬಳಕೆ ಮಾಡಿ ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್ ಪೇ ಲೇಟರ್ ಮೂಲಕ ಖರೀದಿ ಮಾಡಿದ್ರೆ 20,000ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ಅದಾಗ್ಯೂ ನಿಮ್ಮ ಬಳಿ ಹೆಚ್ಚಿನ ಮೊತ್ತ ಇಲ್ಲ ಎಂದಾದರೆ ತಿಂಗಳಿಗೆ 38 ರೂ. ನೀಡುವ ಮೂಲಕ ಈ ಟಿವಿ ಖರೀದಿ ಮಾಡಬಹುದಾಗಿದೆ.

ಮಿ ಎ ಸರಣಿ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಗೂಗಲ್ ಟಿವಿ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಟಿವಿ 32 ಇಂಚಿನ ಎಲ್‌ಇಡಿ ಹೆಚ್‌ಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, ವಿವಿದ್ ಪಿಕ್ಚರ್ ಎಂಜಿನ್ ಆಯ್ಕೆಯೊಂದಿಗೆ 16:09 ಆಕಾರ ಅನುಪಾತ, 60 Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ 178 ಡಿಗ್ರಿ ವೀಕ್ಷಣಾ ಸೌಲಭ್ಯ ಪಡೆದಿದೆ.
ಮಿ ಎ ಸರಣಿ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಗೂಗಲ್ ಟಿವಿ ಪ್ರಮುಖ ಫೀಚರ್ಸ್: ಈ ಸ್ಮಾರ್ಟ್‌ಟಿವಿ ಕ್ವಾಡ್ ಕೋರ್ ಕಾರ್ಟೆಕ್ಸ್ A35 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ G31 MP2 ಗ್ರಾಫಿಕ್ ಪ್ರೊಸೆಸರ್ ಬೆಂಬಲದೊಂದಿಗೆ 1.5 GB RAM ಆಯ್ಕೆ ಹಾಗೂ 8 GB ಇಂಟರ್ ಸ್ಟೋರೇಜ್ ಆಯ್ಕೆ ಈ ಸ್ಮಾರ್ಟ್‌ಟಿವಿ ಪ್ಯಾಕ್ ಆಗಿದ್ದು, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಡಿಸ್ನಿ+ಹಾಟ್‌ಸ್ಟಾರ್ ಸೇರಿದಂತೆ ಅನೇಕ ಓಟಿಟಿ ಆಪ್‌ಗಳನ್ನು ಪಡೆದುಕೊಂಡಿದೆ.
ಹಾಗೆಯೇ ಈ ಸ್ಮಾರ್ಟ್‌ಟಿವಿ ಎರಡು ಸ್ಪೀಕರ್‌ಗಳನ್ನು ಹೊಂದಿದ್ದು, ಇದು 20 W ಸ್ಪೀಕರ್ ಔಟ್‌ಪುಟ್ ನೀಡಲಿದೆ. ಈ ವಿಭಾಗದಲ್ಲಿ ಬಳಕೆದಾರರು ಸ್ಟ್ಯಾಂಡರ್ಡ್, ನ್ಯೂಸ್, ಮೂವಿ, ಗೇಮ್, ಕಸ್ಟಮ್, 5 ಬ್ಯಾಂಡ್ ಈಕ್ವಲೈಜರ್ ಸೌಂಡ್ ಮೋಡ್ ಅನುಭವವನ್ನು ಪಡೆದುಕೊಳ್ಳಬಹುದು. ಅಂದರೆ, ನೀವು ಯಾವ ಕಂಟೆಂಟ್ ಅನ್ನು ವೀಕ್ಷಣೆ ಮಾಡುತ್ತಿದ್ದೀರೋ ಅದರಲ್ಲಿ ವಿಶೇಷ ಅನುಭವ ಪಡೆದುಕೊಳ್ಳಬಹುದು.

ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಗೂಗಲ್ ಟಿವಿ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಸ್ಕ್ರೀನ್ ಮಿರರಿಂಗ್ ಸೌಲಭ್ಯದೊಂದಿಗೆ ಅಸ್ಸಾಮಿ, ಬೆಂಗಾಲಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಭಾಷೆಯ ಸಿಸ್ಟಮ್ ಭಾಷೆ ಆಯ್ಕೆ ಪಡೆದಿದೆ. ಜೊತೆಗೆ ಎರಡು ಹೆಚ್‌ಡಿಎಮ್‌ಐ ಪೋರ್ಟ್,
ಎರಡು ಯುಎಸ್‌ಬಿ ಪೋರ್ಟ್ ಹಾಗೂ ವೈ-ಫೈ, ಸುಧಾರಿತ ಬ್ಲೂಟೂತ್ ಆವೃತ್ತಿ ಹೊಂದಿದೆ.


Click it and Unblock the Notifications








