Home
ಸುದ್ದಿಜಾಲ

ಇಂದು ಶಿಯೋಮಿಯ 'ಮಿ ಬ್ಯಾಂಡ್ 5' ಲಾಂಚ್ ಆಗೋದು ಕನ್ಫರ್ಮ್!

ಶಿಯೋಮಿ ಸಂಸ್ಥೆಯು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದು, ಹಾಗೆಯೇ ಸ್ಮಾರ್ಟ್‌ ಬ್ಯಾಂಡ್ ಡಿವೈಸ್‌ಗಳೂ ಸಹ ಸಾಕಷ್ಟು ಸದ್ದು ಮಾಡಿವೆ. ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಮಿ ಬ್ಯಾಂಡ್ 4 ಕಲರ್‌ ಡಿಸ್‌ಪ್ಲೇ, ಫಿಟ್ನೆಸ್‌ ಫೀಚರ್ಸ್‌ ಹಾಗೂ ದೀರ್ಘ ಬ್ಯಾಟರಿ ಲೈಫ್ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಮಿ ಬ್ಯಾಂಡ್ 5 ಬಿಡುಗಡಗೆ ಸಿದ್ಧವಾಗಿದೆ.

ಹೌದು

ಹೌದು, ಶಿಯೋಮಿಯ ಬಹುನಿರೀಕ್ಷಿತ ಮಿ ಬ್ಯಾಂಡ್ 5 ಅನಾವರಣಕ್ಕೆ ಸಂಸ್ಥೆಯು ವೇದಿಕೆ ಸಜ್ಜು ಮಾಡಿದೆ. ಇಂದು (ಏಪ್ರಿಲ್ 3, 2020ರಂದು) ಚೀನಾದಲ್ಲಿ ನಡೆಯುವ ಮಿ ಫ್ಯಾನ್ಸ್‌ ಉತ್ಸವ ಹಾಗೂ ಶಿಯೋಮಿಯ ಹತ್ತನ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಸಂಸ್ಥೆಯು ಒಟ್ಟು 22 ಉತ್ಪನ್ನಗಳನ್ನು ಪರಿಚಯಿಸುವುದಾಗಿ ಹೇಳಿದೆ. ಅವುಗಳಲ್ಲಿ ಮಿ ಬ್ಯಾಂಡ್ 5 ಡಿವೈಸ್‌ ಪ್ರಮುಖ ಆಕರ್ಷಣೆ ಎನ್ನಲಾಗಿದೆ.

ಶಿಯೋಮಿ

ಶಿಯೋಮಿ ಸಂಸ್ಥೆಯ ಹೊಸ 'ಮಿ ಬ್ಯಾಂಡ್ 5' ಡಿವೈಸ್‌ ಬೆಲೆ ಮತ್ತು ಫೀಚರ್ಸ್‌ಗಳು ಜನೆವರಿಯಲ್ಲಿ ಲೀಕ್ ಆಗಿದ್ದು, ಗ್ರಾಹಕರಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಹೊಸ ಮಿ ಬ್ಯಾಂಡ್ 5 ಡಿವೈಸ್‌, ಮಿ ಬ್ಯಾಂಡ್ 4 ಡಿವೈಸ್‌ಗಿಂತ ಹೆಚ್ಚಿನ ಡಿಸ್‌ಪ್ಲೇ ಗಾತ್ರವನ್ನು ಹೊಂದಿರಲಿದೆ. ಇದರೊಂದಿಗೆ ಹಲವು ಅಗತ್ಯ ಅಪ್ಲಿಕೇಶನ್‌ಗಳ ಸಫೊರ್ಟ್‌ ಸಹ ಇರಲಿವೆ. ಇನ್ನು ಬೆಲೆಯು ಸಹ ಗ್ರಾಹಕರ ಸ್ನೇಹಿ ಆಗಿರಲಿದೆ ಎನ್ನಲಾಗಿದೆ. ಮಿ ಬ್ಯಾಂಡ್ 5 ಡಿವೈಸ್‌ನ ಫೀಚರ್ಸ್‌ಗಳು ಹೇಗಿರಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಬ್ಯಾಂಡ್

ಶಿಯೋಮಿಯು ಮಿ ಬ್ಯಾಂಡ್ 5 ನಲ್ಲಿ NFC ಜೊತೆಗೆ ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್‌ಗೆ ಅನುಕೂಲ ನೀಡಲು ಗೂಗಲ್ ಪೇ ಹಾಗೂ ಮಿ ಪೇ ಆಪ್ ಬೆಂಬಲ ನೀಡಲಿದೆ. ಹಾಗೆಯೇ 1.2 ಇಂಚಿನ ಡಿಸ್‌ಪ್ಲೇ ನೀಡುವ ಸಾಧ್ಯತೆಗಳಿವೆ. ಸಂಸ್ಥೆಯ 'ಮಿ ಬ್ಯಾಂಡ್ 4' ಡಿವೈಸ್ ಭಾರತದಲ್ಲಿ ದಾಖಲೆಯ ಮಾರಾಟ ಕಂಡಿತ್ತು. ಅದೇ ರೀತಿ ಹೊಸ ಮಿ ಬ್ಯಾಂಡ್ 5 ಡಿವೈಸ್‌ ಸಹ ಅಧಿಕ ಗ್ರಾಹಕರನ್ನು ಸೆಳೆಯಲಿದೆ ಎನ್ನಲಾಗಿದೆ.

ಶಿಯೋಮಿಯ

ಶಿಯೋಮಿಯ ಮಿ ಬ್ಯಾಂಡ್ 4 ನಂತೆ ಹಾರ್ಟ್‌ರೇಟ್‌ ಮಾನಿಟರಿಂಗ್‌' ಆಯ್ಕೆ, ನಿರಂತರ ಹೃದಯ ಬಡಿತದ ಕುರಿತು ಮಾಹಿತಿ, ಫೋಟೊಥೆಸ್ಮೊಗ್ರಾಫಿ (PPG) ಆಯ್ಕೆ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿರಲಿದೆ. ಇನ್ನು ಮಿ ಬ್ಯಾಂಡ್ 5 ಡಿವೈಸ್ ಬೆಲೆಯು ಚೀನಾದಲ್ಲಿ 179 yuan ಆಗಿರಲಿದೆ, ಭಾರತದಲ್ಲಿ ಸುಮಾರು 1,800ರೂ.ಗಳ ಆಸುಪಾಸಿನಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

ರೆಸಲ್ಯೂಶನ್

ಇನ್ನು, ಕಂಪನಿಯ 'ಮಿ ಬ್ಯಾಂಡ್‌ 4', ಡಿವೈಸ್‌ 240 x 120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 0.95 ಇಂಚಿನ AMOLED ಕಲರ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಶೇ. 39.9%ರಷ್ಟು ದೊಡ್ಡ ಡಿಸ್‌ಪ್ಲೇ ಆಗಿದ್ದು, ಸಂಪೂರ್ಣ ಕಲರ್‌ ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. 2.5D ಟೆಂಪರ್ಡ್‌ ಗ್ಲಾಸ್‌ ರಚನೆಯನ್ನು ಸಹ ಹೊಂದಿದ್ದು, ಸ್ಕ್ರಾಚ್‌ ಮುಕ್ತವಾಗಿದೆ. ಬೆಳಕಿನಲ್ಲಿಯೂ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣಿಸುವ ಸೌಲಭ್ಯ ಪಡೆದಿದೆ.

Best Mobiles in India

English summary
Xiaomi’s next fitness tracker is set to launch on April 3. Here’s what you need to know.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+