ಶಿಯೋಮಿಯ 'ಮಿ ಬ್ಯಾಂಡ್‌ 5' ಫೀಚರ್ಸ್ ಲೀಕ್!..ಅಚ್ಚರಿಯ ಬೆಲೆ?

|

ಚೀನಾ ಮೂಲದ ಟೆಕ್ ಕಂಪನಿ ಶಿಯೋಮಿ ಈಗಾಗಲೇ ಹತ್ತು ಹಲವು ಸ್ಮಾರ್ಟ್‌ ಉತ್ಪನ್ನಗಳಿಂದ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿದೆ. ಇತ್ತೀಚಿಗಿನ ಕಂಪನಿಯ ಉತ್ಪನ್ನಗಳಲ್ಲಿ ಸ್ಮಾರ್ಟ್‌ ಬ್ಯಾಂಡ್ ಡಿವೈಸ್ ಫಿಟ್ನೆಸ್‌ ಪ್ರಿಯರನ್ನು ಹೆಚ್ಚು ಆಕರ್ಷಿಸಿದ್ದು, ಈ ನಿಟ್ಟಿನಲ್ಲಿ 'ಮಿ ಬ್ಯಾಂಡ್‌ 4' ಅನ್ನು ಬಿಡುಗಡೆ ಮಾಡಿತ್ತು. ಆದ್ರೆ ಇದೀಗ ಮತ್ತಷ್ಟು ಅನುಕೂಲ ಒದಗಿಸುವ ಉದ್ದೇಶದೊಂದಿಗೆ ಹೊಸದಾಗಿ 'ಮಿ ಬ್ಯಾಂಡ್ 5' ಡಿವೈಸ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಮಿ ಬ್ಯಾಂಡ್ 5

ಹೌದು, ಜನಪ್ರಿಯ ಶಿಯೋಮಿ ಸಂಸ್ಥೆಯ ಹೊಸ 'ಮಿ ಬ್ಯಾಂಡ್ 5' ಡಿವೈಸ್‌ ಬೆಲೆ ಮತ್ತು ಫೀಚರ್ಸ್‌ಗಳು ಲೀಕ್ ಆಗಿದ್ದು, ಗ್ರಾಹಕರಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಹೊಸ ಮಿ ಬ್ಯಾಂಡ್ 5 ಡಿವೈಸ್‌, ಮಿ ಬ್ಯಾಂಡ್ 4 ಡಿವೈಸ್‌ಗಿಂತ ಹೆಚ್ಚಿನ ಡಿಸ್‌ಪ್ಲೇ ಗಾತ್ರವನ್ನು ಹೊಂದಿರಲಿದೆ. ಇದರೊಂದಿಗೆ ಹಲವು ಅಗತ್ಯ ಅಪ್ಲಿಕೇಶನ್‌ಗಳ ಸಫೊರ್ಟ್‌ ಸಹ ಇರಲಿವೆ. ಇನ್ನು ಬೆಲೆಯು ಸಹ ಗ್ರಾಹಕರ ಸ್ನೇಹಿ ಆಗಿರಲಿದೆ ಎನ್ನಲಾಗಿದೆ.

ಡಿಜಿಟಲ್ ಪೇಮೆಂಟ್

ಶಿಯೋಮಿಯು ಮಿ ಬ್ಯಾಂಡ್ 5 ನಲ್ಲಿ NFC ಜೊತೆಗೆ ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್‌ಗೆ ಅನುಕೂಲ ನೀಡಲು ಗೂಗಲ್ ಪೇ ಹಾಗೂ ಮಿ ಪೇ ಆಪ್ ಬೆಂಬಲ ನೀಡಲಿದೆ. ಹಾಗೆಯೇ 1.2 ಇಂಚಿನ ಡಿಸ್‌ಪ್ಲೇ ನೀಡುವ ಸಾಧ್ಯತೆಗಳಿವೆ. ಸಂಸ್ಥೆಯ 'ಮಿ ಬ್ಯಾಂಡ್ 4' ಡಿವೈಸ್ ಭಾರತದಲ್ಲಿ ದಾಖಲೆಯ ಮಾರಾಟ ಕಂಡಿತ್ತು. ಅದೇ ರೀತಿ ಹೊಸ ಮಿ ಬ್ಯಾಂಡ್ 5 ಡಿವೈಸ್‌ ಸಹ ಅಧಿಕ ಗ್ರಾಹಕರನ್ನು ಸೆಳೆಯಲಿದೆ ಎನ್ನಲಾಗಿದೆ.

ವಿಶೇಷ ಸೌಲಭ್ಯ

ಶಿಯೋಮಿಯ ಮಿ ಬ್ಯಾಂಡ್ 4 ನಂತೆ ಹಾರ್ಟ್‌ರೇಟ್‌ ಮಾನಿಟರಿಂಗ್‌' ಆಯ್ಕೆ, ನಿರಂತರ ಹೃದಯ ಬಡಿತದ ಕುರಿತು ಮಾಹಿತಿ, ಫೋಟೊಥೆಸ್ಮೊಗ್ರಾಫಿ (PPG) ಆಯ್ಕೆ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿರಲಿದೆ. ಇನ್ನು ಮಿ ಬ್ಯಾಂಡ್ 5 ಡಿವೈಸ್ ಬೆಲೆಯು ಚೀನಾದಲ್ಲಿ 179 yuan ಆಗಿರಲಿದೆ, ಭಾರತದಲ್ಲಿ ಸುಮಾರು 1,800ರೂ.ಗಳ ಆಸುಪಾಸಿನಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

AMOLED

ಇನ್ನು, ಕಂಪನಿಯ 'ಮಿ ಬ್ಯಾಂಡ್‌ 4', ಡಿವೈಸ್‌ 240 x 120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 0.95 ಇಂಚಿನ AMOLED ಕಲರ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಶೇ. 39.9%ರಷ್ಟು ದೊಡ್ಡ ಡಿಸ್‌ಪ್ಲೇ ಆಗಿದ್ದು, ಸಂಪೂರ್ಣ ಕಲರ್‌ ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. 2.5D ಟೆಂಪರ್ಡ್‌ ಗ್ಲಾಸ್‌ ರಚನೆಯನ್ನು ಸಹ ಹೊಂದಿದ್ದು, ಸ್ಕ್ರಾಚ್‌ ಮುಕ್ತವಾಗಿದೆ. ಬೆಳಕಿನಲ್ಲಿಯೂ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣಿಸುವ ಸೌಲಭ್ಯ ಪಡೆದಿದೆ.

Most Read Articles
Best Mobiles in India

English summary
The Mi Band 5 could bring a much larger display than Mi Band 4. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X