Home
ಸುದ್ದಿಜಾಲ

ದೇಶಿ ಮಾರುಕಟ್ಟೆಗೆ 'ಶಿಯೋಮಿ ಮಿ A3' ಫೋನ್ ಎಂಟ್ರಿ!..48ಎಂಪಿ ಕ್ಯಾಮೆರಾ!

ಜನಪ್ರಿಯ ಶಿಯೋಮಿ ಕಂಪೆನಿಯು ಇತ್ತೀಚಿಗಷ್ಟೆ ಸ್ಪೇನ್‌ನಲ್ಲಿ ಬಿಡುಗಡೆ ಮಾಡಿದ್ದ ಹೊಸ 'ಶಿಯೋಮಿ ಮಿ ಎ3' ಸ್ಮಾರ್ಟ್‌ಫೋನ್‌ ಅನ್ನು ಇಂದು (ಅಗಷ್ಟ 21) ಭಾರತದಲ್ಲಿಯೂ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 48ಎಂಪಿ ಸೆನ್ಸಾರ್‌ ಕ್ಯಾಮೆರಾ ಫೀಚರ್‌ದೊಂದಿಗೆ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಆರ್ಭಟ ಆರಂಭಿಸುವ ಲಕ್ಷಣಗಳನ್ನು ಹೊರಸೂಸಿದೆ.

ದೇಶಿ ಮಾರುಕಟ್ಟೆಗೆ 'ಶಿಯೋಮಿ ಮಿ A3' ಫೋನ್ ಎಂಟ್ರಿ!..48ಎಂಪಿ ಕ್ಯಾಮೆರಾ!

ಹೌದು, ಶಿಯೋಮಿ ಕಂಪೆನಿಯ ಹೊಸ 'ಮಿ ಎ3' ಸ್ಮಾರ್ಟ್‌ಫೋನ್‌ 4GB RAM + 64GB ಮತ್ತು 6GB RAM + 128GB ಸಾಮರ್ಥ್ಯದ ಎರಡು ವೇರಿಯಂಟ್‌ಗಳಲ್ಲಿ ಲಾಂಚ್ ಆಗಿದೆ. ಈ ಫೋನ್‌ 'ನಾಟ್‌ ಜಸ್ಟ್‌ ಬ್ಲೂ', 'ಮೋರ್‌ ದೇನ್ ವೈಟ್‌' ಮತ್ತು 'ಕೈಂಡ್‌ ಆಫ್ ಗ್ರೇ' ಬಣ್ಣಗಳ ಆಯ್ಕೆಗಳನ್ನು ಹೊಂದಿರುವ ಈ ಫೋನ್‌ ಇದೇ ಅಗಷ್ಟ್ 23ರ ಮಧ್ಯಾಹ್ನ 12ರಂದು ಮೊದಲ ಸೇಲ್ ಆರಂಭಿಸಲಿದ್ದು, 12,999ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿದೆ.

ದೇಶಿ ಮಾರುಕಟ್ಟೆಗೆ 'ಶಿಯೋಮಿ ಮಿ A3' ಫೋನ್ ಎಂಟ್ರಿ!..48ಎಂಪಿ ಕ್ಯಾಮೆರಾ!

ಅಮೆಜಾನ್, Mi.com, ಮಿ ಹೋಮ್ ತಾಣಗಳಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಗ್ರಾಹಕರಿಗೆ 750ರೂ.ಗಳ ಕ್ಯಾಶ್‌ಬ್ಯಾಕ್‌ ದೊರೆಯಲಿದ್ದು, ಹಾಗೂ ಇಎಮ್‌ಐಗಳ ಟ್ರಾನ್ಶಾಕ್ಷನ್‌ ಮೇಲೆ 250ರೂ ಕ್ಯಾಶ್‌ಬ್ಯಾಕ್‌ ಸಿಗಲಿದೆ. ಹಾಗೆಯೇ ಏರ್‌ಟೆಲ್‌ನಿಂದ (249ರೂ. ರೀಚಾರ್ಜ್‌) ಡಬಲ್ ಡೇಟಾ ಮತ್ತು ಅನಿಯಮಿತ ಕರೆಯ ಕೊಡುಗೆ ಲಭ್ಯವಾಗಲಿದೆ. ಹಾಗಾದರೇ ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಶಿಯೋಮಿಮಿ ಎ3 ಸ್ಮಾರ್ಟ್‌ಫೋನ್‌ 1560x720 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.1 ಇಂಚಿನ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆ ಹೊಂದಿದ್ದು, ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ 5 ಅನ್ನು ಒಳಗೊಂಡಿದೆ. ಗ್ರೇಡಿಯಂಟ್‌ ಪ್ಯಾನೆಲ್ ರಚನೆ ಪಡೆದಿದ್ದು, ಸುತ್ತಳತೆಯು 153.48x71.85x8.5mm ಆಗಿದೆ.

ಪ್ರೊಸೆಸರ್ ಹಾಗೂ ಮೆಮೊರಿ

ಪ್ರೊಸೆಸರ್ ಹಾಗೂ ಮೆಮೊರಿ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 665 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 9 ಓಎಸ್‌ ಬೆಂಬಲ ಪಡೆದಿದೆ. 4GB RAM + 64GB ಮತ್ತು 6GB RAM + 128GB ಸಾಮರ್ಥ್ಯದ ವೇರಿಯಂಟ್‌ ಮಾದರಿಗಳ ಆಯ್ಕೆ ಇದ್ದು, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯಾ ಮೆಮೊರಿಯನ್ನು 256GB ವರೆಗೂ ವಿಸ್ತರಿಸಬಹುದಾಗದ ಅವಕಾಶ ಇದೆ.

ಹೈ ಸೆನ್ಸಾರ್‌ ಕ್ಯಾಮೆರಾ

ಹೈ ಸೆನ್ಸಾರ್‌ ಕ್ಯಾಮೆರಾ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು ಎಫ್ / 1.78 ಅಪರ್ಚರ್ನೊಂದಿಗೆ 48ಎಂಪಿ ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಹೊಂದಿದ್ದು, ಇನ್ನು ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಸೆಲ್ಫಿ ಕ್ಯಾಮೆರಾ ವಿಶೇಷ

ಸೆಲ್ಫಿ ಕ್ಯಾಮೆರಾ ವಿಶೇಷ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿ ಕ್ಯಾಮೆರಾ ಹೆಚ್ಚಿನ ಗಮನ ನೀಡಿದ್ದು, ಎಫ್ / 2.0 ಅಪರ್ಚರ್ನೊಂದಿಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ನೀಡಲಾಗಿದೆ. ಹಾಗೆಯೇ ಈ ಕ್ಯಾಮೆರಾವು ಎಐ ಪೋರ್ಟ್ರೇಟ್ ಮೋಡ್, 3 ಡಿ ಬ್ಯೂಟಿ, ಪನೋರಮಾ, ಗೆಸ್ಚರ್ ಫೋಟೋ, ಫ್ರಂಟ್ ಎಚ್‌ಡಿಆರ್ ಮತ್ತು ಫ್ರಂಟ್ ಸ್ಕ್ರೀನ್ ಫಿಲ್ ಸೇರಿದಂತೆ ಹಲವು ಅಗತ್ಯ ಕ್ಯಾಮೆರಾ ತಂತ್ರಜ್ಞಾನಗಳನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ 4,030mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಬೆಂಬಲವನ್ನು ಒಳಗೊಂಡಿದೆ. ಇದರೊಂದಿಗೆ 4ಜಿ ವೋಲ್ಟ್, ಸ್ಲೊ ಮೋಷನ್ ವಿಡಿಯೋ ರೆಕಾರ್ಡಿಂಗ್, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿದಂತೆ ಅಗತ್ಯ ಆಯ್ಕೆಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿದ್ದು, 4GB RAM + 64GB ವೇರಿಯಂಟ್ ಬೆಲೆಯು 12,999ರೂ.ಗಳಾಗಿದೆ. ಮತ್ತು 6GB RAM + 128GB ವೇರಿಯಂಟ್ ಬೆಲೆಯು 15,999ರೂ.ಗಳಿಗೆ ದೊರೆಯಲಿದೆ. ಇದೇ ಅಗಷ್ಟ್ 23ರಂದು ಮೊದಲ ಸೇಲ್ ಇದ್ದು, ಅಮೆಜಾನ್, ಮಿ ಹೋಮ್ ಮತ್ತು Mi.com ತಾಣಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Mi A3 comes with a 32-megapixel selfie camera setup, a 48-megapixel rear main sensor. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+