ಟಾಟಾಸ್ಕೈ, ಏರ್‌ಟೆಲ್‌ ಮತ್ತು ಮಿ ಬಾಕ್ಸ್‌ 4K: ಬೆಲೆ ಎಷ್ಟು, ಫೀಚರ್ಸ್‌ ಏನು!

|

ದೇಶದ ಡಿಟಿಎಚ್ ವಲಯವು ಕಳೆದ ವರ್ಷ ಸಾಕಷ್ಟು ಬದಲಾವಣೆ ಕಂಡಿದೆ. ಟಾಟಾಸ್ಕೈ, ಏರ್‌ಟೆಲ್‌, ಡಿಶ್‌ಟಿವಿ ಈಗಾಗಲೇ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಇಂಟರ್ನೆಟ್ ಆಧಾರಿತ ಸೆಟ್‌ಟಾಪ್‌ ಬಾಕ್ಸ್‌ ಡಿವೈಸ್‌ಗಳಲ್ಲಿಯೂ ಈಗ ಹೆಚ್ಚು ಟ್ರೆಂಡ್ ಆಗುತ್ತಿದ್ದು, ಈ ಲಿಸ್ಟಿಗೆ ಇತ್ತೀಚಿಗೆ ಶಿಯೋಮಿಯ ಮಿ ಬಾಕ್ಸ್ ಡಿವೈಸ್‌ ಸಹ ಸೇರಿಕೊಂಡಿದೆ. ಅಂದಹಾಗೆ ಈ ಎಲ್ಲ ಸೆಟ್‌ಟಾಪ್‌ ಬಾಕ್ಸ್ ಡಿವೈಸ್‌ಗಳು 5000ರೂ. ಒಳಗೆ ಲಭ್ಯವಾಗುತ್ತವೆ.

ಸ್ಮಾರ್ಟ್‌ಟಿವಿ

ಬಹುತೇಕ ಬಳಕೆದಾರರು ಸ್ಮಾರ್ಟ್‌ಟಿವಿ ಜೊತೆಗೆ ಇದೀಗ ಇಂಟರ್ನೆಟ್ ಆಧಾರಿತ ಸೆಟ್‌ಟಾಪ್‌ ಬಾಕ್ಸ್‌ ಡಿವೈಸ್‌ ಬಳಕೆಯತ್ತ ಆಕರ್ಷಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಮಿ ಬಾಕ್ಸ್‌ 4K, ಟಾಟಾಸ್ಕೈ ಬಿಂಜ್ ಪ್ಲಸ್, ಏರ್‌ಟೆಲ್‌ ಎಕ್ಸ್‌ಟ್ರಿಮ್‌ ಬಾಕ್ಸ್‌, ACT ಸ್ಟ್ರೀಮ್‌ ಟಿವಿ 4K ಡಿವೈಸ್‌ಗಳು ಹೆಚ್ಚು ಗಮನ ಸೆಳೆದಿವೆ. ಇವುಗಳಲ್ಲಿ ಯಾವುದು ಉತ್ತಮ ಆಯ್ಕೆ ಹಾಗೂ ಯಾವೆಲ್ಲಾ ಸೌಲಭ್ಯಗಳಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಶಿಯೋಮಿ ಮಿ ಬಾಕ್ಸ್ 4K

ಶಿಯೋಮಿ ಮಿ ಬಾಕ್ಸ್ 4K

ಶಿಯೋಮಿ ಮಿ ಬಾಕ್ಸ್ 4K ಆಂಡ್ರಾಯ್ಡ್ ಟಿವಿ ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್ ಆಗಿದೆ. ತೀಕ್ಷ್ಣವಾದ ಚಿತ್ರದ ಗುಣಮಟ್ಟ ಮತ್ತು ಸುಗಮ ವೀಡಿಯೊ ಪ್ಲೇಬ್ಯಾಕ್‌ಗಾಗಿ 4ಕೆ ಅಲ್ಟ್ರಾ ಎಚ್ಡಿ ವಿಡಿಯೋ ವಿಷಯ ಪ್ಲೇಬ್ಯಾಕ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ 64-ಬಿಟ್ ಕ್ವಾಡ್-ಕೋರ್ ಪ್ರೊಸೆಸರ್ ಮತ್ತು ಮಾಲಿ -450 ಜಿಪಿಯು ಹೊಂದಿದ್ದು, 2 ಜಿಬಿ ರಾಮ್ ಮತ್ತು 8 ಜಿಬಿ ಫ್ಲ್ಯಾಷ್ ಸ್ಟೋರೇಜ್ ಅನ್ನು ಹೊಂದಿದೆ. ಇದರ ಬೆಲೆಯು 3,499ರೂ. ಆಗಿದೆ.

ಟಾಟಾಸ್ಕೈ ಬಿಂಜ್ ಪ್ಲಸ್‌

ಟಾಟಾಸ್ಕೈ ಬಿಂಜ್ ಪ್ಲಸ್‌

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌, ಸಾಮಾನ್ಯ ಡಿಟಿಎಚ್ ಸೆಟ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇಂಟರ್ನೆಟ್ ಆಧಾರಿತ ಸೇವೆಗಳು ದೊರೆಯುತ್ತವೆ. ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಇರುತ್ತದೆ ಹಾಗೂ ಅಸಿಸ್ಟಂಟ್ ಅಸಿಸ್ಟಂಟ್ ಆಧಾರಿತ ವಾಯಿಸ್ ಸರ್ಚ್ ಆಯ್ಕೆಯು ಒಳಗೊಂಡಿರುತ್ತದೆ. ಹೀಗಾಗಿ ಸೆಟ್‌ಟಾಪ್‌ ಬಾಕ್ಸ್‌ ಅನ್ನು ವಾಯಿಸ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ. ಈ ಡಿವೈಸ್‌ ಬೆಲೆಯು 3,999ರೂ. ಆಗಿದೆ.

ಏರ್‌ಟೆಲ್ ಎಕ್ಸ್‌ಸ್ಟ್ರಿಮ್ ಬಾಕ್ಸ್‌

ಏರ್‌ಟೆಲ್ ಎಕ್ಸ್‌ಸ್ಟ್ರಿಮ್ ಬಾಕ್ಸ್‌

ಏರ್‌ಟೆಲ್ ಎಕ್ಸ್‌ಸ್ಟ್ರಿಮ್ ಬಾಕ್ಸ್‌ ಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಏಕೆಂದರೇ ಇದು ಹೈಬ್ರಿಡ್‌ ಸೆಟ್‌ಅಪ್‌ ಬಾಕ್ಸ್‌ ಆಗಿದೆ. ಸಾಮಾನ್ಯ ಸೆಟ್‌ಅಪ್ ಬಾಕ್ಸ್‌ಗಳು ಸೆಟಲೈಟ್‌ನ ನೆರವಿನಿಂದ ಟಿವಿ ಚಾನೆಲ್‌ಗಳನ್ನು ಮಾತ್ರ ಲಭ್ಯವಾಗಿಸುತ್ತವೆ. ಆದ್ರೆ ಈ ಏರ್‌ಟೆಲ್‌ನ ಹೈಬ್ರಿಡ್‌ ಸೆಟ್‌ಅಪ್‌ ಬಾಕ್ಸ್‌ ಲೈವ್ ಟಿವಿ ಜೊತೆಗೆ ಓಟಿಟಿ, ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ ಸೇರಿದಂತೆ ಇಂಟರ್ನೆಟ್‌ ಸಹ ಬಳಸಬಹುದಾಗಿದೆ. ಈ ಡಿವೈಸ್ ಆಂಡ್ರಾಯ್ಡ್ ಓಎಸ್‌ ಬೆಂಬಲವನ್ನು ಪಡೆದಿದ್ದು, ಅದರಲ್ಲಿಯೂ ಇತ್ತೀಚಿನ ಆಂಡ್ರಾಯ್ಡ್ 9.0 ಪೈ ವರ್ಷನ್ ಹೊಂದಿದೆ. ಬೆಲೆಯು 3,999ರೂ. ಆಗಿದೆ.

Best Mobiles in India

English summary
Android TV Boxes have taken over the market and DTH service providers such as Tata Sky and Airtel provide excellent Smart Boxes as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X