Home
ಸುದ್ದಿಜಾಲ

ಮಿ ಬ್ಯಾಂಡ್ 5 ಮತ್ತು ಮಿ ಬ್ಯಾಂಡ್ 4: ಪ್ರಮುಖ ಭಿನ್ನತೆಗಳೆನು?

ಶಿಯೋಮಿ ಕಂಪನಿಯ ಫಿಟ್ನೆಸ್‌ ಬ್ಯಾಂಡ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದ್ದು, ಆ ಲಿಸ್ಟ್‌ಗೆ ಈಗ ಕಂಪನಿಯು ಹೊಸದಾಗಿ 'ಮಿ ಬ್ಯಾಂಡ್ 5' ಅನ್ನು ಸೇರ್ಪಡೆ ಮಾಡಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ 'ಮಿ ಬ್ಯಾಂಡ್‌ 4' ಈಗಾಗಲೇ ಮಾರುಕಟ್ಟೆಯಲ್ಲಿ ಟ್ರೆಂಡ್ ಹುಟ್ಟುಹಾಕಿದೆ. ಶಿಯೋಮಿಯು ಇದೀಗ ಮಿ ಬ್ಯಾಂಡ್ 5 ಡಿವೈಸ್‌ ಅನ್ನು ಬಿಡುಗಡೆ ಮಾಡಿದ್ದು, ಫಿಟ್ನೆಸ್ ಪ್ರಿಯರಿಗೆ ಖುಷಿ ನೀಡಿದೆ. ಆದರೆ ಮಿ ಬ್ಯಾಂಡ್ 5 ಡಿವೈಸ್‌, ಮಿ ಬ್ಯಾಂಡ್ 4 ಡಿವೈಸ್‌ಗಿಂತ ಹೇಗೆ ಭಿನ್ನವಾಗಿದೆ.?

ಮಿ ಬ್ಯಾಂಡ್ 4

ಮಿ ಬ್ಯಾಂಡ್ 4 ಡಿವೈಸ್‌ ಹಾಗೂ ಹೊಸ ಮಿ ಬ್ಯಾಂಡ್ 5 ಡಿವೈಸ್ ಅತ್ಯುತ್ತಮ ಫಿಟ್ನೆಸ್ ಸಾಧನಗಳಾಗಿವೆ. ಈ ಡಿವೈಸ್‌ಗಳು ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಸೌಲಭ್ಯಗಳನ್ನು ಹೊಂದಿವೆ. ಹಾಗೆಯೇ ಹೊಸ ಮಿ ಬ್ಯಾಂಡ್ 5 ಡಿವೈಸ್ 11 ಸ್ಪೋರ್ಟ್ ಮೋಡ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗಾದರೆ ಮಿ ಬ್ಯಾಂಡ್ 4 ಮತ್ತು ಮಿ ಬ್ಯಾಂಡ್ 5 ಡಿವೈಸ್‌ಗಳು ಫೀಚರ್ಸ್‌ಗಳ ಭಿನ್ನತೆ ಹೇಗಿವೆ ಎಂಬುದನ್ನು ಈ ಲೆಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಶಿಯೋಮಿ ಮಿ ಬ್ಯಾಂಡ್ 5 1.1-ಇಂಚಿನ ಕಲರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮಿ ಬ್ಯಾಂಡ್ 4 ನಲ್ಲಿನ 0.95-ಇಂಚಿನ ಪರದೆಗಿಂತ ದೊಡ್ಡದಾಗಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ 100 ಕ್ಕೂ ಹೆಚ್ಚು ಹೊಸ ಆನಿಮೇಟೆಡ್ ವಾಚ್ ಫೇಸ್‌ಗಳನ್ನ ಹೊಂದಿದೆ. ಇನ್ನು ಮಿ ಬ್ಯಾಂಡ್‌ 4, ಡಿವೈಸ್‌ 240 x 120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 0.95 ಇಂಚಿನ AMOLED ಕಲರ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಶೇ. 39.9%ರಷ್ಟು ದೊಡ್ಡ ಡಿಸ್‌ಪ್ಲೇ ಆಗಿದ್ದು, ಸಂಪೂರ್ಣ ಕಲರ್‌ ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. 2.5D ಟೆಂಪರ್ಡ್‌ ಗ್ಲಾಸ್‌ ರಚನೆಯನ್ನು ಸಹ ಹೊಂದಿದೆ.

ಫಿಟ್ನೆಸ್ ಫೀಚರ್ಸ್‌

ಫಿಟ್ನೆಸ್ ಫೀಚರ್ಸ್‌

ಶಿಯೋಮಿ ಮಿ ಬ್ಯಾಂಡ್ 5 ಸ್ಮಾರ್ಟ್‌ಬ್ಯಾಂಡ್‌ ಹಾರ್ಟ್‌ಬಿಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಈ ಡಿವೈಸ್ ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಮಹಿಳಾ ಬಳಕೆದಾರರು ತಮ್ಮ ದೈಹಿಕ ಆರೋಗ್ಯ ಕ್ರಮದೊಂದಿಗೆ ಟ್ರ್ಯಾಕ್ ಮಾಡಬಹುದು. ಜೊತೆಗೆ ಬಳಕೆದಾರರು ಸೊಶೀಯಲ್‌ ಮೀಡಿಯಾ ಆಲರ್ಟ್‌, ಮ್ಯೂಸಿಕ್‌ ಕಂಟ್ರೋಲ್‌, ಇನ್‌ಕಮಿಂಗ್‌ ಕರೆಗಳು, ಪಠ್ಯ, ವೆದರ್‌ ಆಪ್ಡೆಟ್‌, ಮತ್ತು ಇತರೆ ಸೌಲಭ್ಯಗಳನ್ನು ಪಡೆದಿದೆ. ಇನ್ನು ಮಿ ಬ್ಯಾಂಡ್ 4 ಸೆನ್ಸಾರ್‌ ಸಾಮರ್ಥ್ಯದ ಗ್ರಹಿಕೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಡಿವೈಸ್‌ ವಿವಿಧ ಬಗೆಯ ಸ್ವಿಮ್ಮಿಂಗ್ ಸ್ಟ್ರೋಕ್‌ಗಳನ್ನು ಗ್ರಹಿಸುತ್ತದೆ. ಅವುಗಳಲ್ಲಿ ಫ್ರಿ-ಸ್ಟೈಲ್‌, ಬ್ಯಾಕ್‌ಸ್ಟ್ರೋಕ್, ಬಟರ್‌ಪ್ಲೈ ಸ್ಟ್ರೋಕ್ ಮತ್ತು ಮೆಡ್ಲಿ (Medley) ಸ್ವಿಮ್ಮಿಂಗ್ ಸ್ಟೈಲ್‌ಗಳು ಸೇರಿವೆ. ಹಾಗೆಯೇ ರನ್ನಿಂಗ್, ಔಟ್‌ಡೋರ್‌ ರನ್ನಿಂಗ್, ಎಕ್ಸಸೈಜ್, ಸೈಕ್ಲಿಂಗ್, ವಾಕಿಂಗ್ ಚಟುವಟಿಕೆಗಳನ್ನು ಟ್ರಾಕ್‌ ಮಾಡಲಿದೆ.

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

ಶಿಯೋಮಿ ಮಿ ಬ್ಯಾಂಡ್ 5 ಸ್ಮಾರ್ಟ್‌ಬ್ಯಾಂಡ್‌ ಮ್ಯಾಗ್ನೆಟಿಕ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಬಳಕೆದಾರರು ಪಟ್ಟಿಗಳನ್ನು ತೆಗೆಯದೆ ಈ ಡಿವೈಸ್‌ ಅನ್ನು ಚಾರ್ಜ್ ಮಾಡಲು ಅವಕಾಶವನ್ನ ನೀಡಲಾಗಿದೆ. ಇನ್ನು ಮಿ ಬ್ಯಾಂಡ್ 5 ರ NFC ರೂಪಾಂತರವು 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಶಿಯೋಮಿ ಹೇಳಿಕೊಂಡಿದೆ. ಶಿಯೋಮಿ ಮಿ ಬ್ಯಾಂಡ್ 4' ಡಿವೈಸ್‌ 135mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್‌ ಮಾಡಿದರೇ ಸುಮಾರು 20 ದಿನಗಳ ವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ ಅತ್ಯುತ್ತಮ ಚಾರ್ಜರ್‌ ಸೌಲಭ್ಯವನ್ನು ನೀಡಲಾಗಿದೆ.

Best Mobiles in India

English summary
The Xiaomi Mi Band 5 is said to be the direct successor of the Mi Band 4 (Mi Smart Band 4) in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+