Mi ಬ್ಯಾಂಡ್ 5 V/S Mi ಬ್ಯಾಂಡ್ 4: ಭಿನ್ನತೆಗಳೆನು ಖರೀದಿಗೆ ಯಾವುದು ಬೆಸ್ಟ್?

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಡಿವೈಸ್‌ಗಳಂತೆ ಸ್ಮಾರ್ಟ್‌ ಬ್ಯಾಂಡ್ ಡಿವೈಸ್‌ಗಳ ಡಿಮ್ಯಾಂಡ್‌ ಸಹ ಹೆಚ್ಚಾಗುತ್ತಲಿದೆ ಹಾಗೂ ಅಗತ್ಯ ಅನಿಸುತ್ತಿವೆ. ಈ ನಿಟ್ಟಿನಲ್ಲಿ ಶಿಯೋಮಿ ಈಗಾಗಲೇ ಕೆಲವು ಸ್ಮಾರ್ಟ್‌ ಬ್ಯಾಂಡ್‌ ಡಿವೈಸ್‌ ಪರಿಚಯಿಸಿ ಸೈ ಅನಿಸಿಕೊಂಡಿದ್ದು, ಅವುಗಳಲ್ಲಿ ಮಿ ಬ್ಯಾಂಡ್‌ 4 ಹೆಚ್ಚು ಗಮನ ಸೆಳೆದಿದೆ. ಇದೀಗ ಮತ್ತೆ ಹೊಸದಾಗಿ ಮಿ ಬ್ಯಾಂಡ್‌ 5 ಡಿವೈಸ್ ಅನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಫಿಟ್ನೆಸ್‌ ಪ್ರಿಯರನ್ನು ಆಕರ್ಷಿಸಿದೆ. ಆದರೆ ಮಿ ಬ್ಯಾಂಡ್‌ 4 ಖರೀದಿಗಿಂತ ಹೊಸ ಮಿ ಬ್ಯಾಂಡ್ 5 ಉತ್ತಮವೇ?

ಡಿವೈಸ್‌

ಸಂಸ್ಥೆಯ ಮಿ ಬ್ಯಾಂಡ್ 4 ಡಿವೈಸ್‌ ಕಲರ್ ಡಿಸ್‌ಪ್ಲೇಯಲ್ಲಿ ಫೀಚರ್‌ ಒಳಗೊಂಡು ಗ್ರಾಹಕರನ್ನು ಆಕರ್ಷಿಸಿತ್ತು. ಅದರಂತೆ ಮಿ ಬ್ಯಾಂಡ್‌ 5 ಸಹ ಕಲರ್‌ ಡಿಸ್‌ಪ್ಲೇ ರಚನೆ ಪಡೆದಿದೆ. ಈ ಡಿವೈಸ್‌ಗಳು ಹಲವು ಫಿಟ್ನೆಸ್‌ ಟ್ರಾಕಿಂಗ್ ಫೀಚರ್ಸ್‌ಗಳನ್ನು ಹೊಂದಿದ್ದು, ದೀರ್ಘ ಅವಧಿಯ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯದಲ್ಲಿವೆ. ಎರಡರಲ್ಲಿಯೂ ಕೆಲವು ಫೀಚರ್ಸ್‌ಗಳು ಹೋಲಿಕೆಯಂತೆ ಕಂಡು ಬಂದರು ಕೆಲವು ಅಂಶಗಳಲ್ಲಿ ಭಿನ್ನತೆಗಳಿವೆ. ಮಿ ಬ್ಯಾಂಡ್ 4 ಮತ್ತು ಮಿ ಬ್ಯಾಂಡ್‌ 5 ಡಿವೈಸ್ ನಡುವಿನ ವ್ಯತ್ಯಾಸಗಳೆನು? ಖರೀದಿಗೆ ಯಾವುದು ಬೆಸ್ಟ್ ? ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಮಿ ಸ್ಮಾರ್ಟ್ ಬ್ಯಾಂಡ್ 5 126x294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.6-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 16 ಬಿಟ್ ಕಲರ್ ಮತ್ತು 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಅದೇ ರೀತಿ ಮಿ ಬ್ಯಾಂಡ್ 4 ಸಹ 0.96 ಇಂಚಿನ ಕಲರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಪಿಕ್ಸಲ್ ರೆಸಲ್ಯೂಶನ್ 120×240 ಆಗಿದ್ದು, 2.5 ಟೆಂಪರ್ ಗ್ಲಾಸ್‌ ಹೊಂದಿದೆ. ಪಿಕ್ಸಲ್ ರೆಸಲ್ಯೂಶನ್‌ನಲ್ಲಿ ಮಿ ಬ್ಯಾಂಡ್ 5 ಅಪ್‌ಡೇಟ್‌ ಆಗಿದೆ.

ಬ್ಯಾಟರಿ ಬ್ಯಾಕ್‌ಅಪ್‌

ಬ್ಯಾಟರಿ ಬ್ಯಾಕ್‌ಅಪ್‌

ಮಿ ಬ್ಯಾಂಡ್ 5 ಡಿವೈಸ್ 125 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ನಿಯಮಿತ ಬಳಕೆಯಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ಮತ್ತು ಪವರ್‌ ಸೇವ್‌ ಮೋಡ್‌ನಲ್ಲಿ 21 ದಿನಗಳ ಬ್ಯಾಟರಿ ಅವಧಿಯನ್ನು ಒದಗಿಸಲಿದೆ. ಅದೇ ರೀತಿ ರೆಡ್ಮಿ ಮಿ ಬ್ಯಾಂಡ್ 4 ಡಿವೈಸ್ 135mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ದೀರ್ಘ ಬಾಳಿಕೆ ನೀಡಲಿದೆ. ಮಿ ಬ್ಯಾಂಡ್ ಬ್ಯಾಟರಿ ರಿಯಲ್ ಮಿ ಬ್ಯಾಂಡ್‌ಗಿಂತ ಹೆಚ್ಚಾಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಸದ್ಯ ಮಿ ಸ್ಮಾರ್ಟ್ ಬ್ಯಾಂಡ್ 5 ಭಾರತದಲ್ಲಿ 2,499 ರೂ. ಬೆಲೆಯನ್ನು ಹೊಂದಿದೆ. ಇದು ಕಪ್ಪು, ನೇವಿ ಬ್ಲೂ, ಟೀಲ್, ಪರ್ಪಲ್ ಮತ್ತು ಆರೆಂಜ್ ಸ್ಟ್ರಾಪ್ ಕಲರ್ ಆಯ್ಕೆಗಳಲ್ಲಿ ಸಿಗಲಿದ್ದು, ಅಕ್ಟೋಬರ್ 1 ರಿಂದ Mi.com ಮತ್ತು Amazon.in ನಲ್ಲಿ ಲಭ್ಯವಿರುತ್ತದೆ. ಇನ್ನು ರೆಡ್ಮಿ ಮಿ ಬ್ಯಾಂಡ್ 4 ಡಿವೈಸ್ ಬೆಲೆಯು 2,299ರೂ.ಗಳಾಗಿದೆ.

ಕೊನೆಯ ಮಾತು

ಕೊನೆಯ ಮಾತು

ಶಿಯೋಮಿಯ ಈ ಎರಡು ಸ್ಮಾರ್ಟ್‌ ಬ್ಯಾಂಡ್‌ ಡಿವೈಸ್‌ಗಳು ಆಕರ್ಷಕ ಫೀಚರ್ಸ್‌ ಪಡೆದಿವೆ. ಆದರೆ ಮಿ ಬ್ಯಾಂಡ್‌ 4 ಡಿವೈಸ್‌ಗಿಂತ ಮಿ ಬ್ಯಾಂಡ್ 5 ಡಿವೈಸ್‌ ಡಿಸ್ಪ್ಲೇ, ಬ್ಯಾಟರಿ, ಕೆಲವು ಫಿಟ್ನೆಸ್‌ ಫೀಚರ್ಸ್‌ಗಳಲ್ಲಿ ಅಪ್‌ಗ್ರೇಡ್‌ ಆಗಿದೆ. ಇನ್ನು ಪ್ರೈಸ್‌ಟ್ಯಾಗ್‌ನಿಂದ ನೋಡುವುದಾದರೇ ಹೆಚ್ಚಿನ ದರ ಅಂತರ ಇಲ್ಲ. ಹೀಗಾಗಿ ಮಿ ಬ್ಯಾಂಡ್‌ 5 ಆಯ್ಕೆ ಉತ್ತಮ ಅನಿಸಲಿದೆ.

Best Mobiles in India

English summary
Xiaomi Mi Band 5 comes with a larger display compared to the Mi Band 4.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X